
ಆದಷ್ಟುಟಿ.ವಿ ನೋಡಿ, ಅಕ್ಕ ಪಕ್ಕದ ಅಂಗಡಿಯನ್ನೆಲ್ಲಾ ಸುತ್ತಿ, ಕೆಲವೊಮ್ಮೆ ಅಲ್ಲಿಯೇ ಹೋಂ ವರ್ಕ್ ಮಾಡಿ ಕಾಲ ಕಳೆಯುತ್ತಿದ್ದೆವು.
ಸಂಜೆ 5-30 ಆಗುತ್ತಿದ್ದಂತೆ ಹತ್ತಿರದಲ್ಲಿದ್ದ ಫಿಲ್ಮ್‌ಥೇಟರ್‌ನಿಂದ ‘ಶುಕ್ಲಾಂ ಭರದರಂ..’ ಹಾಡು ಕಿವಿಗೆ ಬೀಳುತ್ತಿತ್ತು. ಅದೇ ನನ್ನಪ್ಪನಿಗೆ ಅಲಾರಂ. ಆ ಹಾಡು ಬರುತ್ತಿದ್ದಂತೆ ಹಿಂಬದಿ ಜೇಬಿನಲ್ಲಿ ನಮಗಾಗೆ ತೆಗೆದಿಟ್ಟಿದ್ದ ನಾಲ್ಕು ರೂಪಾಯಿಯನ್ನುತೆಗೆದು ನಮ್ಮ ಕೈಗೆ ಇಡುತ್ತಿದ್ದರು. ಆ ನಾಲ್ಕು ರೂಪಾಯಿಯನ್ನು ನಾನು ಮತ್ತು ಅಣ್ಣ ಇಬ್ಬರೂ ಹಂಚಿಕೊಂಡು,ಹತ್ತಿರದಲ್ಲೇ ಇದ್ದ ಚಂದ್ರಣ್ಣ ನ ಅಂಗಡಿಗೆ ಓಡುತ್ತಿದ್ದೆವು.
ಅವಳೇಕೆ ಎಲ್ಲವನ್ನೂ ಮರೆತಂತೆ ನಟಿಸುತ್ತಿದ್ದಾಳೆ?
ಅಲ್ಲಿ ಗಾಜಿನ ಬಾಟಲಿಯ ಒಳಗೆ ಇಟ್ಟಿದ್ದ ಬಗೆ ಬಗೆಯ ಸಿಹಿ ತಿಂಡಿಗಳ ಕಡೆಗೆ ನಮ್ಮ ಕಣ್ಣುಓಡುತ್ತಿತ್ತು. ನಮ್ಮ ನಾಲಿಗೆ ಕೂಡಾ ದಿನವೂ ಒಂದೊಂದು ತಿಂಡಿಗೆ ಬಾಯೊಡ್ಡಿ ರುಚಿ ನೋಡುತ್ತಿತ್ತು. ಒಂದು ವೇಳೆ ಒಂದು ದಿನ ಎರಡು ರೂಪಾಯಿ ಕೊಡಲು ಮರೆತಿದ್ದರೆ, ಮಾರನೆ ದಿನ ಎರಡು ಸೇರಿಸಿ ನಾಲ್ಕು ರೂಪಾಯಿ ಕೊಡುತ್ತಿದ್ದರು.
ಹೋಗುವ ದಟ್ಟಕಾಡಿನ ದಾರಿ. ಚಂದ್ರನು ನಕ್ಷತ್ರಗಳ ಜೊತೆ ಸೇರಿ ಮುಗುಳ್ನಗುವಾಗ ನಾವು ಅಪ್ಪನ ಬೈಕನ್ನು ಏರಿ ಮನೆಯ ಕಡೆಗೆ ಹೊರಡುತ್ತಿದ್ದೆವು. ಅಪ್ಪನೂ ದಾರಿಯುದ್ದಕ್ಕೂ ಕತೆ ಹೇಳಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ದೂರದಲ್ಲಿ ನಗುತ್ತಿದ್ದ ಚಂದ್ರನನ್ನು ತೋರಿಸಿ ಚಂದ್ರನಲ್ಲಿ ಅಡಗಿದ್ದ ಮೊಲದ ಚಿತ್ರದ ಬಗ್ಗೆ ಏನೋ ಹೇಳುತ್ತಿದ್ದ ನೆನಪು.ಆ ಕ್ಷಣದಲ್ಲಿ ನನಗೆ ಅಪ್ಪನ ಬೈಕಿನ ಮೇಲೆ ಕೂತ ಅನುಭವ ಆಗುತ್ತಿರಲಿಲ್ಲ. ಬದಲಿಗೆ ಅಪ್ಪನ ಹೆಗಲ ಮೇಲೆ ಕೂತು ದಟ್ಟಅಡವಿಯ ಮಧ್ಯೆಜಂಬೂ ಸವಾರಿ ಹೋದ ಅನುಭವ ಆಗುತ್ತಿತ್ತು.
ಏನೆ ಆಗಲಿ, ಆಗ ಅಪ್ಪ ಕೊಡುತ್ತಿದ್ದ ಎರಡು ರೂಪಾಯಿಯನ್ನು ಮಾತ್ರ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ನಾವು ಲಕ್ಷರೂಪಾಯಿ ಇಟ್ಟರೂ ಅದಕ್ಕೆ ಬೆಲೆಯೇ ಇಲ್ಲ. ಅಪ್ಪನ ಪ್ರೀತಿಗೆ ಸಾಟಿಯೇ ಇಲ್ಲ. ಲವ್ ಯು ಅಪ್ಪ...
ಕೊನೆಯ ಭೇಟಿ; ಹಾಸ್ಟೆಲ್ ಲೈಫಿನ ಒಂದು ಎಮೋಷನಲ್ ಸೀನ್!
ಪವನ್‌ಕುಮಾರ್ ಎಂ, ಕುವೆಂಪು ವಿವಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.