ಕೆಲವು ವಿಚಾರಗಳು ನಮಗೆ ಗೊತ್ತಿರುತ್ತವೆ. ಆದರೆ ಜೀವನದ ಜಂಜಾಟದಲ್ಲಿ ಅದನ್ನೆಲ್ಲಾ ಮರೆತುಬಿಟ್ಟಿರುತ್ತೇವೆ. ಯಾರೋ ಮನಸ್ಸು ತಾಕುವಂತೆ ಅದನ್ನು ನೆನಪಿಸಿದಾಗ ನಾವು ಬದಲಾಗುತ್ತೇವೆ.
ಕಮ್ಯುನಿಕೇಷನ್ ಬಗ್ಗೆ ವಿಶೇಷ ಉಪನ್ಯಾಸ ಕೇಳಿಸಿಕೊಂಡು ಬಂದಿದ್ದ ಅವಳು ತಾನು ಮನೆಯಲ್ಲಿ ಎಲ್ಲರ ಅಭಿಪ್ರಾಯಗಳಿಗೆ ಬೆಲೆ ನೀಡಬೇಕೆಂದು ನಿರ್ಧರಿಸಿದ್ದಳು. ‘ರೀ ತಿಂಡಿಗೆ ಉಪ್ಪಿಟ್ಟು ಮಾಡಲಾ, ದೋಸೆ ಮಾಡಲಾ? ಕೇಳಿದಳು. ಅವನು ‘ದೋಸೆ’ ಎಂದ.
ದಂಪತಿಗಳ ಮಧ್ಯೆ ಆಡುವುದಕ್ಕೆ ಮಾತೇ ಇಲ್ಲದಾದಾಗ..
ಮಕ್ಕಳೂ ‘ಅಮ್ಮ ದೋಸೆ’ ಎಂದು ಧ್ವನಿ ಸೇರಿಸಿದರು. ‘ಅಯ್ಯಯ್ಯೋ ನಾನು ಉಪ್ಪಿಟ್ಟು ಮಾಡಬೇಕೆಂದುಕೊಂಡಿದ್ದೆ. ಯಾಕೆ ನಿಮಗೆ ಉಪ್ಪಿಟ್ಟು ಇಷ್ಟವಾಗುವುದಿಲ್ಲವಾ’ ಕೇಳಿದಳು. ಮೊದಲಾಗಿದ್ರೆ ಯಾವುದಾದರೂ ಮಾಡು ಎಂದು ಸುಮ್ಮನಾಗಿ ಬಿಡುತ್ತಿದ್ದ ಅವನು, ಅಂದು ಅವಳು ನಗುನಗುತ್ತಾ ಮಾತನಾಡುತ್ತಿದ್ದರಿಂದ ಧೈರ್ಯವಾಗಿ ಹೇಳಿದ.
‘ಉಪ್ಪಿಟ್ಟು ಓಕೇನೇ. ಆದರೆ ಸ್ವಲ್ಪ ತಯಾರಿಯಲ್ಲಿ ಬದಲಾವಣೆ ಬೇಕು ಅಷ್ಟೆ, ನೀನು ಮಾಡುವುದು ಗಟ್ಟಿಯಾಗಿಬಿಡುತ್ತೆ’ ಎಂದ. ಅವಳ ತಾಳ್ಮೆ ತಪ್ಪಿ ಹೋಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗಿದ್ರೆ... ಇಷ್ಟುದಿನ ಉಪ್ಪಿಟ್ಟು ಮಾಡಿ ನಾನು ಕೇಳಿದಾಗಲೆಲ್ಲಾ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಿದ್ರಿ ಎಂದಾಯ್ತು. ಇದೇ ನನಗೆ ಆಗಲ್ಲ, ನನಗೆ ಸುಳ್ಳು ಹೇಳುವವರು ಇಷ್ಟವಾಗಲ್ಲ. ಐ ಹೇಟ್ ಯೂ ಎಂದು ಬೆಡ್ ರೂಂ ಒಳಗೆ ಹೋಗಿ ದಢಾರೆಂದು ಬಾಗಿಲು ಹಾಕಿಕೊಂಡಳು!
ಬ್ಯುಸಿ ಬ್ಯುಸಿ ಎಂದು ಕಳೆದು ಹೋಗದಿರಿ; ಮನೆಯವರಿಗೂ ಕೊಡಿ ಸಮಯ!
ಹಾಸಿಗೆಯ ಮೇಲಿದ್ದಾಗ ಉಪನ್ಯಾಸಕರ ಮಾತುಗಳು ನೆನಪಾದವು. ‘ಅಭಿಪ್ರಾಯಗಳನ್ನು ಕೇಳಿದಷ್ಟೇ ಸುಲಭವಾಗಿ ಅಳವಡಿಸಿಕೊಳ್ಳುವುದನ್ನು ಕಲಿಯಬೇಕು, ಕಷ್ಟವಾದರೂ...’ ಕೊಣೆಯಿಂದ ಹೊರಬಂದು ದೋಸೆ
ಹುಯ್ಯತೊಡಗಿದಳು.