
ಕರಾಚಿ: ಸಾಮಾನ್ಯವಾಗಿ ಮದುವೆಯಾಗಿ ಮಗು ಹೆತ್ತ ನಂತರ ಪತಿ ತೀರಿಕೊಂಡರೆ ಬಹುತೇಕ ಹೆಂಗಸರು ಮದುವೆಯಾಗದೇ ಉಳಿದು, ಮಕ್ಕಳ ಪಾಲನೆ ಪೋಷಣೆಯಲ್ಲೇ ದಿನ ಕಳೆಯುತ್ತಾರೆ. ಕಷ್ಟಸುಖಗಳೆಲ್ಲವನ್ನು ಮಕ್ಕಳ ಮುಖ ನೋಡುತ್ತಾ ಕಳೆಯುತ್ತಾರೆ. ಅದೇ ರೀತಿ ಹೀಗೆ ಮಗ ಹುಟ್ಟಿದ ಕೂಡಲೇ ಗಂಡನನ್ನು ಕಳೆದುಕೊಂಡು ಮಗನನ್ನೇ ಜೀವನದ ಸರ್ವಸ್ವವಾಗಿಸಿಕೊಂಡ ತಾಯಿಗೆ ಮಗನೋರ್ವ ತಾನೇ ಹಿರಿಯರಂತೆ ಮುಂದೆ ನಿಂತು ಮರು ಮದುವೆ ಮಾಡಿಸಿದ್ದಾನೆ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಮಗನ ಈ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಅಬ್ದುಲ್ಲಾ ಅಹದ್ ಎಂಬ 18 ವರ್ಷದ ಹುಡುಗನೇ ಅಮ್ಮನ ಮದುವೆಯನ್ನು ತಾನೇ ಮುಂದೆ ನಿಂತು ಅದ್ಧೂರಿಯಾಗಿ ಮಾಡಿದ ಯುವಕ. ಈ ಅಮ್ಮನಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಮಗನೇ ಮುಂದೆ ನಿಂತು ಮದುವೆ ಮಾಡಿಸುತ್ತಿರುವ ಅಪರೂಪದ ಕ್ಷಣ ವೀಡಿಯೋದಲ್ಲಿ ಸೆರೆ ಆಗಿದೆ. ಈ ಬಗ್ಗೆ ಮಾತನಾಡಿದ ಪುತ್ರ ಅಬ್ದುಲ್ಲಾ ಅಹದ್, ಕಳೆದ 18 ವರ್ಷಗಳಿಂದ ನಾನು ಆಕೆಗೆ ಒಳ್ಳೆಯ ಜೀವನ ನೀಡಲು ಪ್ರಯತ್ನಿಸುತ್ತಿದೆ. ನನ್ನ ಯೋಗ್ಯತೆಗೆ ಅನುಗುಣವಾಗಿ, ಅವಳು ತನ್ನ ಇಡೀ ಜೀವನವನ್ನು ನಮಗಾಗಿ ತ್ಯಾಗ ಮಾಡಿದಳು, ಎಂದು ಮಗ ಅಬ್ದುಲ್ ವೀಡಿಯೊದಲ್ಲಿ ವಿವರಿಸಿದ್ದಾರೆ.
ಆದರೆ ಅಂತಿಮವಾಗಿ, ಅವಳು ತನ್ನ ಸ್ವಂತವಾದ ಶಾಂತಿಯುತ ಜೀವನಕ್ಕೆ ಅರ್ಹಳು, ಆದ್ದರಿಂದ ಮಗನಾಗಿ, ನಾನು ಸರಿಯಾದ ಕೆಲಸವನ್ನು ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. 18 ವರ್ಷಗಳ ನಂತರ ಪ್ರೀತಿ ಮತ್ತು ಜೀವನದಲ್ಲಿ ಎರಡನೇ ಅವಕಾಶವನ್ನು ಪಡೆಯಲು ನಾನು ನನ್ನ ತಾಯಿಯನ್ನು ಬೆಂಬಲಿಸಿದೆ ಎಂದು ಪುತ್ರ ಅಬ್ದುಲ್ ಹೇಳಿದ್ದಾರೆ. ಈ ವೀಡಿಯೋವೋ ಹಿರಿಯರ ಆಶೀರ್ವಾದ, ನಗು ಮತ್ತು ಕುಟುಂಬ ಮತ್ತು ಸ್ನೇಹಿತರ ಹೃತ್ಪೂರ್ವಕ ಶುಭ ಹಾರೈಕೆಗಳಿಂದ ತುಂಬಿದ ನಿಕಾಹ್ ಸಮಾರಂಭದ ದೃಶ್ಯಗಳೊಂದಿಗೆ ಕೊನೆಗೊಂಡಿದೆ.
ಈ ವೀಡಿಯೋವೋ ಮಗನೇ ತನ್ನ ತಾಯಿಯನ್ನು ಮದುವೆಯಾದ ಎಂಬರ್ಥದಲ್ಲಿ ಹಲವು ಸಾಮಾಜಿಕ ಜಾಲತಾಣದಲ್ಲಿ ಮೊದಲಿಗೆ ವೈರಲ್ ಆಗಿದ್ದವು. ಆದರೆ ನಂತರದಲ್ಲಿ ನಿಜ ವಿಚಾರ ತಿಳಿದ ಜನ ಯುವಕನ ಕೆಲಸಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿನ್ನೊಬ್ಬ ಉತ್ತಮ ಪುತ್ರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀನು ಒಳ್ಳೆಯ ಕೆಲಸವನ್ನೇ ಮಾಡಿದೆ. ಆಕೆ ತುಂಬಾ ಸುಂದರವಾಗಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಈ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಒಬ್ಬ ಜೀವನ ಸಂಗಾತಿ ಬೇಕೆನಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.