ವೈದ್ಯಕೀಯ ಜಗತ್ತಿನಲ್ಲಿ ಸಾಕಷ್ಟು ಆವಿಷ್ಕಾರವಾಗಿದೆ. ಇದ್ರಿಂದಾಗಿ ಮಹಿಳೆಯರು ಐವಿಎಫ್, ವೀರ್ಯ ಫ್ರೀಜರ್ ಸೇರಿದಂತೆ ನಾನಾ ವಿಧಗಳಿಂದ ಗರ್ಭಧರಿಸುತ್ತಿದ್ದಾರೆ. ಆದ್ರೆ ಈ ಮಹಿಳೆ ಕಥೆ ವಿಚಿತ್ರವಾಗಿದೆ.
ಸೋಶಿಯಲ್ ಮೀಡಿಯಾ (social media)ದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಮಹಿಳೆ ಹೇಳ್ತಿರುವ ಮಾತನ್ನು ಕೇಳಿ ನೆಟ್ಟಿಗರು ದಂಗಾಗಿದ್ದಾರೆ. ವಿಜ್ಞಾನ ಎಂದಿಗೂ ಒಪ್ಪದ ಮಾತನ್ನು ಆಕೆ ಹೇಳ್ತಿದ್ದಾಳೆ. ಕನಸಿನಲ್ಲಿ ಬಂದ ಗಂಡನಿಂದ ಮಹಿಳೆ ಗರ್ಭ ಧರಿಸಿದ್ದಾಳಂತೆ. ಸದ್ಯ ಮಗುವಿಗೆ ಜನ್ಮ ನೀಡಿರುವ ಮಹಿಳೆ ಮಾತನ್ನು ನೆಟ್ಟಿಗರು ನಂಬಲು ಸಿದ್ಧರಿಲ್ಲ. ವೈದ್ಯಕೀಯ ಲೋಕ (medical world) ದಲ್ಲಿ ಇದು ಅಸಾಧ್ಯ. ಮಹಿಳೆಗೆ ಡಿಎನ್ ಎ ಪರೀಕ್ಷೆ ಮಾಡಿಸ್ಬೇಕು ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
Thebuzzwiremedia ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಮಹಿಳೆಯ ಪತಿ ಸಾವನ್ನಪ್ಪಿ 11 ವರ್ಷ ಕಳೆದಿದೆ. ಈಗ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆ ಮಗುವಿನ ತಂದೆ ಬಗ್ಗೆ ಸುಳ್ಳು ಹೇಳ್ತಿದ್ದಾಳೆ, ಪರ ಪುರುಷನ ಜೊತೆ ಆಕೆಗೆ ಸಂಬಂಧವಿದೆ ಎಂದು ಜನರು ವಾದಿಸುತ್ತಿದ್ದಾರೆ. ಮಹಿಳೆ ಮಾತ್ರ ಇದನ್ನು ಒಪ್ಪಲು ಸಿದ್ಧಳಿಲ್ಲ. ಪತಿ ಸಾವನ್ನಪ್ಪಿ 11 ವರ್ಷವಾಗಿದ್ದು ಸತ್ಯ. ಆದ್ರೆ ನನಗೆ ಅವರೇ ಎಲ್ಲ. ಯಾವುದೇ ಪುರುಷನ ಜೊತೆ ನಾನು ಸಂಬಂಧ ಹೊಂದಿಲ್ಲ ಎಂದು ಮಹಿಳೆ ಹೇಳ್ತಿದ್ದಾಳೆ.
ಈ ಎಲ್ಲ ಅರ್ಹತೆ ಇದ್ರೆ ಇಂದೇ ಮದುವೆ ಆಗಿ, ಸಂಸಾರ ಶುರು ಮಾಡಲು ಇದು ಸೂಕ್ತ ವಯಸ್ಸು
ಕನಸಿ (Dream)ನಲ್ಲಿ ಬರುವ ಪತಿ ಏನ್ ಮಾಡ್ತಾನೆ? : ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮಹಿಳೆ, ಪತಿ ಕನಸಿನಲ್ಲಿ ಬರ್ತಾನೆ ಎಂದಿದ್ದಾಳೆ. ತನ್ನ ಜೊತೆ ಕುಳಿತು ಊಟ ಮಾಡುವ ಪತಿ, ಜಗಳ, ಗಲಾಟೆ ಕೂಡ ಮಾಡ್ತಾನೆ. ಇಬ್ಬರು ಒಟ್ಟಿಗೆ ಮಲಗ್ತೇವೆ ಎಂದಿದ್ದಾಳೆ. ಆದ್ರೆ ಗರ್ಭಧರಿಸಿದ್ದು ಹೇಗೆ ಎಂಬುದು ನನಗೆ ತಿಳಿದಿಲ್ಲ ಎಂದಿದ್ದಾಳೆ. ಇದು ದೇವರು ಹಾಗೂ ಪತಿಯ ಪ್ರಸಾದ ಎಂಬುದು ಮಹಿಳೆ ಮಾತು. ಮಹಿಳೆಗೆ ಬೇರೆಯವರ ಜೊತೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ನೆರೆ ಹೊರೆಯವರು ಹಾಗೂ ಸಂಬಂಧಿಕರು ಕೂಡ ಸ್ಪಷ್ಟಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಜನರು ಕೋಪಗೊಂಡಿದ್ದಾರೆ. ಮಹಿಳೆ ಮೂರ್ಖಳು. ನಮ್ಮನ್ನು ಮೂರ್ಖರೆಂದು ಭಾವಿಸಿದ್ದಾಳೆ. ಕಟ್ಟು ಕಥೆ ಹೇಳಿ ಮೂರ್ಖರನ್ನಾಗಿ ಮಾಡ್ತಿದ್ದಾಳೆ ಎಂದಿದ್ದಾರೆ. ಡಿಎನ್ ಎ ಪರೀಕ್ಷೆಯಾದ್ರೆ ಮಗು ಯಾರದ್ದು ಎನ್ನುವ ಸತ್ಯ ಹೊರಗೆ ಬರುತ್ತೆ ಎಂಬುದು ಕೆಲವರ ವಾದ. ಈ ಘಟನೆ ದುಃಸ್ವಪ್ನದಂತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಮಹಿಳೆ ಮಾತನ್ನು ನಂಬೋದು ಅಸಾಧ್ಯವಾಗಿದೆ. ದೈಹಿಕ ಸಂಪರ್ಕವಿಲ್ಲದೆ ಮಹಿಳೆ ಗರ್ಭ ಧರಿಸಲು ಸಾಧ್ಯ. ಆದ್ರೆ ಕನಸಿನಲ್ಲಿ ಪತಿ ಬಂದು ಪ್ರೆಗ್ನೆಂಟ್ ಮಾಡ್ದ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಮದುವೆ ಮಂಟಪದಲ್ಲಿ ವರನಿಗೆ ಕಾಲಿನಿಂದ ಜಾಡಿಸಿ ಒದ್ದ ಮಾಜಿ ಗೆಳತಿ; ವಿಡಿಯೋ ವೈರಲ್
ವೈದ್ಯಕೀಯ ಲೋಕ ಸಾಕಷ್ಟು ಬೆಳೆದಿದೆ. ಪತಿ ಸಾವನ್ನಪ್ಪಿದ ನಂತ್ರವೂ ಮಹಿಳೆಯರು ಗರ್ಭಧರಿಸುವ ವ್ಯವಸ್ಥೆ ಈಗಿದೆ. ಅನೇಕರು ಐವಿಎಫ್ ಮೂಲಕ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಪತಿ ಸತ್ತ ಕೆಲವೇ ಗಂಟೆಯೊಳಗೆ ವೀರ್ಯ ಸಂಗ್ರಹಿಸಿ ಅದರಿಂದ ಮಗು ಪಡೆಯುವ ಅನೇಕ ಮಹಿಳೆಯರಿದ್ದಾರೆ. ಅಮೆರಿಕಾದಲ್ಲಿ ಪತಿ ಸಾವನ್ನಪ್ಪಿದ ಕೆಲವೇ ಗಂಟೆಗಳ ಮೊದಲು, ಪತ್ನಿ ಗರ್ಭಧರಿಸಿದ್ದಳು.