ಈ ಎಲ್ಲ ಅರ್ಹತೆ ಇದ್ರೆ ಇಂದೇ ಮದುವೆ ಆಗಿ, ಸಂಸಾರ ಶುರು ಮಾಡಲು ಇದು ಸೂಕ್ತ ವಯಸ್ಸು

Published : Dec 31, 2024, 03:11 PM ISTUpdated : Dec 31, 2024, 03:31 PM IST
ಈ ಎಲ್ಲ ಅರ್ಹತೆ ಇದ್ರೆ ಇಂದೇ ಮದುವೆ ಆಗಿ, ಸಂಸಾರ ಶುರು ಮಾಡಲು ಇದು ಸೂಕ್ತ ವಯಸ್ಸು

ಸಾರಾಂಶ

ಮದುವೆಗೆ ನಿರ್ದಿಷ್ಟ ವಯಸ್ಸಿಲ್ಲ. ಭಾವನಾತ್ಮಕ ಪ್ರಬುದ್ಧತೆ, ಸ್ಪಷ್ಟ ಗುರಿಗಳು, ಸಂಘರ್ಷ ನಿರ್ವಹಣಾ ಕೌಶಲ್ಯಗಳು ಮುಖ್ಯ. 20ರ ಹರೆಯದ ಮದುವೆಗಳು ಹೆಚ್ಚು ತೃಪ್ತಿ ತರುತ್ತವೆ, ಆದರೆ ವೈಯಕ್ತಿಕ ಬೆಳವಣಿಗೆಯ ಸವಾಲುಗಳಿವೆ. 30- 40ರ ಹರೆಯದಲ್ಲಿ ಸ್ಪಷ್ಟತೆ ಹೆಚ್ಚಿರುತ್ತದೆ, ಆದರೆ ಹೊಂದಾಣಿಕೆಯ ಸವಾಲುಗಳಿವೆ. ಮದುವೆಯ ಯಶಸ್ಸಿಗೆ ಪರಸ್ಪರ ಗೌರವ, ಹೊಂದಾಣಿಕೆ, ಸಂವಹನ ಮುಖ್ಯ.

ಮದುವೆ (Marriage)ಯಾಗಲು ಉತ್ತಮ ವಯಸ್ಸು ಯಾವುದು? ಈ ಪ್ರಶ್ನೆ ಸಾಮಾನ್ಯವಾಗಿ ಪ್ರತಿಯೊಬ್ಬರನ್ನು ಕಾಡುತ್ತದೆ. ಮಕ್ಕಳಿಗೆ 25 ತುಂಬುತ್ತಿದ್ದಂತೆ ಸಂಗಾತಿ ಹುಡುಕಾಟವನ್ನು ಪಾಲಕರು ಮಾಡ್ತಾರೆ. ಮಕ್ಕಳ ವಯಸ್ಸಿಗೆ ಪ್ರಾಮುಖ್ಯತೆ ನೀಡಲಾಗುತ್ತದೆಯೇ ವಿನಃ ಮಕ್ಕಳ ಮನಸ್ಥಿತಿಗಲ್ಲ. ಮದುವೆಗೆ ಮಕ್ಕಳು ಅರ್ಹತೆ ಪಡೆದಿಲ್ಲ ಎಂದಾಗ ನಾನಾ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಮೊದಲು ಮದುವೆಗೆ ನಾವು ಸಿದ್ಧರಾಗಿದ್ದೇವೆಯೇ ಎಂಬುದನ್ನು ಅರಿಯಬೇಕು.

ಮಾನಸಿಕ ತಜ್ಞೆ ನೂಪುರ್ ಧೇಕ್‌ಫಾಲ್ಕರ್ ಪ್ರಕಾರ, ಮದುವೆಗೆ ಸಿದ್ಧರಾಗಿರುವುದು ಆಳವಾದ ಪ್ರೀತಿ (love)ಯನ್ನು ಮೀರಿದ್ದು. ಇದು ಮೌಲ್ಯಗಳ ಹಂಚಿಕೆ, ಬದ್ಧತೆ ಮತ್ತು ಭಾವನಾತ್ಮಕ ಸ್ಥಿತಿಯನ್ನು ಸೂಚಿಸುತ್ತದೆ. ಮದುವೆಗೆ ಸಿದ್ಧರಾಗಿರುವ ದಂಪತಿ ಸಾಮಾನ್ಯವಾಗಿ ಬಲವಾದ ಸಂವಹನ ಕೌಶಲ್ಯ, ಭಿನ್ನಾಭಿಪ್ರಾಯಗಳನ್ನು ಗೌರವದಿಂದ ಎದುರಿಸುವ ಇಚ್ಛೆ ಮತ್ತು ವೈಯಕ್ತಿಕವಾಗಿ ಮತ್ತು ದಂಪತಿಯಾಗಿ ಪರಸ್ಪರರ ಗುರಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಕಷ್ಟಕರವಾದ ವಿಷಯಗಳನ್ನು ಭಯವಿಲ್ಲದೆ ಚರ್ಚಿಸಲು ಸಮರ್ಥರಾಗಿರುತ್ತಾರೆ.  ಹಣಕಾಸು, ಕುಟುಂಬ ಅಥವಾ ಜೀವನಶೈಲಿಯ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. 

ಸಂಸದ ತೇಜಸ್ವಿ ಸೂರ್ಯಗೆ ಕೂಡಿ ಬಂದ ಕಂಕಣ ಭಾಗ್ಯ: ವಧು ಯಾರು?

ನೂಪುರ್ ಪ್ರಕಾರ, ಮದುವೆಯಾಗಲು ಉತ್ತಮ ಸಮಯ ಎಂಬುದಿಲ್ಲ. ಸಂಗಾತಿ ತಮ್ಮ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿರುವಾಗ, ತಮ್ಮ ಸಂಗಾತಿಯಿಂದ ಅವರು ಏನು ಬಯಸುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದಾಗ, ಆದರ್ಶಪ್ರಾಯವಾಗಿ ಜೀವನ (life) ನಡೆಸಲು ತಯಾರಾದಾಗ, ಸಂಘರ್ಷಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾಗ ಅವರು ಮದುವೆಗೆ ಸಿದ್ಧವಾಗಿದ್ದಾರೆ ಎನ್ನಬಹುದು. 

20ರ ದಶಕದಲ್ಲಿ ಮದುವೆ :  20ರ ದಶಕದಲ್ಲಿ ಮದುವೆಯಾಗುವ ಜನರು ಹೆಚ್ಚು ವೈವಾಹಿಕ ತೃಪ್ತಿ ಹೊಂದಿರುತ್ತಾರೆ. ಇವರಲ್ಲಿ ವಿಚ್ಛೇದನ ಕಡಿಮೆ ಎಂದು ಅಧ್ಯಯನ ಹೇಳುತ್ತದೆ. ನೂಪುರ್ ಕೂಡ ಇದನ್ನು ಒಪ್ಪುತ್ತಾರೆ. 20ರ ಹರೆಯದಲ್ಲಿ ಮದುವೆಯಾಗುವುದು ಸಂತೋಷಕರ ಅನುಭವ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಜೋಡಿಗೆ ಒಟ್ಟಿಗೆ ಬೆಳೆಯಲು ಅನನ್ಯ ಅವಕಾಶ ಸಿಗುತ್ತದೆ. ಜೀವನದ ಒಂದು ರೋಮಾಂಚನಕಾರಿ, ಪರಿವರ್ತನೆಯ ಹಂತಕ್ಕೆ ಇಬ್ಬರೂ ಒಟ್ಟಾಗಿ ಅಡಿಪಾಯ ಹಾಕುತ್ತಾರೆ. ಆದ್ರೆ 20 ರ ದಶಕ ತೀವ್ರವಾದ ವೈಯಕ್ತಿಕ ಬೆಳವಣಿಗೆಯ ಸಮಯ. ಇಲ್ಲಿ ಸವಾಲು ಹೆಚ್ಚು. ಈ ಸಮಯದ ಅಪಾಯವೆಂದರೆ ದಂಪತಿ ವೈಯಕ್ತಿಕ ಆದ್ಯತೆ ಅಥವಾ ಸಾಮಾಜಿಕ ವಲಯಗಳಲ್ಲಿ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಇದು ಸಂಬಂಧದಲ್ಲಿ ಅನಿರೀಕ್ಷಿತ ಒತ್ತಡ ಹೆಚ್ಚಿಸಬಹುದು. ಈ ವಯಸ್ಸಿನಲ್ಲಿ ಸ್ವಯಂ ಅರಿವು, ಆತ್ಮವಿಶ್ವಾಸ ಮತ್ತು ಸ್ಥಿರತೆಯ ಅಭಿವೃದ್ಧಿಯಾಗ್ತಿರುವ ಕಾರಣ, ಆದ್ಯತೆಗಳು ಸಂಗಾತಿ ನಿರೀಕ್ಷಿಸದ ರೀತಿಯಲ್ಲಿ ವಿಕಸನಗೊಳ್ಳುವ ಸಾಧ್ಯತೆ ಇರುತ್ತದೆ. ಈ ಬದಲಾವಣೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ, ಎದುರಿಸುವ ದಂಪತಿ ದೀರ್ಘಕಾಲ ಸಂತೋಷದಿಂದ ಬಾಳುತ್ತಾರೆ. ಇಬ್ಬರ ಮಧ್ಯೆ ಸಂವಹನ ಮತ್ತು ಹೊಂದಿಕೊಳ್ಳುವ ಇಚ್ಛೆ ಮುಂದುವರೆಯುತ್ತದೆ ಎಂದು ನೂಪುರ್ ಹೇಳಿದ್ದಾರೆ. 

ಮಗಳು ಪಾಲಕ್ ಡೇಟಿಂಗ್ ವದಂತಿ ಬಗ್ಗೆ ಶ್ವೇತಾ ತಿವಾರಿ ಅಚ್ಚರಿ ಹೇಳಿಕೆ!

30 -40ರ ದಶಕದಲ್ಲಿ ಮದುವೆ : 30 ಅಥವಾ 40 ರ ದಶಕದ ಅಂತ್ಯದ ಸಮಯದಲ್ಲಿ ಅನೇಕ ವ್ಯಕ್ತಿಗಳು ತಮ್ಮ ವೈಯಕ್ತಿಕ ಮೌಲ್ಯಗಳು, ಗುರಿಗಳು ಮತ್ತು ಪಾಲುದಾರರಿಂದ ನಿಜವಾಗಿ ಏನು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟತೆ ಹೊಂದಿರುತ್ತಾರೆ. ಇದು ಹೊಂದಾಣಿಕೆ ಮತ್ತು ಆಳವಾದ ಸಂಬಂಧದ ತೃಪ್ತಿಗೆ ಕಾರಣವಾಗಬಹುದು. ಜೀವನದ ಅನುಭವ ಹೆಚ್ಚಿರುವ ಕಾರಣ ದಾಂಪತ್ಯದಲ್ಲಿ ಸ್ಥಿರತೆ ಕಾಣಬಹುದು. ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಇವರು ಪಕ್ವಗೊಂಡಿರುತ್ತಾರೆ. ಆದ್ರೆ ಈ ವಯಸ್ಸಿನಲ್ಲಿ ಮದುವೆ ಆಗುವವರು ಕೂಡ ಕೆಲ ಸವಾಲು ಎದುರಿಸಬೇಕು. ಜನರು ತಮ್ಮದೇ ಆದ ದಿನಚರಿ ಮತ್ತು ಜೀವನಶೈಲಿಗೆ ಒಗ್ಗಿಕೊಂಡಿರುತ್ತಾರೆ. ಇದ್ರಲ್ಲಿ ರಾಜಿ ಮಾಡಿಕೊಳ್ಳುವುದು ಕಠಿಣವಾಗುತ್ತದೆ. ಮಕ್ಕಳನ್ನು ಬಯಸುವ ಜನರಿಗೆ ಈ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ನೂಪುರ್ ಪ್ರಕಾರ, ಮದುವೆ ಎಂಬುದು ಹೊಂದಿಕೊಳ್ಳುವಿಕೆ, ಒಟ್ಟಿಗೆ ಬೆಳೆಯುವ ಮುಕ್ತತೆ, ಸ್ವಯಂ ಪ್ರಜ್ಞೆ, ಪ್ರತ್ಯೇಕತೆಯನ್ನು ಗೌರವಿಸುವುದನ್ನು ಒಳಗೊಂಡಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?