ಹಾನಿಕರವಲ್ಲದ, ಲೈಂಗಿಕ ಕಿರುಕುಳದ ವಾಸನೆ ಇಲ್ಲದ, ಒಂದು ಬಗೆಯ ಆಪ್ತ ಫೀಲಿಂಗ್ ಕೊಡುವ ಫ್ಲರ್ಟಿಂಗ್‌ನಿಂದ ನಿಮ್ಮ ಆಫೀಸ್ ಕೆಲಸದ ಪ್ರೊಡಕ್ಟಿವಿಟಿ ಹೆಚ್ಚು ಆಗುತ್ತೆ ಅಂತಿದಾರೆ ತಜ್ಞರು. ಇದು ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿಯ ಲೀ ಶೆಫರ್ಡ್ ಎಂಬ ಪ್ರಾಧ್ಯಾಪಕಿಯ ಸ್ಟಡಿಯ ಫಲಿತಾಂಶ.
ಆಫೀಸ್‌ನಲ್ಲಿ ನಾನಾ ನಮೂನೆಯ ಜನಗಳನ್ನು ನೋಡಿರ್ತೀರಿ. ಸಿಡುಕರು, ಜಗಳಗಂಟರು, ಬಾಸಿಸಂ ತೋರಿಸುವವರು, ಗುಮ್ಮನ ಗುಸುಕನ ಹಾಗೆ ಇರುವವರು, ಇಂಥವರು ನಿಮಗೆ ಇಷ್ಟವಾಗಲ್ಲ. ನಿಜ ತಾನೆ? ಹಾಗೇ ಜೋಕ್ ಮಾಡ್ತಾ ಇರುವವರು, ಲೈಟಾಗಿ ಕಾಲೆಳೆಯುವವರು, ಅಕ್ಕರೆ ತೋರಿಸುವವರು ಇಷ್ಟವಾಗ್ತಾರೆ ಅಲ್ವಾ? ಫ್ಲರ್ಟಿಂಗ್ ಎಂಬುದೂ ಇದರ ಮುಂದುವರಿದ ಭಾಗವೇ. ಹಾನಿಕರವಲ್ಲದ, ಲೈಂಗಿಕ ಕಿರುಕುಳದ ವಾಸನೆ ಇಲ್ಲದ, ಒಂದು ಬಗೆಯ ಆಪ್ತ ಫೀಲಿಂಗ್ ಕೊಡುವ ಫ್ಲರ್ಟಿಂಗ್‌ನಿಂದ ನಿಮ್ಮ ಆಫೀಸ್ ಕೆಲಸದ ಪ್ರೊಡಕ್ಟಿವಿಟಿ ಹೆಚ್ಚು ಆಗುತ್ತೆ ಅಂತಿದಾರೆ ತಜ್ಞರು. ಇದು ವಾಷಿಂಗ್ಟನ್ ಸ್ಟೇಟ್ ಯುನಿವರ್ಸಿಟಿಯ ಲೀ ಶೆಫರ್ಡ್ ಎಂಬ ಪ್ರಾಧ್ಯಾಪಕಿಯ ಸ್ಟಡಿಯ ಫಲಿತಾಂಶ.
ಇದಕ್ಕಾಗಿ ಈಕೆ ಸಾವಿರಾರು ಉದ್ಯೋಗಿಗಳನ್ನು ಮಾತಾಡಿಸಿದ್ದಾಳೆ. ಎಲ್ಲರೂ ಹೇಳಿದ್ದು ಒಂದೇ ಮಾತು- ಅಪಾಯಕಾರಿಯಾಗಿಲ್ಲದೇ ಹೋದರೆ, ಫ್ಲರ್ಟಿಂಗ್ ಅನ್ನ ನಾವು ಎಂಜಾಯ್ ಮಾಡ್ತೀವಿ ಅಂತ. ಲೈಟಾಗಿ ಇದ್ದರೆ ಅದರಿಂದ ಏನೂ ತೊಂದರೆಯಿಲ್ಲ. ಮಾತ್ರವಲ್ಲ, ಇದರಿಂದ ಆರೋಗ್ಯಕರ ಲಾಭಗಳೂ ಇವೆಯಂತೆ, ಅದೇನು ಗೊತ್ತಾ? ಮಹಿಳೆಯರಿಗೆ, ಓಹೋ ನಾವಿನ್ನೂ ಆಕರ್ಷಕ ವ್ಯಕ್ತಿತ್ವದವರು, ನಮ್ಮನ್ನು ಹಿಂಬಾಲಿಸಿ ಬರೋ ಪುರುಷ ಸಿಂಹಗಳು ಇವೆ ಅನ್ನೋ ಫೀಲಿಂಗ್ ಬರುತ್ತೆ. ತಾನು ಮಾಡುವ ಕೆಲಸದಲ್ಲಿ ಸಾವಧಾನ, ಪ್ರೀತಿ, ಫ್ಲರ್ಟ್ ಮಾಡ್ತಾ ಇರೋ ಗಂಡಸಿನ ಮುಂದೆ ತಾನು ಎಫಿಶಿಯೆಂಟ್ ಅಂತ ತೋರಿಸಿಕೊಳ್ಳಬೇಕು ಅನ್ನುವ ಭಾವನೆ ಎಲ್ಲ ಹೆಚ್ಚಾಗುತ್ತೆ. ಅಟೋಮ್ಯಾಟಿಕ್ಕಾಗಿ, ಅದು ಕಚೇರಿ ಕೆಲಸದಲ್ಲಿ ಹೆಚ್ಚು ಪ್ರಾಡಕ್ಟಿವಿಟಿಗೆ ಸಹಾಯ ಮಾಡುತ್ತೆ.
ಪುರುಷರಿಗೂ ಅಷ್ಟೇ. ಫ್ಲರ್ಟಿಂಗ್ ಮಾಡುವುದರಿಂದ ತಾವು ಪವರ್‌ಫುಲ್ ಅನ್ನುವ ಭಾವನೆ ಬರುತ್ತಂತೆ. ತಾವು ಹೆಣ್ಣನ್ನು ಆಕರ್ಷಿಸಬಲ್ಲವರು, ತಮ್ಮ ಪುರುಷತ್ವಕ್ಕೆ ಬೆಲೆ ಇದೆ ಅಂತ ತಿಳೀತಾರೆ. ಹಾಗಂತ ಪುರುಷರ ಪೌರುಷ, ದಬ್ಬಾಳಿಕೆ ಸ್ವಭಾವಗಳು ಇಲ್ಲಿ ವರ್ಕ್ ಆಗೋಲ್ಲ, ಬದಲಾಗಿ ಹಾಸ್ಯ ಸ್ವಭಾವ, ರೊಮ್ಯಾಂಟಿಕ್ಕಾಗಿ ಮೂವ್ ಮಾಡೋ ಸ್ವಭಾವ, ಜೋಕ್‌ಗಳನ್ನು ಹೇಳಿ ನಗಿಸೋದು, ಮಹಿಳಾ ಕೊಲೀಗ್‌ಗಳಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡೋದು ಮುಂತಾದ ನವಿರಾದ, ಸೂಕ್ಷ್ಮವಾದ ನಡವಳಿಕೆಗಳು ಇವರ ಭಾವನೆಗಳನ್ನಯ ಪರಸ್ಪರ ಹಂಚಿಕೊಳ್ಳೊದಕ್ಕೆ ನೆರವಾಗುತ್ತಂತೆ.
ನಿಮಗೆ ಸಂತೋಷವಾಗಿ ಇರೋಕೆ ಆಗ್ತಾ ಇಲ್ವಾ?
ಇದರಲ್ಲಿ ವಿವಾಹಿತರ, ಅವಿವಾಹಿತರ ಪಾತ್ರ ಎಷ್ಟು ಅಥವಾ ಹೇಗೆ? ಇದು ಸ್ವಲ್ಪ ಕಾಂಪ್ಲಿಕೇಟೆಡ್. ಅವಿವಾಹಿತರು ಫ್ಲರ್ಟಿಂಗನ್ನು ಸೀರಿಯಸ್ಸಾಗಿ ತಗೊಳ್ಳೋ ಚಾನ್ಸ್ ಹೆಚ್ಚು . ಆದರೆ ವಿವಾಹಿತರು, ಮನೆಯ ವಿಚಾರ ಮನೆಗೆ, ಆಫೀಸ್‌ನ ವಿಚಾರ ಆಫೀಸ್‌ಗೆ ಎಂಬಂತೆ ಇರುತ್ತಾರೆ. ಹೀಗಾಗಿ ಇವರ ವಿಷಯದಲ್ಲಿ ಇದು ಅಷ್ಟೇನೂ ಕಾಂಪ್ಲೀಕೇಟ್ ಆಗೋಲ್ಲವಂತೆ. ಹೀಗಾಗಿ, ವಿವಾಹಿತರೇ ಫ್ಲರ್ಟಿಂಗ್ ಮಾಡೋದು ಹೆಚ್ಚು ಸೇಫು ಅನ್ನುವುದು ಅವರ ಅಭಿಪ್ರಾಯ! ಅವಿವಾಹಿತರ ಫ್ಲರ್ಟಿಂಗ್ ಕೊನೆಗೆ ಮದುವೆಗೆ ಹೋಗಿ ನಿಲ್ಲೋ ಚಾನ್ಸ್ ಇದೆ. ಫ್ಯಾಮಿಲಿ ಮಾಡಿಕೊಳ್ಳೋ ಯೋಚನೆ ಇಲ್ಲದವರು ಇದರಲ್ಲಿ ಸಿಕ್ಹಾಕಿ ಕೊಳ್ಳೋಕೆ ಇಷ್ಟಪಡೋಲ್ಲ. ಆದರೆ ಅವಿವಾಹಿತರು ಮಾತ್ರ, ಈ ವಿಚಾರ ಪಬ್ಲಿಕ್ ಆಗದಂತೆ ಎಷ್ಟು ಎಚ್ಚರ ವಹಿಸಿದರೂ ಸಾಲದಂತೆ. ಆಫೀಸ್ ಫ್ಲರ್ಟಿಂಗ್, ಕಚೇರಿಯನ್ನು ಬಿಟ್ಟು ಹೊರಗೆ ಕಾಲಿಟ್ಟರೆ, ಮಾಲ್- ಹೋಟೆಲ್ ಎಂದೆಲ್ಲ ಮುಂದುವರಿದರೆ ಮಾತ್ರ ಅಪಾಯ ಕಾದಿರುತ್ತದೆ. ಅಷ್ಟೊಂದು ಭಾವನಾತ್ಮಕತೆ ಒಳ್ಳೇದಲ್ಲ. ಅಷ್ಟೊಂದು ಅತೀಗೆ ಮುಂದುವರಿಸೋದೂ ಒಳ್ಳೆಯದಲ್ಲ. ಯಾಕೆಂದರೆ, ಒಮ್ಮೆ ಆ ಹಂತ ತಲುಪಿದರೆ ಮುಂದುವರಿಸೋಕೂ ಆಗಲ್ಲ, ಹಿಂದಿರುಗೋಕೂ ಆಗಲ್ಲ ಎಂಬ ಹಂತ ತಲುಪುತ್ತೆ. ಬ್ರೇಕಪ್ ಆದರೆ, ಪರಸ್ಪರ ಮುಖ ನೋಡಿಕೊಳ್ಳಲಾಗದ ಸನ್ನಿವೇಶ ಆಫೀಸ್‌ನಲ್ಲಿ ಸೃಷ್ಟಿಯಾಗುತ್ತೆ ಅಂತಾರೆ.
22ರ ಯುವಕನ ಮೇಲೆ 60ರ ಮಹಿಳೆಗೆ ಲವ್!
ಅಂದಹಾಗೆ, ಆಫೀಸ್ ಫ್ಲರ್ಟಿಂಗ್‌ನಲ್ಲಿ ಅತಿಯಾದ ಸೆಕ್ಷಯುಲ್ ಒತ್ತಡ, ನಿರೀಕ್ಷೆ, ಕಿರುಕುಳ ಇರಬಾರದು. ಉದ್ಯೋಗಿ ಹಾಗೂ ಬಾಸ್‌ಗಳ ನಡುವೆ ಫ್ಲರ್ಟಿಂಗ್ ಇರಬಾರದು. ಅತಿಯಾಗಿ ಹಚ್ಚಿಕೊಳ್ಳಬಾರದು. #MeToo ಅನ್ನುವ ಸನ್ನಿವೇಶ ಸೃಷ್ಟಿಯಾಗಬಾರದು ಅಷ್ಟೇ.