ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! ಇದೊಂಥರಾ ಹೊಸ ಟ್ರೆಂಡಾ?

By Suvarna News  |  First Published Jan 28, 2020, 12:02 PM IST

ನಿನ್ನ ಆ ಮಾತು ಕೇಳಿದ ಮೇಲೆ ನಿನಗೆ ಮಕ್ಕಳನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಲೈಫ್ನಲ್ಲಿ ಮಕ್ಕಳಿಲ್ಲದೇ ಇರೋದು ನಿನ್ನ ಮಟ್ಟಿಗೆ ಬಿಗ್‌ ಝೀರೋ ಅಂತೆಲ್ಲ ಗೊತ್ತಾಯ್ತು. ಆದರೆ ನನಗೆ ಮಕ್ಕಳನ್ನು ಕಂಡರೆ ಆಗಲ್ಲ. ನಾನು ಅವರನ್ನು ದ್ವೇಷಿಸ್ತೀನಿ. ಐ ಹೇಟ್ ಚಿಲ್ಟ್ರನ್.


ನನ್ನ ಪ್ರೀತಿಯ ಹುಡುಗ,

ಸಾರಿ, ಮೇಲಿನ ಲೈನ್ ನಿನಗೆ ಸಿನಿಮಾ ಡೈಲಾಗ್‌ ಥರ ಕಾಣಿಸಿರಬಹುದು. ಹಾಗಂತ ಅದೇನೂ ಅಚಾನಕ್ ಆಗಿ ಬಂದಿದ್ದಲ್ಲ. ಬೇಕಂತಲೇ ಬರೆದಿದ್ದು. ಯಾಕೆ ಅಂತ ಹೇಳ್ತೀನಿ. ಅದಕ್ಕೂ ಮೊದಲು ಒಂದು ವಿಷಯ ಹೇಳಬೇಕು. ಕಳೆದ ವೀಕೆಂಡ್ ಸಂಜೆ ನಾನೂ ನೀನೂ ಚಾಟ್ಸ್‌ ತಿನ್ನೋಣ ಅಂತ ಸಂಜಯ ನಗರದ ಗಲ್ಲಿಗೆ ನುಗ್ಗಿದ್ವಲ್ಲಾ.. ಅಲ್ಲಿ ಚಾಟ್ಸ್‌ ತಿನ್ತಾ ತಿನ್ತಾ ನೀನಾಡಿದ ಒಂದು ಮಾತು ನನ್ನ ಇಡೀ ವೀಕೆಂಡ್‌ನ ಖುಷಿಯನ್ನೇ ಅಲ್ಲಾಡಿಸಿಬಿಟ್ಟಿತು. ಅಲ್ಲಿ ಸುಮ್ನೆ ಯಾಕೆ ಸೀನ್ ಕ್ರಿಯೇಟ್ ಮಾಡೋದು ಅಂತ ಸುಮ್ನಿದ್ದೆ. ಮನೆಗೆ ಬಂದ್ಮೇಲೆ ಫೋನ್ ಮಾಡಿ ಹೇಳೋಣ ಅಂದುಕೊಂಡೆ. ಆದರೆ ಯಾಕೋ ಅದನ್ನೆಲ್ಲ ಫೋನ್ನಲ್ಲಿ ಹೇಳಕ್ಕಾಗಲ್ಲ ಅಂದುಕೊಂಡು ಈ ಲೆಟರ್ ಬರಿಯೋದಕ್ಕೆ ಕೂತೆ.

Tap to resize

Latest Videos

undefined

 

ಸ್ಕೂಲ್ನಲ್ಲಿ ಮಿಸ್ ಲೆಟರ್ ರೈಟಿಂಗ್ ಅಂತ ಹೇಳ್ಕೊಟ್ಟಾಗ ಬರೆದಿದ್ದು ಬಿಟ್ಟರೆ, ಈವರೆಗೂ ಯಾರಿಗೂ ಒಂದು ಪತ್ರ ಅಂತ ಬರೆದಿಲ್ಲ. ಅಭ್ಯಾಸ ಇಲ್ಲದ ಕಾರಣ ಎಲ್ಲಿಂದ ಶುರು ಮಾಡಬೇಕು, ಎಲ್ಲಿ ನಿಲ್ಲಿಸಬೇಕು ಅಂತ ಗೊತ್ತಾಗುತ್ತಿಲ್ಲ. ಸೋ, ನಿಂಗೆ ಇದರ ಫಾರ್ಮ್ಯಾಟೇ ಸರಿಯಿಲ್ಲ ಅನಿಸಿದರೆ ನಾನೇನೂ ಮಾಡಕ್ಕಾಗಲ್ಲ. ಅದು ನಿನ್ನ ಕರ್ಮ ಅಷ್ಟೇ. ಶ್ರೀಕೃಷ್ಣನೇ ಹೇಳಿಲ್ವಾ, ಅವರವರ ಕರ್ಮದ ಫಲ ಅನುಭವಿಸಿಯೇ ತೀರಬೇಕು ಅಂತ. ಒಂಥರಾ ಹಾಗೇ ಅಂದುಕೋ. ಸುಮ್ನೇ ಕೊರೀತಿಲ್ಲ ಕಣೋ, ಮುಂದೆ ನಿಂಗೊಂದು ಶಾಕ್ ಕಾದಿದೆ. ಅದಕ್ಕೋಸ್ಕರ ಈ ಎಲ್ಲ ಬಿಲ್ಡಪ್ಪು.

 

ಅಪ್ಪುಗೆಯಲ್ಲಿರುವ ಸುಖ ಗೊತ್ತೇ ಇಲ್ಲವಾ? ಒಮ್ಮೆ ತಬ್ಬಿಕೊಂಡು ನೋಡಿ1

 

ಸರಿ ಈಗ ಮ್ಯಾಟರ್ಗೆ ಬರ್ತೀನಿ. ಅವತ್ತಿನ ದಿನ ನೆನಪು ಮಾಡ್ಕೋ. ಅವತ್ತು ಸಂಜೆ ನಾವಿಬ್ರೂ ಚಾಟ್ಸ್ ತಿನ್ನೋಣ ಅಂತ ಮಾಮೂಲಿನ ಸಂಜಯನಗರದ ಚಾಟ್ಸ್‌ ಅಂಗಡಿ ಮುಂದೆ ನಿಂತಿದ್ವಿ. ಸುತ್ತಮುತ್ತ ಹತ್ತಾರು ಜನ. ನಮ್ಮ ವಯಸ್ಸಿನ ಹುಡುಗರು, ಅಂಕಲ್ಗಳು, ಅವರ ಪತ್ನಿ, ಮಕ್ಕಳು ಮತ್ತು ಸಂಸಾರ. ಕಯ್ಯೋ ಅಂತ ಅಳುವ ಒಂದು ಮಗು, ತನ್ನ ಪ್ಲೇಟ್ನಲ್ಲಿದ್ದ ಚಾಟ್ಸ್‌ ಪೂರಾ ಖಾಲಿ ಮಾಡಿ, ಅಮ್ಮನ ಪ್ಲೇಟ್ಗೆ ಕೈ ಹಾಕಿ ತಿನ್ತಿದ್ದ ಹುಡುಗ, ಒಂದೇ ಸವನೆ ಹಠ ಮಾಡ್ತಿದ್ದ ಮತ್ತೊಂದು ಚಿಕ್ಕ ಹುಡುಗಿ. ನಾನು ಅದನ್ನೆಲ್ಲ ಒಳ್ಳೆ ಡ್ರಾಮಾ ಥರ ನೋಡ್ತಿದ್ದಾಗ ನಿನ್ನ ಡೈಲಾಗ್ ಪುಂಖಾನುಪುಂಖವಾಗಿ ಹೊರಬಿತ್ತು ನೋಡು...


'ನಾವಿಬ್ರೂ ಮಕ್ಕಳಾದ ಮೇಲೂ ಅವರನ್ನು ಕರ್ಕೊಂಡು ಇಲ್ಲಿಗೆ ಬರ್ಬೇಕು ಕಣೇ. ಆ ಪಾಪು ನೋಡು, ಎಷ್ಟು ಮುದ್ದಾಗಿದೆ, ಆ ಎರಡು ಹಲ್ಲು ಮೊಲದ ಮರಿ ಥರ, ಸೋ ಕ್ಯೂಟ್, ಈ ಮಕ್ಕಳು ದೇವರಿದ್ದ ಹಾಗೆ. ನಮ್ಮ ಥರ ಕೆಟ್ಟ ಬುದ್ಧಿ ಏನೂ ಇರಲ್ಲ. ಕಪಟನೇ ಗೊತ್ತಿಲ್ಲ.. ನಂಗೆ ಮಕ್ಕಳು ಅಂದರೆ ಯಾಕೋ ತುಂಬ ಇಷ್ಟ. ಎಷ್ಟೊತ್ತು ಬೇಕಾದ್ರೂ ಅವುಗಳ ಜೊತೆಗೆ ಕಳೆದುಬಿಡ್ತೀನಿ..'
 

ನೀನು ಮಕ್ಕಳನ್ನೇ ನೋಡುತ್ತಾ ಮಾತಾಡುತ್ತಲೇ ಇದ್ದೆ. ನಾನು ಹ್ಯಾಪ್ ಮೋರೆ ಹಾಕ್ಕೊಂಡು ಸುಮ್ನೇ ಸೀನ್ ಕ್ರಿಯೇಟ್ ಮಾಡಬಾರದು ಅಂತ ಸುಮ್ಮನೇ ಹಲ್ಲು ಕಿರಿಯುತ್ತಾ ನಿಂತಿದ್ದೆ. ಅಲ್ಲೊಂದು ಆಂಟಿ ಪಾಪುಗೆ ನನ್ನನ್ನೇ ತೋರಿಸ್ತಾ ಏನೋ ನಗ್ತಾ ಹೇಳ್ತಾ ಇದ್ರು. ನೋಡು ಪಾಪು, ಕೋತಿ ಹೆಂಗೆ ಕಿಸೀತಿದೆ ಅನ್ನೋ ರೀತಿ ಇತ್ತು, ಇರಲಿ..

 

ಎಕ್ಸಾಂ ಟೈಮ್‌ನಲ್ಲಿ ವೈರಲ್‌ ಆಗ್ತಿರೋ ಪ್ರಿನ್ಸಿಪಾಲ್‌ ಪತ್ರದಲ್ಲೇನಿದೆ

 

ನಿನ್ನ ಆ ಮಾತು ಕೇಳಿದ ಮೇಲೆ ನಿನಗೆ ಮಕ್ಕಳನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಲೈಫ್ನಲ್ಲಿ ಮಕ್ಕಳಿಲ್ಲದೇ ಇರೋದು ನಿನ್ನ ಮಟ್ಟಿಗೆ ಬಿಗ್‌ ಝೀರೋ ಅಂತೆಲ್ಲ ಗೊತ್ತಾಯ್ತು. ಆದರೆ ನನಗೆ ಮಕ್ಕಳನ್ನು ಕಂಡರೆ ಆಗಲ್ಲ. ನಾನು ಅವರನ್ನು ದ್ವೇಷಿಸ್ತೀನಿ. ಐ ಹೇಟ್ ಚಿಲ್ಟ್ರನ್. ಮಕ್ಕಳು ನಿಂಗೆ ದೇವರ ಥರ ಕಂಡರೆ ನಂಗೆ ದೆವ್ವಗಳ ಥರ ಕಾಣ್ತವೆ. ನೀನು ಅದೇನೋ ಅಂದಿಯಲ್ಲಾ, ಕಪಟ ಗೊತ್ತಿಲ್ಲ ಅಂತ. ಎಷ್ಟೋ ಮಕ್ಕಳು ಮೋಸ ಮಾಡೋದನ್ನು, ಎದುರೊಂದು ಥರ ಹಿಂದೊಂದು ಥರ ಆಡೋದನ್ನು ಕಣ್ಣಾರೆ ಕಂಡಿದ್ದೀನಿ. ಎಲ್ಲರೂ ಮಗುವನ್ನು ಮುದ್ದಾಡುತ್ತಿದ್ದರೆ ನಾನು ಶಾಕ್ ಹೊಡೆಸಿಕೊಂಡ ಕಾಗೆ ಥರ ದೂರ ನಿಂತಿರ್ತೀನಿ. ಯಾರೋ ರಿಲೇಟಿವ್ ಮನೆಗೆ ಹೋದ್ರೆ ಅವ್ರು ಮಗೂನ ಕರೆದು, 'ಪಾಪೂ, ಅಕ್ಕಂಗೆ ನಿನ್ನ ಡ್ಯಾನ್ಸ್ ನೋಡ್ಬೇಕಂತೆ, ಮಾಡಿ ತೋರಿಸು. ರೈಮ್ಸ್ ಹೇಳು..' ಅಂತೆಲ್ಲ ಹೇಳುವಾಗಲೂ ಓಡಿ ಹೋಗಾಣ ಅನ್ನುವಷ್ಟು ಸಿಟ್ಟು ಬರುತ್ತೆ. ಆದರೂ ತಡೆದುಕೊಂಡು ಮೊನ್ನೆ ನಿಂತಿದ್ನಲ್ಲಾ ಹಾಗೇ ನಿಂತಿರ್ತೀನಿ.
 

ಯಾಕೆ ನಾನು ಹಾಗೆ ಅನ್ನುವ ಸಂಶಯ ನಿನಗೆ ಬರಬಹುದು. ಅದೊಂದು ದೊಡ್ಡ ಕತೆ, ಶಾರ್ಟ್ ಆಗಿ ಹೇಳ್ತೀನಿ, ನಂಗೆ ಎಂಟು ವರ್ಷ ಆದಾಗ ತಮ್ಮ ಹುಟ್ಟಿದ. ಅಲ್ಲಿಯವರೆಗೆ ಎಲ್ಲರಿಂದ ಮುದ್ದು ಮಾಡಿಸಿಕೊಳ್ಳುತ್ತಿದ್ದ ನನ್ನನ್ನು ಈಗ ಯಾರೂ ಮಾತಾಡಿಸುತ್ತಿರಲಿಲ್ಲ. ಏನು ತಂದ್ರೂ ತಮ್ಮಂಗೆ. ಎಲ್ಲರ ಮುದ್ದು, ಪ್ರೀತಿ, ಗಿಫ್ಟ್ ಎಲ್ಲ ಅವನಿಗೆ. ಅವನೇ ನನ್ನ ಜೊತೆಗೆ ಜಗಳ ಆಡಿದ್ರೂ ಬೈಗುಳ ನಂಗೇ. ಅವನು ನಂಗೆ ಹೊಡೆದು ತಾನೇ ಅಳ್ತಿದ್ದ. ಅಪ್ಪ ಬಂದು ನಂಗೇ ಬೈತಾ ಇದ್ರು. ನಾನು ಒಂಟಿಯಾಗ್ತಾ ಬಂದೆ. ನನ್ನ ಸ್ಕೂಲ್ ಕತೆ ಎಲ್ಲ ಅಮ್ಮನೆದುರು ಸಂಭ್ರಮದಿಂದ ವರದಿ ಒಪ್ಪಿಸುತ್ತಿದ್ದವಳು ಏಕಾಏಕಿ ಸೈಲೆಂಟ್ ಆದೆ. ಜೊತೆಗೆ ಮಕ್ಕಳ ಬಗ್ಗೆ ದ್ವೇಷ ಬೆಳೆಯುತ್ತಲೇ ಹೋಯ್ತು. ಇವತ್ತಿಗೂ ಅದು ಹಾಗೇ ಇದೆ.

ಈಗ ವಿಷ್ಯಕ್ಕೆ ಬರೋಣ. ನಾವಿಬ್ರೂ ಒಂದು ವರ್ಷದಿಂದ ಜೊತೆಯಾಗಿ ಓಡಾಡ್ತಾ ಇದ್ದೀವಿ. ಮದ್ವೆ ಆಗೋಣ ಅಂತಾನೂ ಅಂದುಕೊಂಡಿದ್ದೀವಿ. ನಂಗೆ ಬೇಜಾರಾದಾಗ ನಿನ್ನ ಎದೆಗೆ ಒರಗಿದ್ರೆ ಮನಸ್ಸು ಹ್ಯಾಪಿಯಾಗುತ್ತೆ. ನಿನ್ನ ತಬ್ಕೊಂಡು ಮಲಗಿದ್ರೆ ಅದ್ಭುತ ನಿದ್ದೆ ಬರುತ್ತೆ. ನಿನ್ನ ಬಿಟ್ಟು ಬದುಕೋಕೆ ಬಹುಶಃ ನಂಗಾಗಲ್ಲ. ಹಾಗಂತ ನೀನು ನಮಗೆ ಮಗು ಬೇಕು ಅಂದರೂ ಸುತಾರಾಂ ಊಹೂಂ, ಸಾಧ್ಯವೇ ಇಲ್ಲ. ಜಾಸ್ತಿ ಫೋರ್ಸ್ ಮಾಡಿದ್ರೆ ಗರ್ಭಕೋಶನೇ ಕಿತ್ತಾಕಿಸಿಬಿಡ್ತೀನಿ ಅಷ್ಟೇ. ಸೋ, ಈ ಲೆಟರ್ನ ಉದ್ದೇಶ ನಿಂಗೀಗಾಗಲೇ ಅರ್ಥ ಆಗಿರಬಹುದು. ನೀನು ಅವತ್ತು ಪಾರ್ಕ್ ನಲ್ಲಿ ಮಕ್ಕಳ ನೋಡಿ ಆಡಿದ ಮಾತಿದ್ಯಲ್ಲಾ, ಅದು ಯಾವ ಸಿನಿಮಾ ಡೈಲಾಗ್ಗೂ ಕಡಿಮೆ ಇರಲಿಲ್ಲ. ಸೋ, ಆರಂಭದ ಒಕ್ಕಣೆ ಅದಕ್ಕೆ ಟಾಂಗ್ ಕೊಡೋಕೆ ಅಷ್ಟೇ.
 

ಈಗ ನೀನು ಡಿಸೈಡ್ ಮಾಡು, ನಾನೋ? ಮಗೂನೋ ಅಂತ. ಮಗೂನೇ ಮುಖ್ಯ ಅಂತಾದ್ರೆ ತುಂಬಾ ಕಷ್ಟ ಆದ್ರೂ ನುಂಗಿ ನಿಂಗೆ ಈ ಮೂಲಕ ಗುಡ್ ಬೈ ಹೇಳ್ತೀನಿ.
 

- ನಿನ್ನ

ಗುಬ್ಬಚ್ಚಿ

click me!