ಬಾಲಸೋರ್ ರೈಲು ಅಪಘಾತದ ಅನೇಕ ಹೃದಯ ವಿದ್ರಾವಕ ಕಥೆಗಳಿವೆ. ಅದನ್ನು ಕೇಳಿದರೆ, ನೋಡಿದರೆ ಎಂಥವರ ಕಲ್ಲು ಹೃದಯವೂ ಕರಗುವುದು ಖಂಡಿತ. ಪ್ರತ್ಯಕ್ಷದರ್ಶಿಗಳು ಹೇಳಿದ ಅನೇಕ ಘಟನೆಗಳು ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಅಂಥಾ ಘಟನೆಗಳಲ್ಲಿ ಒಂದು ವ್ಯಕ್ತಿಯೊಬ್ಬರು ನೋಡಿದ ಈ ಮನಕರಗುವ ದೃಶ್ಯ.
ದಿಢೀರನೆ ಭಾರೀ ಸದ್ದು, ಕತ್ತಲು, ಆಕ್ರಂದನ..ಕ್ಷಣಾರ್ಧದಲ್ಲಿ ಆ ದುರಂತ ನಡೆದುಹೋಗಿತ್ತು. ಗಂಟೆ ಸುಮಾರು 7.30 ಆಗಿರಬಹುದೇನೋ ಭಾರೀ ಸದ್ದು ಕೇಳಿಸಿತು. ದಿಢೀರ್ ರೈಲಿನ ಲೈಟ್‌ಗಳೆಲ್ಲವೂ ಆಫ್ ಆದವು. ಅಷ್ಟರಲ್ಲೇ ಸುಮಾರು 600 ಮೀಟರ್ ದೂರದಲ್ಲಿ ನೂರಾರು ಮೊಬೈಲ್ ಲೈಟ್‌ಗಳು ಕಾಣಿಸಿದವು. ಅದರ ಬೆನ್ನಲ್ಲೇ ಜನರ ಚೀರಾಟ, ಆಕ್ರಂದನದ ಸದ್ದು. ಸರಿಯಾಗಿ ಗಮನಿಸಿದಾಗ ಅಸ್ತವ್ಯಸ್ತವಾದ ರೈಲಿನ ಬೋಗಿಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸರಕು, ಸರಂಜಾಮುಗಳು ಕಂಡವು. ಅಲ್ಲಲ್ಲಿ ಬಿದ್ದ ಕೈ ಕಾಲುಗಳು, ಹೆಣಗಳ ರಾಶಿ, ರಕ್ತದ ಕೋಡಿ..ಅಬ್ಬಬ್ಬಾ ಕಣ್ಣು ಕತ್ತಲು ಬರುವಷ್ಟು ಭಯಾನಕ ಲೋಕ. ಯಾರ ತಪ್ಪೋ ದೇವರೇ ಬಲ್ಲ..ನೂರಾರು ಮಂದಿ ಜೀವ ಕಳೆದುಕೊಂಡಿದ್ರು. ಮತ್ತು ಅದೆಷ್ಟೋ ಮಂದಿ ಕೈ, ಕಾಲುಗಳನ್ನು ಕಳೆದುಕೊಂಡು ನೋವು ಸಹಿಸಲಾಗದೆ ಚೀರಾಡ್ತಿದ್ರು. ರಕ್ತದ ಕೋಡಿಯೇ ಹರಿದುಹೋಗುತ್ತಿತ್ತು. ದೇಹದಿಂದ ಬೇರೆಯಾದ ಕೈ ಕಾಲುಗಳು ಅಲ್ಲೆಲ್ಲೋ ಬಿದ್ದಿದ್ದವು.
ನಿನ್ನೆ ಸಂಜೆ ಒಡಿಶಾದಲ್ಲಿ ಸಂಭವಿಸಿದ ಮೂರು ರೈಲು ಅಪಘಾತದಲ್ಲಿ (Odisha train accident) ಸುಮಾರು 280 ಜನರು ಮೃತಪಟ್ಟಿದ್ದು, ಸುಮಾರು 900 ಜನರು ಗಾಯಗೊಂಡಿದ್ದಾರೆ. ಈ ರೈಲು ಅಪಘಾತ ಇತ್ತೀಚಿನ ಕೆಲ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಅಪಘಾತವಾಗಿದೆ. ಇನ್ನು, ಈ ರೈಲುಗಳಲ್ಲಿ ಪ್ರಯಾಣಿಸಿ ಬದುಕುಳಿದವರು ಹಾಗೂ ಪ್ರತ್ಯಕ್ಷದರ್ಶಿಗಳು ರೈಲುಗಳು ಡಿಕ್ಕಿ ಹೊಡೆದ ಕ್ಷಣದ ಭಯಾನಕ ಕಥೆಗಳನ್ನು ಹಂಚಿಕೊಂಡಿದ್ದಾರೆ. ಒಡಿಶಾ ರೈಲು ದುರಂತದ (Tragedy) ಅನೇಕ ಹೃದಯ ವಿದ್ರಾವಕ ದೃಶ್ಯಗಳು ಕಣ್ಣಲ್ಲಿ ನೀರು ತರಿಸುತ್ತಿದೆ.
undefined
ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..
ಒಡಿಶಾ ರೈಲು ಅಪಘಾತದ ಹೃದಯ ವಿದ್ರಾವಕ ಘಟನೆಗಳು
ಬಾಲಸೋರ್ ರೈಲು ಅಪಘಾತದ ಅನೇಕ ಹೃದಯ ವಿದ್ರಾವಕ ಕಥೆಗಳಿವೆ. ಅದನ್ನು ಕೇಳಿದರೆ, ನೋಡಿದರೆ ಎಂಥವರ ಕಲ್ಲು ಹೃದಯವೂ ಕರಗುವುದು ಖಂಡಿತ. ಪ್ರತ್ಯಕ್ಷದರ್ಶಿಗಳು ಹೇಳಿದ ಅನೇಕ ಘಟನೆಗಳು ಕಣ್ಣಲ್ಲಿ ನೀರು (Tears) ಬರುವಂತೆ ಮಾಡುತ್ತದೆ. ಅಂಥಾ ಘಟನೆಗಳಲ್ಲಿ ಒಂದು ವ್ಯಕ್ತಿಯೊಬ್ಬರು ನೋಡಿದ ಈ ದೃಶ್ಯ.
ಮಗುವೊಂದು (Baby) ತನ್ನ ಸತ್ತ ಪೋಷಕರ (Children) ಮೃತದೇಹದ ಬಳಿ ಕುಳಿತು ಅಳುತ್ತಿತ್ತು. ಸುತ್ತಮುತ್ತಲ ಜನರ ಕಿರುಚಾಟ, ಅರಚಾಟ, ಚೀರಾಟದಿಂದ ಗಾಬರಿಗೊಂದು ಅಪ್ಪಾ..ಅಮ್ಮಾ ಎದ್ದೇಳಮ್ಮಾ ಭಯವಾಗುತ್ತೆ ಅಂದಿತ್ತು. ಆದರೆ ಪೋಷಕರು ಮಗುವಿನ ದನಿ ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಅವರಾಗಲೇ ಬಾರದ ಲೋಕಕ್ಕೆ ತೆರಳಿದ್ದರು. ಮಗು ಇದ್ಯಾವುದನ್ನು ತಿಳಿಯದೇ ಅಪ್ಪ-ಅಮ್ಮನನ್ನು ನಿರಂತರವಾಗಿ ಕರೆಯುತ್ತಲೇ ಇತ್ತು. ಹೀಗೆ ತನ್ನ ಪೋಷಕರನ್ನು ಕರೆಯುತ್ತಾ ಮಗು ಅಳುತ್ತಲೇ ಸಾವನ್ನಪ್ಪಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ. ಆ ದೃಶ್ಯವು ಕರುಳ್ ಚುರುಕ್ ಎನ್ನುವಂತಿತ್ತು ಎಂದು ವಿವರಿಸುತ್ತಾರೆ.
ಒಡಿಶಾ ತ್ರಿವಳಿ ರೈಲು ದುರಂತ: ಯುದ್ಧಭೂಮಿಯಂತಾದ ಬಾಲಸೋರ್ ಜಿಲ್ಲಾಸ್ಪತ್ರೆ
ಅಲ್ಲದೆ, ಅಪಘಾತ ಸಂಭವಿಸಿದ ರೈಲುಗಳಲ್ಲಿ ಇದ್ದ ಮತ್ತೊಬ್ಬರು ಘಟನೆಯನ್ನು ವಿವರಿಸಿದ್ದಾರೆ. 'ಸ್ಥಳದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕೈ ಕಾಲುಗಳು ಚದುರಿಹೋಗಿದ್ದವು. ರೈಲು ಹಳಿತಪ್ಪಿದಾಗ ನಾನು ಮಲಗಿದ್ದೆ. ಸುಮಾರು 10-15 ಜನರು ನನ್ನ ಮೇಲೆ ಬಿದ್ದರು. ನಾನು ಬೋಗಿಯಿಂದ ಹೊರಬಂದಾಗ, ಸುತ್ತಲೂ ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನಾನು ನೋಡಿದೆ. ಇಲ್ಲಿ ಒಂದು ಕಾಲು, ಅಲ್ಲಿ ಒಂದು ಕೈ .ಯಾರದೋ ಒಬ್ಬರ ಮುಖವು ವಿರೂಪಗೊಂಡಿತ್ತು' ಎಂದು ದುರಂತದ ಭಯಾನಕೆಯನ್ನು ವಿವರಿಸಿದ್ದಾರೆ. ಇನ್ನು, ದುರಂತದಲ್ಲಿ ಮೃತದೇಹಗಳ ರಾಶಿಯ ನಡುವೆ ನಾಪತ್ತೆಯಾಗಿದ್ದ ಮಗನನ್ನು ಹುಡುಕುತ್ತಿರುವ ತಂದೆಯ ವಿಡಿಯೋ ಎಂಥವರ ಮನಸನ್ನೂ ಛಿದ್ರಗೊಳಿಸುವಂತಿದೆ.