ಇತ್ತೀಚಿನ ದಿನಗಳಲ್ಲಿ ಬಂಜೆತನ ಕೇವಲ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಲ್ಲೂ ಕಂಡು ಬರುತ್ತಿರುವ ಸಮಸ್ಯೆ. ಪುರುಷ ಬಂಜೆತನಕ್ಕೆ ಕಾರಣವೇನು, ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ಫೋರ್ಟಿಸ್ ಆಸ್ಪತ್ರೆ ಸ್ತ್ರೀ ರೋಗ ತಜ್ಞೆ ಡಾ.ಮನೀಶಾ ಸಿಂಗ್ ಮಾಹಿತಿ ನೀಡಿದ್ದಾರೆ.
ಮೊದಲೆಲ್ಲಾ ಮಕ್ಕಳಾಗಲಿಲ್ಲವೆಂದರೆ ಹೆಣ್ಣಿನಲ್ಲೇ ಯಾವುದೂ ಸಮಸ್ಯೆ ಇದೆ ಎಂದೇ ಭಾವಿಸಲಾಗುತ್ತಿತ್ತು. ಆದರೆ, ಬಂಜೆತನ ಕೇವಲ ಹೆಣ್ಣಿಗೆ ಮಾತ್ರವಲ್ಲಿ ಗಂಡಸರಲ್ಲೂ ಇರುತ್ತದೆ. ಮಗು ಜನನಕ್ಕೆ ಹೆಣ್ಣಿನ ಗುಣಮಟ್ಟದ ಮೊಟ್ಟೆ ಎಷ್ಟು ಮುಖ್ಯವೋ ಗಂಡಸರಲ್ಲಿ ಗುಣಮಟ್ಟದ ವೀರ್ಯ (ಸ್ಪರ್ಮ್) ಇರುವುದೂ ಅಷ್ಟೇ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಗುಣಮಟ್ಟದ ವೀರ್ಯದ ಪ್ರಮಾಣ ಅತ್ಯಂತ ಕಡಿಮೆಯಾಗುತ್ತಿದೆ. ಇದು ಪುರುಷ ಬಂಜೆತನಕ್ಕೂ ಕಾರಣವಾಗುತ್ತಿದೆ. ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥರಾಗಿರುವುದು, ತೀರಾ ಕಡಿಮೆ ಅವಧಿಯಲ್ಲಿ ಸ್ಖಲನವಾಗುವುದು, ವೃಷಣ ನಿಮಿರುವಿಕೆಯ ಸಮಸ್ಯೆ, ಶಿಶ್ನ ಶಸ್ತ್ರಚಿಕಿತ್ಸೆ ಈ ರೀತಿಯ ಲಕ್ಷಣಗಳು ಇದ್ದರೆ, ಇದು ಖಂಡಿತ ಪುರುಷರ ಬಂಜೆತನವೆಂದು ಪರಿಗಣಿಸಲಾಗುವುದು. ಇದಕ್ಕೆ ಮುಖ್ಯ ಕಾರಣ, ವೃಷಣಕ್ಕೆ ರಕ್ತ ಪೂರೈಸುವ ಅತಿ ಚಿಕ್ಕರಕ್ತನಾಳದಲ್ಲಿ ತೊಂದರೆಯಾಗುವುದರಿಂದಲೇ ಈ ರೀತಿಯ ಸಮಸ್ಯೆ ಕಾಡುವುದು.
ಮಕ್ಕಳಾಗದಿರಲು ದಂಪತಿಗಳಲ್ಲಿ ಪುರುಷರು ಎಷ್ಟು ಪ್ರಮಾಣದಲ್ಲಿ ಕಾರಣರು?
ಮಕ್ಕಳಾಗದಿರುವ ಪುರುಷರ (Men) ಪ್ರಮಾಣ ಶೇ.33ರಷ್ಟು ಇರುತ್ತದೆ. ಉಳಿದಂತೆ ಮಹಿಳಾ ಆರೋಗ್ಯದ (Womens health) ಮೇಲೆ ನಿಂತಿರಲಿದೆ. ಪುರುಷರ ಗುಣಮಟ್ಟದ ವೀರ್ಯವಷ್ಟೇ (Sperm) ಗರ್ಭ ಧರಿಸಲು ಬೇಕಿರುತ್ತದೆ. ಸ್ಖಲನದ ವೇಳೆ ಸಾಕಷ್ಟು ವೀರ್ಯ ಬಿಡುಗಡೆಯಾದರೂ ಅದು ಗುಣಮಟ್ಟವಿರದೇ ಇದ್ದರೆ ಮಹಿಳೆಯು ಗರ್ಭ ಧರಿಸಲು ಸಾಧ್ಯವಿಲ್ಲ. ಕೆಲವು ಪುರುಷರಲ್ಲಿ ಮೆಡಿಸನ್, ವಿಟಮಿನ್ ಮಾತ್ರಗಳ ಮೂಲಕ ಗುಣಮಟ್ಟದ ವೀರ್ಯವನ್ನು ಉತ್ಪತ್ತಿ ಮಾಡಿಸಿಕೊಳ್ಳಲು ಸಾಧ್ಯ. ಕೇವಲ ಒಂದು ಗುಣಮಟ್ಟದ ವೀರ್ಯ ಸ್ತ್ರೀ ದೇಹದಲ್ಲಿನ ಮೊಟ್ಟೆಯೊಂದಿಗೆ ಹೊಂದಾಣಿಕೆಯಾದರೆ ಮಕ್ಕಳಾಗುವ (Children) ಸಾಧ್ಯತೆ ಇರುತ್ತದೆ.
Fertility Food; ಗರ್ಭ ಧರಿಸಲು ಸಮಸ್ಯೆಯಿದ್ದರೆ ಅಂಡಾಣುವಿನ ಗುಣಮಟ್ಟ ಹೆಚ್ಚಿಸೋ ಈ ಆಹಾರ ಸೇವಿಸಿ
ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳೇನು?
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಗುಣಮಟ್ಟದ ವೀರ್ಯಾಣು ಕಡಿಮೆಯಾಗುತ್ತಿದೆ. ಇದಕ್ಕೆ ಈಗಿನ ಜೀವನ ಶೈಲಿಯೇ (Lifestyle) ಪ್ರಮುಖ ಕಾರಣ. ಹೆಚ್ಚು ಮಾದಕ ದ್ರವ್ಯ ಬಳಕೆ, ಧೂಮಪಾನ (Smoking), ಮದ್ಯಪಾನ ಸೇವನೆ, ಬೊಜ್ಜು, ಮಧುಮೇಹ ಈ ಆರೋಗ್ಯ ಸಮಸ್ಯೆಗಳು ಪ್ರಮುಖ ಕಾರಣ. ಇದಲ್ಲದೇ, ಇಂದಿನ ಯುವಕರಲ್ಲಿ ಹೆಚ್ಚು ಮೊಬೈಲ್ ಫೋನ್ ಬಳಕೆ, ಟೈಟ್ ಅಂಡರ್‌ವೇರ್ ಬಳಕೆ ಮಾಡುವುದು, ಶಿಶ್ನದಲ್ಲಿ ಉಷ್ಣಾಂಶ ಹೆಚ್ಚಾದರೆ, ಅತಿಯಾದ ಬಿಸಿ ನೀರಿನಲ್ಲಿ ಸ್ನಾನ, ಲ್ಯಾಪ್‌ಟಾಪ್ ತೊಡೆಯ ಮೇಲೆ ಇಟ್ಟುಕೊಂಡು ಹೆಚ್ಚು ಸಮಯ ಕೆಲಸ ಮಾಡಿದರೆ, ಹೆಚ್ಚು ಕಾಲ ಕುಳಿತಲ್ಲೇ ಕುಳಿತಿದ್ದರೂ ಸಹ ವೀರ್ಯಾಣುವಿನ ಗುಣಮಟ್ಟ ಕಡಿಮೆಯಾಗುವುದು, ಅಥವಾ ವೇಗವಾಗಿ ಸ್ಖಲನಕ್ಕೆ ಕಾರಣವಾಗಬಹುದು. ಮಕ್ಕಳಾಗಲು ಕೇವಲ ಒಂದು ವೀರ್ಯ ಸಾಕು. ಅದು ಗುಣಮಟ್ಟದ್ದಾಗಿರಬೇಕು.
ಸಮಸ್ಯೆಯ ನಿವಾರಣೆ ಹೇಗೆ?
ಮೊದಲಿಗೆ ತಮ್ಮ ಜೀವನ ಶೈಲಿಯನ್ನು ಸುಧಾರಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನ, ತಂಬಾಕಿನ ಅಭ್ಯಾಸವಿದ್ದರೆ ಕೂಡಲೇ ಅದನ್ನು ನಿಲ್ಲಿಸುವುದು ಉತ್ತಮ. ಕನಿಷ್ಠ ಮಕ್ಕಳು ಮಾಡಿಕೊಳ್ಳುವ ಪ್ಲಾನಿಂಗ್ ಇದ್ದವರು ಮೂರರಿಂದ ಆರು ತಿಂಗಳ ಅವಧಿಯವರೆಗಾದರೂ ಈ ಅಭ್ಯಾಸ ಬಿಡುವುದು ಒಳ್ಳೆಯದು. ಇನ್ನು ಹೆಚ್ಚಿನ ಬೊಜ್ಜು (Obesity) ಇದ್ದಲ್ಲಿ, ಅದನ್ನು ಕರಗಿಸಿಕೊಳ್ಳುವುದು, ಡಯಾಬಿಟಿಸ್, ಬಿಪಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಮಾಡಿಕೊಳ್ಳವಢಕು. ಸಂಗಾತಿಯೊಂದಿಗೆ (Partner) ನಿರ್ಭೀತಿಯಾಗಿ ಲೈಂಗಿಕ ಕ್ರಿಯೆಯಲ್ಲಿ ಆಗಾಗ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಭಯ ದೂರವಾಗಿ ದೇಹ (Body)ದಲ್ಲಿಯೂ ಬದಲಾವಣೆಯಾಗಲಿದೆ. ಆದಾರೂ ಸಹ ಮಕ್ಕಳಾಗುತ್ತಿಲ್ಲವೆಂದಾಗ ವೈದ್ಯರನ್ನು ಭೇಟಿ ಮಾಡಿ, ವಿಟಮಿನ್ ಡಿಫಿಷಿಯೆನ್ಸಿ ಮಾತ್ರೆ, ಹಾರ್ಮೋನ್ ಬದಲಾಣೆಯಲ್ಲಿನ ಮಾತ್ರ ಸೇರಿದಂತೆ ಇತರೆ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.
ವರ್ಷಗಟ್ಟಲೇ ಕುಟುಂಬ ನಿಯಂತ್ರಣ ಮಾತ್ರೆ ತಿಂದ್ರೆ ಬಂಜೆತನ ಉಂಟಾಗುತ್ತಾ?
ಚಿಕಿತ್ಸೆಗಳೇನು ? ಐವಿಎಫ್ ಒಂದೇ ದಾರಿಯೇ?
ಇತೀಚಿನ ದಿನಗಳಲ್ಲಿ ಸಾಕಷ್ಟು ಚಿಕಿತ್ಸೆಗಳು ಲಭ್ಯವಿದೆ. ಇದರಲ್ಲಿ ಪ್ರಮುಖವಾಗಿ ಐಯುಐ (ಇನ್‌ಟ್ರಾ ಯೂಟರೈನ್ ಇನ್ಸುಮೆನೆಷನ್) ಚಿಕಿತ್ಸೆ. ಇದರ ಮೂಲಕ ಆ ವ್ಯಕ್ತಿಯಲ್ಲಿರುವ ಗುಣಮಟ್ಟದ ಸ್ಪರ್ಮ್‌ನನ್ನು ಬೇರ್ಪಡಿಸಿ ಅದರನ್ನು ಮಹಿಳೆಯರ ಗರ್ಭಕೋಶಕ್ಕೆ ಇಂಜೆಕ್ಟ್ ಮಾಡಲಾಗುತ್ತದೆ. ಈ ಮೂಲಕ ವೇಗವಾಗಿ ಹೆಣ್ಣು ತಾಯಾಗಬಹುದು.
ಮತ್ತೊಂದು. ಇನ್‌ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಚಿಕಿತ್ಸೆ. ಇದು ಅತ್ಯಂತ ದುಬಾರಿ. ಎಲ್ಲರೂ ಇದರ ಮೊರೆ ಹೋಗುವುದಿಲ್ಲ. ಏಕೆಂದರೆ, ಇದರ ಅವಶ್ಯಕತೆ ಅತ್ಯಂತ ಕಡಿಮೆ ಜನರಿಗೆ ಬೀಳಲಿದೆ. ಐವಿಎಫ್ ಮೂಲಕ ಪ್ರಯೋಗಾಲದಲ್ಲಿ ಗುಣಮಟ್ಟದ ಸ್ಪರ್ಮ್ ಹಾಗೂ ಮಹಿಳೆಯರ ದೇಹದ ಮೊಟ್ಟೆಯನ್ನು ಫಲವತ್ತುಗೊಳಿಸಿ, ಅದನ್ನು ಗರ್ಭಾಶಯದಲ್ಲಿ ಅಳವಡಿಸಲಾಗುತ್ತದೆ. ಈ ಮೂಲಕವೂ ಮಕ್ಕಳನ್ನು ಪಡೆಯಬಹುದು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಎಲ್ಲರೂ ಈ ಚಿಕಿತ್ಸೆ ಪಡೆಯುವ ಅವಶ್ಯಕತೆಯೂ ಇಲ್ಲ. ಕೆಲವು ಸಮಸ್ಯೆಗಳನ್ನು ಮಾತ್ರೆಗಳ ಮೂಲಕವೇ ಬಗೆಹರಿಸಬಹುದು. ಆದರೆ, ಯಾವುದೇ ಚಿಕಿತ್ಸೆ ಅಥವಾ ಮಾತ್ರೆಗಳಾದರೂ ಸರಿ, ನೀವು ಆರೋಗ್ಯಕರ ಜೀವನ ಶೈಲಿಯನ್ನು ಕನಿಷ್ಠ ಆ ಅವಧಿಯಲ್ಲಾದರೂ ಹೊಂದಿರಬೇಕು. ಇಲ್ಲವಾದರೆ ಈ ಚಿಕಿತ್ಸೆಗಳೂ ಕೈ ಕೊಡಬಹುದು.
ಮಾನಸಿಕ ಒತ್ತಡಕ್ಕೆ ಒಳಗಾಗದಿರಿ: ಕೆಲವರು, ತಮ್ಮ ನಿಮಿರುವಿಕೆಯ ಬಗ್ಗೆ ಸಾಕಷ್ಟು ಅಪನಂಬಿಕೆ ಹೊಂದಿರುತ್ತಾರೆ. ಇದು ಮಾನಸಿಕ ರೋಗಕ್ಕೂ ಕಾರಣವಾಗಬಹುದು. ಒಮ್ಮೆ ಈ ಬಗ್ಗೆ ಅನುಮಾನ ಅಥವಾ ಅಪನಂಬಿಕೆ ಮೂಡುತ್ತದೆಯೋ ಅದರಿಂದ ನಿಮ್ಮಲ್ಲಿ ಒತ್ತಡ ಉಂಟಾಗಿ ನಿಮಿರುವಿಕೆ ಸಮಸ್ಯೆ ಏಳಬಹುದು. ನಿಮ್ಮಲ್ಲಿ ನಿಮಿರುವಿಕೆ ಸಮಸ್ಯೆ, ಶಿಷ್ಣದಲ್ಲಿ ತೊಂದರೆ, ನೋವು, ಸ್ಪರ್ಮ್ ಬಿಡುಗಡೆ ಕಡಿಮೆ ಎಂದೆನಿಸಿದರೆ, ಲೈಂಗಿಕ ಕ್ರಿಯೆ ವೇಳೆ ಅತಿವೇಗವಾಗಿ ಸ್ಖಲನವಾಗಿತ್ತಿದೆ ಎಂದೆನಿಸದರೆ ಇದರಿಂದ ಮಾನಸಿಕವಾಗಿ ಕುಗ್ಗಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರಲಿದೆ. ಇಂತಹ ಸಮಸ್ಯೆ ಇದ್ದಾಗ ತಮ್ಮ ಪತ್ನಿಯೊಂದಿಗೆ ಚರ್ಚಿಸಿ, ವೈದ್ಯರನ್ನು ಒಮ್ಮೆ ಭೇಟಿ ಮಾಡುವುದು ಉತ್ತಮ. ಇದರಿಂದ ದಾಂಪತ್ಯದಲ್ಲಿ ವಿರಸ ಉಂಟಾಗುವುದಿಲ್ಲ.