ಮದುವೆಯೆಂದ್ಮೇಲೆ ಒಂದಿಷ್ಟು ಸಂತೋಷ, ಮೋಜು, ಮಸ್ತಿ ಇರಲೇಬೇಕು. ವರನನ್ನು ಮದುವೆ ಡ್ರೆಸ್ ನಲ್ಲಿ ನೋಡಲು ವಧು ಯಾವಾಗ್ಲೂ ಉತ್ಸುಕಳಾಗಿರ್ತಾಳೆ. ಈಕೆ ಕೂಡ ಆತನನ್ನು ನೋಡುವ ತವಕದಲ್ಲಿ ಬಾಲ್ಕನಿಗೆ ಓಡಿ ಬಂದಿದ್ದಾಳೆ. ಅಲ್ಲಿ ಆಕೆ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.
ಈಗಿನ ದಿನಗಳಲ್ಲಿ ಮದುವೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಸಿನಿಮಾಗಳಲ್ಲಿ ನಡೆಯುವ ಮದುವೆಗಳಿಗಿಂತ, ಬಾಲಿವುಡ್ ಸ್ಟಾರ್ಸ್ ಅಥವಾ ಸೆಲೆಬ್ರಿಟಿಗಳ ಮದುವೆಗಿಂತ ಭರ್ಜರಿಯಾಗಿ ಜನಸಾಮಾನ್ಯರು ಮದುವೆ ಮಾಡಿಕೊಳ್ತಿದ್ದಾರೆ. ಆಡಂಬರದ ಮದುವೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ.ಹಿಂದೆ ಮದುವೆ (Marriage) ಯೆಂದ್ರೆ ಪದ್ಧತಿಯಂತೆ ನಡೆಯಬೇಕಿತ್ತು. ವಧು (Bride) – ವರರ ಭೇಟಿ ಮಂಟಪದಲ್ಲಿ ಆಗ್ತಿದ್ದ ಕಾಲವಿತ್ತು. ಆದ್ರೆ ಈಗ ಅದೆಲ್ಲ ಅಸಾಧ್ಯದ ಮಾತು. ಮದುವೆ ವೇಳೆ ವರ ಹಾಗೂ ವಧು ಇಬ್ಬರಿಗೂ ಸಂಪೂರ್ಣ ಸ್ವಾತಂತ್ರ್ಯ (freedom) ವಿದೆ. ಕೆಲ ಮದುವೆಯಲ್ಲಿ ವರನ ಬದಲು ವಧು, ಕುದುರೆ ಏರಿ ಮೆರವಣಿಗೆಯಲ್ಲಿ ಬಂದಿದ್ದಿದೆ. ಮದುವೆ ಅಂದ್ಮೇಲೆ ಅಲ್ಲಿ ವಾದ್ಯ, ಡಾನ್ಸ್ ಇರ್ಲೇಬೇಕು. ಸುಂದರವಾಗಿ ಸಿಂಗಾರಗೊಳ್ಳುವ ವಧು- ವರರು, ಆ ಕ್ಷಣವನ್ನು ಅವಿಸ್ಮರಣೀಯವಾಗಿಸಲು ಪ್ರಯತ್ನಿಸ್ತಾರೆ. ಒಂದಿಷ್ಟು ವಿಡಿಯೋ, ಫೋಟೋಗಳನ್ನು ಹಂಚಿಕೊಳ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವಧುವಿನ ವಿಡಿಯೋ ಒಂದು ವೈರಲ್ ಆಗಿದೆ.
ಉತ್ತರ ಭಾರತದ ಕಡೆ ಮದುವೆಯನ್ನು ಮತ್ತಷ್ಟು ವಿಜ್ರಂಭಣೆಯಿಂದ ಮಾಡಲಾಗುತ್ತದೆ. ವರ, ಕುದುರೆ ಏರಿ ಬಂದ್ರೆ ಆತನ ಮುಂದೆ ದೊಡ್ಡ ಮೆರವಣಿಗೆ ಹೊರಟಿರುತ್ತದೆ. ವಾದ್ಯಗಳ ಜೊತೆ ಮೆರವಣಿಗೆಯಲ್ಲಿ ಬರುವ ಜನರು ಡಾನ್ಸ್ ಮಾಡ್ತಾ, ಸಂತೋಷದಿಂದ ವಧುವಿನ ಬಳಿ ಬರ್ತಾರೆ. ಈ ವಿಡಿಯೋದಲ್ಲೂ ವರ ಮೆರವಣಿಗೆಯಲ್ಲಿ ಬರ್ತಿದ್ದಾನೆ. ಆ ಜನದಟ್ಟಣೆ ಮಧ್ಯೆ ವಧು, ವರನನ್ನು ಹುಡುಕ್ತಿದ್ದಾಳೆ.
ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಏನಿದೆ? : Bridal Lehenga Designn ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ವೀಡಿಯೊದಲ್ಲಿ, ಸುಂದರವಾದ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ತನ್ನ ವರನಿಗಾಗಿ ಕುತೂಹಲದಿಂದ ಕಾಯುತ್ತಿರುವುದನ್ನು ಕಾಣಬಹುದು. ಸುಂದರವಾಗಿ ಶೃಂಗಾರಗೊಂಡ ವಧು, ತನ್ನ ವರ ಎಲ್ಲಿ ಅಂತಾ ಹುಡುಕ್ತಾ ಬರ್ತಿದ್ದಾಳೆ. ಬಾಲ್ಕನಿಯಿಂದ ಕೆಳಗೆ ನೋಡ್ತಾಳೆ. ಎಲ್ಲೆಡೆ ಲೈಟಿಂಗ್ಸ್ ಹಾಕಲಾಗಿದೆ. ಜನರ ದೊಡ್ಡ ದಂಡೇ ಕೆಳಗಿದೆ. ವಾದ್ಯಗಳ ಸದ್ದು ಜೋರಾಗಿ ಕೇಳ್ತಿದೆ.
ಈ ಗಲಾಟೆ ಮಧ್ಯೆಯೂ ಆಕೆ ಚೀನು ಅಂತಾ ಕೂಗ್ತಾಳೆ. ಆಕೆ ಹಿಂದೆ ಬರುವ ಇಬ್ಬರು ಪುರುಷರಿಗೆ ಚೀನು ಅಂತಾ ಕರೆಯುವಂತೆ ಹೇಳ್ತಾಳೆ. ಅವರು ಕೂಡ ಚೀನು ಅಂತಾ ಕೂಗಿ ಕರೆಯುತ್ತಾರೆ. ಆ ವಾದ್ಯದ ಶಬ್ಧದ ಮಧ್ಯೆಯೇ ವರನಿಗೆ, ವಧು ಕೂಗು ಕೇಳುತ್ತದೆ. ಆತ ತಲೆಯೆತ್ತಿ ನೋಡ್ತಾನೆ. ಆತ ಪ್ರತಿಕ್ರಿಯೆ ನೀಡ್ತಾನೆ. ಆಕೆ ಜೊತೆಯಲ್ಲಿರುವವರು ನಿನ್ನ ವರ ನೋಡು ಅಂತಾ ಹೇಳ್ತಾರೆ. ಇದ್ರಿಂದ ಖುಷಿಯಾಗುವ ವಧುವಿನ ಸಂತೋಷವನ್ನು ಆಕೆ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದು. ಸಂತೋಷದಲ್ಲಿ ವಧು, ವರನಿಗೆ ಫ್ಲೈಯಿಂಗ್ ಕಿಸ್‌ಗಳನ್ನು ಕಳುಹಿಸುತ್ತಾಳೆ. ಆಕೆ ಆತನತ್ತ ಕೈ ಬೀಸ್ತಾಳೆ. ಬಾಲ್ಕನಿಯಲ್ಲಿ ನಿಂತು ಡಾನ್ಸ್ ಮಾಡಲು ಶುರು ಮಾಡ್ತಾಳೆ. ನನ್ನ ವರ, ನನ್ನ ವರ ಅಂತಾ ಕೂಗ್ತಾಳೆ.
'ದುಲ್ಹಾ ಕಹಾ ಹೈ ಮೇರಾ (ನನ್ನ ವರ ಎಲ್ಲಿದ್ದಾರೆ)' ಎಂಬ ಶೀರ್ಷಿಕೆ ಹಾಕಲಾಗಿದೆ. ವಿಡಿಯೋ ಮಧ್ಯೆ ದುಲ್ಹಾ ಕಹಾ ಹೇ ಮೇರಾ ಅಂತಾ ಬರೆದು ಚೀನು ( ದುಲ್ಹಾ) ಅಂತಾ ಟೈಪ್ ಮಾಡಿ ಈ ವಿಡಿಯೋವನ್ನು ಬ್ರೈಡಲ್ ಲೆಹೆಂಗಾ ವಿನ್ಯಾಸದ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವರ ಎಲ್ಲಿ ಅಂತ ಹುಡುಕ್ತಾ ಬಂದ ವಧುವಿನ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಅನೇಕ ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಇದಕ್ಕೆ ಮಿಶ್ರಪ್ರತಿಕ್ರಿಯೆ ಬಂದಿದೆ. ಕೆಲವರು ವಧುವಿನ ಉತ್ಸಾಹ ನೋಡಿ ಖುಷಿಗೊಂಡಿದ್ದಾರೆ. ಒಬ್ಬ ಬಳಕೆದಾರ ಇದೆಲ್ಲ ಶೋ ಆಫ್ ಎಂದು ಕಮೆಂಟ್ ಮಾಡಿದ್ದಾನೆ.