ಪ್ರೀತಿಯಲ್ಲಿ ಸ್ವಾರ್ಥವಿರಬೇಕು. ಆದ್ರೆ ಅತಿಯಾದ ಸ್ವಾರ್ಥ ಅನುಮಾನಕ್ಕೆ ದಾರಿಮಾಡಿಕೊಡುತ್ತದೆ. ಪ್ರೀತಿಸಿದ ವ್ಯಕ್ತಿ ಸದಾ ನನ್ನ ಜೊತೆಯಿರಬೇಕೆಂದು ಬಯಸುವ ಹುಡುಗಿಯರು, ಹುಡುಗನ ಬಾಯಿಂದ ಅಪ್ಪಿತಪ್ಪಿ ಬೇರೆ ಹುಡುಗಿ ಹೆಸರು ಬಂದ್ರೂ ಕೋಪ ಮಾಡಿಕೊಳ್ತಾರೆ. ಅಂಥವರಲ್ಲಿ ನಮ್ಮವಳೂ ಸೇರಿದ್ದಾಳೆ ಅನ್ನೋರು ನೀವಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ.
ನಾವು ಯಾರನ್ನಾದರೂ ವಿಪರೀತವಾಗಿ ಇಷ್ಟಪಡುತ್ತೇವೆ ಎಂದಾಗ ಅವರು ನಮ್ಮಿಂದ ದೂರ ಹೋದ್ರೆ ಅಥವಾ ನಮ್ಮನ್ನು ಕಡೆಗಣಿಸಿದ್ರೆ ಮನಸ್ಸಿಗೆ ಬಹಳ ನೋವಾಗುತ್ತೆ. ಆ ತಿರಸ್ಕಾರದ ಭಾವನೆ ನಮ್ಮ ಕೋಪಕ್ಕೆ ಕಾರಣವಾಗುತ್ತೆ. ಹಾಗೆಯೇ ಹೆಣ್ಣು ಮಕ್ಕಳು ಕೂಡ ತಮ್ಮ ಬಾಯ್ ಫ್ರೆಂಡ್ ವಿಷಯದಲ್ಲಿ ಇನ್ಸೆಕ್ಯೂರ್ ಇರ್ತಾರೆ. ಗಂಡು ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೂ ಹೆಣ್ಣು ಮಕ್ಕಳು ತಮ್ಮ ಬಾಯ್ ಫ್ರೆಂಡ್ ಬೇರೆ ಹೆಣ್ಣಿನ ಜೊತೆ ಮಾತನಾಡಿದರೆ, ಅವಳನ್ನು ಹೊಗಳಿದರೆ ಜಲಸ್ ಫಿಲ್ ಆಗೋದು ಸಾಮಾನ್ಯ.
ಒಂದು ಹೆಣ್ಣು ಪ್ರೀತಿ (Love) ಯಲ್ಲಿದ್ದಾಗ ಅಥವಾ ಯಾರನ್ನಾದರೂ ಪಡೆದುಕೊಳ್ಳಬೇಕೆಂದು ಬಯಸಿದಾಗ ಅದನ್ನು ಕಾರ್ಯಗತಗೊಳಿಸಲು ಅವಳು ಎಷ್ಟು ಬೇಕಾದರೂ ಕಷ್ಟಪಡುತ್ತಾಳೆ. ಗಂಡನಾಗಲೀ ಅಥವಾ ಗೆಳೆಯನೇ ಆಗಲಿ, ಯಾರನ್ನೂ ಅವಳು ಇನ್ನೊಬ್ಬ ಸ್ತ್ರೀಯೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಪ್ರೀತಿ ಅವಳಿಗೆ ಒಂದು ಗೀಳಾಗಿಬಿಡುತ್ತದೆ. ಆ ಕಾರಣದಿಂದಲೇ ಅವಳು ತನ್ನ ಪ್ರೇಮಿಯನ್ನು ಕೂಡ ನಂಬುವುದಿಲ್ಲ. ತನ್ನ ಗೆಳೆಯ ಯಾವಾಗಲೂ ತನ್ನ ಜೊತೆಯೇ ಮಾತನಾಡುತ್ತಿರಬೇಕು, ತನ್ನ ಬಗ್ಗೆಯೇ ಕಾಳಜಿವಹಿಸಬೇಕು ಎನ್ನುವ ಭಾವನೆ ಅವಳಿಗಿರುತ್ತದೆ. ಸಾಮಾನ್ಯವಾಗಿ ಸ್ವಾಭಿಮಾನ ಅಥವಾ ಆತ್ಮವಿಶ್ವಾಸ (Confidence) ಕಡಿಮೆ ಇರುವ ಹೆಣ್ಣುಮಕ್ಕಳು ಈ ರೀತಿ ವರ್ತಿಸುತ್ತಾರೆ. ಅಂತವರು ಎಲ್ಲಿ ನಮ್ಮ ಪ್ರೀತಿ ಮುರಿದುಹೋಗುತ್ತದೆಯೋ ಎಂಬ ಚಿಂತೆಯಲ್ಲೇ ಇರುತ್ತಾರೆ. ನಿಮ್ಮ ಗರ್ಲ್ ಫ್ರೆಂಡ್ (Girlfriend) ಕೂಡ ಇಂತಹ ಸ್ವಭಾವ ಹೊಂದಿದ್ದರೆ ಕೆಲವು ಸುಲಭ ಟಿಪ್ಸ್ ಗಳ ಮೂಲಕ ಅವರನ್ನು ಸಮಾಧಾನಪಡಿಸಬಹುದು. ಅಂತಹ ಕೆಲವು ಸಲಹೆಗಳು ಇಲ್ಲಿವೆ.
undefined
ತಮ್ಮ ಪತ್ನಿಯರ ಮೇಲೆ ಈ ಗಂಡಸ್ರಿಗೆ ಏನೆಲ್ಲಾ ದೂರುಗಳಿವೆ ತಿಳಿದಿದ್ಯಾ?
‘ನೀನು ತಪ್ಪಾಗಿ ತಿಳಿದುಕೊಂಡಿದ್ದೀಯಾ’ ಎನ್ನುವ ಮಾತನ್ನು ಹೇಳಲೇಬೇಡಿ: ನೀವು ಇನ್ನೊಬ್ಬ ಹೆಣ್ಣಿನ ಜೊತೆ ಮಾತನಾಡುವುದು ಅಥವಾ ಹೊಗಳುವುದರಿಂದ ನಿಮ್ಮ ಗರ್ಲ್ ಪ್ರೆಂಡ್ ಸಿಟ್ಟಾಗಿದ್ದರೆ ಅವಳ ಕೋಪ ಇಳಿದ ಮೇಲೆ ಪರಿಸ್ಥಿತಿಯ ಬಗ್ಗೆ ನಿಧಾನವಾಗಿ ವಿವರಿಸಿ. ಅದರ ಬದಲು ನೀನು ನಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೀಯಾ ಎನ್ನುವ ಮಾತನ್ನು ಹೇಳಲೇಬೇಡಿ. ಇಂತಹ ಮಾತು ನಿಮ್ಮನ್ನು ಮತ್ತಷ್ಟು ಸಮಸ್ಯೆಗೆ ನೂಕಬಹುದು.
ಗೆಳತಿಯ ಚಿಂತೆಗಳನ್ನು ಕಡೆಗಣಿಸಬೇಡಿ: ನೀವು ಇನ್ನೊಬ್ಬ ಹೆಣ್ಣಿನ ಜೊತೆ ಮಾತನಾಡಿದಾಗ ನಿಮ್ಮ ಗರ್ಲ್ ಪ್ರೆಂಡ್ ಸಿಟ್ಟಾದರೆ ಅದನ್ನು ನೆಗ್ಲೆಕ್ಟ್ ಮಾಡಬೇಡಿ. ನಿಮಗೆ ಅದು ಸಣ್ಣ ವಿಷಯವಾದರೂ ನಿಮ್ಮ ಗರ್ಲ್ ಫ್ರೆಂಡ್ ಅದನ್ನು ಗಂಭೀರವಾಗಿ ಪರಿಗಣಿಸಿರಬಹುದು. ಅವಳು ಸಿಟ್ಟು ಮಾಡಿದಾಗ ನೀವು ನಕ್ಕರೆ ಅದು ಆಕೆ ಭಾವನೆಗೆ ಧಕ್ಕೆಯುಂಟು ಮಾಡಬಹುದು.
ಅಪ್ಪನಾದೋನು ಮದ್ವೆಯಾಗೋ ಮಗಂಗೆ ಇವೆಲ್ಲ ಹೇಳಿರಲೇಬೇಕು!
ಗರ್ಲ್ ಫ್ರೆಂಡ್ ಜೊತೆ ಹೆಚ್ಚಿನ ಸಮಯ ಕಳೆಯಿರಿ: ನಿಮ್ಮ ಗರ್ಲ್ ಫ್ರೆಂಡ್ ನೀವು ಬೇರೆ ಸ್ತ್ರೀಯರ ಜೊತೆ ಸಲುಗೆಯಿಂದ ಇರುವುದನ್ನು ಸಹಿಸುವುದಿಲ್ಲ ಎಂದಾದರೆ ನೀವು ನಿಮ್ಮ ಗರ್ಲ್ ಫ್ರೆಂಡ್ ಗೆ ಹೆಚ್ಚಿನ ಸಮಯ ಮೀಸಲಿಡಿ. ನಿಮ್ಮ ಗೆಳೆಯರ ಎದುರು ಅವಳ ಬಗ್ಗೆ ಹೊಗಳಿ ಮಾತಾಡಿ. ಹೀಗೆ ಮಾಡಿದಾಗ ಅವಳಿಗೆ ನಿಮ್ಮ ಮೇಲೆ ವಿಶ್ವಾಸ ಮೂಡುತ್ತೆ.
ಗೆಳೆಯ ಗೆಳತಿಯರನ್ನು ಭೇಟಿ ಮಾಡಿಸಿ: ಸಾಮಾನ್ಯವಾಗಿ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಮೂಡುವ ಭಾವನೆ ಬೇರೆ. ಭೇಟಿಯಾಗದ ವ್ಯಕ್ತಿ ಬಗ್ಗೆ ಇರುವ ಭಾವನೆಯೇ ಬೇರೆ. ನೀವು ಯಾವುದೇ ವ್ಯಕ್ತಿಯನ್ನು ನಿಮ್ಮ ಗೆಳತಿಗೆ ಪರಿಚಯ ಮಾಡಿಸದೆ ಅವರ ಬಗ್ಗೆ ಹೊಗಳುತ್ತಿದ್ದರೆ ಆಕೆಗೆ ಅನುಮಾನ ಮೂಡಬಹುದು. ನಿಮ್ಮ ಗರ್ಲ್ ಫ್ರೆಂಡ್ ನ ಜಲಸ್ ಮತ್ತು ಅನುಮಾನವನ್ನು ಹೋಗಲಾಡಿಸಲು ನಿಮ್ಮ ಎಲ್ಲ ಫ್ರೆಂಡ್ಸ್ ಅನ್ನು ನಿಮ್ಮ ಗರ್ಲ್ ಫ್ರೆಂಡ್ ಗೆ ಭೇಟಿ ಮಾಡಿಸಿ ಮಾತನಾಡಿಸಿ.
ಗರ್ಲ್ ಫ್ರೆಂಡ್ ಎದುರು ನಿಮ್ಮ ಫೋನ್ ತೆರೆದಿಡಿ: ನಿಮ್ಮ ಗರ್ಲ್ ಫ್ರೆಂಡ್ ಗೆ ನಿಮ್ಮ ಮೇಲೆ ಅನುಮಾನವಿದ್ದಾಗ ನಿಮ್ಮ ಹಾವಭಾವ, ಮಾತು, ಮೊಬೈಲ್, ಬ್ಯಾಗ್ ಎಲ್ಲವನ್ನೂ ಅವರು ಚೆಕ್ಕ ಮಾಡ್ತಾರೆ. ಅಂತಹ ಸಂದರ್ಭಗಳಿಗೆ ಎಡೆಮಾಡಿಕೊಡಬೇಡಿ. ಜೀವದ ಗೆಳತಿಯ ಜೊತೆ ಯಾವುದೇ ಮುಚ್ಚುಮರೆ ಮಾಡಬೇಡಿ.