ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!

Published : Apr 05, 2023, 10:09 AM IST
ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!

ಸಾರಾಂಶ

ಪ್ರೀತಿಸಿದವರು ಜೊತೆಗಿದ್ದಾಗ ಮನಸ್ಸು ತುಂಬಾ ಖುಷಿಯಾಗಿರುತ್ತದೆ. ಅದೇ ಪ್ರೀತಿಸಿದವರು ದೂರವಾದಾಗ ಮನಸ್ಸು ಭೋರೆಂದು ಅಳುತ್ತದೆ. ಹಾಗೆಯೇ ಇಲ್ಲೊಬ್ಬ ಪ್ರೇಮಿ, ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರುವಂತೆ ಬರೋಬ್ಬರಿ ಚಳಿ, ಗಾಳಿಯನ್ನು ಲೆಕ್ಕಿಸದೆ ಮಂಡಿಯೂರಿ ಬೇಡಿಕೊಂಡಿದ್ದಾನೆ. ಅದೂ ಒಂದೆರಡು ಗಂಟೆಯಲ್ಲ, ಬರೋಬ್ಬರಿ 21 ಗಂಟೆ.

ಲವ್‌ ಅನ್ನೋ ಫೀಲಿಂಗ್ ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಅದೇ ಬ್ರೇಕಪ್‌ ಮಾಡಿಕೊಳ್ಳುವುದು ತುಂಬಾ ಕಷ್ಟದ ವಿಷಯ. ಸಣ್ಣಪುಟ್ಟ ವಿಚಾರ ಅಥವಾ ದೊಡ್ಡ ವಿಚಾರಕ್ಕೆ ಜಗಳವಾಡಿ ಬ್ರೇಕಪ್ ಮಾಡಿಕೊಂಡರೂ ಆ ನೋವು ಮಾತ್ರ ಮನಸ್ಸಿನಲ್ಲಿ ಹಾಗೆಯೇ ಇರುತ್ತದೆ. ಬಿಟ್ಟು ಹೋದ ಪ್ರೇಮಿಯನ್ನು ಮರಳಿ ಪಡೆಯಲು ಹುಡುಗ-ಹುಡುಗಿಯರು ನಾನಾ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಎಲ್ಲಾ ರೀತಿಯಲ್ಲೂ ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಬ್ಬ ಪ್ರೇಮಿ ಬಿಟ್ಟುಹೋದ ಗರ್ಲ್ ಫ್ರೆಂಡ್ ಮರಳಿ ಬರಲು ಚಳಿ, ಗಾಳಿಯಲ್ಲೂ ಆಕೆಗಾಗಿ ಕಾದಿದ್ದಾನೆ. ಅದೂ ಒಂದೆರಡು ಗಂಟೆಯಲ್ಲ. ಬರೋಬ್ಬರಿ 21 ಗಂಟೆಗಳ ಕಾಲ ಮಂಡಿಯೂರಿ ಬೇಡಿಕೊಂಡಿದ್ದಾನೆ. ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದಲ್ಲಿ ನಡೆದ ಈ ಘಟನೆ ನಡೆದಿದೆ.

ಶೀತ ವಾತಾವರಣದಲ್ಲಿ ಹೂಗುಚ್ಛ ಹಿಡಿದು ಮಂಡಿಯೂರಿ ಕುಳಿತ ಪ್ರೇಮಿ
ಮಾರ್ಚ್ 28 ರಂದು ಮಧ್ಯಾಹ್ನ 1 ಗಂಟೆಯಿಂದ ಮರುದಿನ ಬೆಳಿಗ್ಗೆ 10 ಗಂಟೆಯ ವರೆಗೆ ಚೀನಾದ ನೈಋತ್ಯ ಸಿಚುವಾನ್ ಪ್ರಾಂತ್ಯದ ದಾಝೌನಲ್ಲಿ ಮಹಿಳೆಯ ಕಚೇರಿ ಕಟ್ಟಡದ ಪ್ರವೇಶ ದ್ವಾರದ ಹೊರಗೆ ವ್ಯಕ್ತಿ ಗುಲಾಬಿ ಹೂಗಳ ಗುಚ್ಛ ಹಿಡಿದು ಮಂಡಿಯೂರಿ (Man on knees) ಕುಳಿತಿದ್ದಾನೆ. ಶೀತ ವಾತಾವರಣದಿಂದ ಹವಾಮಾನ (Weather) ಹದಗೆಟ್ಟಿದ್ದರೂ ವ್ಯಕ್ತಿ ಕುಳಿತಲ್ಲಿದ್ದ ಕದಲಲ್ಲಿಲ್ಲ. ಸುತ್ತಲೂ ನೆರೆದ ಜನರು ಪ್ರಯತ್ನವನ್ನು ಕೈ ಬಿಡುವಂತೆ ವ್ಯಕ್ತಿಯನ್ನು ಒತ್ತಾಯಿಸಿದ್ದಾರೆ. ಆದರೂ ವ್ಯಕ್ತಿ ತನ್ನ ಮಾಜಿ ಪ್ರೇಯಸಿಗಾಗಿ (Ex-girlfriend) ಕಾಯುತ್ತಲೇ ಕುಳಿತಿದ್ದಾನೆ. 

ಮಡದಿಯಿಂದ ವಂಚಿತನಾದ ವ್ಯಕ್ತಿಗೆ ಸಿಕ್ತು ಭರಪೂರ ಪ್ರೀತಿ, ಈಗ ಲೈಫ್ ಸೂಪರ್!

ಕೆಲವು ದಿನಗಳ ಹಿಂದೆ ತನ್ನ ಮಾಜಿ ಗೆಳತಿ ತನ್ನನ್ನು ಬಿಟ್ಟು ಹೋಗಿದ್ದಾಳೆ. ಹೀಗಾಗಿ ಈ ರೀತಿ ಆಕೆಯ ಬಳಿ ಕ್ಷಮೆ ಕೋರುತ್ತಿರುವುದಾಗಿ ಹೇಳಿದ್ದಾನೆ. ಪೊಲೀಸ್ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ವ್ಯಕ್ತಿ ತನ್ನ ಪ್ರಯತ್ನವನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ ಆತ ಅವರ ಸಲಹೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ. ಇಂತಹ ಪ್ರೀತಿಯ ವರ್ತನೆಯನ್ನು ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು (Social media) ಅವನಿಂದ ದೂರವಿರಿ ಎಂದು ಮಾಜಿ ಗೆಳತಿಗೆ ಸಲಹೆ ನೀಡಿದ್ದಾರೆ.

ವಿಲ್ ಯು ಮ್ಯಾರಿ ಮಿ? ಭಾರತ ನೆದರ್ಲೆಂಡ್ ಪಂದ್ಯದ ನಡುವೆ ಗೆಳತಿಗೆ ಪ್ರೇಮ ನಿವೇದನೆ!

ಆಕಾಶದಲ್ಲಿ ಹಾರಾಡುತ್ತಲೇ ಗರ್ಲ್‌ಫ್ರೆಂಡ್‌ಗೆ ಪ್ರಪೋಸ್‌
ಅಮೆರಿಕ ಮೂಲದ ಯುನೈಟೆಡ್ ಏರ್‌ಲೈನ್ಸ್ (United Airlines) ನಿರ್ವಹಿಸುವ ವಿಮಾನದಲ್ಲೇ ಬ್ರಿಯಾನ್ (Brian) ತನ್ನ ಗೆಳತಿ ಸ್ಟೆಫನಿಗೆ ನನ್ನನ್ನು ಪ್ರೀತಿಸುತ್ತೀಯಾ. ಮತ್ತು ಆಕೆ ಯೆಸ್‌ ಎಂದಿದ್ದು, ಈ ಮೂಲಕ ಗೆಳೆಯನ ಪ್ರಪೋಸ್‌ ಅನ್ನು ಒಪ್ಪಿಕೊಂಡಿದ್ದಾಳೆ. ಈ ಬಗ್ಗೆ ಫೇಸ್‌ಬುಕ್‌ ಪೇಜ್‌ನಲ್ಲಿ (Facebook Page) ಏರ್‌ಲೈನ್ಸ್‌ ಬರೆದುಕೊಂಡಿದ್ದು, ಫೋಟೋಗಳನ್ನೂ ಪೋಸ್ಟ್‌ ಮಾಡಿದ್ದಾರೆ. ಅಲ್ಲದೆ, ‘’ದಯವಿಟ್ಟು ಈ ವಿಮಾನದೊಳಗಿನ ಪ್ರೇಮಕಥೆಯತ್ತ ನಿಮ್ಮ ಗಮನವನ್ನು ನಿರ್ದೇಶಿಸಿ: ಅಲ್ಟಿಮೇಟ್‌ ಸರ್‌ಪ್ರೈಸ್‌ ಮಾಡಲು ಬ್ರಿಯಾನ್‌ ಪ್ರಪೋಸ್‌ ಮಾಡಿದಾಗ  ನಾವು ಹೌದು ಎಂದು ಹೇಳಿದೆವು. ಮತ್ತು ಸ್ಟೆಫನಿ (Stephany) ಕೂಡ ಹೌದು ಎಂದು ಹೇಳಿದರು! ನಂತರ ಅವರು ತಮ್ಮ ಸಂತೋಷದಿಂದ ಎಂದೆಂದಿಗೂ ಹೊರಟರು.. ಮತ್ತು ಅವರ ಸಂಪರ್ಕ ವಿಮಾನದ ಕಡೆಗೆ ಹೋದರು” ಎಂದು ಏರ್‌ಲೈನ್ಸ್‌ ಉತ್ತಮ ಕ್ಯಾಪ್ಷನ್‌ ಅನ್ನೂ ಬರೆದುಕೊಂಡಿದೆ.

ಪೋಸ್ಟ್ ಅನ್ನು 5,400 ಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ ಮತ್ತು 300 ಕ್ಕೂ ಅಧಿಕ ನೆಟ್ಟಿಗರು ಕಮೆಂಟ್‌ಗಳನ್ನು ಬರೆದಿದ್ದಾರೆ. ಜನರು ಸ್ವೀಟ್‌ ಪ್ರಪೋಸ್‌ ಕಲ್ಪನೆಗೆ ಖುಷಿ ಪಟ್ಟಿದ್ದು ಮತ್ತು ಬ್ರಿಯಾನ್‌ಗೆ ಸಹಾಯ ಮಾಡಿದ್ದಕ್ಕಾಗಿ ಕ್ಯಾಬಿನ್ ಸಿಬ್ಬಂದಿಗೆ ಸಹ ಧನ್ಯವಾದ ಹೇಳಿದ್ದಾರೆ. ಅಲ್ಲದೆ, ಯುನೈಟೆಡ್‌ ಏರ್‌ಲೈನ್ಸ್‌ಗೆ ಸ್ವತ: ಬ್ರಿಯಾನ್‌ ಅನ್ನು ತನ್ನ ಬಾಯ್‌ಫ್ರೆಂಡ್‌ ಆಗಿ ಒಪ್ಪಿಕೊಂಡ ಸ್ಟೆಫನಿ ಸಹ ಕಮೆಂಟ್‌ ಮಾಡಿದ್ದು, ಧನ್ಯವಾದ ಹೇಳಿದ್ದಾಳೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Bigg Boss 12: ರಕ್ಷಿತಾ ಶೆಟ್ಟಿ ಬಗ್ಗೆ ಮಾತನಾಡುತ್ತಲೇ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಅಶ್ವಿನಿ ಗೌಡ!
ಮದ್ವೆ ಆಗದಿದ್ರೂ ಕನ್ಯೆ ಅಲ್ಲ, ಫುಲ್​ ತೃಪ್ತಳು: ಎಲ್ಲಾ ರಹಸ್ಯ ತೆರೆದಿಟ್ಟು ಸಂಚಲನ ಮೂಡಿಸಿದ ಬಾಲಿವುಡ್​ 'ಅಮ್ಮಾ'​