ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು…ಇದು ನೂರಕ್ಕೆ ನೂರು ಸತ್ಯವಾದ ಮಾತು. ಹಿಡಿತಕ್ಕೆ ಸಿಗದ ಮನಸ್ಸು, ನಿರ್ಧಾರ ತೆಗೆದುಕೊಳ್ಳಲಾಗದ ವಯಸ್ಸು. ಪಾಲಕರಿಗೆ ಈ ಮಕ್ಕಳ ಪಾಲನೆ ಕಷ್ಟವಾದ್ರೆ ಮಕ್ಕಳಿಗೆ ಮನಸ್ಸನ್ನು ಒಂದು ಕಡೆ ನಿಲ್ಲಿಸೋದು ಕಷ್ಟ. ಈ ವಯಸ್ಸಿನ ಮಕ್ಕಳು ಕೆಲ ವಿಷ್ಯವನ್ನು ಅಗತ್ಯವಾಗಿ ತಿಳಿಯಬೇಕಾಗುತ್ತದೆ.
ಮಕ್ಕಳು ದೊಡ್ಡವರಾಗಿದ್ದು ತಿಳಿಯೋದೇ ಇಲ್ಲ. ವಯಸ್ಸು 15 ದಾಟಿದ್ರೂ ನಾವು ಅವರನ್ನು ಮಕ್ಕಳಂತೆ ನೋಡ್ತೇವೆ. ಆದ್ರೆ ಮಕ್ಕಳ ದೇಹದಲ್ಲಿ, ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆ ನಡೆಯುತ್ತಿರುತ್ತದೆ. 15 ವರ್ಷದಿಂದ 17 ವರ್ಷ ವಯಸ್ಸಿನ ಮಕ್ಕಳನ್ನು ಹದಿಹರೆಯದ ಮಕ್ಕಳು ಅಂತಾ ಕರೆಯಲಾಗುತ್ತದೆ. ಈ ಟೀನೇಜರ್ ಮಕ್ಕಳನ್ನು ಸಂಭಾಳಿಸೋದು ಸುಲಭದ ಕೆಲಸವಲ್ಲ.
ಮಕ್ಕಳು (Children) 15 ವರ್ಷಕ್ಕೆ ಕಾಲಿಡುತ್ತಿದ್ದಂತೆ ಹಾರ್ಮೋನ್ (Hormone) ಬದಲಾವಣೆ ಶುರುವಾಗುತ್ತದೆ. ಈ ವಯಸ್ಸಿನ ಮಕ್ಕಳಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರೋದಿಲ್ಲ. ಆದ್ರೆ ದೊಡ್ಡವರು ಹೇಳಿದ್ದನ್ನು ಸ್ವೀಕರಿಸುವ ತಾಳ್ಮೆ ಕೂಡ ಇರೋದಿಲ್ಲ. ಸ್ನೇಹಿತರು, ಸುತ್ತಮುತ್ತಲಿನ ಜನರು, ಸಾಮಾಜಿಕ ಜಾಲತಾಣ (Social Network) ಗಳಿಗೆ ಅವರು ಬೇಗ ಆಕರ್ಷಿತರಾಗ್ತಾರೆ. ತಾವು ಕಂಡಿದ್ದೇ ಸತ್ಯ ಎನ್ನುವ ಸ್ವಭಾವವನ್ನು ಹೊಂದಿರುತ್ತಾರೆ. ಇದೇ ಕಾರಣಕ್ಕೆ ಅವರು ಬೇಗ ತಪ್ಪುಗಳನ್ನು ಮಾಡ್ತಾರೆ. ಪೋಷಕರ ಮೇಲೆ ಅಸಮಾಧಾನಗೊಳ್ಳುವುದು, ಕೋಪ ಮಾಡಿಕೊಳ್ಳುವುದು ಹೆಚ್ಚು.
undefined
RELATIONSHIP TIPS: ಭಾವನಾತ್ಮಕವಾಗಿ ಸ್ಪಂದಿಸದ ಗೆಳತಿ: ಸಂಬಂಧದಲ್ಲಿ ಇದೇನಾಯ್ತು?
ಹಿಂದಿನ ಕಾಲದಂತೆ ಈಗಿನ ಕಾಲವಿಲ್ಲ. ಈಗ ಸಾಕಷ್ಟು ಬದಲಾವಣೆಯನ್ನು ನಾವು ನೋಡ್ಬಹುದು. ಬದಲಾಗುತ್ತಿರುವ ಪರಿಸರಕ್ಕೆ ತಕ್ಕಂತೆ ಪೋಷಕರು ತಮ್ಮ ಸ್ವಭಾವದಲ್ಲಿ ಬದಲಾವಣೆ ತರುವುದು ಅನಿವಾರ್ಯ. ಹದಿಹರೆಯ (Teenage) ದ ಮಕ್ಕಳು ಹಾಳಾಗ್ತಾರೆ ಎನ್ನುವ ಕಾರಣಕ್ಕೆ ಅವರ ಮೇಲೆ ಹೆಚ್ಚು ಓದಿನ ಹೊಣೆ ಹೇರುವುದು, ಅವರನ್ನು ಮನೆಯಲ್ಲಿಯೇ ಕೂಡಿ ಹಾಕುವುದು, ಅತಿಯಾದ ಶಿಸ್ತಿನಿಂದ ಬೆಳೆಸುವುದು, ಮಾತು ಮಾತಿಗೆ ಬೈಯ್ಯುವುದು, ಹೊಡೆಯುವುದು ಮಕ್ಕಳನ್ನು ಮತ್ತಷ್ಟು ಹಾಳು ಮಾಡುತ್ತದೆ. ಅವರು ಕೆಟ್ಟ ದಾರಿ ತುಳಿಯುವಂತೆ ಮಾಡುತ್ತದೆ. ಹೆಣ್ಣು ಮಕ್ಕಳನ್ನು ಹೊಂದಿರುವ ಪಾಲಕರ ಜವಾಬ್ದಾರಿ ಹೆಚ್ಚಿರುತ್ತದೆ. ಹದಿಹರೆಯಕ್ಕೆ ಬಂದ ಮಕ್ಕಳಿಗೆ ಕೆಲ ವಿಷ್ಯವನ್ನು ಪಾಲಕರು ತಿಳಿಸಬೇಕು. ಹಾಗೆಯೇ ಹದಿಹರೆಯಕ್ಕೆ ಬಂದ ಮಗಳು ಕೂಡ ಕೆಲ ವಿಷ್ಯವನ್ನು ಅಗತ್ಯವಾಗಿ ತಿಳಿದಿರಬೇಕಾಗುತ್ತದೆ.
ಹದಿಹರೆಯದ ಹುಡುಗಿಯರು ಈ ವಿಷ್ಯವನ್ನು ತಿಳಿದಿರಬೇಕು :
ಆತ್ಮವಿಶ್ವಾಸ (Confidence) : ಈ ವಯಸ್ಸಿನಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ. ಆತ್ಮವಿಶ್ವಾಸವಿದ್ರೆ ಮಾತ್ರ ಎಲ್ಲವನ್ನೂ ಜಯಿಸಬಹುದು ಎಂಬ ಸಂಗತಿ ಹದಿಹರೆಯದ ಹುಡುಗಿಯರಿಗೆ ತಿಳಿದಿರಬೇಕು.
Relationship Tips : ಮದುವೆಯಾದ್ರೆ ಹೆಚ್ಚು ಕಾಲ ಬದುಕ್ತಿರಾ ನೋಡಿ!
ಹೀಗಿದ್ರೆ ಚೆಂದ : ನಾವು ಸಮಾಜದಲ್ಲಿ ಬದುಕುತ್ತಿದ್ದೇವೆ. ಒಂದಾಗಿ ಬಾಳೋದನ್ನು ಕಲಿಯಬೇಕು. ಬೇರೆಯವರನ್ನು ಬೆದರಿಸಿ ಜೀವನ ನಡೆಸಬಾರದು. ಹಾಗಂತ ಗೂಡಾಂಗಿರಿ ಸಹಿಸೋದು ಕೂಡ ಒಳ್ಳೆಯದಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಸ್ವಭಾವ ಬೆಳೆಸಿಕೊಳ್ಳಬೇಕು.
ಕನಸಿಗೆ ಆದ್ಯತೆ: ಹದಿಹರೆಯದ ಮಕ್ಕಳು ಸಣ್ಣ ಹಿನ್ನಡೆಯನ್ನೂ ಸಹಿಸೋದಿಲ್ಲ. ನನ್ನಿಂದ ಸಾಧ್ಯವಿಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ತಾರೆ. ಆದ್ರೆ ಈ ತಪ್ಪು ಮಾಡಬಾರದು. ಕನಸನ್ನು ಎಂದಿಗೂ ಬಿಟ್ಟುಕೊಡಬಾರದು. ಯಶಸ್ವಿಯಾಗುವವರೆಗೂ ಸತತ ಪ್ರಯತ್ನ ನಡೆಸಬೇಕು.
ನಿನಗೂ ಸ್ಥಾನವಿದೆ: ಮನೆಯಲ್ಲಿ ಉಳಿದ ಸದಸ್ಯರಂತೆ ಮಕ್ಕಳಿಗೂ ಸ್ಥಾನವಿರುತ್ತದೆ. ನಾನೂ ಕುಟುಂಬಕ್ಕೆ ಮುಖ್ಯ. ನನ್ನ ಅಭಿಪ್ರಾಯಗಳು ಕುಟುಂಬಕ್ಕೆ ಮುಖ್ಯವಾಗುತ್ತವೆ ಎಂಬುದನ್ನು ಆಕೆ ತಿಳಿದಿರಬೇಕು.
ಸ್ನೇಹಿತರ ಬಗ್ಗೆ ಇರಲಿ ಗಮನ: ಮೊದಲೇ ಹೇಳಿದಂತೆ ಈ ವಯಸ್ಸಿನಲ್ಲಿ ದಾರಿ ತಪ್ಪೋದು ಹೆಚ್ಚು. ಕೆಲವು ಬಾರಿ ತಪ್ಪು ಸ್ನೇಹಿತರ ಆಯ್ಕೆ ಇದಕ್ಕೆ ಕಾರಣವಾಗಿರುತ್ತದೆ. ಹಾಗಾಗಿ ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಸಹಚರರನ್ನು ಎಚ್ಚರಿಕೆಯಿಂದ ನಿರ್ಧರಿಸಬೇಕು.
ಸೌಂದರ್ಯಕ್ಕೆ ಆದ್ಯತೆ ಬೇಡ: ನೀವು ಹೇಗಿದ್ರೂ ಚೆಂದ ಎಂಬುದನ್ನು ನೆನಪಿರಲಿ. ಕಪ್ಪಗಿರಲಿ, ತೆಳ್ಳಗಿರಿ, ಯಾವುದೇ ಕಾರಣಕ್ಕೂ ನಿಮ್ಮ ನೋಟ ನಿಮ್ಮ ಉತ್ಸಾಹವನ್ನು ತಗ್ಗಿಸಲು ಬಿಡಬೇಡಿ. ನಿಮ್ಮ ನೋಟದ ಬಗ್ಗೆ ಕಮೆಂಟ್ ಮಾಡಿದಾಗ ಅದ್ರಿಂದ ತಪ್ಪಿಸಿಕೊಂಡು ಬರಬೇಡಿ. ಅದಕ್ಕೆ ಸರಿಯಾದ ಉತ್ತರ ನೀಡಿ, ತಲೆ ಎತ್ತಿ ಮಾತನಾಡಿ.
ಎಲ್ಲ ಬಾರಿ ಒಳ್ಳೆಯವಳಾಗ್ಬೇಕಿಲ್ಲ: ಒಳ್ಳೆ ಮಗಳಾಗ್ಬೇಕು ಎನ್ನುವ ಕಾರಣಕ್ಕೆ ಕೆಲವರು ಎಲ್ಲವನ್ನೂ ಸಹಿಸಿಕೊಳ್ತಾರೆ. ಇದು ಸೂಕ್ತವಲ್ಲ. ನಿಮ್ಮ ಅಭಿಪ್ರಾಯವನ್ನು ನೀವು ಕುಟುಂಬದ ಮುಂದಿಡಬಹುದು. ಮೊದಲು ನಿಮ್ಮನ್ನು ನೀವು ಜವಾಬ್ದಾರಿಯುತ ವ್ಯಕ್ತಿಯಾಗಿ ಸ್ವೀಕರಿಸಬೇಕು. ನಿಮ್ಮಿಂದ ಸಾಧಿಸಲು ಅಸಾಧ್ಯವಾದದ್ದು ಏನೂ ಇಲ್ಲ ಎಂಬುದನ್ನು ಅರಿಯಬೇಕು. ನೀವು ಜವಾಬ್ದಾರಿಯಿಂದ ನಡೆದ್ರೆ ಮನೆಯಲ್ಲಿ, ಸ್ನೇಹಿತರ ಮಧ್ಯೆ, ಸಂಬಂಧಿಕರ ಮಧ್ಯೆ ನಿಮಗೊಂದು ಮುಖ್ಯ ಸ್ಥಾನ ಸಿಗೋದ್ರಲ್ಲಿ ಅನುಮಾನವಿಲ್ಲ.