ಮದ್ವೆಗೂ ಮುನ್ನ ಮೊಮ್ಮಗಳು ಬಸುರಾದರೇನಿವಾಗ?: ಜಯಾ ಬಚ್ಚನ್ ಹೇಳಿಕೆಗೆ ಆಕ್ರೋಶ

By Anusha Kb  |  First Published Oct 7, 2024, 11:24 AM IST

ಬಾಲಿವುಡ್‌ನ ಈ ಹಿರಿಯ ನಟಿ ಜಯಾ ಬಚ್ಚನ್, ಮೊಮ್ಮಗಳೇನಾದರೂ ಮದುವೆಗೆ ಮೊದಲು ಗರ್ಭಿಣಿಯಾದರೆ ನನಗೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 


ಮದುವೆಯಾಗುವ ಮೊದಲು ಮನೆಯ ಮಕ್ಕಳು ಗರ್ಭಿಣಿಯಾಗುವಂತಿಲ್ಲ, ಅಪ್ಪಿತಪ್ಪಿ ಹೀಗೆಲ್ಲಾದರು ಆದರೂ ಇದನ್ನು ನಮ್ಮ ಸಮಾಜ ಅದನ್ನು ಸ್ವೀಕರಿಸುವುದಿಲ್ಲ, ಆಕೆ ದಾರಿ ತಪ್ಪಿದವಳೆಂದು ತುಂಬಾ ನಿಕೃಷ್ಟವಾಗಿ ಆಕೆಯನ್ನು ಸಮಾಜ ನೋಡುತ್ತದೆ. ಜನ ಕುಹಕವಾಡುತ್ತಾರೆ. ದೂಷಿಸಿ, ನಿಂದಿಸಿ, ತಲೆ ಎತ್ತಿ ಬದುಕಲಾಗದಂತೆ ಮಾಡುತ್ತದೆ. ಇದೇ ಕಾರಣಕ್ಕೆ ಮದುವೆಯಾಗುವವರೆಗೂ ಹೆಣ್ಣು ಮಕ್ಕಳು ದಾರಿ ತಪ್ಪದಂತೆ, ಅವರ ಮೇಲೆ ಬೇರೆಯವರು ಕಣ್ಣು ಹಾಕದಂತೆ ಪೋಷಕರು ಕಣ್ಣಿಟ್ಟು ಕಾಯುತ್ತಾರೆ. ಆದರೆ ಬಾಲಿವುಡ್‌ನ ಈ ಹಿರಿಯ ನಟಿ ಬಿಗ್ ಬಿ ಹೆಂಡ್ತಿ ಜಯಾ ಬಚ್ಚನ್‌ಗೆ ಮೊಮ್ಮಗಳು ಮದ್ವೆಗೂ ಮುನ್ನ ಬಸುರಾದರೆ ಚಿಂತೆಯೇ ಇಲ್ವಂತೆ. ಕೆಲವು ವರ್ಷಗಳ ಹಿಂದೆ ಅವರು ನೀಡಿದ ಈ ಹೇಳಿಕೆ, ಇದೀಗ ಮೊಮ್ಮಗಳು ನಂದಾ ನವೇಲಿ ಅಮ್ಮದಾಬಾದ್‌ನ ಐಐಎಂನಲ್ಲಿ ಎಂಬಿಎಗೆ ಜಾಯಿನ್ ಆಗಿರುವಾಗ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಗಳು ಶ್ವೇತಾ ಬಚ್ಚನ್ ಪುತ್ರಿ ನವ್ಯಾ ನವೇಲಿ, ಒಂದು ವೇಳೆ ಮದುವೆಗೂ ಮೊದಲೇ ಗರ್ಭಿಣಿಯಾದರೆ ಅದರಿಂದ ನನಗೇನು ಸಮಸ್ಯೆ ಇಲ್ಲ ಎಂದೇ ನೇರವಾಗಿ ಜಯ ಹೇಳಿದ್ದಾರೆ. ಮೊಮ್ಮಗಳೇ ನಡೆಸಿಕೊಡುತ್ತಿದ್ದ, 'ವಾಟ್‌ ಹೆಲ್ ನವ್ಯಾ' ಎಂಬ ಪಾಡ್‌ಕಾಸ್ಟ್‌ನಲ್ಲಿ  ಜಯಾ ಬಚ್ಚನ್ ಹೀಗೆ ಹೇಳಿರುವುದು ಮತ್ತೊಂದು ವಿಶೇಷ. ಈ ಪಾಡ್‌ಕಾಸ್ಟ್‌ನಲ್ಲಿ ನವ್ಯಾ ನವೇಲಿ ನಂದಾ ತನ್ನ ಅಮ್ಮ ಶ್ವೇತಾ ಬಚ್ಚನ್ ಹಾಗೂ ಅಜ್ಜಿ ಜಯಾ ಬಚ್ಚನ್ ಅವರನ್ನು ಜೊತೆಗೆ ಕೂರಿಸಿ ಮಾತನಾಡಿಸಿದ್ದರು.  

Tap to resize

Latest Videos

ಡಿವೋರ್ಸ್‌ ರೂಮರ್ಸ್ ಮಧ್ಯೆ ಅತ್ತೆ ಮಾವ ಇರುವ ಜಲ್ಸಾಗೆ ಮಗಳೊಂದಿಗೆ ಬಂದ ಐಶ್ವರ್ಯಾ ರೈ

ಈ ಕಾರ್ಯಕ್ರಮದಲ್ಲಿಯೇ ಮೊಮ್ಮಗಳು, ಮಗಳ ಮುಂದೆ ವಿವಾದಾತ್ಮಕ ಹೇಳಿಕೆ ನೀಡಿರುವ ಜಯಾ ವೀಡಿಯೋವನ್ನು ಇದೀಗ ಟ್ವಿಟ್ಟರ್‌ನಲ್ಲಿ ಒಬ್ಬರು ಪೋಸ್ಟ್ ಮಾಡಿದ್ದಾರೆ. ಈ ಬಾಲಿವುಡ್‌ನ ಸೆಲೆಬ್ರಿಟಿಗಳು ದೇಶದ ಸಮಾಜದ ಅಧಃಪತನ ಮಾಡುವ ದೊಡ್ಡ ಪ್ರಚಾರಕರು, ಜನರು ಅವರಿಗೆ ಮರ್ಯಾದೆ ನೀಡುವುದನ್ನು ನಿಲ್ಲಿಸಬೇಕು ಎಂದೇ ಹೇಳಲಾಗುತ್ತಿದೆ. ಈ ಪೋಸ್ಟನ್ನು 42 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, ಜನರು ಕೂಡ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದ್ದಾರೆ. ಈ ರೀತಿಯ ಸ್ತ್ರೀವಾದಿಗಳು ನಮ್ಮ ಸಂಸ್ಕೃತಿ, ಸಂಪ್ರದಾಯಗಳ ವಿನಾಶ ಮಾಡುತ್ತಿದ್ದಾರೆ. ಇದು ನಾನು ನೋಡಿದ ಅತ್ಯಂತ ಕೆಟ್ಟ ಹೇಳಿಕೆ ಎಂದು ಒಬ್ಬರು ಕಿಡಿಕಾರಿದ್ದಾರೆ. ಜನ ಇಂತಹ ಸೆಲೆಬ್ರಿಟಿಗಳನ್ನು ಫಾಲೋ ಮಾಡ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಆದರೆ ಬಾಲಿವುಡ್ ಸೆಲೆಬ್ರಿಗಳ ಜೀವನದಲ್ಲಿ ಇವೆಲ್ಲ ಕಾಮನ್. ಅನೇಕ ನಟಿಯರು ಮದುವೆಗೆ ಮೊದಲೇ ಗರ್ಭಿಣಿಯಾಗಿ ಬಳಿಕ ಮದುವೆಯಾಗಿದ್ದಾರೆ. ಇಂಥ ನಟಿಯರ ದೊಡ್ಡ ಲಿಸ್ಟೇ ಇದೆ. ದಿಯಾ ಮಿರ್ಜಾ, ನೇಹಾ ಧೂಪಿಯಾ, ಕೊಂಕಣ್ ಸೇನ್ ಶರ್ಮಾ, ನಟಾಶ ಸ್ಟಾಂಕೋವಿಚ್, ಇಲಿಯಾನಾ ಡೀ ಕ್ರೂಸ್, ಕಲ್ಕಿ ಕೊಚ್ಚಿನ್, ಆಲಿಯಾ ಭಟ್, ಶ್ರೀದೇವಿ ಸೇರಿ ಅನೇಕರು ಮದುವೆಗೂ ಮುನ್ನವೇ ಗರ್ಭಿಣಿಯಾಗಿ ನಂತರ ಮದುವೆಯಾದವರು. ಬಾಲಿವುಡ್ ಮಂದಿಗೆ ಇದು ಸರಿ ಕಾಣಬಹುದೇನೋ, ಆದರೆ ಇದು ಸಹಜ ಎಂದು ಒಪ್ಪಿಕೊಳ್ಳುವಷ್ಟು ನಮ್ಮ ಸಮಾಜ ಸಾಮಾನ್ಯವಾಗಿಲ್ಲ.

ಅಮಿತಾಭ್ ಬಚ್ಚನ್ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಓಡಿ ಬಂದು ಜಯಾ ಬಚ್ಚನ್ ತಬ್ಬಿಕೊಂಡ ರೇಖಾ: ವೀಡಿಯೋ

ಇಷ್ಟ ಪಟ್ಟು ,ಇಷ್ಟಪಡದೆಯೋ ಕೆಲವು ಕೆಟ್ಟ ಸಂದರ್ಭಕ್ಕೆ ಸಿಕ್ಕು ಸಾಮಾನ್ಯ ವರ್ಗದ ಹೆಣ್ಣೊಬ್ಬಳು ಅಪ್ಪಿ ತಪ್ಪಿ ಗರ್ಭಿಣಿಯಾದರೆ ಅವಳನ್ನು ಸಮಾಜ ನೋಡುವ ರೀತಿಯೇ ಬೇರೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸಿ, ಸಾಕಷ್ಟು ದುಡ್ಡು ಮಾಡಿಕೊಂಡು ಮರ್ಯಾದಸ್ಥರಂತೆ ಬದುಕುವ ಪೋರ್ನ್‌ ಸ್ಟಾರ್‌ಗಳನ್ನು ಮೆಚ್ಚುವ ನಮ್ಮ ಸಮಾಜ ರೇಪ್‌ ಸಂತ್ರಸ್ತೆಯನ್ನು ನೋಡುವ ರೀತಿ ತುಂಬಾ ಕೆಟ್ಟದಾಗಿದೆ. ಹೀಗಿರುವಾಗ ಜಯಾ ಬಚ್ಚನ್ ಅವರ ಮಾತು ಹೈಕ್ಲಾಸ್ ಸೊಸೈಟಿಗೆ ಸಾಮಾನ್ಯ ಎನಿಸಬಹುದೇ ಹೊರತು ಸಾಮಾನ್ಯ ಮಾಧ್ಯಮ ವರ್ಗ ಒಪ್ಪಿಕೊಳ್ಳುವಂತಹದ್ದಲ್ಲ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

These Bollywood celebs are the biggest promoters of degeneracy in this country.

People should stop giving them clout. pic.twitter.com/KBvQtYVqvJ

— ︎ ︎venom (@venom1s)


 

click me!