ಉಫ್​! ಎಂತೆಂಥ ಲವ್​ ಸಂಬಂಧಗಳು ಇವೆಯಪ್ಪಾ? ಇದು ಪಾಕೆಟಿಂಗ್​ ರಿಲೇಷನ್​ಷಿಪ್​ ಅಂತೆ! ಹಾಗಂದ್ರೆ ಏನ್​ ಗೊತ್ತಾ?

By Suchethana D  |  First Published Oct 5, 2024, 10:53 PM IST

ಅಕ್ರಮ ಸಂಬಂಧ, ಲಿವ್​ ಇನ್​ ಸಂಬಂಧ, ಡೇಟಿಂಗ್​... ಹೀಗೆ ಏನೇನೋ ಲವ್​ ಸಂಬಂಧಗಳು ಗೊತ್ತಿರಬಹುದು, ಈ ಸಂಬಂಧದಲ್ಲಿ ಪಾಕೆಟಿಂಗ್​ ಅಂದ್ರೆ ಗೊತ್ತಾ? 
 


  ಪ್ರೀತಿ, ಪ್ರೇಮ, ಪ್ರಣಯದ ವಿಷಯದಲ್ಲಿ ಏನೇನೋ ಹೆಸರಿನ ಸಂಬಂಧಗಳಿವೆ. ಒಂದೊದ್ದಕ್ಕೆ ಒಂದೊಂದು ಹೆಸರು. ಲಿವ್​ ಇನ್​ ರಿಲೇಷನ್​ ಎನ್ನುವುದೇ ಎಷ್ಟೋ ಭಾರತೀಯರಿಗೆ ಅರಗಿಸಿಕೊಳ್ಳಲಾಗದ ವಿಷಯವಾಗಿದೆ. ಆದರೆ ಇದು ಸುಪ್ರೀಂಕೋರ್ಟ್​ ಅಂಗಳಕ್ಕೂ ಕಾಲಿಟ್ಟಿದೆ ಎಂದರೆ ಅದು ಎಷ್ಟರಮಟ್ಟಿಗೆ ಕಾಮನ್​ ಆಗಿಬಿಟ್ಟಿದೆ ಎನ್ನುವುದು ಅರ್ಥವಾಗುತ್ತದೆ. ಅದೇ ರೀತಿ ಮದುವೆಯಾಗದೇ ಡೇಟಿಂಗ್​, ಮದುವೆಗೂ ಮುನ್ನದ ಸಂಬಂಧ, ಸಲಿಂಗಿಗಳ ಸಂಬಂಧ, ಇನ್ನೂ ಏನೇನೋ... ಆದರೆ ಇಲ್ಲಿ ಹೇಳಹೊರಟಿರುವುದು ಸ್ವಲ್ಪ ವಿಭಿನ್ನ ಸಂಬಂಧದ ಕುರಿತು, ಅದೇ ಪಾಕೆಟಿಂಗ್​ ರಿಲೇಷನ್​ ಎನ್ನುವುದು. ಬಹುಶಃ ಈಗಿನ ಒಂದಿಷ್ಟು ತಲೆಮಾರಿನವರಿಗೆ ಈ ಸಂಬಂಧ ಹೊಸತು ಅಲ್ಲ ಎನಿಸಲೂ ಬಹುದು. ತಮ್ಮ ತಮ್ಮ ಸ್ನೇಹಿತ-ಸ್ನೇಹಿತೆಯರ ಜೊತೆ ಮಾತನಾಡಿಕೊಳ್ಳುವಾಗ ಇವುಗಳ ಬಗ್ಗೆ ಸಹಜವಾಗಿ ತಿಳಿದಿರುತ್ತದೆ.

ಆದರೆ ಸದ್ಯದ ಮಟ್ಟಿಗೆ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿ ಇಲ್ಲದ, ಇದ್ದರೂ ಒಂದಷ್ಟು ವರ್ಗಕ್ಕೆ ಮಾತ್ರ ಸೀಮಿತ ಎನಿಸಿರುವ ಈ ಪಾಕೆಟಿಂಗ್​ ರಿಲೇಷನ್​ ಕುರಿತು ಕೆಲವು ಮಾಹಿತಿ ಇಲ್ಲಿ ಕೊಡಲಾಗಿದೆ. ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಆತನೋ, ಆಕೆಯೋ ನಿಮ್ಮ ಜೊತೆ ಡೇಟಿಂಗ್​ ಬರುತ್ತಾರೆ, ಡೇಟಿಂಗ್​ ಹೋದಾಗ ನಿಮ್ಮ ನಡುವೆ ಎಲ್ಲವೂ ನಡೆಯುತ್ತೆ, ತುಂಬಾ ಆತ್ಮೀಯರೂ ಆಗಿರುತ್ತೀರಿ. ಆದರೆ ಅವರು ನಾಲ್ಕು ಜನರ ಮುಂದೆ ನಿಮ್ಮನ್ನು ತಮ್ಮ ಡೇಟಿಂಗ್​ ಪಾರ್ಟನರ್​ ಎಂದು ಒಪ್ಪಿಕೊಳ್ಳುವುದಿಲ್ಲ. ಅವರ ಸ್ನೇಹಿತರು, ಕುಟುಂಬದವರ ಜೊತೆ ನಿಮ್ಮನ್ನು ಪರಿಚಯಿಸಲು ಹಿಂಜರಿಯುತ್ತಾರೆ. ಅದಕ್ಕೇ ಪಾಕೆಟಿಂಗ್​ ರಿಲೇಷನ್​ ಎನ್ನುತ್ತಾರೆ!

Latest Videos

ರಣಬೀರ್​ ಜೊತೆ ಬೆತ್ತಲಾಗಿದ್ದು ಸಾಕಾಗಿಲ್ಲ ಎಂದು ಹೀಗೆಲ್ಲಾ ಮಾಡೋದಾ ನಟಿ ತೃಪ್ತಿ ಡಿಮ್ರಿ! 5 ಲಕ್ಷ ಟೋಪಿ?
 
ಇಷ್ಟೇನಾ ಎಂದು ಕೇಳಬಹುದು. ಏಕೆಂದರೆ ಸದ್ಯ ಡೇಟಿಂಗ್​ ಎನ್ನುವುದು ಯುವಜನರಲ್ಲಿ ಕಾಮನ್​ ಆಗಿಬಿಟ್ಟಿದೆ. ಒಬ್ಬರ ಜೊತೆ ಡೇಟಿಂಗ್​ ಮಾಡಿದ್ರೆ ಪರವಾಗಿಲ್ಲ. ಆದರೆ ಒಂದಷ್ಟು ವರ್ಗದಲ್ಲಿ ಇದು ಹಾಗಲ್ಲವಲ್ಲ. ಸಂಬಂಧಗಳಿಗೆ ಬೆಲೆಯೇ ಇಲ್ಲದ ಈ ದಿನಗಳಲ್ಲಿ ಕಾಮತೃಷೆ, ಲೈಂಗಿಕ ಮನೋಭಿಲಾಷೆ ಎಲ್ಲವೂ ಗಡಿಯನ್ನು ಮೀರಿ ಹೋಗಿದೆ. ಇಂಥ ಸಂಬಂಧಗಳೆಲ್ಲಾ ಅಕ್ರಮ ಎನ್ನುವ ಕಾಲ ಇದಲ್ಲ. ಆದರೆ ಇಂಥ ಸಂಬಂಧ ಹೊಂದಿರುವವರು ಅಂಥ ಸಂಬಂಧ ಹೊಂದಿರುವವರ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ, ಇನ್ನು ಬೇರೆಯವರ ಮುಂದೆ ಪರಿಚಯಿಸುವುದು ಎಲ್ಲಿಬಂತು? ಆದರೆ ಇಂಥ ಸಂಬಂಧಕ್ಕೆ ಒಂದು ಹೆಸರು ಇದೆ. ಅದೇ ಪಾಕೆಟಿಂಗ್​ ರಿಲೇಷನ್​. ಡೇಟಿಂಗ್​ ಮಾಡುತ್ತಿರುವ ವ್ಯಕ್ತಿ ಪಾಕೆಟಿಂಗ್​ ಮಾಡುತ್ತಿದ್ದಾರೆ ಎಂದು ತಿಳಿದರೆ ಅವರಿಂದ ದೂರ ಇರುವುದು ಒಳ್ಳೆಯದು ಎನ್ನುತ್ತಾರೆ ಹಲವರು. 

ಪಾಕೆಟಿಂಗ್ ಎನ್ನುವುದು ಡೇಟಿಂಗ್ ಪದವಾಗಿದ್ದು, ಯಾರಾದರೂ ತಮ್ಮ ಸಂಗಾತಿಯನ್ನು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಾಮಾಜಿಕ ವಲಯದಿಂದ ಮರೆಮಾಚುವುದು ಎಂದರ್ಥ. ಪಾಕೆಟ್ ಮಾಡುವ ಕೆಲವು ಕಾರಣಗಳು ಎಂದರೆ ಮೊದಲೇ ಹೇಳಿದ ಹಾಗೆ ಇಂಥ ಸಂಬಂಧ ಮರೆ ಮಾಚಿ ಇಡುವುದನ್ನೇ ತುಂಬಾ ಜನ ಇಷ್ಟಪಡುತ್ತಾರೆ. ಹೀಗೆ ಕುಟುಂಬದವರಿಗೆ ಅಥವಾ ಇನ್ನಾರಿಗೋ ಪರಿಚಯಿಸಿಬಿಟ್ಟರೆ, ಆ ಸಂಬಂಧಕ್ಕೆ ಅವರು ಬದ್ಧರಾಗಿ ಇರಬೇಕಾಗುತ್ತದೆ ಎನ್ನುವ ಸಮಸ್ಯೆ ಅವರನ್ನು ಕಾಡುತ್ತದೆ. ನಾಲ್ಕು ಜನ ಆ ಸಂಬಂಧದ ಒಪ್ಪಿಕೊಂಡರೆ ಅದು ಅಧಿಕೃತ ಎನಿಸಿಬಿಡುತ್ತದೆ. ಹೀಗೆ ಹಲವಾರು ಕಾರಣಗಳಿಂದ ಡೇಟಿಂಗ್​ ಪಾರ್ಟನರ್​ ಅನ್ನು ಮುಚ್ಚಿಡುವುದೇ ಕಾರಣ ಎಂದು ವಿಶ್ಲೇಷಿಸಲಾಗಿದೆ. ಜಾತಿ, ಧರ್ಮವೂ ಮಧ್ಯೆ ಪ್ರವೇಶಿಸುವ ಕಾರಣ ಪಾಕೆಂಟಿಂಗ್​ ಮಾಡುತ್ತಾರಂತೆ. ಅಷ್ಟೇ ಅಲ್ಲದೇ, ಬೇರೆಯವರ ಪಾರ್ಟನರ್​ ಜೊತೆ ಇವರು ಡೇಟಿಂಗ್​ ಮಾಡುತ್ತಿದ್ದರೆ, ಘರ್ಷಣೆಯನ್ನು ತಪ್ಪಿಸಲು, ಪೋಷಕರಿಂದ  ಮಾಹಿತಿ ಮುಚ್ಚಿಡಲು ಪಾಕೆಟಿಂಗ್​ ಮಾಡುತ್ತಾರೆ ಎನ್ನುವ ಕಾರಣ ಕೊಡಲಾಗಿದೆ. ಒಟ್ಟಿನಲ್ಲಿ ರಿಲೇಷನ್​ಷಿಪ್​ಗೆ ಹೊಸ ವ್ಯಾಖ್ಯಾನ ಹುಟ್ಟಿಕೊಂಡಿದೆಯಷ್ಟೇ. 

ಮೊದ್ಲು ಬರೋದು ಮೂನಾ? ಸನ್ನಾ? ಸೀತಾರಾಮ ಪ್ರಿಯಾಳ ಉತ್ರ ಕೇಳಿ ನಾಚಿಕೊಂಡ ಶಿವಣ್ಣ, ಅನುಶ್ರೀ!
 
 

click me!