ವೃದ್ಧ ಜೋಡಿಯ ಸುಮಧುರ ಬಾಂಧವ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈ: ವೃದ್ಧ ಜೋಡಿಯ ಸುಮಧುರ ಬಾಂಧವ್ಯದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ವೃದ್ಧ ಜೋಡಿಯೊಂದು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದು, ಅದರಲ್ಲಿ ಪತ್ನಿ ಅನಾರೋಗ್ಯಪೀಡಿತರಾಗಿದ್ದಾರೆ. ಅವರಿಗೆ ಪತಿ ಆಹಾರವನ್ನು ತಿನ್ನಿಸುತ್ತಿದ್ದಾರೆ. ಈ ವಿಡಿಯೋವನ್ನು ಇಂಡಿಯನ್ ಐಡಲ್ ರನರ್ ಅಪ್ ಗಾಯಕಿ ರಾಕೇಶ್ ಮೈನಿ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾರನ್ನಾದರೂ ನಿಮ್ಮವರನ್ನಾಗಿಸಿಕೊಳ್ಳುವುದು ಒಂದು ಕೌಶಲ್ಯ, ಆದರೆ ನಿಮ್ಮವರಾಗಿಯೇ ಉಳಿಸಿಕೊಳ್ಳುವುದು ಅದ್ಭುತ ಕಲೆ ಎಂದು ಬರೆದುಕೊಂಡ ಅವರು ಕಳೆದ ರಾತ್ರಿ ನಾನು ಈ ದೃಶ್ಯವನ್ನು ನೋಡಿದೆ. ವೃದ್ಧರೊಬ್ಬರು ತಮ್ಮ ಅನಾರೋಗ್ಯಪೀಡಿತ ಪತ್ನಿಯನ್ನು ಕರೆದುಕೊಂಡು ರೈಲೊಳಗೆ ಆಗಮಿಸಿದ್ದರು. ಅವರು ಆಹಾರ ಪತ್ನಿಯ ಆರೈಕೆ ಮಾಡುತ್ತಿದ್ದರು. ಅವರಿಗೆ ಆಹಾರ ತಿನ್ನಿಸುತ್ತಿದ್ದರು. ಶೌಚಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆಕೆಯ ಹಾಸಿಗೆಯನ್ನು ಸಿದ್ದಪಡಿಸಿದರು ಹಾಗೂ ತುಂಬಾ ಆರಾಮವಾಗಿ ಆಕೆ ನಿದ್ದೆ ಹೋಗುವಂತೆ ಮಾಡಿದರು. ಯಾವುದೇ ತೊಂದರೆಗಳಿಲ್ಲದೇ ತುಂಬಾ ಪ್ರೀತಿಯಿಂದಲೇ ಅವರು ಎಲ್ಲವನ್ನು ಮಾಡಿದರು. ಪ್ರೀತಿ ಹಾಗೂ ನಿಜವಾದ ಒಡನಾಟ ಎಂದರೆ ಇದು. ನಾನು ಇಡೀ ದಿನ ಅವರನ್ನ ಗಮನಿಸುವುದನ್ನು ನನ್ನಿಂದ ನಿಯಂತ್ರಿಸಿಕೊಳ್ಳಲಾಗಲಿಲ್ಲ. ನಾನು ತುಂಬಾ ಭಾವುಕಳಾದೆ ಎಂದು ರಾಕೇಶ್ ಮೈನಿ ಬರೆದುಕೊಂಡಿದ್ದಾರೆ.
ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!
ಈ ವಿಡಿಯೋವನ್ನು 8 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ವೃದ್ಧ ಜೋಡಿಯ ಪ್ರೀತಿ ಬಾಂಧವ್ಯವನ್ನು ಕೊಂಡಾಡಿದ್ದಾರೆ. ಸಾಮಾನ್ಯವಾಗಿ ಅನಾರೋಗ್ಯಕ್ಕೀಡಾದ ಪತಿಯನ್ನು ಪತ್ನಿ ಮಗುವಿನಂತೆ ನೋಡಿಕೊಳ್ಳುವ ದೃಶ್ಯಗಳನ್ನು ನೀವು ನೋಡಿರಬಹುದು. ಆದರೆ ಪತಿ ಪತ್ನಿಯ ಆರೈಕೆ ಮಾಡುತ್ತಿರುವಂತಹ ಈ ವಿಡಿಯೋ ಬಹಳ ಅಪರೂಪ ಅದರಲ್ಲೂ ಇತ್ತೀಚೆಗೆ ದಾಂಪತ್ಯದಲ್ಲಿ ಸಾಮರಸ್ಯವೇ ಅಪರೂಪ ಎಂಬ ಕಾಲಘಟ್ಟದಲ್ಲಿ ನಾವಿದ್ದೇವೆ. ಪ್ರೀತಿಸಿ ಮದುವೆಯಾದವರು ಕೂಡ ಮೂರೇ ದಿನಕ್ಕೆ ಕಿತ್ತಾಡಿಕೊಂಡು ದೂರಾದ ಹಲವು ನಿದರ್ಶನಗಳಿವೆ. ನಿಜ ಪ್ರೀತಿಯೆಂಬುದು ಅಪರೂಪವೆನಿಸಿದ ಈ ಕಾಲದಲ್ಲಿ ಈ ವೃದ್ಧ ಜೋಡಿಯ ಅಪರೂಪದ ಬಾಂಧವ್ಯ ಎಲ್ಲರ ಕಣ್ಣು ಸೆಳೆಯುತ್ತಿದೆ.
ಭಲೇ ಜೋಡಿ..ಕೋಲ್ಕತ್ತಾ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವೃದ್ಧ ದಂಪತಿ
ವೀಡಿಯೋ ನೋಡಿದ ಅನೇಕರು ಈ ಜೋಡಿಗೆ ಮತ್ತಷ್ಟು ಆಯಸ್ಸು ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕೆಲವರು ತಮ್ಮ ಮನೆಯ ಕತೆಯನ್ನು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದು, ನಮ್ಮ ಮನೆಯಲ್ಲೂ ನನ್ನ ಅಜ್ಜಿ ತಾತ ಹೀಗೆ ಇದ್ದರು, ಒಂದೇ ತಟ್ಟೆಯಲ್ಲಿ ತಿನ್ನುತ್ತಿದ್ದರೂ. ಅವರು ಎಂದು ಕಿತ್ತಾಡಿದ್ದನೆ ನೋಡೀಲ್ಲ. ಆದರೆ ತಾತನ ನಿಧನದ ನಂತರ 5 ತಿಂಗಳ ಕಾಲ ಅವರ ನೆನಪಲ್ಲೇ ಕಳೆದ ಅಜ್ಜಿ ನಂತರ ಅವರು ತಾತನ ಹಾದಿ ಹಿಡಿದರು ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಈಗಿನ ಕಾಲದಲ್ಲಿ ಇಂತಹ ತಾಳ್ಮೆ ಪ್ರೀತಿ ಎಲ್ಲಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದಿನ ಕಾಲದಲ್ಲಿ ಒಂದು ವರ್ಷ ಸಂಬಂಧಗಳು ಒಂದು ವರ್ಷವೂ ಬರುವ ಗ್ಯಾರಂಟಿ ಇಲ್ಲ. ಹೀಗಿರುವಾಗ ವೃದ್ಧಾಪ್ಯದವರೆಗೆ ಜೊತೆಯಾಗಿರುವುದನ್ನು ಯೋಚನೆ ಮಾಡಲು ಕೂಡ ಸಾಧ್ಯವಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.