ಭಾರತ ದೇಶ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನದಲ್ಲಿ ಅದೆಷ್ಟೇ ಅಭಿವೃದ್ಧಿಯಾಗಿದ್ದರೂ ಇಲ್ಲಿ ಮೂಢನಂಬಿಕೆಗೆ ಮಾತ್ರ ಯಾವುದೇ ಕೊರತೆಯಿಲ್ಲ. ಅರ್ಥಹೀನ ಆಚರಣೆಗಳು, ಸಂಪ್ರದಾಯಗಳು ಇಲ್ಲಿ ಸಾಕಷ್ಟಿವೆ. ಹಾಗೆಯೇ ಒಡಿಶಾದಲ್ಲಿ ಒಂದೆಡೆ ಮಕ್ಕಳಿಗೆ ನಾಯಿ ಜೊತೆ ಮದುವೆ ಮಾಡಿಸಲಾಗ್ತಿದೆ. ಅರೆ. ಇದೇನ್ ವಿಚಿತ್ರಾನಪ್ಪ ಅನ್ಬೇಡಿ. ಇಲ್ಲಿದೆ ನೋಡಿ ಹೆಚ್ಚಿನ ಡೀಟೈಲ್ಸ್.
ಒಡಿಶಾ: ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗುತ್ತಲೇ ಇದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಇಲ್ಲಿ ಉತ್ತಮ ಬೆಳವಣಿಗೆಗಳು ಆಗುತ್ತನೇ ಇರುತ್ತವೆ. ಅದರ ಜೊತೆಯಲ್ಲೇ ಮೂಢನಂಬಿಕೆಗಳೂ ಇಲ್ಲಿ ಕಡಿಮೆಯೇನಿಲ್ಲ. ಆಚರಣೆಯ ಹೆಸರಲ್ಲಿ ಅರ್ಥಹೀನ ಪದ್ಧತಿಗಳನ್ನು ಅನುಸರಿಸಲಾಗುತ್ತೆ. ಹಳೆಯ ಸಂಪ್ರದಾಯಗಳನ್ನು ಮುಂದುವರಿಸಲಾಗುತ್ತೆ. ಕೆಲವೊಂದು ಮೂರ್ಖತನದ ಪರಮಾವಧಿ ಅಂತನಿಸಿದ್ರೂ ಜನರು ಇಂಥಾ ಆಚರಣೆಗಳು ಮಾತ್ರ ಬಿಟ್ಟು ಬಿಡೋದಿಲ್ಲ. ಅರ್ಥಹೀನ ಸಂಪ್ರದಾಯಗಳ ಜೊತೆ ಬದುಕುತ್ತಲೇ ಇರುತ್ತಾರೆ. ಹಾಗೆಯೇ ಒಡಿಶಾದಲ್ಲೊಂದು ವಿಚಿತ್ರ ಆಚರಣೆ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಒಡಿಶಾದ ಬಾಲಸೋರ್ ಎಂಬಲ್ಲಿ ಮಕ್ಕಳಿಗೆ ನಾಯಿಗಳ ಜೊತೆ ಮದುವೆ (Marriage) ಮಾಡಲಾಗ್ತಿದೆ. ಇದು ದುಷ್ಟಶಕ್ತಿ (Evil spirit)ಗಳನ್ನು ದೂರ ಮಾಡುತ್ತದೆ ಎಂಬ ಸ್ಥಳೀಯ ಮೂಢನಂಬಿಕೆಗೆ ಅನುಗುಣವಾಗಿ ಈ ಮದುವೆಯನ್ನು ನಡೆಸಿಕೊಂಡು ಬರಲಾಗ್ತಿದೆ. ಬಾಲಸೋರ್ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು 'ದುಷ್ಟಶಕ್ತಿಗಳನ್ನು ದೂರವಿಡುವ' ಸಲುವಾಗಿ ಬೀದಿನಾಯಿ (Street dog)ಗಳೊಂದಿಗೆ ಮದುವೆ ಮಾಡಲಾಗಿದೆ. 11 ವರ್ಷದ ಬಾಲಕ ತಪನ್ ಸಿಂಗ್ ಹೆಣ್ಣು ನಾಯಿಯನ್ನು ಮದುವೆಯಾಗಿದ್ದರೆ, ಏಳು ವರ್ಷದ ಲಕ್ಷ್ಮಿ ಗಂಡು ನಾಯಿಯೊಂದಿಗೆ ಮದುವೆಯಾದಳು.
ಮದುವೆಗೆ ಮೊದಲೇ ಮಕ್ಕಳನ್ನು ಹೆರಬೇಕು! ಬುಡಕಟ್ಟು ಜನಾಂಗದಲ್ಲಿದೆ ವಿಚಿತ್ರ ಸಂಪ್ರದಾಯ
ಮಕ್ಕಳಿಗೆ ನಾಯಿಯೊಂದಿಗೆ ಮದುವೆ ಮಾಡುವುದು ಯಾಕೆ?
ಸೊರೊ ಬ್ಲಾಕ್‌ನ ಬಂಧ್‌ಸಾಹಿ ಗ್ರಾಮದ ಹೋ ಬುಡಕಟ್ಟು ಜನಾಂಗದವರಾದ ಸಿಂಗ್‌ಗಳಲ್ಲಿ ಸಣ್ಣ ಮಕ್ಕಳ ದವಡೆಯಲ್ಲಿ ಮೇಲಿನ ಹಲ್ಲು ಮೊದಲು ಹುಟ್ಟಿದರೆ ಅದು ಅಶುಭವೆಂದು ನಂಬಲಾಗುತ್ತದೆ. ಹೀಗಾದರೆ ಮಕ್ಕಳಿಗೆ ಕೆಡುಕುಗಳು ಆಗುತ್ತವೆ ಎನ್ನುವುದನ್ನು ಈ ಬುಡಕಟ್ಟ ಜನಾಂಗದ ನಂಬಿಕೆ. ಹೀಗಾಗಿ ಮಕ್ಕಳಿಗೆ ಸಂಭವಿಸಬಹುದಾದ ಅಪಾಯವನು ಹೋಗಲಾಡಿಸಲು ನಾಯಿಯೊಂದಿಗೆ ಮದುವೆ ಮಾಡುತ್ತಾರೆ. ಸಮುದಾಯದ ಹಬ್ಬದ ಜೊತೆಗೆ ಆಚರಣೆಗಳು ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ರವರೆಗೆ ಮುಂದುವರೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮದುವೆ ಶಾಸ್ತ್ರೋಕ್ತವಾಗಿ ನಡೆದ ನಂತರ ಸಂಭವಿಸಬಹುದಾದ ದುರಂತ ನಾಯಿಗಳಿಗೆ ವರ್ಗಾವಣೆಯಾಗುತ್ತದೆ ಎಂದು ಇಲ್ಲಿನ ಜನರು ನಂಬುತ್ತಾರೆ. ಹೀಗಾಗಿ ಜನರಿಂದ ದುಷ್ಟಶಕ್ತಿ ದೂರವಾಯಿತು ಎಂದು ಖುಷಿಪಡುತ್ತಾರೆ. ಈ ಮದುವೆ ಆಚರಣೆ ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ. ಬದಲಿಗೆ ವರ್ಷಗಳಿಂದಲೂ ಹಿರಿಯರು ಆಚರಿಸಿಕೊಂಡು ಬಂದಿರುವ ಕಾರಣ (Reason) ಮೂಢನಂಬಿಕೆಯಾಗಿ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಇಲ್ಲಿ ಮದ್ವೆಯಾದ ನಂತ್ರ, ಹುಡುಗನ್ನು ಹೆಂಡ್ತಿ ಮನೆಗೆ ಕಳುಹಿಸ್ತಾರೆ!
ಕುಟುಂಬದ ಎಲ್ಲಾ ಸಹೋದರರು ಒಬ್ಬಳನ್ನೇ ಮದ್ವೆಯಾಗ್ತಾರೆ!
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ (Family) ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ (Marriage)ಯಾಗುತ್ತಾರೆ. ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.
ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿ (Girl)ಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ (Cave)ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಸಹೋದರರಲ್ಲಿ (Brothers) ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಆದರೆ ಈ ಮದುವೆಯ ನಂತ ಆಕೆ ಯಾರೊಂದಿಗೆ ಸಂಸಾರವನ್ನು ಮಾಡುತ್ತಾಳೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ.