ತಂದೆಯಿಂದ ಮದುವೆಯ ವೆಚ್ಚ ಪಡೆಯುವುದು ಮಗಳ ಹಕ್ಕು; ಕೇರಳ ಹೈಕೋರ್ಟ್

By Vinutha Perla  |  First Published Apr 19, 2023, 2:49 PM IST

ಭಾರತದಲ್ಲಿ ಮದುವೆಯೆಂದರೆ ಧಾಂ ಧೂಂ ಎಂದು ಅದ್ಧೂರಿಯಾಗಿ ಮದುವೆ ನಡೆಯುತ್ತೆ. ಹಿಂದೆಯೆಲ್ಲಾ ಪೋಷಕರೇ ಖರ್ಚು ಮಾಡಿ ಮಕ್ಕಳ ಮದುವೆ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದಲ್ಲಿರುವ ಯುವಕ-ಯುವತಿಯರು ತಮ್ಮ ಮದುವೆಯ ಖರ್ಚನ್ನು ತಾವೇ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕುರಿತು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಭಾರತದಲ್ಲಿ ಜೀವನ ನಡೆಸುವಾಗ ಅತೀ ಹೆಚ್ಚು ಖರ್ಚಾಗುವುದು ಯಾವಾಗ ಎಂದು ಕೇಳಿದರೆ ಹೆಚ್ಚು ಯೋಚಿಸದೆ ಮದುವೆ ಎಂದು ಉತ್ತರಿಸಬಹುದು. ಮದುವೆ ಸಮಾರಂಭ ನಡೆಸಲು ಪ್ರತಿಯೊಬ್ಬರೂ ತಮ್ಮಿಂದಾಗುವಷ್ಟು ಅಧಿಕ ಮೊತ್ತವನ್ನು ವ್ಯಯಿಸುತ್ತಾರೆ. ಸಾಮಾನ್ಯವಾಗಿ ಅಪ್ಪ-ಅಮ್ಮ ಮಕ್ಕಳಿಗೆ ಮದುವೆ ಮಾಡಿ ಕೊಡುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದಲ್ಲಿರುವ ಯುವಕ-ಯುವತಿಯರು ತಮ್ಮ ಮದುವೆಯ ಖರ್ಚನ್ನು ತಾವೇ ಹಾಕಿಕೊಂಡು ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಾರೆ. ಆದ್ರೆ ಈ ರೀತಿಯ ಮದುವೆ ಖರ್ಚಿನ ಕುರಿತು ಕೇರಳ ಹೈಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 

ಮದುವೆಯ (Marriage) ವೆಚ್ಚವನ್ನು ತಂದೆಯಿಂದ ಪಡೆಯುವ ಹಕ್ಕು ಪ್ರತಿಯೊಬ್ಬ ಅವಿವಾಹಿತ ಮಗಳಿಗೂ (Unmarried daughter) ಇದೆ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮದುವೆಯಾಗದ ಪ್ರತಿಯೊಬ್ಬ ಮಗಳಿಗೂ ತನ್ನ ತಂದೆ (Father)ಯಿಂದ ಸಮಂಜಸವಾದ ಮದುವೆಯ ವೆಚ್ಚವನ್ನು ಧರ್ಮವನ್ನು (Religion) ಲೆಕ್ಕಿಸದೆ ಪಡೆಯುವ ಹಕ್ಕಿದೆ ಎಂದು ಕೇರಳ ಹೈಕೋರ್ಟ್ ತೀರ್ಪು (Verdict0 ನೀಡಿದೆ.

Latest Videos

undefined

ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ

ಅವಿವಾಹಿತ ಮಗಳಿಗೆ ತಂದೆಯಿಂದ ಮದುವೆ ವೆಚ್ಚವನ್ನು ನಿರಾಕರಿಸುವಂತಿಲ್ಲ
ಇತ್ತೀಚೆಗೆ ಕ್ರಿಶ್ಚಿಯನ್ ಮಗಳಿಗೆ ತನ್ನ ತಂದೆಯ ಸ್ಥಿರ ಆಸ್ತಿಯಿಂದ ಅಥವಾ ಅದರಿಂದ ಬರುವ ಲಾಭದಿಂದ ಮದುವೆಯ ವೆಚ್ಚವನ್ನು ಪಡೆಯಲು ಅರ್ಹತೆ ಇದೆಯೇ ಎಂಬ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಉತ್ತರಿಸಿರುವ ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಮತ್ತು ನ್ಯಾಯಮೂರ್ತಿ ಪಿ.ಜಿ. ಅಜಿತ್‌ಕುಮಾರ್, ಕೇವಲ ಧಾರ್ಮಿಕ ಆಧಾರದ ಮೇಲೆ ಅವಿವಾಹಿತ ಮಗಳಿಗೆ ತಂದೆಯಿಂದ ಮದುವೆ ವೆಚ್ಚವನ್ನು ನಿರಾಕರಿಸುವಂತಿಲ್ಲ ಎಂದು ಹೇಳಿದರು.

ಆದರೆ, ಕೇವಲ ಮದುವೆ ವೆಚ್ಚವನ್ನು ಹೊಂದಿರುವುದರಿಂದ ತಂದೆಯ ಆಸ್ತಿ ಮಾರಾಟ ಮತ್ತು ಖರೀದಿಯನ್ನು ನಿರ್ಬಂಧಿಸುವ ಹಕ್ಕನ್ನು ಹೆಣ್ಣು ಮಕ್ಕಳಿಗೆ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇದಕ್ಕಾಗಿ ಅವರು ಆಸ್ತಿಯ ಮೇಲೆ ಹಕ್ಕು ಮಂಡಿಸಬೇಕು ಎಂಬುದಾಗಿಯೂ ತಿಳಿಸಿದೆ. ಮದುವೆಯಾಗದ ಸಹೋದರಿಯರಿಬ್ಬರಿಗೂ ಮದುವೆಯ ವೆಚ್ಚವನ್ನು ಭರಿಸುವ ಹಕ್ಕಿದೆ. ಆದರೆ ತಮ್ಮ ತಂದೆ ಆಸ್ತಿ ಖರೀದಿ ಮತ್ತು ಮಾರಾಟ ಮಾಡುವುದನ್ನು ತಡೆಯುವ ಹಕ್ಕು ಅವರಿಗಿಲ್ಲ ಎಂದು ಕೋರ್ಟ್ ತಿಳಿಸಿದೆ. ತಂದೆ ಆಸ್ತಿಯನ್ನು ಖರೀದಿಸುವುದನ್ನು ಮತ್ತು ಮಾರಾಟ ಮಾಡುವುದನ್ನು ತಡೆಯಲು ಅವಳು ಆಸ್ತಿಯ ಮೇಲಿನ ತನ್ನ ಹಕ್ಕನ್ನು ಪ್ರಸ್ತುತಪಡಿಸಬೇಕು ಎಂದು ಸೂಚಿಸಲಾಗಿದೆ.

ವಿಚ್ಚೇದನದ ಮೇಲ್ಮನವಿ ಅವಧಿಗೂ ಕಾಯದೆ 2ನೇ ಮದುವೆಯಾದ ಮಹಿಳೆಗೆ ಸಂಕಷ್ಟ: ಹೈಕೋರ್ಟ್‌ ಹೇಳಿದ್ದೇನು..?

ಪ್ರತಿವಾದಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅರ್ಜಿದಾರರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ. ನ್ಯಾಯಾಲಯದ ಪ್ರಕಾರ, ಹಣವನ್ನು ವಸೂಲಿ ಮಾಡುವುದು ಅವರ ಉದ್ದೇಶವಲ್ಲ, ಬದಲಿಗೆ ತಂದೆಗೆ ಮುಜುಗರ ತರುವುದಾಗಿದೆ ಎಂದು ಹೇಳಲಾಗಿದೆ. ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣೆ ಕಾಯಿದೆ, 1956 ರ ನಿಬಂಧನೆಗಳನ್ನು ಮತ್ತು ಇಸ್ಮಾಯಿಲ್ ವಿರುದ್ಧ ಫಾತಿಮಾ ಮತ್ತು ಆನ್‌ಆರ್‌ನಲ್ಲಿ ಬಹಿರಂಗಪಡಿಸಿದ ಅಂಶದ ಬಗ್ಗೆ ಮುಸ್ಲಿಂ ನಿಲುವನ್ನು ಪರಿಶೀಲಿಸಿದರು. (2011), ಮತ್ತು ನ್ಯಾಯಾಲಯವು ಆಸ್ತಿ ವರ್ಗಾವಣೆ ಕಾಯಿದೆ, 1882 ರ ಸೆಕ್ಷನ್ 39 ಅನ್ನು ಸಹ ಗಮನಿಸಿತು ಮತ್ತು ಮದುವೆಯ ವೆಚ್ಚವನ್ನು ಪಡೆಯಲು ಅವಿವಾಹಿತ ಮಗಳ ಹಕ್ಕನ್ನು ವಿವೇಚಿಸಿತು.

ಹಿಂದೂ ಗೆಳೆಯನೊಂದಿಗೆ ಓಡಿದ ಮುಸ್ಲಿಂ ಯುವತಿ: ಮದ್ವೆ ರಿಜಿಸ್ಟ್ರೇಷನ್ ಕಚೇರಿಯಲ್ಲಿ ಸಂಬಂಧಿಕರ ಗಲಾಟೆ

click me!