
ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ರಸ್ತೆ ಅಪಘಾತದಲ್ಲಿ ಪತಿಯನ್ನು ಕೊಲ್ಲಲು ಸಂಚು ಹೂಡಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಆತನೇ ಪತ್ನಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ.
ಮಹಬೂಬಾಬಾದ್ ಜಿಲ್ಲೆಯ ಚಿಲಕೋಡು ಗ್ರಾಮದ ಗಾಡೆ ರಾಜೇಶ್ವರ ರಾವ್ ಎಂಬುವವರು ತಮ್ಮ ಪತ್ನಿ ಭವಾನಿಯ ಮೊಬೈಲ್ ಪರೀಕ್ಷಿಸಿದಾಗ ಈ ಭೀಕರ ಸಂಚು ಬಯಲಾಗಿದೆ. ಪತ್ನಿ ಕೋರಿಯರ್ ಡೆಲಿವರ್ ಏಜೆಂಟ್ ಆಗಿರುವ ತನ್ನ ಪ್ರಿಯಕರ ಸೈದುಲು ಎಂಬಾತನಿಗೆ ‘ನನ್ನ ಗಂಡನನ್ನು ಕೊಲ್ಲು. ಇಲ್ಲದಿದ್ದರೆ ನಾನೇ ಕೊಲ್ಲುತ್ತೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಕೊಲೆ ನಂತರ ಇಬ್ಬರೂ ಇದನ್ನು ಅಪಘಾತ ಎಂದು ಬಿಂಬಿಸಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕಳೆದ ವರ್ಷ ಗರ್ಭಿಣಿಯಾಗಿದ್ದಾಗಲೇ ಅಕ್ರಮ ಸಂಬಂಧ ಇಟ್ಕೊಂಡು ಸಿಕ್ಕಿಬಿದ್ದ ಗಂಡ: ಒಂದೇ ವರ್ಷದಲ್ಲಿ ಸಾಧಿಸಿದ ನಟಿ
ಸಂಚು ತಿಳಿಯುತ್ತಿದ್ದಂತೆಯೇ ರಾಜೇಶ್ವರ ರಾವ್ ಪೊಲೀಸರನ್ನು ಸಂಪರ್ಕಿಸಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಕೊ*ಲೆ ಯತ್ನ ಹಾಗೂ ಸಂಚಿನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಪತ್ನಿಯ ಓದಿಗಾಗಿ ಕೂಲಿಯನ್ನೂ ಮಾಡಿದ, ಜಮೀನೂ ಮಾರಿದ: ಕೆಲಸ ಸಿಕ್ಕ ಮೇಲೆ ಸತಿ ಶಿರೋಮಣಿ ಮಾಡಿದ್ದೇನು?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.