ಎರಡು ಮದುವೆ, 40 ಲಕ್ಷ ಖಾತೆಯಲ್ಲಿದ್ರೂ ವೃದ್ದಾಶ್ರಮದಲ್ಲಿದ್ದಾಳೆ ಮಹಿಳೆ

Published : Aug 08, 2026, 11:57 AM IST
Old age home

ಸಾರಾಂಶ

ವೃದ್ಧಾಪ್ಯದಲ್ಲಿ ಪ್ರತಿಯೊಬ್ಬರಿಗೂ ಹಣಕ್ಕಿಂತ ಹೆಚ್ಚಾಗಿ ಬೇಕಾಗಿರುವುದು ಮನೆಯವರ ಪ್ರೀತಿ ಮತ್ತು ಅಮ್ಮ, ನೀವು ಚಿಂತೆ ಮಾಡಬೇಡಿ, ನಾವಿದ್ದೇವೆ ಎನ್ನುವ ಮಕ್ಕಳ ಸಾಂತ್ವಾನ. ಆದ್ರೆ ಸೋನಿಪತ್ನ ವೃದ್ಧಾಶ್ರಮವೊಂದರಲ್ಲಿ ಜೀವನ ಕಳೆಯುತ್ತಿರುವ ಈ ವೃದ್ಧೆ ಕಥೆ ಮಾತ್ರ ಭಿನ್ನವಾಗಿದೆ. ಎಲ್ಲರೂ ಇದ್ದು, ಎಲ್ಲವೂ ಇದ್ದು ಆಕೆ ಒಂಟಿ.

ವೃದ್ಧಾಪ್ಯದಲ್ಲಿ ಸುಖ – ಶಾಂತ ಜೀವನ ನಡೆಸಲು ಜನರು ಬಯಸ್ತಾರೆ. ಖಾತೆಯಲ್ಲಿ ಹಣವಿದ್ರೆ ವೃದ್ಧಾಪ್ಯ ಸುಖಕರವಾಗಿ ಸಾಗುತ್ತೆ. ಆಸರೆ ನೀಡಲು ಯಾರಾದ್ರೂ ಸಿಕ್ತಾರೆ ಅಂತ ಒಂದು ನಂಬಿಕೆ ನಮ್ಮಲ್ಲಿದೆ. ಆದ್ರೆ ಇದು ಎಲ್ಲರ ಬಾಳಲ್ಲಿ ಸತ್ಯವಾಗೋದಿಲ್ಲ. ವೃದ್ಧೆಯೊಬ್ಬರ ಬಳಿ ಹಣವಿದೆ, ಮಗನಿದ್ದಾನೆ. ಆದ್ರೂ ಆಕೆ ವೃದ್ಧಾಶ್ರಮದಲ್ಲಿ ಜೀವನ ನಡೆಸ್ತಿದ್ದಾಳೆ.

ಎಲ್ಲ ಇದ್ದೂ ಏನೂ ಇಲ್ಲದ ಜೀವನ

ಸೋನಿಪತ್ನ ವೃದ್ಧಾಶ್ರಮದಲ್ಲಿರುವ ಮಹಿಳೆಯೊಬ್ಬರಿಗೆ ಎರಡು ಮದುವೆ ಆಗಿತ್ತು. ಇಬ್ಬರೂ ಪತಿಯರನ್ನು ಈಕೆ ಕಳೆದುಕೊಂಡಿದ್ದಾರೆ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ, 40 ಲಕ್ಷ ರೂಪಾಯಿಗಳಷ್ಟು ಹಣವನ್ನು ಕೂಡ ಉಳಿಸಿಕೊಂಡಿದ್ದಾರೆ. ಆದರೂ ಇಂದು ಸ್ವಂತ ಮನೆಯಲ್ಲಿರದೆ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾರೆ.

ಮಹಿಳೆಗೆ ಮೊದಲೊಂದು ಮದುವೆ ಆಗಿತ್ತು. ಪತಿ ಮರಣದ ನಂತ್ರ ಇನ್ನೊಂದು ಮದುವೆ ಆಗಿದ್ದರು. ಆದ್ರೆ ಎರಡನೇ ಪತಿ ನಿಧನದ ನಂತ್ರ ಆಕೆಗೆ ಯಾರೂ ಇರಲಿಲ್ಲ. ಮಗ ಆಕೆಯನ್ನು ಇಟ್ಟುಕೊಳ್ಳಲು ಇಷ್ಟಪಡಲಿಲ್ಲ. ಹಾಗಾಗಿ ಮಹಿಳೆ ಈಗ ವೃದ್ಧಾಶ್ರಮದಲ್ಲಿ ಜೀವನ ನಡೆಸುತ್ತಿದ್ದಾಳೆ.

ತಾಯಿ ಕರುಳು

ಮಗನಿಂದ ದೂರವಾಗಿ ವೃದ್ಧಾಶ್ರಮದಲ್ಲಿ ಒಂಟಿ ಜೀವನ ನಡೆಸುತ್ತಿದ್ದರೂ ಮಹಿಳೆಗೆ ಮಗನ ಮೇಲಿನ ಪ್ರೀತಿ ಕಡಿಮೆ ಆಗಲಿಲ್ಲ. ಮಗನ ಮೇಲೆ ಬೇಸರವಿದ್ರೂ ಮಗನಿಗೆ ಕೆಟ್ಟದನ್ನು ಬಯಸುತ್ತಿಲ್ಲ ಮಹಿಳೆ. ತನ್ನ ನಿಧನದ ನಂತ್ರ 40 ಲಕ್ಷ ಹಣವನ್ನು ಮಗನಿಗೆ ನೀಡಿ ಎಂದು ಮಹಿಳೆ ಹೇಳಿದ್ದಾಳೆ. ಹಣ, ಆಸ್ತಿ, ಮನೆ ಎಲ್ಲವೂ ಇದ್ದರೂ, ವೃದ್ಧಾಪ್ಯದಲ್ಲಿ ಒಂಟಿತನ ಕಾಡಿದರೆ ಆ ನೋವು ತುಂಬಾ ದೊಡ್ಡದು. ಜೀವನದ ಈ ಹಂತದಲ್ಲಿ ವೃದ್ಧರಿಗೆ ದೊಡ್ಡದಾದ ಮನೆಗಿಂತ, ತಮ್ಮವರ ಜೊತೆ ಕುಳಿತು ಮಾತನಾಡುವ ಅವಕಾಶ ಸಿಗ್ಬೇಕು. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿರುವ ಸದಸ್ಯರ ಸಂಖ್ಯೆ ಕಡಿಮೆ ಆಗ್ತಿದೆ, ವೃದ್ಧಾಶ್ರಮದ ದೊಡ್ಡದಾಗ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Saif Ali Khan: ಅಣ್ಣನ ಸೀಕ್ರೆಟ್ ಮದುವೆಗೆ ತಂಗಿಯರಿಗೇ ಇರಲಿಲ್ವಾ ಎಂಟ್ರಿ? ಶಾಕ್ ಆಗಿತ್ತು ಇಡೀ ಫ್ಯಾಮಿಲಿ!
ಚಂದ್ರ ಗ್ರಹಣದ ದಿನವೇ ರಕ್ಷಾ ಬಂಧನ: ಹಾಗಿದ್ದರೆ ರಾಖಿ ಹಬ್ಬದ ನಿಜವಾದ ಮುಹೂರ್ತ ಯಾವುದು? ಇಲ್ಲಿದೆ ಡಿಟೇಲ್ಸ್​