ಮದ್ವೆಯಾಗಿ ವರ್ಷವಾದ್ರೂ ಫಸ್ಟ್‌ನೈಟ್‌ಗೆ ಒಪ್ಪದ ಪತಿರಾಯ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ 

Published : Jul 01, 2024, 11:47 AM IST
ಮದ್ವೆಯಾಗಿ ವರ್ಷವಾದ್ರೂ ಫಸ್ಟ್‌ನೈಟ್‌ಗೆ ಒಪ್ಪದ ಪತಿರಾಯ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ 

ಸಾರಾಂಶ

ವರ್ಷದ ಹಿಂದೆ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ವರ್ಷವಾದ್ರೂ ಪತಿ ನನ್ನ ಜೊತೆ ದೈಹಿಕ ಸಂಪರ್ಕ ಹೊಂದುತ್ತಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.

ಗೊರಖ್‌ಪುರ: ಉತ್ತರಪ್ರದೇಶದ ಗೊರಖ್‌ಪುರ ಜಿಲ್ಲೆಯ ಕೈಂಪಿರಗಂಜ್ ಕ್ಷೇತ್ರದ ಯುವತಿಯ ಮದುವೆ ವರ್ಷದ ಹಿಂದೆ ಖಾಸಗಿ ಶಾಲೆಯ ಶಿಕ್ಷಕನ ಜೊತೆ ಅದ್ಧೂರಿಯಾಗಿ ನಡೆದಿತ್ತು.  ಯುವಕ ಗುಲರಿಹಾ ಕ್ಷೇತ್ರದ ಖಾಸಗಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದ್ರೆ ಮದುವೆಯಾಗಿ ವರ್ಷವಾದ್ರೂ ಪತ್ನಿ ಜೊತೆ ಸಂಬಂಧ ಬೆಳೆಸಲು ಶಿಕ್ಷಕ ನಿರಾಕರಿಸುತ್ತಿದ್ದನು. ಪತ್ನಿಯೇ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ರೆ ಆಕೆಯನ್ನು ನಿಂದಿಸಿ ದೂರ ಆಗುತ್ತಿದ್ದನು. ಪತಿಯ ಈ ವರ್ತನೆಯಿಂದ ಬೇಸತ್ತ ಮಹಿಳೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಯಾವಾಗಲೂ ಏನಾದ್ರೂ ಕಾರಣಗಳನ್ನು ನೀಡಿ ಫಸ್ಟ್‌ನೈಟ್‌ಗೆ ಪತಿ ನಿರಾಕರಿಸುತ್ತಾನೆ ಎಂದು ಮಹಿಳೆ ಆರೋಪಿಸಿದ್ದಾರೆ. 

ಕೆಲ ದಿನಗಳ ಹಿಂದೆ ಪತ್ನಿ ದೈಹಿಕ ಸಂಪರ್ಕ ಹೊಂದಲು ಗಂಡನಿಗೆ ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಗಂಡ ರಾತ್ರಿ ಸುಮಾರು 11 ಗಂಟೆಗೆ ಪತ್ನಿಯನ್ನು ತವರುಮನೆಗೆ ಕಳುಹಿಸಿದ್ದಾನೆ. ತವರು ಮನೆ ತಲುಪಿದ ಬಳಿಕ ಕುಟುಂಬಸ್ಥರ ಸಲಹೆಯ ಮೇರೆಗೆ ಗುಲರಿಹಾ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಮುಖಾಮುಖಿಯಾಗಿ ಕೂರಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪತಿ ತಲೆ ಎತ್ತಿ ಸಹ ಮಾತನಾಡಿಲ್ಲ. 

ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್‌ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು

ತಾನು ಸಲಿಂಗಿ ಅಂತ ಹೇಳಿಕೊಂಡ ಯುವಕ

ವಿಚಾರಣೆ ವೇಳೆ ಪತಿಗೆ ಏನಾದ್ರೂ ಚಿಕಿತ್ಸೆ ಅಗತ್ಯವಿದ್ರೆ ಕೊಡಿಸೋಣ ಎಂದು ಮಾತನಾಡಿದಾಗ, ಆಗ ನಾನು ಸಲಿಂಗಿ ಎಂದು ಹೇಳಿಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಗಂಡ, ಪತ್ನಿಯ ಚಾರಿತ್ರ್ಯದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾನೆ. ಪತಿಯ ಆರೋಪಗಳನ್ನು ತಳ್ಳಿ ಹಾಕಿರುವ ಮಹಿಳೆ, ನಾನು ಅವರೊಂದಿಗೆ ದಾಂಪತ್ಯ ಸುಖ ಕಾಣಲು ಇಷ್ಟಪಡುತ್ತೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. 

ಇತ್ತ ಮಹಿಳೆ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು, ಪತ್ನಿಗೆ ಏಡ್ಸ್ ಇರಬಹುದು ಎಂದು ಆತನಿಗೆ ಹೆದರಿಸಲಾಗಿದೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ವೈದ್ಯಕೀಯ ತಪಾಸಣೆಗೂ ಪತಿ ನಿರಾಕರಿಸಿದ್ದಾನೆ. ಒಟ್ಟಿನಲ್ಲಿ ಪೊಲೀಸರಿಗೆ ಈ ಪ್ರಕರಣ ತಲೆನೋವು ಆಗಿ ಪರಿಣಮಿಸಿದೆ. ಇತ್ತ ಪೊಲೀಸರು ಇಬ್ಬರ ಪೋಷಕರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೇಡ್ವೇ ಬೇಡ ಒನ್ ಸೈಡ್ ಲವ್ ಸಹವಾಸ, ಮೆಂಟಲ್ ಮಾಡಿ ಬಿಡುತ್ತೆ ಈ ತರದ ಪ್ರೀತಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?