ಸೋದರನ ಬೆಡ್‌ ಮೇಲೆ ಅತ್ತಿಗೆ ಜೊತೆಯೇ ಸಂಬಂಧ ಬೆಳಸಿದ ನಾದಿನಿ

By Mahmad Rafik  |  First Published Jun 30, 2024, 12:57 PM IST

ತನ್ನ ಜೊತೆ ರಿಲೇಶನ್‌ಶಿಪ್ ನಲ್ಲಿದ್ದ ಯುವತಿಯನ್ನೇ ಸೋದರನೊಂದಿಗೆ ಮದುವೆ ಮಾಡಿಸಿದ್ದಳು. ಸೋದರನ ಹೆಂಡತಿಯಾಗಿ  ಬಂದ ಗೆಳತಿ ಜೊತೆಯಲ್ಲಿ ಕಾಜಲ್ ದೈಹಿಕ ಸಂಬಂಧ ಬೆಳೆಸುತ್ತಿದ್ದಳು.


ಚಂಡೀಗಢ: ಸಾಮಾನ್ಯವಾಗಿ ಅತ್ತಿಗೆ ಮತ್ತು ನಾದಿನಿ ನಡುವೆ ಹೊಂದಾಣಿಕೆ ಸರಿ ಆಗಲ್ಲ ಎಂಬ ಮಾತಿದೆ. ಆದರೆ ಹರಿಯಾಣದ ಯಮುನಾನಗರದಲ್ಲಿ ಅತ್ತಿಗೆ ಮತ್ತು ನಾದಿನಿ ನಡುವೆ ಕೊಂಚ ಹೆಚ್ಚಾಗಿಯೇ ಹೊಂದಾಣಿಕೆ ಆಗಿದೆ. ಸೋದರನ ಬೆಡ್‌ ಮೇಲೆಯೇ ಅತ್ತಿಗೆ ಜೊತೆ ನಾದಿನಿ ದೈಹಿಕ ಸಂಬಂಧ ಹೊಂದಿದ್ದಾಳೆ.  ಆರಂಭದಲ್ಲಿ ಈ ವಿಷಯ ಸಿಕ್ಕಾಪಟ್ಟೆ ಗುಟ್ಟಾಗಿತ್ತು. ಒಮ್ಮೆ ಸೋದರ ಮತ್ತು ತಾಯಿಗೆ ಈ ವಿಷಯ ಗೊತ್ತಾದಾಗ ಮನೆಯಲ್ಲಿ ಕೋಲಹಾಲವೇ ಸೃಷ್ಟಿಯಾಗಿತ್ತು.

ಯಮುನಾನಗರದ ಆಜಾದ್ ನಗರದ ಮನೆಯೊಂದರಲ್ಲಿ ತಾಯಿ ಮತ್ತು ಮಗನ ಕೊಲೆಯಾಗಿತ್ತು. ಕೊಲೆಯಾದ ಸಂದರ್ಭದಲ್ಲಿ ತಾನು ಮನೆಯಲ್ಲಿರಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಳು. ಪೊಲೀಸರು ತನಿಖೆ ನಡೆಸಿದಾಗ ಮಗಳೇ ಕೊಲೆ ಹಂತಕಿ ಎಂಬ ವಿಷಯ ಗೊತ್ತಾಗಿದೆ. ತನ್ನ ಮಾವನ ಮಕ್ಕಳಾದ ಕೃಷ್ಣ ಮತ್ತು ಇಶಾಂತ್ ಸಹಾಯ ಪಡೆದು ಅಣ್ಣ ಹಾಗೂ ತಾಯಿಯ ಕೊಲೆ ಮಾಡಿಸಿದ್ದಳು. ಸೋದರ ಸಾವನ್ನಪ್ಪಿದ ಬಳಿಕ ಬರೋ ಆಸ್ತಿಯಲ್ಲಿ ಆರ್ಧ ಪಾಲು ನೀಡೋದಾಗಿ ಮಾವನ ಮಕ್ಕಳಿಗೆ ಆಸೆ ತೋರಿಸಿದ್ದಳು. ಆಸ್ತಿಯ ಆಸೆಗೆ ಬಿದ್ದು ಮಾವನ ಮಕ್ಕಳು ಕೊಲೆಯಲ್ಲಿ ಭಾಗಿಯಾಗಿದ್ದರು. 

Tap to resize

Latest Videos

undefined

ಏನಿದು ಕೊಲೆ ಪ್ರಕರಣ?

ಅಜಾದ್‌ ನಗರದ ನಿವಾಸದಲ್ಲಿ ಮೀನಾ (45), ಮಗ ರಾಹುಲ್ (23) ಮತ್ತು ಮಗಳು ಕಾಜಲ್(27) ವಾಸವಾಗಿದ್ದರು.  ಕಾಜಲ್ ಸಲಿಂಗಿಯಾಗಿದ್ದ ಕಾರಣ ಮಹಿಳೆಯರ ಜೊತೆಯಲ್ಲಿ ಸಂಬಂಧ ಹೊಂದಲು ಇಷ್ಟಪಡುತ್ತಿದ್ದಳು. ಗೆಳತಿಯೊಬ್ಬಳ ಜೊತೆ ಕಾಜಲ್ ರಿಲೇಶನ್‌ಶಿಪ್‌ನಲ್ಲಿದ್ದಳು. ತನ್ನ ಸಂಬಂಧ ಹೊಂದಿದ್ದ ಗೆಳತಿಯನ್ನೇ ತಮ್ಮನೊಂದಿಗೆ ಮದುವೆ ಮಾಡಿಸಿದ್ದಳು. ಇದರಿಂದ ಗೆಳತಿ ಜೊತೆ ಮನೆಯಲ್ಲಿಯೇ ಸಂಬಂಧ ಹೊಂದಬಹುದು ಎಂಬುವುದು ಕಾಜಲ್ ಉದ್ದೇಶವಾಗಿತ್ತು. ಮದುವೆ ಬಳಿಕ ತಮ್ಮನ ಹೆಂಡತಿ ಜೊತೆ ಸಂಬಂಧದಲ್ಲಿದ್ದಳು. ಆದ್ರೆ ಈ ವಿಷಯ ತಮ್ಮ ಹಾಗೂ ತಾಯಿಗೆ ಗೊತ್ತಾಗಿದೆ. ನಂತರ ರಾಹುಲ್ ಪತ್ನಿ ತವರು ಸೇರಿದ್ದಳು. 

ಜೈಲಿನಲ್ಲಿ ಕೈದಿಗಳ ಜೊತೆ ಮಹಿಳಾ ಪೊಲೀಸ್ ಅಧಿಕಾರಿಯ ಸೆಕ್ಸ್ ವಿಡಿಯೋ ವೈರಲ್

ಹುಡುಗರಂತೆ ಇರುತ್ತಿದ್ದಳು ಕಾಜಲ್ 

ಇನ್ನು ಕಾಜಲ್ ಹುಡುಗರಂತೆತೇ ಜೀವನ ನಡೆಸುತ್ತಿದ್ದಳು. ಮನೆಯವರು ಮದುವೆ ಬಗ್ಗೆ ಮಾತನಾಡಿದ್ರೆ ಕಾಜಲ್ ಕೋಪ ಮಾಡಿಕೊಳ್ಳುತ್ತಿದ್ದಳು. ಹಾಗಾಗಿ ಮನೆಯವರ ಜೊತೆಯಲ್ಲಿಯೂ ಕಾಜಲ್ ಸಂಬಂಧ ಚೆನ್ನಾಗಿರಲಿಲ್ಲ. ನನಗೆ ಮನೆಯ ಆಸ್ತಿಯಲ್ಲಿ ಯಾವುದೇ ಪಾಲು ಸಿಗಲ್ಲ ಅಂದುಕೊಂಡ ಕಾಜಲ್, ಅಮ್ಮ ಹಾಗೂ ತಮ್ಮನ ಕೊಲೆಗೆ ಸಂಚು ರೂಪಿಸಿದ್ದಳು. ಆಸ್ತಿಯ ಬಗ್ಗೆ ಮಾವನ ಮಕ್ಕಳಾದ ಕೃಷ್ಣಾ ಮತ್ತು ಇಶಾಂತ್ ಮುಂದೆ ಹೇಳಿಕೊಂಡಿದ್ದಳು. 

ಸಿಸಿಟಿವಿ ಕ್ಯಾಮೆರಾ ಬಂದ್ ಮಾಡಿ ಕೊಲೆ 

ಮಾವನ ಮಕ್ಕಳ ಜೊತೆ ಕೊಲೆ ಪ್ಲಾನ್ ಮಾಡಿದ್ದ ಕಾಜಲ್ ಮೊದಲು ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಾಳೆ. ನಂತರ ಮಾವನ ಮಕ್ಕಳನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮೊದಲು ಅಮ್ಮನ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾಳೆ. ನಂತರ ರಾಹುಲ್ ಮನೆಗೆ ಬರುತ್ತಿದ್ದಂತೆ ಆತನ ಉಸಿರನ್ನು ಸಹ ನಿಲ್ಲಿಸಿದ್ದಾಳೆ. ಕೊನೆಗೆ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿದ್ದಾಳೆ. ಆರಂಭದಲ್ಲಿ ಪೊಲೀಸರ ಮುಂದೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ವರ್ತಿಸಿದ್ದ ಕಾಜಲ್, ಹೆಣಗಳ ಮುಂದೆ ಕುಳಿತು ಕಣ್ಣೀರು ಹಾಕಿದ್ದಳು. ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಎಲ್ಲಾ ಸತ್ಯವನ್ನು ಬಾಯಿಬಿಟ್ಟಿದ್ದಳು.

ಹಾಯ್ ಅಂದು ಡೇಟಿಂಗ್ ಕರೀತಾಳೆ, ತಿಂದು ಉಂಡು ಹೋದ್ಮೇಲೆ ಶುರುವಾಗುತ್ತೆ ಯುವಕನಿಗೆ ಸಂಕಷ್ಟ!

click me!