ಸ್ನಾನದ ವಿಷ್ಯ, ಬ್ಯಾಡವೋ ಶಿಷ್ಯ: ಮದ್ವೆಯಾದ 40 ದಿನಕ್ಕೆ ಡಿವೋರ್ಸ್ ಕೇಳಿದ ಪತ್ನಿ!

By Chethan Kumar  |  First Published Sep 16, 2024, 4:51 PM IST

ಇದು ಸ್ನಾನದ ವಿಷ್ಯ. ಮದುವೆಯಾಗಿ 40 ದಿನಗಳಾಗಿದೆ ನೋಡಿ, ಪತ್ನಿಗೆ ಸಾಕಪ್ಪ ಸಾಕಂತಾಗಿದೆ. ಇನ್ಮೇಲೆ ಈ ಗಂಡನ ಜೊತೆ ಬಾಳಲು ಸಾಧ್ಯವಿಲ್ಲ ಅಂತಾ ಗಟ್ಟಿ ನಿರ್ಧಾರ ಮಾಡಿ ಡಿವೋರ್ಸ್ ಕೇಳಿದ್ದಾಳೆ. ಈ ನವ ಜೋಡಿಗಳ ಸಂಸಾರಕ್ಕೆ ಸ್ನಾನ ಈ ಪಾಟಿ ತಲೆನೋವಾಗಿದ್ದು ಹೇಗೆ?
 


ಆಗ್ರಾ(ಸೆ.16) ಮದುವೆ, ಸಂಸಾರದಲ್ಲಿ ಇದೀಗ ಸಂಭ್ರಮಕ್ಕಿಂತ ಆತಂಕ ಸೃಷ್ಟಿಸುವ ಘಟನೆಗಳೇ ನಡೆಯುತ್ತಿದೆ. ಇಲ್ಲೊಂದು ನವ ನೋಡಿ ಮದುವೆಯಾಗಿ ಹೆಚ್ಚು ಕಡಿಮೆ 40 ದಿನ ಆಗಿದೆ. ಅಷ್ಟರಲ್ಲೇ ವಿಚ್ಛೇದನ ಹೋರಾಟ ಆರಂಭಗೊಂಡಿದೆ. ಇವರ ಸಂಸಾರಕ್ಕೆ ಮುಳ್ಳಾಗಿರುವುದು ಸ್ನಾನ. ಈ ಸ್ನಾನದ ವಿಚಾರದಲ್ಲಿ ಪತ್ನಿ ರೋಸಿ ಹೋಗಿದ್ದಾಳೆ. ಗಂಡನ ಸಹವಾಸವೇ ಸಾಕು, ಒಮ್ಮೆ ನನ್ನನ್ನು ಈ ಸಂಸಾರದಿಂದ ಮುಕ್ತಿಗೊಳಿಸಿ ಎಂದು ಡಿವೋರ್ಸ್ ಮೊರೆ ಹೋದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಆಗ್ರಾ ನಿವಾಸಿ ರಾಜೇಶ್ ಮದುವೆ ಸರಿಸುಮಾರು ತಿಂಗಳ ಹಿಂದೆ ನಡೆದಿದೆ. ರಾಜೇಶ್ ಮನೆಗೆ ಬಂದ ಪತ್ನಿ ಒಂದೊಂದು ದಿನ ದಿನ ದೂಡವುದೇ ಕಷ್ಟವಾಗಿದೆ. ಇದಕ್ಕೆ ಕಾರಣ ಪತಿ ರಾಜೇಶ್ ತಿಂಗಳಿಗೊಮ್ಮೆ ಹೆಚ್ಚೆಂದರೆ ಎರಡು ಬಾರಿ ಸ್ನಾನ ಮಾಡುತ್ತಾನೆ. ಇಷ್ಟೇ ನೋಡಿ, ಅಮೇಲೆ ತಿಪ್ಪರಲಾಗ ಹಾಕಿದರೂ ಈತ ಸ್ನಾನ ಮಾಡಲ್ಲ. ಹೆಚ್ಚು ಒತ್ತಾಯ ಮಾಡಿದರೆ ಗಂಗಾ ಜಲವನ್ನು ಸಿಂಪಡಿಸುತ್ತಾನೆ.  ಮದುವೆಯಾದ ಬಳಿಕ ಪತ್ನಿ ಕಾಟ ತಾಳಲಾರದೆ ಕಳೆದ 40 ದಿನದಲ್ಲಿ 6 ಬಾರಿ ಮದುವೆಯಾಗಿದ್ದಾನೆ. ಇದು ಈತನ ಜೀವಮಾನಶ್ರೇಷ್ಠ ಸಾಧನೆ.

Latest Videos

undefined

ಡಿವೋರ್ಸ್ ಬಳಿಕ ಅರಿವಾಯಿತು ತಪ್ಪು:ಆದೇಶ ರದ್ದುಗೊಳಿಸಲು ಮನವಿ ಮಾಡಿದ ಜೋಡಿಗೆ ಕೋರ್ಟ್ ಶಾಕ್!

ಸ್ನಾನ ಮಾಡದ ಪತಿಯ ಹತ್ತಿರ ಹೋಗಲು ಪತ್ನಿಗೆ ಸಾಧ್ಯವಾಗುತ್ತಿಲ್ಲ. ವಾಂತಿ ಶುರುವಾಗುತ್ತಿದೆ. ಒಂದು ತಿಂಗಳು ಕಳೆದ ಪತ್ನಿಗೆ ಸಾಕೋ ಸಾಕಾಗಿದೆ. ಪತಿ ರಾಜೇಶ್‌ಗೆ ಹಲವು ಬಾರಿ ಸ್ನಾನ ಮಾಡುವಂತೆ ಪತ್ನಿ ಸೂಚಿಸಿದ್ದಾಳೆ. ಶುಚಿತ್ವ ಕಾಪಾಡಿಕೊಳ್ಳುವಂತೆ ಆಗ್ರಹಿಸಿದ್ದಾಳೆ. ಆದರೆ ಇದ್ಯಾವುದಕ್ಕೂ ರಾಜೇಶ್ ಸೊಪ್ಪುಹಾಕಿಲ್ಲ. 

40 ದಿನಗಳು ಉರುಳುತ್ತಿದ್ದಂತೆ ಪತ್ನಿ ನೇರವಾಗಿ ತವರು ಮನೆಗೆ ಆಗಮಿಸಿದ್ದಾಳೆ. ಸ್ನಾನ ಮಾಡಿದ ಪ್ರಾಣಿ ಜೊತೆ ಜೀವಿಸಲು ಸಾಧ್ಯವಿಲ್ಲ ಎಂದಿದ್ದಾಳೆ. ಇಷ್ಟೇ ಅಲ್ಲ ಡಿವೋರ್ಸ್‌ಗೆ ಮನವಿ ಮಾಡಿದ್ದಾಳೆ. ಪತಿ ಮನೆ ಬಿಟ್ಟು ಹೋಗಿರುವ ವಿಚಾರ ಅಕ್ಕಪಕ್ಕದ ನಿವಾಸಿಗಳಿಗೆ ಗೊತ್ತಾಗುತ್ತದ್ದಂತೆ ರಾಜೇಶ್‌ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ರಾಜೇಶ್ ಹಾಗೂ ಆತನ ಪೋಷಕರು ಪತ್ನಿಯ ನಿವಾಸಕ್ಕೆ ಆಗಮಿಸಿ ಪಂಚಾಯಿತಿ ಮಾಡಲು ಆರಂಭಿಸಿದ್ದಾರೆ.

ಇನ್ನು ಮೇಲಿಂದ ಪ್ರತಿ ದಿನ ಸ್ನಾನ ಮಾಡುವುದಾಗಿ ರಾಜೇಶ್ ಹೇಳಿದ್ದಾನೆ. ಆದರೆ ಈತನ ಮಾತುಗಳನ್ನು ಕೇಳಿಸಿಕೊಳ್ಳಲೂ ಇದೀಗ ಪತ್ನಿ ತಯಾರಿಲ್ಲ. ಸಂಸಾರ ಮುಂದುವರಿಸಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಬಳಿಕ ಎರಡು ಕುಟುಂಬಸ್ಥರನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ. ಬಳಿಕ ಇಬ್ಬರನ್ನು ಮುಂದಿನ ವಾರ ಕೌನ್ಸಲಿಂಗ್ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಿದ್ದಾರೆ. 

ಯಾವುದೇ ಕೌನ್ಸಲಿಂಗ್, ಏನೇ ಮಾಡಿದರೂ ಸಂಸಾರ ಮುಂದುವರಿಯುವುದಿಲ್ಲ ಎಂದು ಪತ್ನಿ ಹೇಳಿದ್ದಾಳೆ. ಇವೆಲ್ಲಾ ಪತ್ನಿ ಹೇಳಿಕೊಟ್ಟು ಬರಬೇಕಿಲ್ಲ. ಜೀವನದಲ್ಲೇ ಶಿಸ್ತು, ಶುಚಿತ್ವ ಇಲ್ಲದ ಮೇಲೆ ಆತನ ಸರಿದಾರಿಗೆ ತರಲು ನಾನು ಮದುವೆಯಾಗಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದಾಳೆ. 

real story : ಅಳಿಯನ ಟೂತ್ ಪೇಸ್ಟ್ ಬಳಸಿದ ಅತ್ತೆ : ಡಿವೋರ್ಸ್ ಎನ್ನುತ್ತಿದ್ದಾನೆ ವ್ಯಕ್ತಿ…!

click me!