ಬಾಲಿವುಡ್‌ ಬ್ಯಾಡ್‌ ಬಾಯ್ ಮಗಳು ಹುಟ್ತಿದ್ದಂತೆ ಫುಲ್ ಚೇಂಜ್: ಕೇರಿಂಗ್ ಫಾದರ್ ಆದ ರಣ್ಬೀರ್ ಕಪೂರ್

By Anusha Kb  |  First Published Sep 16, 2024, 11:49 AM IST

ಬಾಲಿವುಡ್ ಬ್ಯಾಡ್‌ಬಾಯ್ ಎನಿಸಿರುವ ರಣ್ಬೀರ್ ಕಪೂರ್ ಮುದ್ದಿನ ಮಗಳು ರಾಹಾಗೆ ಕೇರ್ ಮಾಡುವ ರೀತಿಗೆ ಫ್ಯಾನ್ಸ್‌ಗಳು ವಾಹ್ ಎಂದಿದ್ದಾರೆ.  


ಇತ್ತೀಚೆಗೆ ಬಾಲಿವುಡ್‌ನ ಫೇಮಸ್‌ ಖಾನ್ದಾನ್‌ಗಳಲ್ಲಿ ಒಂದಾದ ಕಪೂರ್ ಕುಟುಂಬದಲ್ಲಿ ಗಣಪತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯ್ತು.  ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ರಣಧೀರ್‌ ಕಪೂರ್ ಹಾಗೂ ಬಬಿತಾ ಮನೆಯಲ್ಲಿ ಆಯೋಜಿಸಿದ್ದ ಈ ಗಣೇಶ ಹಬ್ಬದಲ್ಲಿ ಇವರ ಮಕ್ಕಳಾದ ಕರೀಷ್ಮಾ ಕಪೂರ್‌,ಕರೀನಾ ಕಪೂರ್‌ ತಮ್ಮ ಮಕ್ಕಳ ಜೊತೆಗೆ ಬಂದು ಭಾಗವಹಿಸಿದ್ದರು. ಜೊತೆಗೆ ಮತ್ತೊಬ್ಬ ಬಾಲಿವುಡ್ ನಟ ಹಾಗೂ ರಣ್‌ಧೀರ್ ಕಪೂರ್‌ ಸೋದರ ರಿಷಿ ಕಪೂರ್‌ ಪುತ್ರನೂ ಆಗಿರುವ ರಣ್ಬೀರ್ ಕಪೂರ್ ಪುತ್ರಿ ರಾಹಾ ಜೊತೆ ಭಾಗವಹಿಸಿದ್ದರು. ಇವರ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ಬಾಲಿವುಡ್ ಬ್ಯಾಡ್‌ಬಾಯ್ ಎನಿಸಿರುವ ರಣ್ಬೀರ್ ಕಪೂರ್ ಮುದ್ದಿನ ಮಗಳು ರಾಹಾಗೆ ಕೇರ್ ಮಾಡುವ ರೀತಿಗೆ ಫ್ಯಾನ್ಸ್‌ಗಳು ವಾಹ್ ಎಂದಿದ್ದಾರೆ. 

ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಪುತ್ರಿ ರಾಹಾಳ ಮೊದಲ  ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದವು. ಇದಕ್ಕೆ ಕಾರಣ ಕ್ಯೂಟ್ ಕ್ಯೂಟ್ ಆಗಿರುವ ಮುದ್ದು ರಾಹಾ ಹಾಗೂ ಆಕೆಯ ವಿಭಿನ್ನವಾದ ಕಣ್ಣುಗಳು. ರಣ್ಬೀರ್ ಪುತ್ರಿಯನ್ನು ಕೆಲ ನೆಟ್ಟಿಗರು ರಣ್ಬೀರ್‌ ಅಪ್ಪ ರಿಷಿ ಕಪೂರ್‌ಗೆ ಹೋಲಿಕೆ ಮಾಡಿದರೆ ಮತ್ತೆ ಕೆಲವರು ಆಲಿಯಾಗೆ ಹೋಲಿಕೆ ಮಾಡಿದ್ದರು. ಜೊತೆಗೆ ರಾಹಾಳಿಂದ ಕಣ್ಣೆತ್ತಲು ಆಗುತ್ತಿಲ್ಲ ರಾಹಾ ಕ್ಯೂಟ್‌ನೆಸ್‌ಗೆ ಫಿದಾ ಆಗಿದ್ದರು. ಇತ್ತ ರಾಹಾ ಅಪ್ಪ ರಣ್ಬೀರ್‌ನಲ್ಲೂ ಮಗಳು ಹುಟ್ಟಿದ್ದ ನಂತರ ಆದ ಮಹತ್ತರ ಬದಲಾವಣೆಯನ್ನು ಈಗ ನೆಟ್ಟಿಗರು ಗಮನಿದ್ದಾರೆ. ಇದಕ್ಕೆ ಸಾಕ್ಷಿ ನೀಡುವಂತೆ ಕಪೂರ್ ಮನೆಯ ಗಣೇಶ ಹಬ್ಬದಲ್ಲಿ ಪುಟಾಣಿ ರಾಹಾಳನ್ನೇ ನೋಡುತ್ತಾ ರಣ್ಬೀರ್ ಕಪೂರ್ ಮೈ ಮರೆತಿರುವ ಫೋಟೋಗಳು ವೈರಲ್ ಆಗಿವೆ. 

Tap to resize

Latest Videos

ಒಂದೇ ಸಮಯದಲ್ಲಿ ನಾಲ್ವರನ್ನು ಹ್ಯಾಂಡಲ್‌ ಮಾಡ್ತಿದ್ದ ರಣ್ಬೀರ್‌ : ರಿಷಿ ಕಪೂರ್ ಮಾತು ಈಗ ವೈರಲ್

ಮಕ್ಕಳು ಅದರಲ್ಲೂ ಮಗಳು ಹುಟ್ಟಿದರೆ ಅಪ್ಪನ ಗುಣದಲ್ಲೂ ಮಹತ್ತರವಾದ ಬದಲಾವಣೆಯಾಗುತ್ತದೆ. ಅದಕ್ಕೆ ರಣ್ಬೀರ್ ಕಪೂರ್ ಕೂಡ ಹೊರತಲ್ಲ. ಇದು ಈ ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.  ಸಂಪ್ರದಾಯಿಕ ಧಿರಿಸಿನಲ್ಲಿ ಅಪ್ಪ ಮಗಳು ಕಂಗೊಳಿಸುತ್ತಿದ್ದು. ರಾಹಾ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದರೆ ಇತ್ತ ರಣ್ಬೀರ್ ಹಳದಿ ಬಣ್ಣದ ಜುಬ್ಬಾ ಹಾಗೂ ಬಿಳಿ ಬಣ್ಣದ ಪ್ಯಾಂಟ್ ತೊಟ್ಟಿದ್ದಾರೆ. ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ರಣ್ಬೀರ್ ಪೋಸ್ ಕೊಟ್ಟಿದ್ದಾರೆ. 

ಬಾಲಿವುಡ್‌ನ ದೊಡ್ಡ ದೊಡ್ಡ ಮಹಿಳಾ ಸೆಲೆಬ್ರಿಟಿಗಳ ಜೊತೆ ಡೇಟಿಂಗ್ ಕಾರಣಕ್ಕೆ ರಣ್ಬೀರ್ ಕಪೂರ್ ಸುದ್ದಿಯಾಗಿದ್ದವರು. ಅವರಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಕತ್ರೀನಾ ಜೊತೆಗಿನ ರಣ್ಬೀರ್ ಪ್ರೇಮ ಸಂಬಂಧ ಜಗತ್ತಿಗೆ ತಿಳಿದಿರುವಂತಹದ್ದು,  ರಣ್ಬೀರ್ ಸ್ತ್ರೀಲೋಲ ಗುಣಕ್ಕೆ ಪುಷ್ಠಿ ನೀಡುವಂತೆ  ಅಪ್ಪ ರಿಷಿ ಕಪೂರ್ ಮಗನ ಡೇಟಿಂಗ್‌ ಲೈಫ್ ಬಗ್ಗೆ ಹಿಂದೊಮ್ಮೆ ಕಾಮೆಂಟ್ ಮಾಡಿಯೂ ಸುದ್ದಿಯಾಗಿದ್ದರು. ಆತ ಒಂದೇ ಸಮಯದಲ್ಲಿ ನಾಲ್ಕು ಜನರೊಂದಿಗೆ ಡೇಟಿಂಗ್ ಮಾಡ್ತಾನೆ. ಆದರೆ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ಗೊತ್ತಿಲ್ಲ ಎಂದಿದ್ದರು. ಇದರ ಜೊತೆಗೆ ಅಪ್ಪ ರಿಷಿ ಜೊತೆಗೆ ರಣ್ಬೀರ್ ಕಿತ್ತಾಡಿಕೊಂಡ ಬಗ್ಗೆ ಹಾಗೂ ಅಪ್ಪ ಮಗನ ಮಧ್ಯೆ ಸಂಬಂಧ ಹಳಸಿದ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಿದ್ದವು. ಹೀಗಿದ್ದ ರಣ್ಬೀರ್ ಕಪೂರ್‌ ವರ್ತನೆ ಮಗಳು ಹುಟ್ಟುತ್ತಿದ್ದಂತೆ ಸಂಪೂರ್ಣ ಬದಲಾಗಿದೆ. ಇದಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. 

ದೀಪಿಕಾ ಕತ್ರಿನಾಗೆ ಕೈ ಕೊಟ್ಟ ಬಳಿಕ ತನಗೆ ಸಿಕ್ಕ ಸ್ತ್ರೀಲೋಲ ಇಮೇಜ್ ಬಗ್ಗೆ ರಣ್ಬೀರ್ ಬಿಚ್ಚುಮಾತು

ಇತ್ತ ಈ ಕಾರ್ಯಕ್ರಮದಲ್ಲಿ ರಾಹಾಳಂತೆ ಗಮನ ಸೆಳೆದಿದ್ದು, ಕರೀನಾ ಕಪೂರ್ ಪುತ್ರ ಜೇಹ್‌, ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ 2ನೇ ಪುತ್ರನಾಗಿರುವ ಜೇಹ್ ಸದಾ ತುಂಟಾಟಕ್ಕೆ ಹೆಸರುವಾಸಿ, ಅಪ್ಪ ಅಮ್ಮ ಎಳೆದುಕೊಂಡು ಹೋದರು ಹಠ ಹಿಡಿದು ಪಾಪಾರಾಜಿ ಕ್ಯಾಮರಾಗಳಿಗೆ ಫೋಸ್ ನೀಡುವ ಮೂಲಕ ಮಕ್ಕಳಂತೆ ಇರುವ ರಾಹ್ ಗುಣಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈಗ ಅಜ್ಜಿ  ಮನೆಯ ಗಣೇಶ ಹಬ್ಬದಲ್ಲಿ ಅಮ್ಮ ಹಾಗೂ ಸೋದರನ ಜೊತೆಗೆ ಭಾಗಿಯಾಗಿದ್ದು, ಫೋಟೋಗೆ ತುಂಟಾಟದಿಂದ ಫೋಸ್ ಕೊಟ್ಟಿದ್ದಾನೆ.

ಇಲ್ಲಿದೆ ಕಪೂರ್ ಕುಟುಂಬದ ಗಣೇಶ ಹಬ್ಬದ ಫೋಟೋಗಳು

 

click me!