
ಮದುವೆಯಾದ ಮೇಲೆ ಮನೆಯನ್ನು ನಿರ್ವಹಿಸುವುದು ಗಂಡ ಹಾಗೂ ಹೆಂಡತಿ ಇಬ್ಬರ ಕರ್ತವ್ಯವೂ ಆಗಿದೆ. ಹೀಗಾಗಿ ಮೊದಲಿಗೆ ಮನೆ ಕೆಲಸಗಳು ಯಾವುದೆಲ್ಲಾ ಇವೆ ಎಂಬುದನ್ನು ಆಲೋಚಿಸಿ ಮತ್ತು ಇಬ್ಬರೂ ಏನು ಮಾಡಬೇಕೆಂದು ನಿರ್ಧರಿಸಿಕೊಳ್ಳಿ. ನೀವು ಆದ್ಯತೆ ನೀಡುವ ಮತ್ತು ನೀವು ಭಯಪಡುವ ಕೆಲಸಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಹೇಳಿ. ಇಬ್ಬರೂ ಒಂದೇ ಸಮಯದಲ್ಲಿ ಕೆಲಸ ಮಾಡುತ್ತಿದ್ದರೆ, ಅದು ಅಸಮಾಧಾನವನ್ನು ಕಡಿಮೆ ಮಾಡುತ್ತದೆ.
ಪಟ್ಟಿಯನ್ನು ಬರೆಯಿರಿ
ಮನೆಕೆಲಸಗಳನ್ನು (Household chores) ನಿಯೋಜಿಸುವ ಮೊದಲು, ಸಂಗಾತಿಯೊಂದಿಗೆ ಕುಳಿತುಕೊಳ್ಳಿ ಮತ್ತು ನೀವು ಯೋಚಿಸಬಹುದಾದ ಎಲ್ಲಾ ಮನೆಕೆಲಸಗಳ ಪಟ್ಟಿಯನ್ನು ಒಟ್ಟುಗೂಡಿಸಿ. ಉದಾಹರಣೆಗೆ ಪಾತ್ರೆಗಳನ್ನು ತೊಳೆಯುವುದು, ಅಡುಗೆ ಮಾಡುವುದು ಅಥವಾ ಕಸವನ್ನು ತೆಗೆಯುವುದು, ಮನೆ ಕ್ಲೀನ್ ಮಾಡುವುದು ಹೀಗೆ. ಯಾರು ಯಾವ ಕೆಲಸ ಮಾಡಿದರೆ ಉತ್ತಮ ಎಂಬುದನ್ನು ನೀವೇ ನಿರ್ಧರಿಸಿ, ಕೆಲಸವನ್ನು ಹಂಚಿಕೊಳ್ಳಿ. ಇಬ್ಬರೂ ಪರಸ್ಪರ ಲಘುವಾದ ಹಾಗೂ ಕಷ್ಟವಾದ ಕೆಲಸವನ್ನು ಸಮಾನವಾಗಿ ಹಂಚಿಕೊಳ್ಳುವುದನ್ನು ಮರೆಯಬೇಡಿ.
ಗಂಡಸರು ಯಾಕೆ ಮನೆಗೆಲಸದಲ್ಲಿ ಹೆಂಡ್ತಿಗೆ ಹೆಲ್ಪ್ ಮಾಡುವುದಿಲ್ಲ?
ಆನಂದಿಸುವ ಕೆಲಸಕ್ಕೆ ಆದ್ಯತೆ ಕೊಡಿ
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕೆಲಸ ಖುಷಿ (Happy) ಕೊಡುತ್ತದೆ. ಒಬ್ಬರಿಗೆ ಅಡುಗೆ ಮಾಡುವುದು, ಇನ್ನೊಬ್ಬರಿಗೆ ಮನೆ ಕ್ಲೀನ್ ಮಾಡುವುದು ಹೀಗೆ. ಹೀಗಿರುವಾಗ ಯಾರಿಗೆ ಯಾವುದು ಇಷ್ಟವೋ ಅದನ್ನೇ ಆರಿಸಿಕೊಳ್ಳಿ. ಹೀಗೆ ಮಾಡಿದಾಗ ಮಾಡುವ ಕೆಲಸ ಕಷ್ಟವೆನಿಸುವುದಿಲ್ಲ. ಬದಲಿಗೆ ಎಂಜಾಯ್ ಮಾಡುತ್ತಾ ಮಾಡಲು ಸಾಧ್ಯವಾಗುತ್ತದೆ.
ವೇಳಾಪಟ್ಟಿ ಸಿದ್ಧಪಡಿಸಿ
ಇವತ್ತಿನ ದಿನಗಳಲ್ಲಿ ಗಂಡ-ಹೆಂಡತಿ (Husband-wife) ಇಬ್ಬರೂ ಉದ್ಯೋಗಕ್ಕೆ ಕಾರಣ ಸಮಯಕ್ಕೆ ಸರಿಯಾಗಿ ಕೆಲಸವನ್ನು ಮುಗಿಸುವುದು ಕಷ್ಟವಾಗಬಹುದು. ಹೀಗಾಗಿ ಯಾವಾಗ ಯಾವ ಕೆಲಸವನ್ನು ಮಾಡಬೇಕು ಎಂಬ ವೇಳಾಪಟ್ಟಿಯನ್ನು (Timetable) ಮೊದಲೇ ಸಿದ್ಧಪಡಿಸಿ. ವೇಳಾಪಟ್ಟಿಯನ್ನು ರಚಿಸುವುದು ಕೆಲಸವನ್ನು ಯಾವಾಗ ನಿರ್ವಹಿಸಬೇಕು ಎಂಬುದರ ಕುರಿತು ಸಂಘರ್ಷವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮತ್ತು ಒಬ್ಬರನ್ನೊಬ್ಬರು ಹೊಣೆಗಾರರನ್ನಾಗಿ ಮಾಡುವುದು ತಪ್ಪುತ್ತದೆ.
ಸಮಸ್ಯೆ ಇದ್ದಾಗ ಮಾತನಾಡಿ
ಮನೆಕೆಲಸದ ವಿಷಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಮಾತನಾಡಿ ಬಗೆಹರಿಸಿಕೊಳ್ಳಿ. ಕೆಲವೊಮ್ಮೆ ಕೆಲಸ ಹೆಚ್ಚು ಹೊರೆ ಅನಿಸುತ್ತಿರಬಹುದು. ಅಥವಾ ಮಾಡಲು ಕಷ್ಟವಾಗುತ್ತಿದ್ದು, ಸಹಾಯದ ಅಗತ್ಯ ಬೇಕಾಗಿ ಬರಬಹುದು. ಇಂಥಾ ಸಂದರ್ಭದಲ್ಲಿ ಹಿಂಜರಿಯದೆ ನೆರವು ಕೇಳಿ. ನೀವು ಹೇಗೆ ಭಾವಿಸುತ್ತೀರಿ ಎಂದು ನಿಮ್ಮ ಸಂಗಾತಿಗೆ (Partner) ತಿಳಿಸಿ. ಒಬ್ಬರನ್ನೊಬ್ಬರು ದೂಷಿಸುವುದನ್ನು ಅಥವಾ ಆರೋಪ ಮಾಡುವುದನ್ನು ತಪ್ಪಿಸಿ. ಬದಲಾಗಿ, ನೀವಿಬ್ಬರೂ ಒಪ್ಪಿಕೊಳ್ಳಬಹುದಾದ ಪರಿಹಾರಗಳನ್ನು ಹುಡುಕುವ ಪ್ರಾಮಾಣಿಕ ಸಂಭಾಷಣೆಯನ್ನು ಮಾಡಿ.
25 ವರ್ಷಗಳಿಂದ ಮನೆಗೆಲಸ ಮಾಡಿದ ಮಾಜಿ ಪತ್ನಿಗೆ 1.75 ಕೋಟಿ ರೂ. ಪಾವತಿಗೆ ಕೋರ್ಟ್ ಆದೇಶ
ನಿರೀಕ್ಷೆಗಳ ಬಗ್ಗೆ ಸ್ಪಷ್ಟವಾಗಿರಿ
ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೊಬ್ಬರಿಂದ ಏನನ್ನು ನಿರೀಕ್ಷಿಸುತ್ತೀರಿ ಎಂಬುದನ್ನು ವಿವರಿಸುವುದು ಇಬ್ಬರ ಮಧ್ಯೆ ಜಗಳ ಆಗೋದನ್ನು ತಪ್ಪಿಸುತ್ತದೆ. ಯಾವ ಕೆಲಸವನ್ನು ಹೇಗೆ ಮಾಡಬೇಕು ಎಂಬುದುರ ಬಗ್ಗೆ ಇಬ್ಬರೂ ಮೊದಲೇ ಮಾತನಾಡಿಕೊಂಡಿರಬೇಕು. ಇದರಿಂದ ಯಾಕೆ ಹಾಗೆ ಮಾಡಿದೆ, ಯಾಕೆ ಹೀಗೆ ಮಾಡಲ್ಲಿಲ್ಲ ಎಂದು ಕೇಳುವುದು ತಪ್ಪುತ್ತದೆ.
ಕೆಲಸಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಿ
ಯಾವಾಗಲೂ ಒಂದೇ ಕೆಲಸವನ್ನು ಮಾಡುವುದು ಯಾರಿಗಾದರೂ ಬೋರ್ ಆಗುವ ವಿಷಯ. ಹೀಗಾಗಿ ಕೆಲಸವನ್ನು ನಿಗದಿತ ಸಮಯಕ್ಕಾಗುವಾಗ ಎಕ್ಸ್‌ಚೇಂಜ್ ಮಾಡಿಕೊಳ್ಳಿ. ಇದರಿಂದ ಇಬ್ಬರಿಗೂ ಬದಲಾವಣೆ (Change) ಸಿಗುತ್ತದೆ. ನಿರ್ಧಿಷ್ಟ ಕೆಲಸ ಮಾಡುವ ಬೇಜಾರು ಸಹ ತಪ್ಪುತ್ತದೆ.
ಒಟ್ಟಿಗೆ ಕೆಲಸ ಮಾಡುವುದು ಈಝಿ
ಇಬ್ಬರೂ ಮಾತನಾಡುತ್ತಾ ಖುಷಿಯಾಗಿ ಕೆಲಸ ಮಾಡುವುದರಿಂದ ಕೆಲಸ (Work) ಮುಗಿದಿದ್ದೇ ಗೊತ್ತಾಗುವುದಿಲ್ಲ. ಮನೆಯನ್ನು ಸ್ವಚ್ಛಗೊಳಿಸುತ್ತಿರುವಾಗ ಮಾತನಾಡಿ, ನೆಚ್ಚಿನ ಸಂಗೀತ ಕೇಳಿ. ಇದರಿಂದ ಇಬ್ಬರ ನಡುವೆ ಸಾಮರಸ್ಯವೂ ಹೆಚ್ಚಾಗುತ್ತದೆ. ಕೆಲಸದ ಬಳಿಕ ಇಬ್ಬರೂ ಖುಷಿಯಿಂದ ಒಟ್ಟಿಗೆ ಗುಣಮಟ್ಟದ ಸಮಯವನ್ನು ಆನಂದಿಸಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.