ಸಿಗರೇಟ್ ಸೇದುತ್ತಾ, ಡಿಜೆ ಸಾಂಗ್‌ಗೆ ಡ್ಯಾನ್ಸ್ ಮಾಡ್ತಿದ್ದ ಭಾವೀ ಅತ್ತೆಯ ನೋಡಿ ಮದ್ವೆ ಕ್ಯಾನ್ಸಲ್ ಮಾಡಿದ ವರ!

By Vinutha Perla  |  First Published Jul 1, 2023, 2:41 PM IST

ಅದ್ಧೂರಿಯಾಗಿ ಮದ್ವೆ ನಡೀತಿತ್ತು. ವಧು-ವರರು ಖುಷಿಯಾಗಿ ಶಾಸ್ತ್ರ ಸಂಪ್ರದಾಯದಲ್ಲಿ ಭಾಗಿಯಾಗ್ತಿದ್ರು. ಅಷ್ಟರಲ್ಲೇ ವರ, ತನ್ನ ಭಾವೀ ಅತ್ತೆಯನ್ನು ನೋಡಿ ನಂಗೆ ಈ ಮದ್ವೆ ಬೇಡ್ವೇ ಬೇಡ ಅಂದಿದ್ದಾನೆ. ಅದ್ಯಾಕೆ?


ಭಾರತದಲ್ಲಿ, ಮದುವೆಗಳು ಕೇವಲ ಅದ್ಧೂರಿಯಾಗಿ ನಡೆಯುವುದಷ್ಟೇ ಅಲ್ಲ, ಶಾಸ್ತ್ರಬದ್ಧವಾಗಿ ನಡೆಯುತ್ತವೆ. ಇಲ್ಲಿನ ಮದುವೆಗಳು ಅದ್ದೂರಿ, ಆಡಂಬರದ ಜೊತೆಗೆ ಪವಿತ್ರತೆಗೂ ಹೆಸರುವಾಸಿಯಾಗಿದೆ. ಹಿಂದಿನ ಕಾಲದ ಆಚರಣೆಗಳು, ಸಂಪ್ರದಾಯಗಳನ್ನು ನಂಬಿಕೆಯಿಂದ ಅನುಸರಿಕೊಂಡು ಬರಲಾಗುತ್ತಿದೆ. ಆಧುನಿಕತೆಗೆ ಸಾಕಷ್ಟು ಅವಕಾಶಗಳನ್ನು ನೀಡಿದ್ದರೂ ಜನರು ಕೆಲವೊಂದು ವಿಚಾರದಲ್ಲಿ ರಾಜಿಯಾಗಲು ಸಿದ್ಧವಿರುವುದಿಲ್ಲ. ಹಾಗೆಯೇ ಉತ್ತರಪ್ರದೇಶದಲ್ಲೊಬ್ಬ ವರ ಮದುವೆ ಮನೆಯಲ್ಲಿ ತನ್ನ ಭಾವೀ ಅತ್ತೆಯ ಅವತಾರ ನೋಡಿ ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ. 

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆ ವರನು ತನ್ನ ವಿಶೇಷ ದಿನದಂದು ಭಾವೀ ಪತ್ನಿಯ ಜೊತೆ ಶಾಸ್ತ್ರದಲ್ಲಿ ಖುಷಿಯಿಂದ ಭಾಗಿಯಾಗಿದ್ದನು. ಈ ಸಂದರ್ಭದಲ್ಲಿ ವರನು (Groom) ತನ್ನ ಅತ್ತೆ ಧೂಮಪಾನ (Smoking) ಮಾಡುವುದನ್ನು ಮತ್ತು DJ ಹಾಡುಗಳಿಗೆ ನೃತ್ಯ (Dance) ಮಾಡುವುದನ್ನು ನೋಡಿ ದಿಗ್ಭ್ರಮೆಗೊಂಡನು. ಸರಯಾತ್ರಿನ್‌ನ ಯುವಕ ಮತ್ತು ರಾಜಪುರದ ಹುಡುಗಿಯ ನಡುವೆ ವಿವಾಹವನ್ನು ಏರ್ಪಡಿಸಲಾಗಿತ್ತು ಮತ್ತು ಜೂನ್ 27 ರಂದು ಸಮಾರಂಭಕ್ಕೆ ಪೂರ್ವಭಾವಿ ವಿಧಿವಿಧಾನಗಳನ್ನು ನಡೆಸಲಾಯಿತು. ಆದರೆ, ಮದುವೆಯ ಅತಿಥಿಗಳೊಂದಿಗೆ ವರನ ಸ್ಥಳಕ್ಕೆ ಆಗಮಿಸಿ ಭಾವೀ ಅತ್ತೆಯ (Mother-in-law) ಸ್ಥಿತಿಯನ್ನು ನೋಡಿ ದಿಗ್ಭ್ರಮೆಗೊಂಡನು.

Tap to resize

Latest Videos

ಮದ್ವೆ ಹಿಂದಿನ ದಿನ ಅಪಘಾತ; ಆಂಬುಲೆನ್ಸ್‌ನಲ್ಲಿ ಬಂದಿಳಿದು, ಸ್ಟ್ರೆಚರ್‌ನಲ್ಲೇ ಕುಳಿತೇ ಸಪ್ತಪದಿ ತುಳಿದ ವರ!

ಭಾವೀ ಅತ್ತೆಯ ಅವತಾರ ನೋಡಿ ಮದ್ವೆ ಕ್ಯಾನ್ಸಲ್ ಮಾಡಿದ ವರ
ವರನು ಮಂಟಪದಲ್ಲಿ ವಿಧಿವಿಧಾನವನ್ನು ಪ್ರಾರಂಭಿಸಲು ಕಾಯುತ್ತಿರುವಾಗ, ಅತಿಥಿಗಳು ಮತ್ತೊಂದು ಬದಿಯಲ್ಲಿ ಊಟ ಮತ್ತು ಸಂತೋಷದಿಂದ ನೃತ್ಯ ಮಾಡುತ್ತಿದ್ದರು. ಸಂಭ್ರಮಾಚರಣೆಯ ನಡುವೆ, ವಧುವಿನ ತಾಯಿ ಸಿಗರೇಟು ಸೇದುತ್ತಾ ಡ್ಯಾನ್ಸ್ ಮಾಡುವ ಗುಂಪಿನೊಂದಿಗೆ ಸೇರಿಕೊಂಡಾಗ ಅನಿರೀಕ್ಷಿತ ಘಟನೆ ಸಂಭವಿಸಿದೆ. ಇದು ವರನ ಗಮನವನ್ನು ಸೆಳೆಯಿತು ಮತ್ತು ಅವನನ್ನು ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿತು. ತಕ್ಷಣ ವರ ಈ ಮದುವೆ ಬೇಡವೆಂದು ರದ್ದುಗೊಳಿಸಿದನು.

ವರನ ಕುಟುಂಬಸ್ಥರು ದಿಢೀರ್ ಆಗಿ ಮದುವೆ ಆಚರಣೆಗಳನ್ನು ನಿಲ್ಲಿಸಲು ನಿರ್ಧರಿಸಿದರು. ಎದ್ದುನಿಂತು ಮದುವೆಯನ್ನು ಮುಂದುವರಿಸಲು ನಿರಾಕರಿಸಿದರು. ಅನಿರೀಕ್ಷಿತ ತಿರುವು ಎಲ್ಲರನ್ನು ಬೆಚ್ಚಿ ಬೀಳಿಸಿದ್ದು, ಮದುವೆಯ ಸಂಭ್ರಮಕ್ಕೆ ಬ್ರೇಕ್ ಬಿತ್ತು. ಈ ಆಘಾತಕಾರಿ ಘಟನೆಯು ಎರಡು ಕುಟುಂಬಗಳ ನಡುವೆ ತೀವ್ರ ಜಗಳಕ್ಕೆ ಕಾರಣವಾಯಿತು. ಕೊನೆಯಲ್ಲಿ, ಮದುವೆಯನ್ನು ರದ್ದುಗೊಳಿಸಲಾಯಿತು. ವರನು ತನ್ನ ಕುಟುಂಬದೊಂದಿಗೆ ಮನೆಗೆ ಹಿಂದಿರುಗಿದನು. ಘಟನೆ ನಂತರ ಕುಟುಂಬಸ್ಥರ ನಡುವೆ ಪಂಚಾಯ್ತಿ ನಡೆಯಿತು ನಂತರ ಎರಡೂ ಮನೆಯವರು ಮಾತನಾಡಿ ಮದುವೆಯನ್ನು ಮಾಡಲು ನಿರ್ಧರಿಸಿದರು ಎಂದು ತಿಳಿದುಬಂದಿದೆ. 

ವಧು ಬೇಡ ಬೇಡ ಅಂದ್ರೂ ಅರ್ಧ ಕಚ್ಚಿದ ಎಂಜಲು ಸ್ವೀಟನ್ನೇ ಬಲವಂತಾಗಿ ತಿನ್ನಿಸಿದ ವರ!

ಅತ್ತೆ ಧೂಮಪಾನ ಮಾಡುತ್ತಾ ಡ್ಯಾನ್ಸ್ ಮಾಡುವ ವೀಡಿಯೊ ಕ್ಲಿಪ್ ವೈರಲ್ ಆಗಿದ್ದು, 8 ಮಿಲಿಯನ್ ವೀಕ್ಷಣೆಗಳನ್ನು ಆಕರ್ಷಿಸಿದೆ. ವೈರಲ್ ಆದ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ವರನ ಬಾಯಿಗೆ ಸಿಗರೇಟ್​ ಇಟ್ಟು ಸ್ವಾಗತಿಸುವ ಅತ್ತೆ
ಒಂದೆಡೆ ಉತ್ತರಪ್ರದೇಶದ ಮದುವೆಯು ಧೂಮಪಾನದ ಕಾರಣದಿಂದಾಗಿ ಬಹುತೇಕ ಮುರಿದುಬಿದ್ದಿದೆ. ಆದರೆ ಈ ಹಿಂದೆ ಅತ್ತೆಯು ವರನನ್ನು ಸಿಗರೇಟ್‌ ಬಾಯಿಗಿಟ್ಟು ಸ್ವಾಗತಿಸಿದ ಕ್ಷಣವೊಂದು ವೈರಲ್ ಆಗಿತ್ತು. ಇದು ವರನನ್ನು ಅತ್ತೆ ಹಾಗೂ ಅವನ ಅಳಿಯಂದಿರು ಸ್ವಾಗತಿಸುವ ಸಾಂಪ್ರದಾಯಿಕ ರೀತಿ ಎಂದು ಹೇಳಿಕೊಳ್ಳಲಾಗಿತ್ತು. ವೈರಲ್ ವಿಡಿಯೋದಲ್ಲಿ ವರ ಸೋಫಾ ಮೇಲೆ ಕುಳಿತಿರುತ್ತಾನೆ. ಈ ವೇಳೆ ಅತ್ತೆ (Mother in law) ವರನ ಬಾಯಿಗೆ ಸಿಗರೇಟ್​​​ ಇಡುತ್ತಾರೆ. ಬಳಿಕ ಮಾವ ಬೆಂಕಿ ಕಡ್ಡಿಯಿಂದ ಸಿಗರೇಟ್​ ಹಚ್ಚತ್ತಾರೆ. ಆದರೆ, ವರ ಸಿಗರೇಟ್​ ಸೇದುವುದಿಲ್ಲ. ಬದಲಾಗಿ ಅದನ್ನು ವಾಪಸ್​ ತೆಗೆದು ಮಾವನ ಕೈಯಲ್ಲೇ ಕೊಡುತ್ತಾನೆ. ಬಳಿಕ ಸಂಪ್ರದಾಯದಂತೆ ವರನು ಇಬ್ಬರಿಗೂ ಸ್ವಲ್ಪ ಹಣವನ್ನು ಹಸ್ತಾಂತರಿಸುತ್ತಾನೆ.

click me!