ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಪ್ರಮಾಣ ಇಳಿಕೆ ಹಾದಿಯಲ್ಲಿ ಸಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ದೇಶದ ಜನರು ಮಕ್ಕಳನ್ನು ಹೊಂದಲು ಹಲವು ಆಫರ್‌ಗಳನ್ನು ಮುಂದಿಡುತ್ತಿದೆ. ಅದರಲ್ಲಿ ಸದ್ಯ ಈ ಆಫರ್ ಕೂಡಾ ಸೇರಿದ್ದು, ಉದ್ಯೋಗಿಗಳಿಗೆ 5.7 ಲಕ್ಷ ರೂ. ದೊರಕಲಿದೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ ಚೀನಾದಲ್ಲಿ ಇದೀಗ ಜನಸಂಖ್ಯೆ ಕೊರತೆ ಭೀತಿ ಎದುರಾಗಿದೆ. ಹೀಗಾಗಿ 5 ವರ್ಷಗಳ ಹಿಂದೆ ದೇಶದ ಬಹುತೇಕ ದಂಪತಿಗೆ 2 ಮಗು ಹೊಂದಲು ಅವಕಾಶ ಕಲ್ಪಿಸಿದ್ದ ಸರ್ಕಾರ, ಇದೀಗ ಆ ಮಿತಿಯನ್ನು ಮೂರಕ್ಕೆ ಹೆಚ್ಚಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಜನರು ಮಕ್ಕಳು ಮಾಡಿಕೊಳ್ಳಬೇಕೆಂದು ಸರ್ಕಾರ, ಖಾಸಗಿ ಕಂಪೆನಿಗಳು ಹಲವು ಆಫರ್‌ಗಳನ್ನು ಮುಂದಿಡುತ್ತಿದೆ. ಸದ್ಯ ಚೀನಾ ಮೂಲದ ಟ್ರಾವೆಲ್ ಏಜೆನ್ಸಿ ಮಕ್ಕಳನ್ನು ಹೊಂದಲು ಉದ್ಯೋಗಿಗಳಿಗೆ 5.7 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ. ಟ್ರಿಪ್ ಡಾಟ್ ಕಾಮ್ ಗ್ರೂಪ್ ಎಂಬ ಏಜೆನ್ಸಿ ಈ ಯೋಜನೆ ಪ್ರಕಟಿಸಿದ್ದು, ಜುಲೈ 1ರಿಂದ ಪ್ರತಿ ಮಗುವಿಗೆ 50,000 ಯುವಾನ್ ಅಂದರೆ 5,65,306 ರೂ. ಪಾವತಿಸುವುದಾಗಿ ಹೇಳಿದೆ.
ಕಂಪನಿಯು 400 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಏಜೆನ್ಸಿಗಳಲ್ಲಿ ಒಂದಾಗಿದೆ. ಈಗ ಈ ಕಂಪನಿ ಕುಟುಂಬ ಯೋಜನೆಗೆ (Family planning) ಸಂಬಂಧಿಸಿದಂತೆ ದೊಡ್ಡ ಹೆಜ್ಜೆ ಇಟ್ಟಿದೆ. ಏಕೆಂದರೆ ಚೀನಾದಲ್ಲಿ ಯುವಜನರ ಸಂಖ್ಯೆ ಕುಸಿಯುತ್ತಲೇ ಇದೆ, ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರಿದ್ದಾರೆ. ಈ ಕಾರಣಕ್ಕೆ ದೇಶದ ಹಿತದೃಷ್ಟಿಯಿಂದ ಖಾಸಗಿ ಸಂಸ್ಥೆ (Private organisation) ಮಕ್ಕಳನ್ನು ಮಾಡಿಕೊಳ್ಳುವಂತೆ ಜನರಿಗೆ ಆಫರ್ ನೀಡಿದೆ. ಕನಿಷ್ಠ ಮೂರು ವರ್ಷಗಳ ಕಾಲ ಕಂಪನಿಯೊಂದಿಗೆ ಕೆಲಸ ಮಾಡುವ ಉದ್ಯೋಗಿಗಳು (Employees) ಪ್ರತಿ ನವಜಾತ ಮಗುವಿಗೆ (Baby) ವಾರ್ಷಿಕ 10,000 ಯುವಾನ್ (ರೂ. 5.7 ಲಕ್ಷ) ಬೋನಸ್ ಅನ್ನು ಪಡೆಯುತ್ತಾರೆ, ಮಗುವಿನ ಮೊದಲ ಹುಟ್ಟುಹಬ್ಬದಿಂದ (Birthday) ಐದು ವರ್ಷ ತುಂಬುವವರೆಗೆ ಈ ಹಣ ದೊರಕಲಿದೆ.
undefined
ಚೀನಾದಲ್ಲಿ ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್: ಅವಿವಾಹಿತ ಮಹಿಳೆಯರಿಗೂ ಮಕ್ಕಳು ಮಾಡಿಕೊಳ್ಳಲು ಅನುಮತಿ?
ಟ್ರಿಪ್ ಡಾಟ್ ಕಾಮ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಜೇಮ್ಸ್ ಲಿಯಾಂಗ್ ಹೇಳಿಕೆಯಲ್ಲಿ, 'ಮಕ್ಕಳಿರುವ ಕುಟುಂಬಗಳಿಗೆ, ವಿಶೇಷವಾಗಿ ಅನೇಕ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರವು ಹಣವನ್ನು ನೀಡಬೇಕೆಂದು ನಾನು ಯಾವಾಗಲೂ ಸಲಹೆ ನೀಡಿದ್ದೇನೆ. ಇದು ಹೆಚ್ಚಿನ ಯುವಕರು ಅನೇಕ ಮಕ್ಕಳನ್ನು ಹೊಂದುವ ಬಯಕೆಯನ್ನು ಪೂರೈಸಲು ಅನುವು ಮಾಡಿಕೊಡುತ್ತದೆ. ನಾನು ಸಹ ಅದೇ ರೀತಿಯಲ್ಲಿ ನೆರವಾಗುತ್ತಿದ್ದೇನೆ' ಎಂದಿದ್ದಾರೆ.
1980ರಿಂದ 2015 ರವರೆಗೆ ಇದ್ದ ಒಂದು ಮಗು ನೀತಿಯನ್ನು ಗಮನಿಸಿದರೆ, ಚೀನಾ ದೇಶ ಶ್ರೀಮಂತವಾಗುವ ಮೊದಲು ಬಡತನಕ್ಕೆ ಬೀಳಲಿದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಏಕೆಂದರೆ ಅಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಸಾಲದ ಹೊರೆಯ ಸ್ಥಳೀಯ ಸರ್ಕಾರಗಳು ತಮ್ಮ ವಯಸ್ಸಾದ ಜನಸಂಖ್ಯೆಯ ಮೇಲೆ ಹೆಚ್ಚು ಖರ್ಚು ಮಾಡುತ್ತಿವೆ.
ಲವ್, ರೋಮ್ಯಾನ್ಸ್ ಮಾಡಲೆಂದೇ ವಿದ್ಯಾರ್ಥಿಗಳಿಗೆ ಒಂದು ವಾರ ರಜೆ ಕೊಟ್ಟ ಚೀನಾ!
ಚೀನಾದಲ್ಲಿ 2021ರಲ್ಲಿ, ದಂಪತಿಗಳು ಗರಿಷ್ಠ ಮೂರು ಮಕ್ಕಳನ್ನು ಹೊಂದಲು ಅವಕಾಶವಿತ್ತು. ಆದರೆ ಮನೆಯಲ್ಲಿಯೇ ಇರುವ ಕೋವಿಡ್ ವರ್ಷಗಳಲ್ಲಿ, ದಂಪತಿಗಳು ಮಕ್ಕಳನ್ನು ಹೊಂದಲು ಹಿಂಜರಿದರು. ಯುವಜನರು ಮಕ್ಕಳ ಆರೈಕೆ, ಶಿಕ್ಷಣ ವೆಚ್ಚಗಳು, ಕಡಿಮೆ ಆದಾಯ, ದುರ್ಬಲ ಸಾಮಾಜಿಕ ಭದ್ರತೆ ಮತ್ತು ಲಿಂಗ ಅಸಮಾನತೆಯಂತಹ ಕಾರಣಗಳನ್ನು ಹೆಚ್ಚು ಮಕ್ಕಳನ್ನು ಹೊಂದಲು ಬಯಸಿಲ್ಲ. ಹೀಗಾಗಿ ಜನಸಂಖ್ಯೆಯಲ್ಲಿ ಇಳಿಮುಖವಾಗಿದೆ..
Trip.com ಗೆ ಸಂಬಂಧಿಸಿದಂತೆ, ಕಂಪನಿಯು ಚೈನೀಸ್ ಭಾಷೆಯಲ್ಲಿ ಎರಡನೇ ಹೇಳಿಕೆಯಲ್ಲಿ ಮೂರು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಎಲ್ಲಾ ಪೂರ್ಣ ಸಮಯದ ಉದ್ಯೋಗಿಗಳು ಅವರ ಲಿಂಗ, ಸ್ಥಾನ ಅಥವಾ ಕೆಲಸದ ಸ್ಥಳವನ್ನು ಲೆಕ್ಕಿಸದೆ ಶಿಶುಪಾಲನಾ ಬೋನಸ್‌ಗೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ.