ಕಚೇರಿಯಲ್ಲಿ ನಿಮ್ಮ ಕೆಲಸದ ಯಶಸ್ಸನ್ನು ಕದಿಯುವವರನ್ನು ನಿಭಾಯಿಸುವುದು ಕಷ್ಟವೇ ಸರಿ. ಆದರೆ ಆಚಾರ್ಯ ಚಾಣಕ್ಯ ರಾಜಸಂಸ್ಥಾನದಲ್ಲೇ ಇದ್ದುದರಿಂದ ಇಂಥವರನ್ನು ನಿಭಾಯಿಸುವ ಕಲೆಯನ್ನು ಕಲಿತಿದ್ದ. ಅವನು ಈ ಕುರಿತು ನೀಡುವ ಸ್ವಾರಸ್ಯಕರ ಸಲಹೆಗಳು ಹೀಗಿವೆ.
ಕೆಲವರಿರುತ್ತಾರೆ, ನಿಮ್ಮ ಕಚೇರಿಯಲ್ಲಿ ನಿಮ್ಮ ಪಕ್ಕದಲ್ಲೇ ಕುಳಿತಿರುತ್ತಾರೆ. ಪ್ರಾಜೆಕ್ಟನ್ನೂ ಜೊತೆಗೇ ಮಾಡುತ್ತಾರೆ. ಆದರೆ ಕೊನೆಗೆ ಪ್ರಾಜೆಕ್ಟ್ ಸಕ್ಸಸ್ ಆದಾಗ, ಅದರ ಯಶಸ್ಸನ್ನೆಲ್ಲ ತಾವೇ ಪಡೆದುಬಿಡುತ್ತಾರೆ. ನೀವು ಅಷ್ಟೂ ಸಮಯ ಹಾಕಿದ ಪರಿಶ್ರಮವೆಲ್ಲ ಬಾಸ್ ಗಮನಕ್ಕೆ ಬರುವುದೇ ಇಲ್ಲ... ಪ್ರತಿಯೊಬ್ಬರೂ ಇಂಥ ಪರಿಸ್ಥಿತಿ ಅನುಭವಿಸಿರುತ್ತೀರಿ ಅಲ್ಲವೇ? ಇದು ಕಚೇರಿ ರಾಜಕೀಯದ ಭಾಗ. ಪ್ರತಿಯೊಂದು ಕಚೇರಿಯಲ್ಲಿಯೂ ಹೀಗಾಗುತ್ತದೆ. ಅಲ್ಲಿ ಯಾರೂ ನಿಮ್ಮ ಪೆನ್ನು, ನಿಮ್ಮ ಬುತ್ತಿ ಅಥವಾ ಬ್ಯಾಗನ್ನು ಕದಿಯುವುದಿಲ್ಲ. ಆದರೆ ಯಾವಾಗಲೂ ಒಬ್ಬ ಕುತ್ಸಿತ ಸಹೋದ್ಯೋಗಿ ಇರುತ್ತಾನೆ. ದೊಡ್ಡದಾಗಿ ಸ್ಮೈಲ್ ಮಾಡುವ, ಸಮಯಕ್ಕೆ ತಕ್ಕಂತೆ ಅಭಿನಂದನೆ ಹೇಳುವ, ಆದರೆ ಒಳಗೊಳಗೇ ನಿಮ್ಮ ಅದ್ಭುತ ಐಡಿಯಾಗಳನ್ನು ಕದಿಯುವವರು. ನೀವು ಒಂದು ಪ್ರಾಜೆಕ್ಟಿಗೆ ನಿಮ್ಮ ರಕ್ತ ಬಸಿದು ಕೆಲಸ ಮಾಡಿದ್ದರೆ. ಮರುದಿನ ಆತ ಅದನ್ನು ಮೀಟಿಂಗ್‌ನಲ್ಲಿ ಪ್ರಸ್ತುತಪಡಿಸುತ್ತಿರುತ್ತಾನೆ! ಇಂಥವರನ್ನು ಡೀಲ್ ಮಾಡುವುದು ಹೇಗೆ? ಇದನ್ನು ಚಾಣಕ್ಯ ಪರಿಣಾಮಕಾರಿಯಾಗಿ ಈ ಕೆಳಗಿನ ಟಿಪ್‌ಗಳಲ್ಲಿ ಹೇಳುತ್ತಾರೆ.
ನಿಮ್ಮ ಯೋಜನೆಗಳನ್ನು ರಹಸ್ಯವಾಗಿಡಿ
ಚಾಣಕ್ಯ ಒಮ್ಮೆ ಹೀಗೆ ಹೇಳಿದ್ದಾನೆ- "ಒಂದು ಹಾವು ವಿಷಕಾರಿಯಲ್ಲವೋ ಹೌದೋ ಎಂದು ತಿಳಿಯದಿದ್ದಾಗ, ಅದು ವಿಷಕಾರಿ ಎಂದೇ ಭಾವಿಸಬೇಕು." ಅಂದರೆ, ಕಚೇರಿಯಲ್ಲಿ ಯಾರು ಬೇಕಾದರೂ ನಿಮಗೆ ಮೋಸ ಮಾಡಬಹುದು. ನಿಮ್ಮ ಆಂತರಿಕ ರಹಸ್ಯಗಳನ್ನು ನೀವು ಕಾಪಾಡಿಕೊಳ್ಳಿ. ಒಂದು ತಂಡದ ಆಟಗಾರನಂತೆ ಕಾಣಲು ಎಷ್ಟು ಬೇಕೋ ಅಷ್ಟು ಹಂಚಿಕೊಳ್ಳಿ. ಆದರೆ ನೀವು ಶೈನ್ ಆಗುವ ಸಮಯ ಬರುವವರೆಗೆ ನೈಜ ಐಡಯಾಗಳನ್ನು ತಡೆಹಿಡಿಯಿರಿ. ನಿಮ್ಮ ಬಾಸ್ ವೀಕ್ಷಿಸುತ್ತಿರುವಾಗ ನಿಮ್ಮ ಜಾಣತನ ಕಾಣಲಿ. ನಿಮ್ಮ ಕ್ರೆಡಿಟ್ ಕಳ್ಳನ ಅಸ್ಪಷ್ಟ ಸಲಹೆಗಳನ್ನು ನಯವಾಗಿ ತಿರಸ್ಕರಿಸಿ, ಐಡಿಯಾ ಹಂಚಿಕೊಳ್ಳದಿರಿ.
ಎಲ್ಲದಕ್ಕೂ ಸಾಕ್ಷಿಗಳನ್ನು ಇಟ್ಟುಕೊಳ್ಳಿ
ನೀವು ಎಷ್ಟೇ ಪ್ರಾಮಾಣಿಕವಾಗಿರಲಿ, ಅದಕ್ಕೆ ದಾಖಲೆ, ಸಾಕ್ಷಿ ಇರತಕ್ಕದ್ದು. ಸಾಕ್ಷಿಯೇ ಎಲ್ಲವೂ. ಆದ್ದರಿಂದ, ಪ್ರತಿ ಬಾರಿ ನೀವು ಅದ್ಭುತವಾದದ್ದನ್ನು ಮಾಡಿದಾಗ, ಅದನ್ನು ಇಮೇಲ್ ಅಥವಾ ಪ್ರಾಜೆಕ್ಟ್ ಟ್ರ್ಯಾಕರ್‌ನಲ್ಲಿ ದಾಖಲಾಗಿಸಿ. ಬಾಸ್ ಅನ್ನು ಸಿಸಿ ಮಾಡಿ. ಟೈಮ್‌ಸ್ಟ್ಯಾಂಪ್‌ಗಳನ್ನು ಸೇರಿಸಿ. ಅಗತ್ಯವಿದ್ದರೆ ಸ್ಕ್ರೀನ್‌ಶಾಟ್‌ಗಳನ್ನು ಸೇರಿಸಿ. ನಿಮ್ಮ ಇಮೇಲ್‌ಗಳಲ್ಲಿ "ನಾವು ಚರ್ಚಿಸಿದಂತೆ, ನಾನು ಪ್ರಸ್ತಾಪಿಸಿದ ಪರಿಹಾರ ಇಲ್ಲಿದೆ" ಇಂತಹ ಪ್ರಾಸಂಗಿಕ ಪದಗುಚ್ಛಗಳನ್ನು ಸೇರಿಸಿ. ಯಾರಾದರೂ ನಿಮ್ಮ ಪ್ರತಿಭೆಯನ್ನು ತಮ್ಮದೇ ಎಂದು ಮರುಪ್ಯಾಕೇಜ್ ಮಾಡಲು ಪ್ರಯತ್ನಿಸಿದರೆ ಈ ಸಾಕ್ಷಿಗಳು ನಿಮ್ಮನ್ನು ಕಾಪಾಡುತ್ತವೆ.
ಕಳ್ಳನೊಂದಿಗೆ ಸ್ನೇಹ ಮಾಡಿ (ಹೌದು!)
ಚಾಣಕ್ಯನು "ನಿಮ್ಮ ಶತ್ರುಗಳನ್ನು ಅವರು ತಮ್ಮನ್ನು ತಾವು ತಿಳಿದಿರುವುದಕ್ಕಿಂತ ಚೆನ್ನಾಗಿ ನೀವು ತಿಳಿದುಕೊಳ್ಳಬೇಕು" ಎಂದು ಹೇಳಿದ್ದಾನೆ. ಆದ್ದರಿಂದ ಅವರೊಂದಿಗೆ ಕಾಫಿ ಕುಡಿಯಿರಿ. ಅವರ ನಕಲಿ ಸ್ವಂತಿಕೆಯನ್ನು ಅಭಿನಂದಿಸಿ. ಅವರ ಗೂಢಚಾರನನ್ನು ವಂಚಿಸುವಂತೆ ವ್ಯವಹರಿಸಿ. ಏಕೆಂದರೆ ಕ್ರೆಡಿಟ್ ಕದಿಯುವವನು ನೀವು ಅವನಿಗಿಂತ ಸುಪೀರಿಯರ್ ಎಂದು ತಿಳಿದುಕೊಳ್ಳಬಾರದು. ನೀವು ಅವನ ಜೊತೆ ಉತ್ತಮ ವರ್ತನೆಯಲ್ಲಿದ್ದರೆ, ಆತ ಕಾಲೆಳೆಯುವ ಸಾಧ್ಯತೆ ಕಡಿಮೆ. ಅಥವಾ ಕನಿಷ್ಠ, ಹಿಂಜರಿಯುತ್ತಾನೆ. ಏಕೆಂದರೆ ಪಕ್ಕದಲ್ಲೇ ಇರುವ ಸ್ನೇಹಿತನನ್ನು ಇರಿಯಲು ಬಯಸುವುದಿಲ್ಲ.
ವಾತ್ಸಾಯನನ ಕಾಮಸೂತ್ರದ ಪ್ರಕಾರ, ಮದುವೆಯಾಗೋ ಗಂಡಿಗೆ ಇದು ಇರಲೇಬೇಕಂತೆ!
ಸ್ಪಾಟ್‌ಲೈಟ್‌ನಲ್ಲಿ ಇರಿ
ಕ್ರೆಡಿಟ್ ಕದಿಯುವವರು ನಿಮ್ಮ ನೆರಳಿನಲ್ಲಿ ಅಭಿವೃದ್ಧಿ ಹೊಂದುತ್ತಾರೆ. ನೀವು ಸ್ಪಾಟ್‌ಲೈಟ್‌ನಲ್ಲಿ ಇದ್ದರೆ, ಮತ್ತು ಇದು ನನ್ನ ವೇದಿಕೆ ಎಂದು ಘೋಷಿಸುತ್ತಿದ್ದರೆ, ಸಭೆಗಳಲ್ಲಿ ಮಾತನಾಡುತ್ತಿದ್ದರೆ, ನಿಮ್ಮ ಸ್ವಂತ ಕೆಲಸವನ್ನು ಜೋರಾಗಿ, ಆತ್ಮವಿಶ್ವಾಸದಿಂದ ಮತ್ತು ಜನರು ಕೇಳುವಂತೆ ಪ್ರದರ್ಶಿಸುತ್ತಿದ್ದರೆ, ಆಗ ಯಾರಿಗೂ ನಿಮ್ಮನ್ನು ಮೀರಿಸಲು ಆಗುವುದಿಲ್ಲ. ಚಾಣಕ್ಯ ಶತ್ರುಗಳನ್ನೇ ನಿಮ್ಮ ಅವಕಾಶಗಳಾಗಿ ಪರಿವರ್ತಿಸಿ ಎಂದಿದ್ದ. ನೀವು ಅದೇ ರೀತಿ ಮಾಡಬಹುದು. ಆಯಕಟ್ಟಿನ ಸಮಯದ ಪ್ರಸ್ತುತಿಯು ನಿಮ್ಮ ತೇಜಸ್ಸನ್ನು ಹೈಜಾಕ್ ಮಾಡುವ ಅವರ ಪ್ರಯತ್ನಗಳನ್ನು ಮೀರಿಸುತ್ತದೆ.
ಕರ್ಮವೆಂಬುದಿದೆ, ಅದು ಫಲ ನೀಡುತ್ತದೆ
ಇಷ್ಟೆಲ್ಲ ಆಗಿಯೂ ದುಷ್ಟರು ನಿಮ್ಮನ್ನು ಮೋಸಗೊಳಿಸಿದರು ಎಂದಿಟ್ಟುಕೊಳ್ಳಿ. ಆದರೆ ಅದೃಷ್ಟವು ದುಷ್ಟರನ್ನು ಸದಾ ಕಾಲ ಕೈಹಿಡಿದಿರುವುದಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಅಂತಿಮವಾಗಿ ಕ್ರೆಡಿಟ್-ಕಳ್ಳರು ತಮ್ಮದೇ ಸುಳ್ಳಿನ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆದ್ದರಿಂದ ನೀವು ನಿಮ್ಮ ಆಯಕಟ್ಟಿನ ದೀರ್ಘ ಆಟ ಆಡಿ. ಕ್ರೆಡಿಟ್ ಕಳ್ಳ ಅಂತಿಮವಾಗಿ ಜಾರಿಬೀಳುತ್ತಾನೆ. ಅವರ ತಂಡದ ಸದಸ್ಯರಿಗೆ ಅವರ ಯೋಗ್ಯತೆ ಗೊತ್ತಾಗುತ್ತದೆ.
ಪುರುಷರಿಗಿಂತ ಮಹಿಳೆಯರೇ ಬೇಗ ಪ್ರಬುದ್ಧರಾಗ್ತಾರಂತೆ: ಅಧ್ಯಯನ ವರದಿ