ನಾರಾಯಣಮೂರ್ತಿ ಅಭಿಮಾನಿ? ವಾರದ 7 ದಿನ ಕಚೇರಿಗೆ ತೆರಳುವಾತನಿಗೆ ಗೇಟ್ ಪಾಸ್ ಕೊಟ್ಟ ಗೆಳತಿ

By Chethan Kumar  |  First Published Jan 2, 2025, 10:41 PM IST

ನಾರಾಯಣ ಮೂರ್ತಿಯ ಅಭಿಮಾನಿ? ಮನೆಯಿಂದ ಕೆಲಸ ಮಾಡಲು ಕಂಪನಿ ಅವಕಾಶ ನೀಡಿದೆ. ಆದರೆ ಆತ ಮಾತ್ರ ಒಂದೂ ದಿನ ರಜೆ ಪಡೆಯದೇ 7 ದಿನ ಕೆಲಸಕ್ಕೆ ಕಚೇರಿಗೆ ತೆರಳುತ್ತಿದ್ದ. ಈತನ ಈ ಅಭ್ಯಾಸ ನೋಡಿ ಗೆಳತಿ ಗೇಟ್ ಪಾಸ್ ನೀಡಿದ್ದಾಳೆ. 


ಉದ್ಯೋಗಿಗಳು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಸೂಚಿಸಿದ ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿದೆ. ಪರ ವಿರೋಧಗಳು, ವಾದ ವಿವಾದಗಳು ನಡೆದಿದೆ. ಈ ರೀತಿ ಕೆಲಸ ಮಾಡಿದರೆ ವೈಯುಕ್ತಿಕ ಬದುಕು ನಷ್ಟವಾಗಲಿದೆ. ಅಲ್ಲೋಲ ಕಲ್ಲೋಲವಾಗಲಿದೆ ಅನ್ನೋ ವಾದವೂ ಇದೆ. ಕೆಲ ಸಿಇಒಗಳು ನಾರಾಯಣಮೂರ್ತಿ ಮಾತು ಬೆಂಬಲಿಸಿದ್ದಾರೆ. ಆದರೆ ಉದ್ಯೋಗಿಗಳು ಈ ಮಾತನ್ನು ವಿರೋಧಿಸಿದ್ದಾರೆ. ಆದರೆ ಇಲ್ಲೊಬ್ಬ ನಾರಾಯಣ ಮೂರ್ತಿ ಅಭಿಮಾನಿ ಇದ್ದಾನೆ. ಈತ ವಾರದಲ್ಲಿ 7 ದಿನ ಕೆಲಸಕ್ಕಾಗಿ ಕಚೇರಿಗೆ ತೆರಳುತ್ತಾನೆ. ಕಂಪನಿ ಈತನಿಗೆ ಮನೆಯಿಂದ ಕೆಲಸ ಮಾಡಲೂ, ವಾರದ ರಜೆ ರಡೆಯಲು ಅವಕಾಶ ನೀಡಿದೆ. ಆದರೆ ಈತ ಮಾತ್ರ ವಾರದ ಎಲ್ಲಾ ದಿನ ಕಚೇರಿಗೆ ತೆರಳಿ ಖುಷಿ ಖುಷಿಯಾಗಿ ಕೆಲಸ ಮಾಡುತ್ತಾನೆ. ಇದರ ಪರಿಣಾಮ ಈತನ ಗೆಳತಿ ಕಚೇರಿಯಲ್ಲೇ ಬಿದ್ದಿರು ಎಂದು ಗೇಟ್ ಪಾಸ್ ನೀಡಿ ಹೊರಟು ಹೋಗಿದ್ದಾಳೆ.

ಲಿಂಕ್ಡ್ಇನ್‌ನಲ್ಲಿ ಯುವತಿ ತನ್ನ ಅನುಭವ ಹೇಳಿಕೊಂಡಿದ್ದಾಳೆ. ಇಷ್ಟೇ ಅಲ್ಲ ಈತ ನಾರಾಯಣಮೂರ್ತಿ ಅಭಿಮಾನಿ ಎಂದು ಬರೆದುಕೊಂಡಿದ್ದಾಳೆ. ಡೇಟಿಂಗ್ ಆ್ಯಪ್ ಹಿಂಗ್‌ನಲ್ಲಿ ಇಬ್ಬರಿಗೂ ಪರಿಚಯವಾಗಿದೆ. ಬಳಿಕ ಚಾಟಿಂಗ್ ಶುರುವಾಗಿದೆ. ಒಂದೆರೆಡು ದಿನ ಚಾಟಿಂಗ್ ಮಾಡಿದ್ದಾರೆ. ಯುವತಿಗೂ ಹುಡುಗ ಒಕೆ ಒಕೆ ಎಂದುಕೊಂಡಿದ್ದಾಳೆ. ಹುಡುಗನ ಕುರಿತು ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಸಲುವಾಗಿ ಮತ್ತಷ್ಟು ಚಾಟ್ ಮಾಡಿದ್ದಾಳೆ. 

Tap to resize

Latest Videos

8 ಗಂಟೆ ಕಳೆದರೆ ಪತ್ನಿ ಓಡಿ ಹೋಗುತ್ತಾರೆ, ನಾರಾಯಣಮೂರ್ತಿಗೆ ಟಾಂಗ್ ಕೊಟ್ರಾ ಗೌತಮ್ ಅದಾನಿ?

ಈಕೆ ಡೇಟಿಂಗ್ ಆ್ಯಪ್‌ನಲ್ಲಿ ನಡೆಸಿದ ಚಾಟ್ ಸ್ಕ್ರೀನ್‌ಶಾಟ್ ಹಂಚಿಕೊಂಡು, ಈ ರೀತಿ ಇರುತ್ತಾರಾ ಎಂದು ಕೇಳಿದ್ದಾಳೆ. ಇಷ್ಟೇ ಅಲ್ಲ ಕೆಲ ರೋಚಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾಳೆ. ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಚಾಟಿಂಗ್ ಮಾಡಲಾಗಿದೆ. ಈ ಸ್ಕ್ರೀನ್ ಶಾಟ್‌ನಲ್ಲಿ ಹುಡುಗ ನನಗೆ ಅವೆಲ್ಲಾ ಬರೋದಿಲ್ಲ. ನಾನು ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ ಎಂದಿದ್ದಾನೆ. ಇದಕ್ಕೆ ಯುವತಿ ಪ್ರತಿಕ್ರಿಯಿಸಿದ್ದಾಳೆ. ಈ ರೀತಿ ಯಾರಿಂದಲೂ ಕೇಳಿಲ್ಲ ಎಂದು ಉತ್ತರಿಸಿದ್ದಾಳೆ. ಇಷ್ಟಕ್ಕೆ ಇವರ ಚಾಟ್ ಮುಗಿದಿಲ್ಲ. ಇದರ ನಂತರ ಚಾಟಿಂಗ್‌ನಲ್ಲಿ ಯುವತಿಗೆ ಹುಡುಗ ಫ್ಯಾಮಿಲಿ ಅಂತಾ ತಿರುಗಿ ನೋಡುವವನಲ್ಲ ಅನ್ನೋದು ಖಚಿತವಾಗಿದೆ.

ನಿಮಗೆ ಎಷ್ಟು ದಿನ ಮನೆಯಿಂದ ಕೆಲಸ ಮಾಡಲು ಅನುಮತಿ ಇದೆ ಎಂದು ಪ್ರಶ್ನಿಸಿದ್ದಾಳೆ. ನಮಗೆ ವಾರದ 7 ದಿನವೂ ಮನೆಯಿಂದ ಕೆಲಸ ಮಾಡಲು ಅವಕಾಶವಿದೆ. ಆದರೆ ಕಚೇರಿಗೆ ತೆರಳಿ ಕೆಲಸ ಮಾಡುವುದು ನನಗೆ ಹೆಚ್ಚು ಇಷ್ಟ ಹಾಗೂ ಫನ್. ಇಷ್ಟೇ ಅಲ್ಲ ನನ್ನ ಮನೆಯಿಂದ ಕಚೇರಿ ಕೇವಲ 2 ನಿಮಿಷ ಮಾತ್ರ. ಹೀಗಾಗಿ ನಾನು ವಾರದ ಎಲ್ಲಾ ದಿನ ಕಚೇರಿಗೆ ತೆರಳುತ್ತೇನೆ ಎಂದಿದ್ದಾಳೆ. ಈ ಸ್ಕ್ರೀನ್ ಶಾಟ್‌ನ್ನು ಯುವತಿ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾಳೆ.  ಬಳಿಕ ನಡೆದ ಘಟನೆ ಹಾಗೂ ಆಕೆಯ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾಳೆ.

ನಾನು ನನ್ನ ಭಾವಿ ಪ್ರಿಯತಮನಾಗುವ ಸಾಧ್ಯತೆ ಹೆಚ್ಚಿದ ಹುಡುಗನ ಬಳಿ ಮಾತನಾಡುತ್ತಿದ್ದೆ. ಆದರೆ ಈತ ಕೆಲಸ ಬಗ್ಗೆ ಭಾರಿ ಹೆಮ್ಮೆಯಿಂದ ಉತ್ಸಾಹದಿಂದ ಮಾತನಾಡುತ್ತಿದ್ದ. ಆತನ ಕಂಪಿನಿ ಹೈಬ್ರಿಡ್ ಮಾಡೆಲ್‌‌ನಲ್ಲಿ ಕೆಲಸ ಮಾಡಲು ಅನುಮತಿ ನೀಡಿದೆ. ಆದರೆ ಈತ ವಾರದ 7 ದಿನವೂ ಕೇಚರಿಗೆ ತೆರಳುತ್ತಾನೆ. ಕಚೇರಿಯಲ್ಲಿ ಯಾರಾದರೂ ಕ್ರಶ್ ಇರಬಹುದೇ ಎಂದು ಕೇಳಿದಾಗ ಇಲ್ಲಾ ಎಂದಿದ್ದಾನೆ. ಹೀಗಾಗಿ ಆತನಿಗೆ ರೆಡ್ ಫ್ಲ್ಯಾಗ್ ನೀಡಿದ್ದೇನೆ ಎಂದು ಈಕೆ ಹೇಳಿಕೊಂಡಿದ್ದಾಳೆ. ಇಷ್ಟೇ ಅಲ್ಲ ಈತ ನಾರಾಯಣಮೂರ್ತಿಯ ಡೈ ಹಾರ್ಡ್ ಫ್ಯಾನ್ ಆಗಿರಬಹುದು ಎಂದು ಯೋಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಈಕೆಯ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಯುವಕ ಕಚೇರಿಗೆ ತೆರಳಿ ಕೆಲಸ ಮಾಡುವುದನ್ನು ಬೆಂಬಲಿಸಿದ್ದಾರೆ. ಮನೆಯಿಂದ 2 ನಿಮಿಷ ದೂರದಲ್ಲಿ ಕಚೇರಿ ಇದೆ. ಮನೆಯಿಂದ ಕೆಲಸ ಮಾಡುವುದಕ್ಕಿಂತ ಕಚೇರಿಯಲ್ಲಿ ಕೆಲಸ ಮಾಡುವುದು ಸುಲಭ ಎಂದು ಹಲವರು ಉತ್ತರಿಸಿದ್ದಾರೆ. ಇನ್ನು ಇಲ್ಲಿ ಆತ ಪ್ರತಿ ದಿನ ಕಚೇರಿಗೆ ಹೋಗುತ್ತಾನೆ ಎಂದಿರುವುದೇ ಸಮಸ್ಸೆ. ಎಲ್ಲಾ ದಿನ ಕಚೇರಿಯಲ್ಲಿ ಕಳೆದರೇ ಡೇಟಿಂಗ್, ಪ್ರೀತಿ ಮಾಡಿದರೆ ಕತೆ ಏನು? ಇದು ಇಲ್ಲಿನ ನಿಜವಾದ ಸಮಸ್ಯೆ ಎಂದು ಕೆಲವರು ಸೂಚಿಸಿದ್ದಾರೆ. 

70 ಗಂಟೆ ಕೆಲ್ಸ ನಿಮ್ಗೆ ಕೋಟಿ ರೂ ಕೊಡುತ್ತೆ, ಉದ್ಯೋಗಿ ಕತೆ ಏನು?ಮೂರ್ತಿಗೆ ನಮಿತಾ ಥಾಪರ್ ಪ್ರಶ್ನೆ!

ನಾರಾಯಣ ಮೂರ್ತಿ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿ ಭಾರಿ ಚರ್ಚೆ ಹುಟ್ಟುಹಾಕಿದ್ದರು. ಇದೀಗ  7 ದಿನ ಕಚೇರಿಗೆ ತೆರಳುತ್ತೇನೆ ಎಂದವನ ಡೇಟಿಂಗ್ ಮಾಡಲು ಕೂಡ ಹುಡುಗಿ ಒಪ್ಪುತ್ತಿಲ್ಲ. ಹೀಗಿರುವಾಗ 70 ಗಂಟೆ ಕೆಲಸ ಮಾಡಿದರೆ ಗತಿ ಏನು ಅನ್ನೋ ಚರ್ಚೆ ಮತ್ತೆ ಜೋರಾಗುತ್ತಿದೆ.
 

click me!