ಮದುವೆ ದಿನ ನಾಗಚೈತನ್ಯಗೆ ಸಮಂತಾ ಹೇಳಿದ ಮಾತಿದು: ಹಳೆ ವೀಡಿಯೋ ಈಗ ವೈರಲ್

By Anusha Kb  |  First Published Aug 29, 2024, 11:56 AM IST

ನಾಗಚೈತನ್ಯ ಹಾಗೂ ಸಮಂತಾ ಮದುವೆಯ ಹಳೆ ವೀಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಸಮಂತಾ ಆಡಿದ ಮಾತುಗಳು ಅಭಿಮಾನಿಗಳನ್ನು ಭಾವುಕರಾಗಿಸುತ್ತಿದೆ.


ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ ಪರಸ್ಪರ ದೂರಾಗಿ ಹಲವು ವರ್ಷಗಳೆ ಕಳೆದಿವೆ. ಈಗ ನಾಗಚೈತನ್ಯ ಮಾಡೆಲ್ ಶೋಭಿತಾ ಧುಲ್ಲಿಪಲ ಜೊತೆ ಹೊಸ ಜೀವನ ಶುರು ಮಾಡಲು ಮುಂದಾಗಿದ್ದು, ಕೆಲ ದಿನಗಳ ಹಿಂದಷ್ಟೇ ವಿವಾಹ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಆದರೆ ಈಗ ನಾಗಚೈತನ್ಯ ಹಾಗೂ ಸಮಂತಾ ಮದುವೆಯ ಹಳೆ ವೀಡಿಯೋವೊಂದು ವೈರಲ್ ಆಗಿದ್ದು, ಈ ವೀಡಿಯೋ ಸಮಂತಾ ಅಭಿಮಾನಿಗಳನ್ನು ಭಾವುಕರನ್ನಾಗಿಸುತ್ತದೆ.

ಸಮಂತಾ ರುತ್ ಪ್ರಭು ಹಾಗೂ ನಾಗಚೈತನ್ಯ 2017ರಲ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅದೇನಾಯ್ತೋ ಏನೋ ಇಬ್ಬರು 2021ರ ವೇಳೆಗಾಗಲೇ ಇಬ್ಬರೂ ಪರಸ್ಪರ ದೂರಾಗಿ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಈಗ ಎರಡು ವರ್ಷಗಳ ನಂತರ ನಾಗಚೈತನ್ಯ ಶೋಭಿತಾ ಜೊತೆ ಮರು ಮದುವೆಗೆ ಸಿದ್ಧವಾಗಿದ್ದರೆ, ಅತ್ತ ಸಮಂತಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸಮಂತಾ ಹಾಗೂ ನಾಗಚೈತನ್ಯ ಮದುವೆಯನ್ನು ಮಾತ್ರ ಅವರ ಅಭಿಮಾನಿಗಳಿಗೆ ಮರೆಯಲಾಗುತ್ತಿಲ್ಲ. ಅದೇ ರೀತಿ ಈಗ ಅವರ ಮದುವೆಯ ಹಳೇ ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಸಮಂತಾ ಆಡಿದ ಮಾತುಗಳು ಅಭಿಮಾನಿಗಳನ್ನು ಭಾವುಕರಾಗಿಸುತ್ತಿದೆ.

Tap to resize

Latest Videos

ಮದುವೆ ದಿನ ಏನಂದರು ಸಮಂತಾ?

ನಾಗಚೈತನ್ಯರನ್ನು ಗಾಢವಾಗಿ ಪ್ರೀತಿಸುತ್ತಿದ್ದ ಸಮಂತಾ, ನಾಗಚೈತನ್ಯರನ್ನು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ  ಮದುವೆಯಾಗಿದ್ದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗುವ ಸಂದರ್ಭದಲ್ಲಿ ಆಕೆ ಮಾತನಾಡುತ್ತಾ ಮುಂದೊಂದು ದಿನ ನೀನು ಉತ್ತಮ ತಂದೆಯಾಗಬಲ್ಲೆ ಎಂದು ಹೇಳಿದ್ದರು. ನಾಗಚೈತನ್ಯ ಜೊತೆ ತುಂಬಾ ಇಷ್ಟಪಟ್ಟು ಮದುವೆಯಾಗಿದ್ದ ಸಮಂತಾ ಭವಿಷ್ಯದಲ್ಲಿ ನಾಗಚೈತನ್ಯ ತನ್ನ ಮಕ್ಕಳಿಗೆ ಉತ್ತಮ ತಂದೆಯಾಗುವ ಕನಸು ಕಂಡಿದ್ದರು. ಅದನ್ನೇ ಮದುವೆ ದಿನ ಅವರು ಉದ್ಘರಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಕೆಲ ವರ್ಷಗಳ ದಾಂಪತ್ಯದ ನಂತರ ಇವರಿಬ್ಬರೂ ಪರಸ್ಪರ ದೂರಾಗಿದ್ದು, ಅಭಿಮಾನಿಗಳಿಗೆ ಮಾತ್ರ ಅದನ್ನು ಸಹಿಸಲಾಗುತ್ತಿಲ್ಲ. 

ಮಗ ನಾಗಚೈತನ್ಯ ಮೇಲೆ ಕೋಪಗೊಂಡ ಲಕ್ಷ್ಮೀ ದಗ್ಗುಬಾಟಿ: ಸಮಂತಾ ಜೊತೆಗಿನ ಡಿವೋರ್ಸ್ ಕಾರಣಾನಾ?

ವೈರಲ್ ಆದ ಹಳೆಯ ವೀಡಿಯೋದಲ್ಲಿ ಸಮಂತಾ ಬಿಳಿ ಬಣ್ಣದ ಸುಂದರವಾದ ಉದ್ದನೇಯ ಮದುವೆ ಗವನ್‌ನಲ್ಲಿ ಕಂಗೊಳಿಸುತ್ತಿದ್ದರೆ, ನಾಗಚೈತನ್ಯ ಕಪ್ಪು ಬಣ್ಣದ ಟುಕ್ಸೆಡೊ ಧರಿಸಿದ್ದರು. ನಾಗಚೈತನ್ಯ ಆಕೆಯನ್ನು ಪ್ರಿನ್ಸಸ್‌ ಚಾರ್ಮಿಂಗ್ ಎಂದು ಕರೆಯುತ್ತಿದ್ದಂತೆ ಭಾವುಕಳಾದ ಸಮಂತಾ ಆತನನ್ನು ಗ್ರೇಟೆಸ್ಟ್ ಮ್ಯಾನ್ ಎಂದು ಕರೆದು ಒಂದು ದಿನ ನೀನು ಉತ್ತಮ ತಂದೆಯಾಗುವೆ ಎಂಬ ನಂಬಿಕೆ ನನಗಿದೆ ಎಂದು ಹೇಳುತ್ತಾರೆ. 

ನನ್ನ ಧ್ವನಿಯನ್ನು ಬದಲಾಯಿಸದೆಯೇ ಎಲ್ಲಾ ವಾದಗಳನ್ನು ಹೇಗೆ ಪರಿಹರಿಸಿಕೊಳ್ಳುವೆನೋ ಹಾಗೆಯೇ ಅಳುವ ಮೂಲಕ ನಾನು ಏನನ್ನೂ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ಆದರೆ ನಿಮ್ಮಿಂದಾಗಿ ನಾನು ನಿಧಾನವಾಗಿ ಮತ್ತು ಸ್ಪಷ್ಟವಾಗಿ ನಾನು ಆಗಬೇಕೆಂದು ಕನಸು ಕಂಡಿದ್ದೇನೆ ಎಂದು ಭಾವಿಸುತ್ತೇನೆ. ನೀವು ನನಗೆ ತಿಳಿದಿರುವ ಅತ್ಯಂತ ಶ್ರೇಷ್ಠ ವ್ಯಕ್ತಿ ಮತ್ತು ಒಂದು ದಿನ ನೀವು ನಮ್ಮ ಸುಂದರ ಮಗುವಿಗೆ ಪರಿಪೂರ್ಣ ತಂದೆಯಾಗುತ್ತೀರಿ ಎಂದು ನನಗೆ ತಿಳಿದಿದೆ. ನಾನು ನಿಮ್ಮನ್ನು ನೂರು ಜನ್ಮದಲ್ಲಿ ಮತ್ತು ನೂರು ಪ್ರಪಂಚಗಳಲ್ಲಿ ಮತ್ತು ಯಾವುದೇ ವಾಸ್ತವದಲ್ಲಿ ಆಯ್ಕೆ ಮಾಡುತ್ತೇನೆ. ನಾನು ನಿಮ್ಮನ್ನು ಆರಿಸಿಕೊಳ್ಳುತ್ತೇನೆ ಸಮಂತಾ ಹೇಳುತ್ತಾರೆ. ಮಾತಿನ ನಂತರ ಅವರು ಪರಸ್ಪರ ಉಂಗುರಗಳನ್ನು ಬದಲಾಯಿಸಿಕೊಳ್ಳುತ್ತಾರೆ. 

Naga Chaitanya: ನಾಗಚೈತನ್ಯ- ಶೋಭಿತಾ ಟ್ರೋಲ್ ಆಗುತ್ತಿರುವುದ್ಯಾಕೆ? ಶೋಭಿತಾಳೇ ಯಾಕೆ ಟಾರ್ಗೆಟ್?

ಆದರೆ ಸಮಂತಾ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆಕೆಯ ಏಳು ಬೀಳಿನ ಜೀವನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆತ ಆಕೆಯನ್ನು ಪ್ರೀತಿಸುವುದಕ್ಕಿಂತ ಹೆಚ್ಚು ಆಕೆ ಆತನನ್ನು ಪ್ರೀತಿಸುತ್ತಿದ್ದಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 'ಆದರೆ ಜನ ಹೇಳ್ತಿದ್ರು ಆಕೆಗೆ ಮಕ್ಕಳು ಬೇಡವಂತೆ ಎಂದು' ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಹಿಳೆಯೇ ಆಗಲಿ ಪುರುಷನೇ ಆಗಲಿ ಯಾರೇ ನಿಜವಾಗಿ ಪ್ರೀತಿಸುತ್ತಾರೋ ಅವರ ಹೃದಯ ಯಾವಾಗಲು ಒಡೆದಿರುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇತ್ತ ನಾಗಚೈತನ್ಯ ಹಾಗೂ ಶೋಭಿತಾ ಅವರ ವಿವಾಹ ನಿಶ್ಚಿತಾರ್ಥ ಆಗಸ್ಟ್ 8 ರಂದು ನಡೆದಿದೆ. 2022ರಿಂದಲೂ ಇವರಿಬ್ಬರು ಡೇಟಿಂಗ್‌ನಲ್ಲಿದ್ದರು ಎಂಬ ವರದಿ ಇದೆ. ಇವರು ಅಭಿಮಾನಿಗಳು ಇವರು ಜೊತೆಯಾಗಿ ತಿರುಗುತ್ತಿರುವುದನ್ನು ಆಗಾಗ ಗುರುತಿಸುತ್ತಿದ್ದರು. ಆದರೆ ಇವರಿಬ್ಬರೂ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ, ಆದರೆ ಈಗ ಮನೆಯವರ ಒಪ್ಪಿಗೆಯೊಂದಿಗೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ವಿವಾಹ ಬಂಧನಕ್ಕೆ ಕಾಲಿಡಲಿದ್ದಾರೆ. 

 

click me!