ಮನು ಭಾಕರ್ ಈಗ ಭಾರತೀಯ ಯುವಜನರ, ಕ್ರೀಡಾಪ್ರಿಯರ ಹೊಸ ಎದೆಬಡಿತ. ಹಾಗೇ ನ್ಯಾಷನಲ್ ಕ್ರಶ್ಶು ಕೂಡ! ಈಕೆ ಇತ್ತೀಚೆಗೆ ಆಕೆಗೆ ಒಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ಆಕೆ ಉತ್ತರಿಸಿದ್ದು ನೋಡಿ...
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್- 2024ರಲ್ಲಿ ಎರಡು ಕಂಚಿನ ಪದಕ ಗೆದ್ದ ಬಳಿಕ ಹೊಸಾ ನ್ಯಾಷನಲ್ ಕ್ರಶ್ಶು. ಈ ಏಸ್ ಶೂಟರ್ ಗಳಿಸಿದ ಕಂಚುಗಳು ಚಿನ್ನಕ್ಕಿಂತಾ ಹೆಚ್ಚು! ಒಲಂಪಿಕ್ ಗೇಮ್ಸ್ ಗ್ರಾಮದಿಂದ ಬಂ ಬಳಿಕ ಈಕೆಯನ್ನು ಭಾರತೀಯ ಮಾಧ್ಯಮಗಳು ಮುತ್ತಿಕೊಂಡಿವೆ. ಹಲವಾರು ಸಂದರ್ಶನಗಳಲ್ಲಿ ಆಕೆ ಪಾಲ್ಗೊಂಡಿದ್ದಾಳೆ. ಎಲ್ಲ ಸಂದರ್ಶನಗಳಲ್ಲೂ ಕಾಮನ್ ಆಗಿ ಕೇಳಿರುವ ಪ್ರಶ್ನೆ ಎಂದರೆ ಚಿನ್ನದ ಹುಡುಗ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಜೊತೆ ನಿನ್ನ ಕೆಮಿಸ್ಟ್ರಿ ಏನು ಅನ್ನುವುದು. ಅದಕ್ಕೆ ಕಾರಣ ಮನು ಮತ್ತು ನೀರಜ್ ಮಾತಾಡುತ್ತಾ ಇದ್ದ ವಿಡಿಯೋ ಬಹಿರಂಗ ಆದದ್ದು. ಇಬ್ಬರೂ ಅಥ್ಲೀಟ್‌ಗಳು ಒಲಿಂಪಿಕ್ಸ್ ನಂತರದ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡರು ಮತ್ತು ಅವರ ಆಪ್ತ ಸಂವಾದದ ವೀಡಿಯೊ ತ್ವರಿತವಾಗಿ ವೈರಲ್ ಆಯಿತು. ಅವರಿಬ್ಬರ ನಡುವಿನ ರೊಮ್ಯಾಂಟಿಕ್ ವದಂತಿಗಳನ್ನು ಹುಟ್ಟುಹಾಕಿತು.
ಇತ್ತೀಚಿನ ಒಂದು ಸಂದರ್ಶನದಲ್ಲಿ ಭಾಕರ್ ಅವರನ್ನು ಒಂದು ವಿಚಿತ್ರ ಪ್ರಶ್ನೆ ಕೇಳಲಾಯಿತು. "ನೀವು ಒಂದು ದಿನ ಯಾರಾದರೂ ಒಬ್ಬ ಕ್ರೀಡಾಪಟು ಜೊತೆಗೆ ಕಳೆಯಲು ಇಷ್ಟಪಡುವುದಾದರೆ, ಯಾವ ಕ್ರೀಡಾಳು ಹೆಸರು ಹೇಳುತ್ತೀರಿ?" ಇದಕ್ಕೆ ಮನು ಭಾಕರ್ ನಾಲ್ಕು ಮಂದಿಯ ಹೆಸರು ಹೇಳಿದಳು. ಈ ಹೆಸರುಗಳಲ್ಲಿ ನೀರಜ್ ಚೋಪ್ರಾ ಹೆಸರು ಇರಲಿಲ್ಲ!
undefined
ಹಾಗಿದ್ದರೆ ಮನು ಭಾಕರ್ ಹೆಸರಿಸಿದ್ದು ಯಾರನ್ನು? ಮೂವರು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಹೆಸರು ಹೇಳಿದಳು. ಜೊತೆಗೆ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್. ಆಕೆಗೆ ಕ್ರಿಕೆಟ್ ತುಂಬ ಇಷ್ಟ ಎಂಬುದು ಇದರಿಂದ ರುಜುವಾತಾಗುತ್ತದೆ. "ಬಹುಶಃ ನಾನು ನನ್ನ ಕೆಲವು ಮೆಚ್ಚಿನ ಆಟಗಾರರನ್ನು ಹೆಸರಿಸುತ್ತೇನೆ. ಉಸೇನ್ ಬೋಲ್ಟ್ ಅವರಲ್ಲಿ ಒಬ್ಬರು. ನಾನು ಅವರ ಪುಸ್ತಕವನ್ನು ಹಲವು ಬಾರಿ ಓದಿದ್ದೇನೆ. ಅವರ ವೃತ್ತಿಬದುಕಿನ ಪ್ರಯಾಣದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅವರ ಸಂದರ್ಶನಗಳನ್ನು ನೋಡಿದ್ದೇನೆ. ತದನಂತರ, ಭಾರತದಲ್ಲಿ, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಧೋನಿ ಸರ್ ಮತ್ತು ವಿರಾಟ್ ಕೊಹ್ಲಿ. ಅವರಲ್ಲಿ ಯಾರೊಂದಿಗಾದರೂ ಒಂದು ಗಂಟೆ ಕಳೆಯುವುದು ಕೂಡ ತುಂಬ ಗೌರವದ ವಿಷಯ!" ಎಂದಿದ್ದಾರೆ ಭಾಕರ್.
ಶೂಟರ್ ಆಗಿ ಆಕೆಯ ಯಶಸ್ಸಿನ ಹೊರತಾಗಿಯೂ, ಭಾಕರ್ ಯಾವಾಗಲೂ ವೈವಿಧ್ಯಮಯ ಆಸಕ್ತಿ ಹೊಂದಿದ್ದಾರೆ. ಅದರಲ್ಲೂ ಬೇರೆ ಕ್ರೀಡೆಗಳ ಬಗೆಗೆ. ಜಾಗತಿಕವಾಗಿ ಭಾರತವು ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುವುದನ್ನು ನೋಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು. "ಕ್ರೀಡಾಪಟುವಾಗಿ ನಾನು ಕೊಡುಗೆ ನೀಡಲು ಬಯಸುತ್ತೇನೆ. ಭಾರತದಲ್ಲಿ ಕ್ರೀಡೆಗಳಿಗೆ ಗಮನಾರ್ಹವಾದ ನೆರವು ಕೊಡಬೇಕು. ಆಗ ದೇಶವು ಸಾಧ್ಯವಾದಷ್ಟು ಪದಕಗಳನ್ನು ಗೆಲ್ಲುವುದನ್ನು ನೋಡಬಹುದು. ಮುಂಬರುವ ಕ್ರೀಡಾಪಟುಗಳೊಂದಿಗೆ ನನ್ನ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದ್ದೇನೆ" ಎಂದು ಅವರು ಹೇಳಿದರು.
ಆ ಎರಡು ವಿಷ್ಯದಿಂದ ಶಿಖರ್ ಧವನ್ ಕೆರಿಯರ್ ಬೇಗ ಕ್ಲೋಸ್ ಆಯ್ತಾ..?
ಭಾಕರ್ ವಿಶೇಷವಾಗಿ ಕ್ರೀಡೆಗಳಲ್ಲಿ ಮಹಿಳೆಯರಿಗೆ ಎದುರಾಗುವ ಸವಾಲುಗಳನ್ನು ಪ್ರಸ್ತಾಪಿಸಿದರು. ಸಾಮಾಜಿಕ ವರ್ತನೆಗಳಲ್ಲಿ ಬದಲಾವಣೆಗ ಆಗಬೇಕು. ಕುಟುಂಬದ ಬೆಂಬಲ ಹೆಚ್ಚು ಇರಬೇಕು ಎಂದು ಒತ್ತಿಹೇಳಿದರು. ಪೋಷಕರು ಹೆಣ್ಣು ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸಬೇಕು. ಅವರನ್ನು ರಕ್ಷಿಸಿ, ಅದು ಅವರಿಗೆ ಬಲವಾದ ಮತ್ತು ಹೆಚ್ಚು ಆತ್ಮವಿಶ್ವಾಸವನ್ನು ನೀಡುತ್ತದೆ. ಅದೆಲ್ಲ ಆಕೆಯ ಮನೆಯಿಂದಲೇ ಆರಂಭವಾಗಬೇಕು. ಶಿಕ್ಷಣವೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನುತ್ತಾರೆ ಮನು.
ತಮ್ಮ ಮತ್ತು ನೀರಜ್ ಚೋಪ್ರಾ ನಡುವಿನ ವದಂತಿಗಳ ಬಗ್ಗೆ ಮನು ಸ್ಪಷ್ಟನೆ ನೀಡಿದ್ದಾರೆ. ನೀರಜ್ ಚೋಪ್ರಾ ಜೊತೆ ಮನು ಭಾಕರ್ ತಾಯಿ ಮಾತನಾಡುತ್ತಿರುವ ವಿಡಿಯೋ ಹಲವು ವದಂತಿಗಳಿಗೆ ಕಾರಣವಾಗಿತ್ತು. ಅಂದು ನೀರಜ್ ಜೊತೆ ಅಮ್ಮ ಏನು ಮಾತಾಡಿದ್ದಾರೆ ಎಂಬುದು ನನಗೆ ನಿಜವಾಗಿಯೂ ಗೊತ್ತಿಲ್ಲ. ಆ ಕ್ಷಣದಲ್ಲಿ ನಾನು ಅಲ್ಲಿ ಇರಲಿಲ್ಲ. 2018ರಿಂದ ನಾನು ಮತ್ತು ನೀರಜ್ ಕೆಲವು ಇವೆಂಟ್‌ಗಳಲ್ಲಿ ಭೇಟಿಯಾಗುತ್ತಿರುತ್ತೇವೆ. ಭೇಟಿಯಾದಾಗ ಕುಶಲೋಪಚಾರ ಹಾಗೂ ಕಾರ್ಯಕ್ರಮಗಳ ಮಾತನಾಡುತ್ತೇವೆ. ನಾನು ಹೆಚ್ಚು ನೀರಜ್ ಜೊತೆ ಮಾತನಾಡಿಲ್ಲ. ವೈರಲ್ ಆಗುತ್ತಿರುವ ವದಂತಿಗಳು ಯಾವುದೂ ನಿಜವಲ್ಲ ಎಂದು ಮನು ಭಾಕರ್ ಸ್ಪಷ್ಟನೆ ನೀಡಿದ್ದಾರೆ.
ಒಂದೊಳ್ಳೆ ಕಾರ್ಯಕ್ಕೆ ರಾಹುಲ್ ದಂಪತಿ ನಡೆಸಿದ ಹರಾಜು: ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಕೊಹ್ಲಿ ಜೆರ್ಸಿ..!