ದಿನಕ್ಕೆ10 ಬಾರಿ ಯಾರಾದ್ರೂ ಮಾಡ್ತಾರಾ? ಗಂಡನ ವರ್ತನೆಗೆ ಬೇಸತ್ತು ತವರು ಸೇರಿದ ಪತ್ನಿ!

By Mahmad Rafik  |  First Published Aug 28, 2024, 1:35 PM IST

ನನ್ನ ಗಂಡನೋರ್ವ ಸೆಕ್ಸ್ ಪೀಡಕ. ಪದೇ ಪದೇ ಲೈಂಗಿಕ ಸಂಬಂಧ  ಬೆಳೆಸುತ್ತಾನೆ. ಆತನ ಜೊತೆ ನಾನಿರಲಾರೆ ಎಂದು ಮಹಿಳೆ ಗಂಡನ ಮನೆ  ತೊರೆದು ತವರು  ಸೇರಿದ್ದಾರೆ,


ಪಾಟನಾ: ಬಿಹಾರದ ಪೂರ್ಣಿಯಾ ಎಂಬಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮದುವೆಯಾದ ಒಂದೇ  ವರ್ಷಕ್ಕೆ ಮಹಿಳೆ ತವರು ಸೇರಿದ್ದಾಳೆ. ಇತ್ತ ನನ್ನ ಪತ್ನಿ  ಮನೆಯಲ್ಲಿನ ಚಿನ್ನಾಭರಣಗಳನ್ನು ಕದ್ದು ತವರಿಗೆ ಓಡಿ ಹೋಗಿದ್ದಾಳೆ  ಎಂದು ಗಂಡ ದೂರು ದಾಖಲಿಸಿದ್ದಾನೆ. ದೂರಿನ ಅನ್ವಯ ಪೊಲೀಸರು ಮಹಿಳೆಯನ್ನು ಕರೆಸಿ ವಿಚಾರಣೆ ನಡೆಸಿದಾಗ ಪ್ರಕರಣದ ಅಸಲಿ ಕಹಾನಿ ಬೆಳಕಿಗೆ ಬಂದಿದೆ. ಇದು ಗಂಡ-ಹೆಂಡ್ತಿಯ ಖಾಸಗಿ ವಿಷಯ ಎಂಬವುದು ಪೊಲೀಸರಿಗೆ ತಿಳಿದು ಬಂದಿದೆ. ನಂತ ಪೊಲೀಸರು ಈ ಪ್ರಕರಣವನ್ನು  ಕೌಟುಂಬಿಕ ಸಲಹಾ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ಇಲ್ಲಿ ಇಬ್ಬರಿಗೂ ಎಷ್ಟೇ ತಿಳಿ ಹೇಳಿದ್ರೂ ಪ್ರತ್ಯೇಕವಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ. 

ನನ್ನಿಂದ ಗಂಡನ ಜೊತೆ ಜೀವನ ನಡೆಸಲು ಸಾಧ್ಯವಿಲ್ಲ. ಗಂಡ ಪದೇ ಪದೇ ಲೈಂಗಿಕ ಸಂಬಂಧ ಬೆಳೆಸುತ್ತಾನೆ. ಆತ ಯಾವಾಗಲೂ ಅದೇ ಯೋಚನೆಯಲ್ಲಿರುತ್ತಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ದಿನಕ್ಕೆ 10 ಬಾರಿ ಯಾರು ಸೆಕ್ಸ್ ಮಾಡ್ತಾರೆ ಎಂದು ಪ್ರಶ್ನಿಸಿರುವ ಮಹಿಳೆ, ಆತನ ಮನೆಯಲ್ಲಿರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಿಳೆ ಪೂರ್ಣಿಯಾದ ಡಗರಾವು ಕ್ಷೇತ್ರದ ನಿವಾಸಿಯಾಗಿದ್ದಾರೆ. 

Tap to resize

Latest Videos

ಪೊಲೀಸರ ಪ್ರಕಾರ, ಮಹಿಳೆಯ ಪತಿ ಕೆಲ ದಿನಗಳನ ಹಿಂದೆ ಪೂರ್ಣಿಯಾದ ಎಸ್‌ಪಿ ಅವರನ್ನು ಭೇಟಿಯಾಗಿ ದೂರು ಸಲ್ಲಿಕೆ ಮಾಡಿದ್ದರು. ದೂರಿನಲ್ಲಿಮ ಮದುವೆಯಾಗಿ ಒಂದು ವರ್ಷವಾಯ್ತು. ಇದೀಗ ಪತ್ನಿ ಮನೆಯಲ್ಲಿರುವ ಎಲ್ಲಾ ಚಿನ್ನಾಭರಣಗಳನ್ನು ತೆಗೆದುಕೊಂಡು ತವರು ಸೇರಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಸ್ವತಃ ಎಸ್‌ಪಿ ಅವರೇ ಮಹಿಳೆಯನ್ನು ಕರೆಸಿ ವಿಚಾರಿಸಿದಾಗ ಇದೊಂದು ಕೌಟುಂಬಿಕ ಸಮಸ್ಯೆ ಎಂದು  ಸಲಹಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು.

ಹಾಲು ಕುಡಿಯಲು ಪತ್ನಿಗೆ ಬಿಗ್ ಆಫರ್ ಕೊಟ್ಟ ಗಂಡ, ವಿಡಿಯೋ ನೋಡಿದವರು ನಕ್ಕು ನಕ್ಕು ಸುಸ್ತಾದ್ರು!

ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಇಬ್ಬರನ್ನು ಮುಖಾಮುಖಿಯಾಗಿ ಕೂರಿಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಈ ವೇಳೆಯೂ ಪತಿ ದೂರಿನಲ್ಲಿ ಮಾಡಿದ ಆರೋಪಗಳನ್ನೇ ಪುನುರಚ್ಚಿಸಿದ್ದರು. ಇತ್ತ ಪತ್ನಿ, ಮದುವೆಯಲ್ಲ ತನ್ನ ಪೋಷಕರು ನೀಡಿದ್ದ ಚಿನ್ನಾಭರಣಗಳನ್ನು ಮಾತ್ರ ತೆಗೆದುಕೊಂಡು ಬಂದಿದ್ದೇನೆ. ಯಾವುದೇ ಕಳ್ಳತನ ಮಾಡಿಲ್ಲ ಎಂದು ಪತಿಯ ಆರೋಪವನ್ನು ಅಲ್ಲಗಳೆದಿದ್ದಾರೆ. ಇತ್ತ ಪತಿಯ ಪೋಷಕರು  ಸಹ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ನನ್ನ ಪತಿ ಸೆಕ್ಸ್‌ಗಾಗಿ ಹಾತೊರೆಯುತ್ತಿರುತ್ತಾನೆ. ದಿನಕ್ಕೆ 10 ಬಾರಿ ದೈಹಿಕ ಸಂಬಂಧ ಬೆಳೆಸುತ್ತಾನೆ. ಇದೇ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು. ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅಂತಿಮವಾಗಿ ನ್ಯಾಯಾಲಯದ ಮೂಲಕ ಡಿವೋರ್ಸ್ ಪಡೆದುಕೊಳ್ಳಲು ಜೋಡಿ ಮುಂದಾಗಿದ್ದಾರೆ.

ಮದುವೆಗೆ ಪ್ರಿಯಕರನ ಕಂಡೀಷನ್.. 3 ವರ್ಷದ  ಮಗಳ ಉಸಿರು ನಿಲ್ಲಿಸಿ, ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಕಟುಕಿ ತಾಯಿ

click me!