ಚುಂಬನಕ್ಕಾಗಿಯೇ ಸ್ಪರ್ಧೆಯೊಂದು ಇತ್ತು ಎಂದರೆ ನೀವು ನಂಬುತ್ತೀರಾ? ಹೌದು, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು. ಆದರೆ ಕೆಲ ವರ್ಷಗಳ ಹಿಂದೆ ಅದನ್ನು ಕ್ಯಾನ್ಸಲ್ ಮಾಡಲಾಯಿತು. ಅದಕ್ಕೇನು ಕಾರಣ?
ಗಮನಾರ್ಹ ಸಾಧನೆಗಳನ್ನು ಗುರುತಿಸಲು ಗಿನ್ನೆಸ್ ವಿಶ್ವ ದಾಖಲೆಯಿದೆ. ಹಲವಾರು ಸ್ಪರ್ಧೆಗಳು ಇದರಲ್ಲಿ ಒಳಗೊಂಡಿರುತ್ತವೆ. ಹಾಗೆಯೇ ಇದು ಸುದೀರ್ಘವಾದ ಚುಂಬನದ ಸ್ಪರ್ಧೆಯನ್ನೂ ಒಳಗೊಂಡಿತ್ತು ಅನ್ನೋದು ನಿಮಗೆ ಗೊತ್ತಿದ್ಯಾ? ಹೌದು, ದೀರ್ಘಕಾಲದ ಕಿಸ್ ವಿಶ್ವ ದಾಖಲೆ ಎಂಬ ವಿಭಾಗವೊಂದಿತ್ತು. ಆದರೆ ಕೆಲ ವರ್ಷಗಳ ಹಿಂದೆ ಅದನ್ನು ಕ್ಯಾನ್ಸಲ್ ಮಾಡಲಾಯಿತು. ರಿಪ್ಲೀಸ್ ಬಿಲೀವ್ ಇಟ್ ಆರ್ ನಾಟ್ ಆಯೋಜಿಸಿದ ಈವೆಂಟ್‌ನಲ್ಲಿ ಥಾಯ್ ದಂಪತಿಗಳಾದ ಎಕ್ಕಾಚಾಯ್ ಮತ್ತು ಲಕ್ಷನಾ ತಿರಾನರತ್ ಅವರು ಪರಸ್ಪರ ಚುಂಬಿಸಿದ ನಂತರ ಸ್ಪರ್ಧೆಯನ್ನು ನಿಲ್ಲಿಸಲಾಯತು. ಇದಕ್ಕೇನು ಕಾರಣ.
ಥಾಯ್ಲೆಂಡ್‌ನ ಪಟ್ಟಾಯದಲ್ಲಿ 2013 ಫೆಬ್ರವರಿ 13ರಂದು ಸ್ಪರ್ಧೆ ಪ್ರಾರಂಭವಾಯಿತು ಮತ್ತು ಎರಡು ದಿನಗಳ ನಂತರ ಪ್ರೇಮಿಗಳ ದಿನದಂದು (Valentines day) ಕೊನೆಗೊಂಡಿತು. ಥಾಯ್ ದಂಪತಿಗಳಾದ ಎಕ್ಕಾಚಾಯ್ ಮತ್ತು ಲಕ್ಷನಾ ತಿರಾನರತ್ 58 ಗಂಟೆ 35 ನಿಮಿಷಗಳ ಕಾಲ ಸುದೀರ್ಘವಾದ ಮುತ್ತು ನೀಡಿದರು. ಆ ನಂತರ ದೀರ್ಘ ಚುಂಬನದ (Long kiss) ವಿಭಾಗವನ್ನು ಕ್ಯಾನ್ಸಲ್ ಮಾಡಲಾಯಿತು. ಇದರ ಹಿಂದಿರುವ ಮುಖ್ಯ ಕಾರಣವೆಂದರೆ, ಈ ಸ್ಪರ್ಧೆಯು (competition) ತುಂಬಾ ಅಪಾಯಕಾರಿಯಾಗಿದೆ ಎಂಬುದನ್ನು ಆಯೋಜಕರು ತಿಳಿದುಕೊಂಡರು. ಇದನ್ನು ಮನಗಂಡು ಈ ಸ್ಪರ್ಧೆಯನ್ನು ನಿಲ್ಲಿಸಲಾಯಿತು.
ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್ ಕುರಿತಾದ ಸ್ವಾರಸ್ಯಕರ ಸಂಗತಿಯಿದು
ದೀರ್ಘ ಚುಂಬನಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯ ನಿಯಮಗಳೇನಿತ್ತು?
– ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಸ್ಪರ್ಧೆಯಲ್ಲಿ ಭಾಗವಹಿಸುವವರು ಚುಂಬನವನ್ನು ನಿಲ್ಲಿಸುವಂತಿರಲಿಲ್ಲ ಮಾತ್ರವಲ್ಲ, ತುಟಿಗೆ ತುಟಿ ಅಂಟಿಕೊಂಡೇ ಇರಬೇಕಿತ್ತು.
-ಒಂದು ವೇಳೆ ಇಬ್ಬರ ತುಟಿ ಬೇರ್ಪಟ್ಟರೆ ಅವರು ಸ್ಪರ್ಧೆಯಿಂದ ಹೊರಗುಳಿಯುತ್ತಾರೆ. ಸ್ಪರ್ಧೆಯ ವೇಳೆ ಸ್ಪರ್ಧಿಗಳಿಗೆ ಸ್ಟ್ರಾ ಮೂಲಕ ದ್ರವಾಹಾರ ಸೇವಿಸಲು ಅನುಮತಿ ನೀಡಲಾಗಿತ್ತು. ಆದರೆ ಆಗಲೂ ತುಟಿಗಳು ಬೇರೆ ಮಾಡುವಂತಿರಲ್ಲಿಲ್ಲ
– ದಂಪತಿಗಳು ಯಾವಾಗಲೂ ಎಚ್ಚರವಾಗಿರಬೇಕಾಗಿತ್ತು. ನಿದ್ದೆ ಹೋಗಬಾರದು. ನಿರಂತರವಾಗಿ ಚುಂಬಿಸುತ್ತಲೇ ಇರಬೇಕು.
- ಸ್ಪರ್ಧೆ ಸಮಯದಲ್ಲಿ ಅವರು ನಿಂತುಕೊಂಡೇ ಇರಬೇಕಿತ್ತು. ವಿಶ್ರಾಂತಿ ವಿರಾಮಗಳಿಗೆ ಅನುಮತಿ ನೀಡಲಾಗುತ್ತಿರಲ್ಲಿಲ್ಲ
– ಸ್ಪರ್ಧೆಯಲ್ಲಿ ಭಾಗವಹಿಸುವ ವೇಳೆ ನ್ಯಾಪಿ ಅಥವಾ ಡೈಪರ್‌ಗಳು ಅಥವಾ ಪ್ಯಾಡ್‌ಗಳನ್ನು ಧರಿಸುವಂತಿಲ್ಲ. ಜೋಡಿಗಳು ಶೌಚಾಲಯವನ್ನು ಬಳಸಲು ಅನುಮತಿಸಲಾಗಿದೆ. ಆದರೆ, ಶೌಚಾಲಯಕ್ಕೆ ಹೋಗುವಾಗ, ಶೌಚ ಮಾಡುವಾಗಲೂ ಚುಂಬಿಸುತ್ತಲೇ ಇರಬೇಕಾಗಿತ್ತು.
International Kissing Day 2023: ಚುಂಬನದ ದಿನ ಆರಂಭವಾಗಿದ್ದು ಯಾವಾಗ, ಈ ದಿನದ ಮಹತ್ವವೇನು?
ಸ್ಪರ್ಧೆಯನ್ನು ನಿಲ್ಲಿಸಲು ಕಾರಣವೇನು?
-ಸ್ಪರ್ಧೆಯ ಆಯೋಜಕರು ಚುಂಬಿಸುವ ಸ್ಪರ್ಧೆ ಹೆಚ್ಚು ಅಪಾಯಕಾರಿಯಾಗಿದೆ ಎಂಬುದನ್ನು ಕಂಡುಕೊಂಡರು.
-ಸ್ಪರ್ಧೆಯಲ್ಲಿ ದಾಖಲೆ ಮಾಡಿರುವವರನ್ನು ಸೋಲಿಸಲು ಚುಂಬಿಸುವ ಸಮಯ ಹೆಚ್ಚು ದೀರ್ಘವಾಗುತ್ತದೆ. ಇದರಿಂದ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ನಿದ್ರಾಹೀನತೆಗೆ ಸಂಬಂಧಿಸಿದ ಅಪಾಯಗಳಿಗೆ ಒಳಗಾಗುವ ಸಾಧ್ಯತೆಯಿತ್ತು.
-ಸೈಕೊಸಿಸ್‌ನಂತಹ ಸಮಸ್ಯೆ ಎದುರಾಗುವ ಅಪಾಯವೂ ಇತ್ತು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೇಳಿದೆ.
-ಈ ದೀರ್ಘ ಚುಂಬನದ ಸ್ಪರ್ಧೆಯು ಹಲವು ಬಗೆಯ ತೊಂದರೆಗಳನ್ನು ಎದುರಿಸಿದ ಹಲವು ನಿರ್ದಶನಗಳಿವೆ.
-1999 ರಲ್ಲಿ, ಇಸ್ರೇಲ್‌ನ ರೆಕಾರ್ಡ್ ಹೋಲ್ಡರ್‌ಗಳಾದ ಕರ್ಮಿತ್ ಟ್ಜುಬೆರಾ ಮತ್ತು ಡ್ರೊರ್ ಒರ್ಪಾಜ್ ಅವರು 30 ಗಂಟೆಗಳ 45 ನಿಮಿಷಗಳ ಕಾಲ ಚುಂಬಿಸಿದ ನಂತರ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಸ್ಪರ್ಧೆಯಲ್ಲಿ ಗೆದ್ದಿದ್ದರೂ, ಅವರು ಅನಾರೋಗ್ಯಕ್ಕೀಡಾದರು.
-37 ವರ್ಷದ ಆಂಡ್ರಿಯಾ ಸರ್ತಿ (ಇಟಲಿ) ತನ್ನ ಗೆಳತಿ ಅನ್ನಾ ಚೆನ್ (ಥಾಯ್ಲೆಂಡ್) ಅವರನ್ನು 31 ಗಂಟೆ 18 ನಿಮಿಷಗಳ ಕಾಲ ಚುಂಬಿಸಿದ್ದರು. ಆದರೆ ಅವರಿಗೆ ಉಸಿರಾಟದ ಸಮಸ್ಯೆಯಾಗಿ ಆಕ್ಸಿಜನ್ ನೀಡಿ ಮರುಜೀವ ನೀಡಲಾಗಿತ್ತು.
-2011ರಲ್ಲಿ ಮಹಿಳೆಯೊಬ್ಬರು 30 ನಿಮಿಷಗಳ ಕಾಲ ಸ್ಪರ್ಧೆಯಲ್ಲಿ ಭಾಗವಹಿಸಿ ಸಾವನ್ನಪ್ಪಿಸಿದ್ದರು. ಇಂಥ ಕಾರಣಗಳನ್ನು ಮನಗಂಡು ಗಿನ್ನಿಸ್ ವಿಶ್ವದಾಖಲೆ ಸ್ಪರ್ಧೆಯಿಂದ ದೀರ್ಘ ಚುಂಬನ ಸ್ಪರ್ಧೆಯನ್ನು ನಿಷೇಧಿಸಲಾಗಿದೆ..