ಎಂಗೇಜ್‌ಮೆಂಟ್ ಫಿಕ್ಸ್ ಆಯ್ತು, ಮದ್ವೆ ಫಿಕ್ಸ್ ಆಯ್ತು ಅನ್ನೋ ಸಮಯದಲ್ಲಿ ಕೆಲವೊಬ್ಬರು ಮನೆಯಿಂದ ಓಡಿ ಹೋಗೋದು ಕಾಮನ್. ಆದ್ರೆ ಇಲ್ಲೊಬ್ಬ ವರ ಮದುವೆ ಮಂಟಪದಿಂದಾನೇ ಓಡಿ ಹೋಗಿದ್ದ. ಆದ್ರೆ ವಧು ಸುಮ್ನಿರ್ತಾಳ. ಭರ್ತಿ 20 ಕಿ.ಮೀ.ವರೆಗೂ ಬೆನ್ನಟ್ಟಿ ಹೋಗಿ ವರನನ್ನು ಮಂಟಪಕ್ಕೆ ವಾಪಾಸ್ ಕರೆತಂದಿದ್ದಾಳೆ.
ಸಿನಿಮಾಗಳಲ್ಲಿ ನಾವೆಲ್ಲಾ ಮದುವೆ ಮನೆಯಲ್ಲಾಗುವ ಲಾಸ್ಟ್ ಮೊಮೆಂಟ್ ಟ್ವಿಸ್ಟ್‌ಗಳನ್ನು ನೋಡಿದ್ದೇವೆ. ಇನ್ನೇನು ವರ ಹುಡುಗಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರ ಗಾಯಬ್, ಇಲ್ಲಾಂದ್ರೆ ಲಾಸ್ಟ್ ಮೊಮೆಂಟ್‌ನಲ್ಲಿ ಹಸೆಮಣೆಯಲ್ಲಿ ಕುಳಿತಿರುವ ವರನೇ ಬೇರೆ. ಅಷ್ಟೇ ಯಾಕೆ ಮದುವೆ ಮಂಟಪಕ್ಕೆ ಲವರ್ ಎಂಟ್ರಿ ಕೊಟ್ಟು ಕಹಾನಿಗೆ ಟ್ವಿಸ್ಟ್ ಕೊಡೋದು ಇದೆ. ಇತ್ತೀಚಿಗೆ ಇದು ನಿಜ ಜೀವನದಲ್ಲೂ ನಡೆಯುತ್ತೆ. ಕೆಲವೊಂದು ಮದುವೆ ಮನೆಗಳಲ್ಲಿ ಇಂಥಾ ಘಟನೆಗಳು ನಡೆದಿರೋದು ವರದಿಯಾಗಿದೆ. ಹಾಗೆಯೇ ಇಲ್ಲೊಂದು ಘಟನೆ ನಡೆದಿದೆ. ಅದ್ಯಾಕೋ ಗೊತ್ತಿಲ್ಲ, ವರ ಮದುವೆ ಮಂಟಪದಿಂದಾನೇ ಓಡಿ ಹೋಗಿದ್ದಾನೆ. ಆದ್ರೆ ಹುಡುಗಿ ಅಷ್ಟಕ್ಕೇ ಅಳ್ತಾ, ರಂಪಾಟ ಮಾಡ್ತಾ ಕೂರ್ಲಿಲ್ಲ. ಬದಲಿಗೆ ..20 ಕಿ.ಮೀ.ವರೆಗೂ ಬೆನ್ನಟ್ಟಿ ವರನನ್ನು ಮಂಟಪಕ್ಕೆ ಕರೆತಂದಿದ್ದಾಳೆ.
ಹೌದು, ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಮದುವೆ (Wedding) ಮಂಟಪದಿಂದ ಓಡಿ ಹೋಗಿದ್ದ ವರನನ್ನು 20 ಕಿ.ಮೀ.ವರೆಗೂ ಬೆಂಬತ್ತಿ ವಧು ವಾಪಸ್ ಕರೆತಂದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಬದೌನ್ ಜಿಲ್ಲೆಯ ಯುವತಿ (Girl) ಸುಮಾರು ಎರಡೂವರೆ ವರ್ಷಗಳಿಂದ ನೆರೆ ಮನೆಯ ಯುವಕನ ಜೊತೆ ಸಂಬಂಧ (Relationship) ಹೊಂದಿದ್ದಳು. ಇಬ್ಬರೂ ಕಾಲೇಜಿನಿಂದಲೇ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೊದಲಿಗೆ ಎರಡೂ ಮನೆಯಲ್ಲಿ ಕುಟುಂಬ ಸದಸ್ಯರು ಈ ಮದುವೆಗೆ ಒಪ್ಪಿರಲ್ಲಿಲ್ಲ. ನಂತರ ಎರಡು-ಮೂರು ಸುತ್ತಿನ ಮಾತುಕತೆಯ ನಂತರ ಎರಡೂ ಮನೆಯಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಮದುವೆಗೆ ದಿನಾಂಕ ಸಹ ನಿಗದಿಪಡಿಸಲಾಯಿತು.
undefined
ವರದಕ್ಷಿಣೆಯಾಗಿ ಏರ್ ಕಂಡೀಷನರ್ ಕೊಡದ್ದಕ್ಕೆ ಸಿಟ್ಟು, ವಧುವನ್ನು ಮಂಟಪದಿಂದ ಕೆಳಕ್ಕೆ ತಳ್ಳಿದ ವರ!
ಮದುವೆಯಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ ವರ
ಮದುವೆಗೆ ಸಿದ್ಧತೆಯನ್ನೂ ಧಾಂ ಧೂಂ ಅಂತ ನಡೆಸಲಾಯಿತು. ದೇವಾಲಯದಲ್ಲಿ ಮಂಟಪವನ್ನೂ ಸಿದ್ಧಪಡಿಸಲಾಗಿತ್ತು. ಆದರೆ ಮದುವೆ ದಿನ ಅದೆಷ್ಟು ಹೊತ್ತು ಕಾದರೂ ವರ ಮದುವೆ ಮಂಟಪಕ್ಕೆ ಬರುವ ಸೂಚನೆಯೇ ಕಾಣಲಿಲ್ಲ. ಈ ಬಗ್ಗೆ ವಧು (Bride) ವರನಿಗೆ ಕರೆ ಮಾಡಿ ವಿಚಾರಿಸಿದಾಗ ತಾಯಿಯನ್ನು ಕರೆದುಕೊಂಡು ಬರಲು ನಿಲ್ದಾಣಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ. ಆದರೆ ವಧುವಿಗೆ ಈ ಮಾತನ್ನು ನಂಬಲು ಸಾಧ್ಯವಾಗಲ್ಲಿಲ್ಲ. ಹೀಗಾಗಿ ಅನುಮಾನಗೊಂಡ ವಧು ಕೂಡಲೇ ಮಂಟಪದಿಂದ ಹೊರಟು ಹೋದಳು.. ಮಂಟಪದಿಂದ ಸುಮಾರು 20 ಕಿ.ಮೀ.ದೂರದಲ್ಲಿ ಬೇರೆ ಊರಿಗೆ ಹೋಗಲು ವರ ಬಸ್ ಗಾಗಿ ಕಾಯುತ್ತಿದ್ದ. ವಧು ಆತನನ್ನು ಹುಡುಕಿ ಮತ್ತೆ ಮದುವೆ ವಾಪಸ್ ಮಂಟಪಕ್ಕೆ ಕರೆ ತಂದಿದ್ದಾಳೆ.
ವಾಹನದಲ್ಲಿ ಬರುವಾಗ ಮತ್ತೆ ಹೈಡ್ರಾಮಾ ನಡೆದಿದ್ದು, ಯುವಕ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಅಲ್ಲದೇ ಇಬ್ಬರ ನಡುವೆ ಸಾಕಷ್ಟು ವಾದ-ವಿವಾದ ನಡೆದಿದೆ. ಕೊನೆಗೂ ಇಬ್ಬರೂ ಮದುವೆ ಮಂಟಪಕ್ಕೆ ತಲುಪಿದ್ದಾರೆ. ನಂತರ ಎರಡೂ ಕುಟುಂದವರ ನಡುವೆ ಮಾತುಕತೆ ನಡೆದು ಮದುವೆಯನ್ನು ಸಾಂಗವಾಗಿ ನೆರವೇರಿಸಲಾಯಿತು.
ವರದಕ್ಷಿಣೆಯಾಗಿ ಬೈಕ್ ಕೇಳಿದ ಮಗನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ತಂದೆ!
ಅಕ್ಕನಿಗೆ ಪ್ರಪೋಸ್ ಮಾಡಿದ, ತಂಗಿಯನ್ನೂ ಮದ್ವೆಯಾದ
ರಾಜಸ್ಥಾನದ ಟೋಂಕ್ ಜಿಲ್ಲೆಯ ನಿವಾಯ್ ಪಟ್ಟಣದ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದ ಧಾರ್ಮಿಕ ಸಮಾರಂಭದಲ್ಲಿ ಯುವ ವರನೊಬ್ಬ ಒಬ್ಬರಲ್ಲ, ಇಬ್ಬರು ವಧುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ರೈತ ಕುಟುಂಬದ 23 ವರ್ಷದ ವರನು ಯುನಿಯಾರಾ ಪಟ್ಟಣದ ಮೋರ್ಜಾಲಾ-ಕಿ-ಜೋನ್‌ಪಾರಿಯಾದ ಇಬ್ಬರು ಸಹೋದರಿಯನ್ನು ಮದುವೆಯಾಗಿದ್ದಾನೆ. ಮಂಟಪದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮದುವೆ ನಡೀತು. ಅಪರೂಪದ ಮದುವೆಯನ್ನು ವೀಕ್ಷಿಸಲು ಆಪ್ತ ಬಂಧುಗಳು ಮಾತ್ರವಲ್ಲದೆ ಎರಡೂ ಕಡೆಯ ಗ್ರಾಮಗಳ ಆಹ್ವಾನಿತ ಅತಿಥಿಗಳೂ ನೆರೆದಿದ್ದರು. ಪುರೋಹಿತರ ವೇದ ಮಂತ್ರಗಳ ಪಠಣದ ನಡುವೆ ವರ ಇಬ್ಬರು ವಧುಗಳೊಂದಿಗೆ ಸಪ್ತಪದಿ ತುಳಿದರು.
ಈ ಕುಟುಂಬ ಮಗ, ಇಬ್ಬರು ಹುಡುಗಿಯರನ್ನು ಮದುವೆಯಾಗುವ ವಿಷಯವನ್ನು ಗುಟ್ಟಾಗಿ ಇಟ್ಟಿಲ್ಲ. ಈ ಕುರಿತಾದ ಮದುವೆಯ ಕಾರ್ಡ್‌ನ್ನು ಸಿದ್ಧಪಡಿಸಿದ್ದಾರೆ. ಹರಿ ಓಂ ಎಂಬ ವರ ಕಾಂತ ಹಾಗೂ ಸುಮನ್‌ರನ್ನ ಮದುವೆಯಾಗುತ್ತಿರುವುದಾಗಿ ವೆಡ್ಡಿಂಗ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದೆ. ಒಬ್ಬ ವರ, ಇಬ್ಬರು ವಧುಗಳ ಹೆಸರಿರೋ ಮದುವೆ ಕಾರ್ಡ್ ಎಲ್ಲೆಡೆ ವೈರಲ್ ಆಗಿದೆ. 'ಮೂವರೂ ಸಂತೋಷವಾಗಿದ್ದಾರೆ ಮತ್ತು ವೈವಾಹಿಕ ಆನಂದವನ್ನು ಅನುಭವಿಸುತ್ತಿದ್ದಾರೆ' ಎಂದು ಹರಿ ಓಂ ಅವರ ಹಿರಿಯ ಸಹೋದರ ಹರಿರಾಮ್ ಅವರು ತಿಳಿಸಿದ್ದಾರೆ.