
ವಾಷಿಂಗ್ಟನ್ (ಮೇ 23,2023): ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಅವರ ಗೆಳತಿ ಲಾರೆನ್ ಸ್ಯಾಂಚೆಜ್ ಅವರು ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪೇಜ್ ಸಿಕ್ಸ್ ವರದಿ ಮಾಡಿದೆ. ಕಾನ್ ಫಿಲ್ಮ್ ಫೆಸ್ಟಿವಲ್‌ಗಾಗಿ ದಂಪತಿ ಪ್ರಸ್ತುತ ಫ್ರಾನ್ಸ್‌ನಲ್ಲಿದ್ದು, ಅಲ್ಲಿ ಅವರು ಸ್ಟಾರ್-ಸ್ಟಡ್ ಪಾರ್ಟಿ ಸರ್ಕ್ಯೂಟ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ.
ಲಾರೆನ್ ಸ್ಯಾಂಚೆಜ್ ಬೃಹತ್ ಹೃದಯಾಕಾರದ ಉಂಗುರ ಧರಿಸಿರುವ ಹಿನ್ನೆಲೆ ಜೆಫ್ ಬೆಜೋಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಹರಿದಾಡ್ತಿವೆ. ಲಾರೆನ್ ಸ್ಯಾಂಚೆಜ್ ಮನರಂಜನಾ ವರದಿಗಾರ್ತಿ ಮತ್ತು ಸುದ್ದಿ ನಿರೂಪಕರಾಗಿ ಕೆಲಸ ಮಾಡಿದ್ದರು. ಲಾರೆನ್ ಸ್ಯಾಂಚೆಜ್ ಅಮೆಜಾನ್ ಸಂಸ್ಥಾಪಕರ ಜತೆ 2018 ರಲ್ಲಿ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಅವರಿಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದೂ ಹೇಳಲಾಗ್ತಿದೆ.
ಇದನ್ನು ಓದಿ: 1991ರಲ್ಲಿ ಬೆಂಗಳೂರಲ್ಲಿ ನಡೆದಿದ್ದ ಖಲೀಲಿ ಕೊಲೆ ಈಗ ವೆಬ್ ಸೀರಿಸ್: ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್
ಜೆಫ್ ಬೆಜೋಸ್ ಮತ್ತು ಸ್ಯಾಂಚೆಜ್ ಜುಲೈ 14, 2019 ರಂದು ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದರು. ಪ್ರಿನ್ಸ್ ವಿಲಿಯಂ ಮತ್ತು ಡಚೆಸ್ ಆಫ್ ಕೇಂಬ್ರಿಡ್ಜ್‌ಗಿಂತ ಕೇವಲ ಮೂರು ಸಾಲುಗಳ ಹಿಂದೆ ಇವ್ರು ಕುಳಿತಿದ್ದರು.
ಆದರೆ, ಜೆಫ್ ಬೆಜೋಸ್ 25 ವರ್ಷಗಳ ಹಿಂದೆ ಮ್ಯಾಕೆಂಜಿ ಸ್ಕಾಟ್ ಅವರೊಂದಿಗೆ ವಿವಾಹವಾಗಿದ್ದರು. ಈ ಹಿನ್ನೆಲೆ, ಅವರು ವಿಚ್ಛೇದನವನ್ನು ಅಂತಿಮಗೊಳಿಸುವವರೆಗೂ ಇಬ್ಬರೂ ಹೆಚ್ಚಾಗಿ ಜತೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದೂ ಪೇಜ್ 6 ವರದಿ ಮಾಡಿದೆ. ಬೆಜೋಸ್ ಮತ್ತು ಮ್ಯಾಕೆಂಜಿ ದಂಪತಿಗೆ ನಾಲ್ಕು ಮಕ್ಕಳು ಇದ್ದಾರೆ. ಅದರೀಗ, ವಿಚ್ಛೇದನ ಆಗಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್: ಕೇವಲ 26 ರೂ. ಗೆ ಸಿಗುತ್ತೆ ಲಾವಾ ಪ್ರೋ ಇಯರ್ ಬಡ್ಸ್..!
ಇನ್ನು, ಮ್ಯಾಕೆಂಜಿ ಸ್ಕಾಟ್‌ಗೆ ವಿಚ್ಛೇದನದ ಪರಿಹಾರವಾಗಿ 38 ಬಿಲಿಯನ್ ಡಾಲರ್ ಪಡೆದಿದ್ದು, ಅದರಲ್ಲಿ ಅರ್ಧ ಹಣವನ್ನು ಅವರು ಚಾರಿಟಿಗೆ ನೀಡೋದಾಗಿ ವಾಗ್ದಾನ ಮಾಡಿದ್ದಾರೆ. ಇನ್ನು, ಈ ಪರಿಹಾರದಿಂದ ಮ್ಯಾಕೆಂಜಿ ಸ್ಕಾಟ್ ವಿಶ್ವದ ಮೂರನೇ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಅಮೆಜಾನ್‌ನಲ್ಲಿ ಜಂಟಿ ಸ್ಟಾಕ್‌ನ 25 ಪ್ರತಿಶತವನ್ನು ಹೊಂದಿದ್ದಾರೆ ಈಕೆ. ಆದರೂ, ಮಾಜಿ ಪತ್ನಿಯ ಸುಮಾರು 20 ಮಿಲಿಯನ್ ಷೇರುಗಳ ಮೇಲೆ ಮತದಾನದ ನಿಯಂತ್ರಣವನ್ನು ಜೆಫ್ ಬೆಜೋಸ್ ತಮ್ಮ ಬಳಿಯೇ ಇಟ್ಟುಕೊಂಡಿದ್ದರು.
ಮತ್ತೊಂದೆಡೆ, ಲಾರೆನ್ ಸ್ಯಾಂಚೆಜ್ ಅವರು ಬ್ಲೂ ಒರಿಜಿನ್‌ನ ಸಂಸ್ಥಾಪಕರ ಹೆಜ್ಜೆಗಳನ್ನು ಅನುಸರಿಸಲು ಮತ್ತು ಬಾಹ್ಯಾಕಾಶಕ್ಕೆ ಪ್ರಯಾಣಿಸಲು ಉದ್ದೇಶಿಸಿರುವುದಾಗಿ ನವೆಂಬರ್ 2022 ರಲ್ಲಿ ಹೇಳಿಕೊಂಡಿದ್ದರು. ಮಹಿಳೆಯರ ದೊಡ್ಡ ಗುಂಪು ಬಾಹ್ಯಾಕಾಶಕ್ಕೆ ಪ್ರಯಾಣ ಹೋಗಲಿದ್ದಾರೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: Amazon Layoffs: ಯಾರನ್ನೂ ತೆಗೆದಿಲ್ಲ, ಅವರೇ ರಾಜೀನಾಮೆ ಕೊಟ್ಟಿದ್ದಾರೆ: ಕಾರ್ಮಿಕ ಇಲಾಖೆಗೆ ಅಮೆಜಾನ್ ಸ್ಪಷ್ಟನೆ
ಈಗಾಗಲೇ ಪ್ಯಾಟ್ರಿಕ್ ವೈಟ್ಸೆಲ್ ಅವರನ್ನು ವಿವಾಹವಾಗಿದ್ದ ಲ್ಯಾರೆನ್ ಸ್ಯಾಂಚೆಜ್, ಅವರೊಂದಿಗೆ ಎಲಾ ಮತ್ತು ಇವಾನ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಅಲ್ಲದೆ, ಮಾಜಿ NFL ಆಟಗಾರ ಟೋನಿ ಗೊನ್ಜಾಲೆಜ್ ಅವರೊಂದಿಗೆ 22 ವರ್ಷದ ಮಗ ನಿಕ್ಕೋ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದೂ ಪೇಜ್ 6 ವರದಿ ಮಾಡಿದೆ.
ಇದನ್ನೂ ಓದಿ: ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.