ಪತಿಯ ಜತೆಗಿನ ಸಂಬಂಧ ಚೆನ್ನಾಗಿರಬೇಕಾದುದು ಮಹಿಳೆಯರಿಗೆ ಅತ್ಯಂತ ಅಗತ್ಯ. ಇದೊಂದೇ ಅಲ್ಲ, ಮನೆಯವರೊಂದಿಗೆ, ಅಕ್ಕಪಕ್ಕ, ವೃತ್ತಿ ಸ್ಥಳ ಎಲ್ಲಡೆಯೂ ಬಾಂಧವ್ಯ ಚೆನ್ನಾಗಿದ್ದರೆ ಮಾತ್ರ ಉತ್ತಮ ಜೀವನ ನಮ್ಮದಾಗುತ್ತದೆ. ಅದಕ್ಕಾಗಿ ಮಹಿಳೆಯರು ಸಂಕಲ್ಪದ ಧ್ಯಾನ ಮಾಡಬೇಕು.
ಉತ್ತಮ ಜೀವನಕ್ಕೆ ಸಂಬಂಧಗಳು ಚೆನ್ನಾಗಿರುವುದು ಮುಖ್ಯ. ಎಲ್ಲ ರೀತಿಯ ಸಂಬಂಧಗಳಿದ್ದಾಗಲೇ ಮನುಷ್ಯನ ಜೀವನ ಹೆಚ್ಚು ಮೌಲ್ಯಯುತವಾಗುತ್ತದೆ. ಇದನ್ನು ಸಾಧಿಸಿಕೊಳ್ಳಲು ನಮಗೆ ನಾವೇ ಹೇಳಿಕೊಳ್ಳುವ ದೃಢವಾದ ಮಾತುಗಳು, ಖಚಿತ ಹೇಳಿಕೆಗಳು ಸಹಾಯಕವಾಗುತ್ತವೆ. ನಮಗೆ ನಾವೇ ಕೆಲವು ಅಂಶಗಳ ಮೇಲೆ ನಂಬಿಕೆ ಮೂಡಿಸಿಕೊಳ್ಳುವಂತೆ ದಿನವೂ ಸಕಾರಾತ್ಮಕವಾಗಿ ಪ್ರೇರಣೆ ಕೊಟ್ಟುಕೊಳ್ಳುವುದು ಈ ನಿಟ್ಟಿನಲ್ಲಿ ಭಾರೀ ಮುಖ್ಯ. ಇದರಿಂದ ಸಂಬಂಧಗಳು ಸುಧಾರಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಲು ಅನುಕೂಲವಾಗುತ್ತದೆ. ಮಾನಸಿಕ ಆರೋಗ್ಯ ಸುಧಾರಣೆಗೂ ಸಹಕಾರಿಯಾಗುತ್ತದೆ. ಅದರಲ್ಲೂ ಮಹಿಳೆಯರು ದಿನವೂ ಧನಾತ್ಮಕ ದೃಢತೆಯನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡಿದರೆ ಸಂತಸದಾಯಕ ಜೀವನಕ್ಕೆ ಮುನ್ನುಡಿ ಬರೆಯಬಹುದು. ಹಾಗಿದ್ದರೆ ಅದಕ್ಕಾಗಿ ಮಾಡಬೇಕಾದುದೇನು ಎಂದು ಕೇಳಬಹುದು. ಸಿಂಪಲ್ಲಾಗಿ ಕೆಲವೇ ಕೆಲವು ದೃಢ ಸಂಕಲ್ಪದ ಮೂಲಕ ಇದನ್ನು ಸಾಧಿಸಿಕೊಳ್ಳಬಹುದು. ಇದು ಸಂಕಲ್ಪದ ಧ್ಯಾನ. ನಿಮಗೆ ಜೀವನದಲ್ಲಿ ನಿಜವಾಗಿಯೂ ಪ್ರೀತಿ ಬೇಕಿದ್ದರೆ, ನಿಮ್ಮ ಮೇಲೆ ನಿಮಗೆ ಸ್ವತಃ ಪ್ರೀತಿ ಇರಬೇಕು. ಸ್ವಯಂ ಪ್ರೀತಿ ಇದ್ದಾಗಲೇ ಮತ್ತೊಬ್ಬರೂ ನಿಮ್ಮನ್ನು ಪ್ರೀತಿಸಲು ಸಾಧ್ಯ. ಇದಕ್ಕಾಗಿ, ನೀವು ಸ್ವಯಂ ಪ್ರೀತಿ ಹೆಚ್ಚಿಸುವ ದೃಢವಾದ ಹೇಳಿಕೆಗಳ ಮೂಲಕ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಬಹುದು. ಶಾಂತವಾಗಿ ಒಂದೆಡೆ ಕುಳಿತು ಮನದಲ್ಲಿ ಕಲ್ಪನೆ ಮಾಡಿಕೊಂಡು ಇದನ್ನು ಸಾಧಿಸಿಕೊಳ್ಳಬೇಕು.
ದೃಢವಾದ ಸಂಕಲ್ಪಗಳಿಂದ (Affirmations) ಏನನ್ನಾದರೂ ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಅಡೆತಡೆಗಳಿಂದ ಮಾನಸಿಕ ಶಾಂತಿ (Mental Peace) ದೂರವಾಗಿದೆ. ಇಂತಹ ಸಂಕಲ್ಪಗಳನ್ನು ಮನೋನಿಶ್ಚಯದೊಂದಿಗೆ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ಮಹಿಳೆಯರಂತೂ (Women) ವಿವಿಧ ರೀತಿಯಲ್ಲಿ ಆತಂಕಕ್ಕೆ ಒಳಗಾಗುವುದು ಹೆಚ್ಚು. ಉದ್ಯೋಗಸ್ಥರಾದರೆ ಒಂದು ರೀತಿ, ಗೃಹಿಣಿಯರಾದರೆ ಮತ್ತೊಂದು ರೀತಿ. ಹೀಗಾಗಿ, ಮಹಿಳೆಯರು ಇದನ್ನು ಪ್ರಾಕ್ಟೀಸ್ (Practise) ಮಾಡಿದರೆ ಖಂಡಿತವಾಗಿ ಬದಲಾವಣೆ ಸಾಧ್ಯ.
ಮಕ್ಕಳ ಮಧ್ಯೆ ಫೈಟ್ ಆಗ್ಬಾರ್ದು ಅಂದ್ರೆ ಹೀಗ್ ಮಾಡಿ
ಸ್ವಪ್ರೀತಿ (Self Love) ಹೆಚ್ಚಿಸುವ ಸಂಕಲ್ಪಗಳು
• ನಾನು ಹೇಗಿದ್ದೇನೆಯೋ ಹಾಗೆಯೇ ನನ್ನನ್ನು ಪ್ರೀತಿಸುವೆ.
• ನಾನು ನನ್ನ ಬಗ್ಗೆ ಮೃದು ಭಾವನೆ (Kind Feel) ಹೊಂದಿದ್ದೇನೆ.
• ನಾನು ಎಲ್ಲವನ್ನೂ ಪ್ರೀತಿಸುತ್ತೇನೆ, ಇದು ನನ್ನ ವಿಶಿಷ್ಟ ವ್ಯಕ್ತಿಯನ್ನಾಗಿ ರೂಪಿಸಿದೆ.
• ಗೌರವ (Respect) ಮತ್ತು ಪ್ರೀತಿಗೆ (Love) ನಾನು ಅತ್ಯಂತ ಅರ್ಹಳು.
• ನಕಾರಾತ್ಮಕತೆಯನ್ನು (Negativity) ಹೊರಹಾಕುತ್ತೇನೆ ಏಕೆಂದರೆ ನಾನು ಶಾಂತಿಗೆ ಅರ್ಹಳಾಗಿದ್ದೇನೆ.
• ಎಲ್ಲ ಸಂಬಂಧಗಳಲ್ಲಿ ಖುಷಿ (Happiness) ಪಡುತ್ತೇನೆ.
• ಒತ್ತಡ (Stress) ಮತ್ತು ಆಯಾಸಗಳಿಂದ ನಾನು ಮುಕ್ತನಾಗಿದ್ದೇನೆ.
• ಅಂದುಕೊಂಡಿದ್ದೆಲ್ಲವನ್ನೂ ನಾನು ಸಾಧಿಸಬಲ್ಲೆ.
ಸಂಬಂಧ (Relationship) ಉತ್ತಮಗೊಳ್ಳಲು ಹೇಳಿಕೊಳ್ಳಬೇಕಾದ ಮಾತುಗಳು
• ಸಂಗಾತಿಯನ್ನು (Partner) ನಾನು ಪ್ರೀತಿಸುತ್ತೇನೆ, ಪ್ರೀತಿ ಪಡೆಯುತ್ತೇನೆ.
• ನನ್ನನ್ನು ಖುಷಿಪಡಿಸುವ ವ್ಯಕ್ತಿಯಿಂದ ನಾನು ಪ್ರೀತಿಸಲ್ಪಡುತ್ತಿದ್ದೇನೆ.
• ಆಳವಾದ ಸಾಂಗತ್ಯದ ಅನುಭವಕ್ಕೆ ನಾನು ಸಿದ್ಧ.
• ನಾನ್ಯಾರೆಂದು ತೋರಿಸಿಕೊಳ್ಳಲು ನಾನು ಸುರಕ್ಷಿತವಾಗಿದ್ದೇನೆ.
• ಈಗ ಹೇಗಿರುವೆನೋ ಹಾಗೆಯೇ ನಾನು ಪ್ರೀತಿಗೆ ಅರ್ಹ.
Stress and Happiness: ಒತ್ತಡವನ್ನು ಖುಷಿಯನ್ನಾಗಿ ಬದಲಿಸಿಕೊಳ್ಳಿ!
ಉತ್ತಮ ಸ್ನೇಹ (Friendship) ನಿಮ್ಮದಾಗಲು
• ಬೆಂಬಲ (Support) ಮತ್ತು ಪ್ರೀತಿ ಹೊಂದಿರುವ ಸ್ನೇಹಿತರು ನನ್ನ ಸುತ್ತಲೂ ಇದ್ದಾರೆ.
• ಸ್ನೇಹಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ.
• ಮೌಲ್ಯವುಳ್ಳ (Valuable) ಜನರೊಂದಿಗೆ ನನ್ನ ಸಂಪರ್ಕವಿದೆ.
• ಸ್ನೇಹದ ಬಗ್ಗೆ ವಿಶ್ವಾಸ (Trust) ಹೊಂದಿದ್ದೇನೆ.
• ಬದ್ಧತೆಯುಳ್ಳ ಸ್ನೇಹ ಹೊಂದಿದ್ದೇನೆ, ಅವರು ನನ್ನನ್ನು ಚೆನ್ನಾಗಿ ಅರಿತಿದ್ದಾರೆ.
• ಸ್ನೇಹಿತರಿಗೆ ನಾನು ಖುಷಿ ನೀಡುವೆ.
• ಸ್ನೇಹಿತರಿಗಾಗಿ ನನ್ನಲ್ಲಿ ಸಮಯವಿದೆ.
ಉದ್ಯೋಗ ಸ್ಥಳದಲ್ಲಿ ಉತ್ತಮ ಬಾಂಧವ್ಯ ಹೊಂದಲು
• ಉದ್ಯೋಗ ಸ್ನೇಹ ವೃದ್ಧಿಸಲು ಸ್ವಯಂ ಏಳಿಗೆ ಬಗ್ಗೆ ಗಮನ ಹರಿಸುವೆ.
• ಉದ್ಯೋಗದಲ್ಲಿ ಯಶಸ್ಸು ಹೊಂದುವ ಗುಣಗಳು ನನ್ನಲ್ಲಿವೆ.
• ಸಹೋದ್ಯೋಗಿಗಳು ನನ್ನ ಬಗ್ಗೆ ಗೌರವ ಹೊಂದಿದ್ದಾರೆ.
• ಗುರಿಗಳನ್ನು ಸಾಧಿಸುತ್ತೇನೆ, ನೀಡಿದ ಸವಾಲನ್ನು ಪೂರ್ಣಗೊಳಿಸುತ್ತೇನೆ.
• ಚರ್ಚೆಯಲ್ಲಿ ಉತ್ತಮ ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.
• ಉತ್ತಮ ಕೆಲಸಕ್ಕಾಗಿ ಸದಾಕಾಲ ಪ್ರೇರಣೆ ಹೊಂದಿದ್ದೇನೆ. ದೃಢ ಸಂಕಲ್ಪ ನನ್ನದಾಗಿದೆ.
• ವೃತ್ತಿಯಲ್ಲಿ ಉತ್ತಮವಾಗಿದ್ದರಿಂದ ನಾನು ಮೆಚ್ಚುಗೆಗೆ ಪಾತ್ರನಾಗಿದ್ದೇನೆ.