ಮದುವೆಗೆ ಬಂಧುಬಳಗ ಕರೆದೊಯ್ಯಲು ವಿಮಾನದ ಅಷ್ಟೂ ಸೀಟುಗಳನ್ನ ಬುಕ್ ಮಾಡಿದ ವರ

By Suvarna News  |  First Published Feb 13, 2023, 5:43 PM IST

ನೇಪಾಳದ ಭುವನ್ ಎಂಬಾತ ತನ್ನ ಮದುವೆಗೆ ಬಂಧುಬಳಗದವರನ್ನು ಕರೆದೊಯ್ಯಲು ಇಡೀ ವಿಮಾನದ ಸೀಟುಗಳನ್ನು ಬುಕ್ ಮಾಡಿದ್ದ. ಈ ವಿಡಿಯೋವೀಗ ವೈರಲ್ ಆಗಿದ್ದು, ಈತ ಇಷ್ಟೆಲ್ಲ ಹಣ ಗಳಿಸಿದ್ದಾನೆ ಎನ್ನುವ ಕಮೆಂಟ್ ಗಳು ಬಂದಿವೆ. 
 


ತಮ್ಮ ವಿವಾಹ ಸಮಾರಂಭ ಅದ್ದೂರಿಯಾಗಿ, ಗ್ರ್ಯಾಂಡ್ ಆಗಿ ಇರಬೇಕೆಂದು ಸಾಕಷ್ಟು ಜನ ಬಯಸುತ್ತಾರೆ. ಅದಕ್ಕಾಗಿ ಶತಪ್ರಯತ್ನ ನಡೆಸುತ್ತಾರೆ. ಎಲ್ಲವೂ ವಿಭಿನ್ನವಾಗಿರಬೇಕು, ಸ್ಪೆಷಲ್ ಆಗಿರಬೇಕು ಎನ್ನುವುದು ಅವರ ಆಶಯ. ಪಾಲಕರೂ ಅಷ್ಟೆ, ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಹವಣಿಸುತ್ತಾರೆ. ಮಧ್ಯಮ ವರ್ಗದವರು ತಮ್ಮ ಹಣಕಾಸು ಮಟ್ಟಕ್ಕೆ ತಕ್ಕಂತೆ ಅಥವಾ ಬಹಳಷ್ಟು ಬಾರಿ ಅದಕ್ಕೂ ಮೀರಿ ಮದುವೆಗಾಗಿ ಖರ್ಚು ಮಾಡುತ್ತಾರೆ. ಹಾಗೂ ಬಂಧುಬಳಗದವರನ್ನು ಸೇರಿಸುವ ಯತ್ನ ಮಾಡುತ್ತಾರೆ. ಹೌದು, ಮದುವೆಯಲ್ಲಿ ಬಂಧುಬಳಗದವರು ಇಲ್ಲವಾದರೆ ಏನು ಸಂತಸವಿರಲು ಸಾಧ್ಯ? ಹಿರಿಯರು, ಕುಟುಂಬಸ್ಥರು ಎಲ್ಲರೂ ಇದ್ದರೇ ವಿವಾಹ ಸಮಾರಂಭಕ್ಕೆ ಕಳೆ ಬರುತ್ತದೆ. ಹೀಗಾಗಿ, ಕುಟುಂಬಸ್ಥರು ಇರುವ ಪ್ರದೇಶದಿಂದ ದೂರದಲ್ಲಿ ಮದುವೆಯಾಗುವ ಸನ್ನಿವೇಶ ಬಂದರೆ ವಾಹನ ಸೌಕರ್ಯ ಏರ್ಪಡಿಸಲಾಗುತ್ತದೆ. ಅಥವಾ ರೈಲುಗಳಲ್ಲಿ ಟಿಕೆಟ್ ವ್ಯವಸ್ಥೆ ಮಾಡುವುದೂ ಸಾಮಾನ್ಯ. ಶ್ರೀಮಂತರು ವಿಮಾನಗಳಲ್ಲಿ ಟಿಕೆಟ್ ಬುಕ್ ಮಾಡುವುದೂ ಇದೆ. ಆದರೆ, ನೇಪಾಳದ ಯುವಕನೊಬ್ಬ ಇಡೀ ವಿಮಾನವನ್ನೇ ಬುಕ್ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ. 
ನೇಪಾಳದ (Nepal) ಭುವನ್ (Bhuwan) ಹೆಸರಿನ ಯುವಕ ತನ್ನ ಮದುವೆಗೆ (Marriage) ಕುಟುಂಬಸ್ಥರನ್ನು (Family) ಸೇರಿಸುವ ಬಯಕೆ ಹೊಂದಿದ್ದ. ಶಗುನ್ ಎಂಬಾಕೆಯ ಜತೆ ಆತನ ಮದುವೆ ನಿಗದಿಯಾಗಿತ್ತು. ಹೀಗಾಗಿ, ವರ ಹಾಗೂ ವಧುವಿನ ಕಡೆಯ ಬಂಧುಬಳಗ, ಆಪ್ತ ಸ್ನೇಹಿತರಿಗಾಗಿ ಒಂದು ವಿಮಾನವನ್ನೇ (Flight) ಬುಕ್ ಮಾಡಿದ್ದ. ಎಲ್ಲರೂ ವಿಮಾನದಲ್ಲಿರುವ  ವಿಡಿಯೋವನ್ನು (Video) ಇನ್ ಸ್ಟಾಗ್ರಾಮ್ ನಲ್ಲಿ ಶೇರ್ (Share) ಮಾಡಲಾಗಿದ್ದು, ಈಗಾಗಲೇ ಲಕ್ಷಾಂತರ ಜನ ಇದನ್ನು ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ವಧು ಹಾಗೂ ವರನ ಕಡೆಯ ಹಿರಿಯರು, ಬಂಧುಗಳು ಖುಷಿಯಾಗಿ ಹಾಡು ಹೇಳುತ್ತ, ಕುಳಿತಲ್ಲೇ ನರ್ತಿಸುತ್ತ ಇರುವುದು ಗಮನ ಸೆಳೆಯುತ್ತದೆ. ಮದುಮಗ ಭುವನ್ ಕೂಡ ಕುಟುಂಬಸ್ಥರ ಜತೆ ಇದ್ದಾನೆ. 

Wedding Dream: ನಿಮ್ಮ ಮದುವೆಯ ಕನಸೇ ಬೀಳ್ತಿದೆಯಾ? ಎಚ್ಚರ!

Tap to resize

Latest Videos

ಸಾಕಷ್ಟು ದುಡ್ಡಿದೆ!
ದಶುಭ್ ವೆಡ್ಡಿಂಗ್ (Theshubhvedding) ಎನ್ನುವ ಹೆಸರಿನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಇದಕ್ಕೆ ಸಾಕಷ್ಟು ಕಮೆಂಟ್ ಗಳೂ ಬಂದಿವೆ. “ನಿನ್ನಲ್ಲಿ ಹಣವಿದೆ. ನೀನು ಶ್ರೀಮಂತ (Rich) ಎಂದು ಬಾಯಲ್ಲಿ ಹೇಳದೆಯೇ ಶ್ರೀಮಂತ ಎಂದು ತೋರಿಸಿಕೊಂಡೆ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ನನ್ನ ಕುಟುಂಬದ ಜನ ಇಷ್ಟೆಲ್ಲ ವ್ಯವಸ್ಥೆ ಕಲ್ಪಿಸುವಷ್ಟು ಮೌಲ್ಯವಂತರಲ್ಲ’ ಎಂದು ಹೇಳಿಕೊಂಡಿದ್ದಾರೆ. “ಬದುಕಿನಲ್ಲಿ ಇಷ್ಟೊಂದೆಲ್ಲ ಹಣ (Money) ಗಳಿಸಬೇಕು ಬಾಸ್’ ಎಂದೊಬ್ಬರು ಚಟಾಕಿ ಹಾರಿಸಿದ್ದಾರೆ.ಮದುವೆಗಾಗಿ ವಿಮಾನದ ಎಲ್ಲ ಟಿಕೆಟ್ (Ticket) ಗಳನ್ನೂ ಬುಕ್ ಮಾಡುವುದು ಇತ್ತೀಚೆಗೆ ಶ್ರೀಮಂತರ ಖಯಾಲಿ ಆಗುತ್ತಿದೆ. ಕಳೆದ ಡಿಸೆಂಬರ್ ನಲ್ಲಿ ಶ್ರೇಯಾ ಶಾ ಎಂಬಾಕೆ ತನ್ನ ಸಹೋದರಿಯ ಮದುವೆಗೆ ಬಂಧುಗಳೆಲ್ಲ ಸೇರಿ ಇದೇ ವಿಮಾನದಲ್ಲಿ ಸಾಗುತ್ತಿದ್ದ ವಿಡಿಯೋವನ್ನು ಶೇರ್ ಮಾಡಿದ್ದಳು. ಆಗಲೂ ಮದುವೆಗಾಗಿ ಇಡೀ ವಿಮಾನದ ಎಲ್ಲ ಸೀಟುಗಳನ್ನೂ ಬುಕ್ ಮಾಡಲಾಗಿತ್ತು. ಮದುವೆಗಾಗಿ ಇಡೀ ವಿಮಾನದ ಸೀಟುಗಳನ್ನು ಬುಕ್ (Book) ಮಾಡುವುದು ಲಕ್ಸುರಿ ಎನಿಸುತ್ತದೆ. ಆದರೆ, ಹಣವಿರುವವರಿಗೆ ಯಾವುದು ತಾನೇ ಸಾಧ್ಯವಿಲ್ಲ? ಅವರಿಗೆ ಇದೂ ಒಂದು ಸಾರಿಗೆಯಷ್ಟೆ.

ಟ್ರೆಂಡ್ ಆಗ್ತಿದೆ Sleep Divorce: ದಾಂಪತ್ಯ ಬಲಪಡಿಸುವ ವಿಚ್ಛೇದನದ ಬಗ್ಗೆ ಗೊತ್ತಿದ್ಯಾ ?

ಸಾರ್ವಜನಿಕ ಸಾರಿಗೆ!
ವಿವಾಹ ಸಮಾರಂಭದ ಸ್ಥಳ ತಲುಪಲು ಸಾರ್ವಜನಿಕ ಸಾರಿಗೆ (Public Transport) ಬಳಕೆ ಮಾಡಿದ ಘಟನೆಯೂ ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದಿದ್ದು, ಎಲ್ಲರ ಗಮನ ಸೆಳೆದಿತ್ತು. ಬೆಂಗಳೂರಿನಲ್ಲಿ ವಧು (Bride) ತಮ್ಮ ಮದುವೆಯ ದಿರಿಸು ಧರಿಸಿ  ಕುಟುಂಬಸ್ಥರೊಂದಿಗೆ ಮೆಟ್ರೋ ರೈಲು (Metro Train) ಏರಿದ್ದಳು. ವಿವಾಹ ಸ್ಥಳ ತಲುಪಲು ತಮ್ಮ ಕಾರನ್ನು ಬಿಟ್ಟು ಮೆಟ್ರೋ ಏರಿದ್ದ ಇವರ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 

click me!