Wedding Dream: ನಿಮ್ಮ ಮದುವೆಯ ಕನಸೇ ಬೀಳ್ತಿದೆಯಾ? ಎಚ್ಚರ!

ಈ ಕನಸುಗಳೊಂತರಾ ವಿಚಿತ್ರ. ಕೆಲವೊಮ್ಮೆ ಅವಕ್ಕೆ ತಲೆ ಬುಡ ಏನೂ ಇರಲ್ಲ.. ಆದರೂ ಕನಸುಗಳನ್ನು ಭವಿಷ್ಯದ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ನಿಮ್ಮ ಮದುವೆಯನ್ನೇ ನೋಡಿದರೆ, ಅಥವಾ ಸ್ನೇಹಿತನ ಮದುವೆ ನೋಡಿದರೆ ಏನದರ ಅರ್ಥ ಗೊತ್ತಾ?

Dream Interpretation seeing your own marriage in dream meaning skr

ನಿದ್ದೆ ಮಾಡುವಾಗ ಕನಸು ಕಾಣುವುದು ಸಾಮಾನ್ಯ. ಕನಸಿನ ವಿಜ್ಞಾನದ ಪ್ರಕಾರ ಪ್ರತಿಯೊಂದು ಕನಸಿಗೂ ಒಂದಲ್ಲ ಒಂದು ಅರ್ಥವಿದೆ. ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸನ್ನೂ ವಿವರವಾಗಿ ವಿವರಿಸಲಾಗಿದೆ. ಈ ಕನಸುಗಳು ನಮಗೆ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳ ಸೂಚನೆಯನ್ನು ನೀಡುತ್ತವೆ. ಪ್ರತಿಯೊಂದು ಕನಸು ಶುಭ ಅಥವಾ ಅಶುಭವನ್ನು ಸೂಚಿಸುತ್ತದೆ. ಈ ಕನಸುಗಳ ಮೂಲಕ, ನಿಮಗೆ ಏನಾದರೂ ಒಳ್ಳೆಯದು ಸಂಭವಿಸುತ್ತದೆ ಅಥವಾ ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳಬಹುದು. ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಮದುವೆಯಾಗುವುದನ್ನು ನೋಡಿದರೆ, ಅದು ವಿಶೇಷವಾದದ್ದನ್ನು ಅರ್ಥೈಸುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ನಿಮ್ಮ ಮದುವೆಯ ಕನಸು(Seeing Your Own Marriage In Dream)
ನಿಮ್ಮ ಸ್ವಂತ ಮದುವೆಯನ್ನು ಕನಸಿನಲ್ಲಿ ನೋಡಿದ್ದೀರಾ? ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಮದುವೆಯಾಗುವ ಕನಸು ಶುಭವಲ್ಲ. ಕನಸಿನ ವಿಜ್ಞಾನದ ವ್ಯಾಖ್ಯಾನದ ಪ್ರಕಾರ, ನಿಮ್ಮ ಸ್ವಂತ ಮದುವೆಯ ಕನಸು ಭವಿಷ್ಯದಲ್ಲಿ ಸಂಭವಿಸುವ ಕೆಲವು ಬೇಡದ ಘಟನೆಯ ಕಡೆಗೆ ನಿಮಗೆ ಸೂಚನೆ ನೀಡುತ್ತದೆ. ಯಾವುದೋ ಅಪಾಯ ಕಾದಿದೆ, ಎಚ್ಚರ ಎನ್ನುತ್ತದೆ ಈ ಕನಸು. ಜೊತೆಗೆ, ಸಧ್ಯದ ಬದುಕಿನ ಬಗ್ಗೆ ನಿಮಗಿರುವ ಅಸಹನೆ, ದುಃಖವನ್ನೂ ಸೂಚಿಸುತ್ತದೆ. ನಿಮ್ಮ ಸ್ವಂತ ಮದುವೆಯ ಬಗ್ಗೆ ನೀವು ಕನಸು ಕಂಡಿದ್ದರೆ, ನೀವು ಜಾಗರೂಕರಾಗಿರಬೇಕು.

ಸ್ನೇಹಿತನ ಮದುವೆಯ ಕನಸು(Friend's marriage dream)
ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಸ್ನೇಹಿತ ಅಥವಾ ಸಂಬಂಧಿಕರು ಮದುವೆಯಾಗುವುದನ್ನು ನೀವು ಕನಸಿನಲ್ಲಿ ನೋಡಿದರೆ, ಈ ಕನಸನ್ನು ಸಹ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ನಿಮ್ಮ ಕೆಲಸದಲ್ಲಿ ಕೆಲವು ರೀತಿಯ ಅಡಚಣೆ ಉಂಟಾಗಬಹುದು ಎಂದು ಈ ಕನಸು ಸೂಚಿಸುತ್ತದೆ.\

Valentines Day: ಈ 6 ಅದೃಷ್ಟಶಾಲಿ ರಾಶಿಗಳಿಗೆ ಸಿಗಲಿದೆ ನಿಜವಾದ ಪ್ರೀತಿ

ಮದುವೆಯ ಉಡುಪಿನಲ್ಲಿ ಯಾರನ್ನಾದರೂ ನೋಡುವುದು..(Seeing somebody in wedding dress)
ನಿಮ್ಮ ಕನಸಿನಲ್ಲಿ ಮದುವೆಯ ಉಡುಪಿನಲ್ಲಿರುವ ಮಹಿಳೆಯನ್ನು ನೀವು ನೋಡಿದರೆ, ಈ ಕನಸನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕನಸಿನ ಪುಸ್ತಕದ ಪ್ರಕಾರ, ಮದುವೆಯ ಉಡುಪಿನಲ್ಲಿ ಮಹಿಳೆಯನ್ನು ನೋಡುವುದು ಎಂದರೆ ಶೀಘ್ರದಲ್ಲೇ ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ ಬರುತ್ತದೆ ಎಂದರ್ಥ.

ಮರು ಮದುವೆಯ ಕನಸು(Remarriage dream)
ನಿಮಗೆ ಈಗಾಗಲೇ ವಿವಾಹವಾಗಿದ್ದು, ನಿಮ್ಮ ಕನಸಿನಲ್ಲಿ ನೀವು ಮತ್ತೆ ಮದುವೆಯಾಗುವುದನ್ನು ನೋಡಿದರೆ, ಅದಕ್ಕೂ ವಿಶೇಷ ಅರ್ಥವಿದೆ. ನಿಮ್ಮ ಮದುವೆಯಲ್ಲಿ ನೀವು ಸಂತೋಷವಾಗಿಲ್ಲ ಎಂದು ಈ ಕನಸು ಸೂಚಿಸುತ್ತದೆ. ಈ ರೀತಿಯ ಕನಸು ಭವಿಷ್ಯದಲ್ಲಿ ದಂಪತಿಗಳ ನಡುವೆ ಬರಬಹುದಾದ ಯಾವುದೇ ಅಡಚಣೆಯ ಸಾಧ್ಯತೆಯನ್ನು ತೋರಿಸುತ್ತದೆ.

ನಿಮ್ಮ ಮದುವೆಯ ಮೆರವಣಿಗೆಯ ಕನಸು
ಒಬ್ಬರ ಸ್ವಂತ ಮದುವೆಯ ಮೆರವಣಿಗೆಯನ್ನು ಕನಸಿನಲ್ಲಿ ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. ಮುಂಬರುವ ಸಮಯದಲ್ಲಿ, ನಿಮ್ಮ ಸಾಮಾಜಿಕ ನೆಟ್‌ವರ್ಕ್‌ನ ವ್ಯಾಪ್ತಿಯು ಹೆಚ್ಚಾಗುತ್ತದೆ, ಇದರಿಂದಾಗಿ ಮುಂಬರುವ ಸಮಯದಲ್ಲಿ ನೀವು ಪ್ರಯೋಜನವನ್ನು ಪಡೆಯುತ್ತೀರಿ ಎಂದು ಅರ್ಥ ಮಾಡಿಕೊಳ್ಳಬಹುದು.

Chanakya Niti: ಕೋಟ್ಯಧಿಪತಿಯಾಗಲು ಇಲ್ಲಿವೆ ಚಾಣಕ್ಯ ಸೂತ್ರಗಳು..

ಸಂಗಾತಿಯ ಹೊರತಾಗಿ ಬೇರೊಬ್ಬರನ್ನು ವಿವಾಹವಾಗುವ ಕನಸು(Dreams about marrying someone else other than your partner)
ನಿಮ್ಮ ಸಂಗಾತಿಯ ಹೊರತಾಗಿ ಕನಸಿನಲ್ಲಿ ಮತ್ಯಾರನ್ನೋ ವಿವಾಹವಾದಂತೆ ಕಂಡರೆ, ನೀವು ನಿಮ್ಮ ಸಂಬಂಧದಲ್ಲಿ ತೃಪ್ತಿಯಾಗಿಲ್ಲ ಎಂದರ್ಥ. ಸಂಗಾತಿಯಿಂದ ನೀವು ಇನ್ನೂ ಹೆಚ್ಚಿನದನ್ನು ಬಯಸುತ್ತಿದ್ದೀರಿ ಮತ್ತು ಅದು ನಿಮಗೆ ದೊರೆಯದೆ ದುಃಖಿತರಾಗಿದ್ದೀರಿ ಎಂದರ್ಥ. ಕನಸಿನಲ್ಲಿ ನೀವು ಕಾಣುವ ವ್ಯಕ್ತಿಯ ಗುಣಗಳನ್ನು ನಿಮ್ಮ ಸಂಗಾತಿಯಿಂದ ನಿರೀಕ್ಷಿಸುತ್ತಿದ್ದೀರಿ ಎಂದರ್ಥ. 

Latest Videos
Follow Us:
Download App:
  • android
  • ios