ಅಜ್ಜಿಯ 90ನೇ ಬರ್ತ್‌ಡೇಗೆ ಸರ್‌ಪ್ರೈಸ್ ವಿಸಿಟ್ ಕೊಟ್ಟ ವಿಶೇಷ ಅತಿಥಿ.. ಭಾವುಕರಾದ ಹಿರಿಯಜ್ಜಿ

By Suvarna News  |  First Published Mar 3, 2022, 11:04 AM IST
  • 90ನೇ ಹುಟ್ಟುಹಬ್ಬಕ್ಕೆ ಬಂದ ಅಜ್ಜಿಯ ಗೆಳತಿ
  • ಗೆಳತಿಯ ಅನಿರೀಕ್ಷಿತ ಆಗಮನದಿಂದ ದಂಗಾದ ಅಜ್ಜಿ
  • ಭಾವುಕರಾಗಿ ಕಣ್ಣೀರಿಟ್ಟ 90ರ ವೃದ್ಧೆ

ಇಡೀ ಪ್ರಪಂಚದ ಜನ ಈಗ ರಷ್ಯಾ ಉಕ್ರೇನ್ ಯುದ್ಧದತ್ತ ತಮ್ಮ ಕಣ್ಣಿಟ್ಟಿದ್ದಾರೆ. ರಷ್ಯಾದ (Russia) ನಿರಂತರ ಆಕ್ರಮಣ ತೀವ್ರಗೊಂಡಿದ್ದು, ಇಡೀ ಜಗತ್ತು ಆತಂಕದಲ್ಲಿದ್ದು, ಒಮ್ಮೆ ಯುದ್ಧ ನಿಲ್ಲಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಮಧ್ಯೆ ಅಜ್ಜಿಯೊಬ್ಬರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ 90ನೇ ಬರ್ತ್‌ಡೇಗೆ ಅವರ ಗೆಳತಿಯೊಬ್ಬರು ಅನಿರೀಕ್ಷಿತವಾಗಿ ಭೇಟಿ ಕೊಟ್ಟು ಅವರಿಗೆ ಸರ್‌ಪ್ರೈಸ್ ನೀಡಿದ್ದು, ಬಹುಕಾಲದ ಗೆಳತಿಯನ್ನು ಈ ಸಮಯದಲ್ಲಿ ನಿರೀಕ್ಷಿಸದ ಅಜ್ಜಿ ಒಮ್ಮೆಗೆ ಶಾಕ್‌ಗೆ ಒಳಗಾಗುವ ಜೊತೆಗೆ ಭಾವುಕರಾದರು.

ಸ್ನೇಹವೆಂಬುದೇ ಹಾಗೆ ಅಳುತ್ತಿರುವ ಮನಸ್ಸನ್ನು ನಗಿಸಿ ಖುಷಿ ನೀಡುತ್ತದೆ. ಕಷ್ಟ ಬಂದಾಗ ನೆರವಾಗುತ್ತದೆ. ಕಷ್ಟ ಬಂದಾಗ, ಮನಸ್ಸು ಭಾವುಕವಾದಾಗ ನಮ್ಮ ಮನಸ್ಸನ್ನು ಅರ್ಥ ಮಾಡಿಕೊಂಡು ಮನಸ್ಸಿನ ಭಾವಕ್ಕೆ ಮಿಡಿಯುವ ಸ್ನೇಹಿತರೊಬ್ಬರನ್ನು ನಾವು ಹೊಂದಿದ್ದೇವೆ ಎಂದಾದರೆ ಅದಕ್ಕಿಂತ ದೊಡ್ಡ ಆಸ್ತಿ ಬೇಡ. ಉತ್ತಮ ಸ್ನೇಹಿತರನ್ನು ಹೊಂದಿರುವ ಅನೇಕರಿಗೆ ಇದು ಅನುಭವಕ್ಕೆ ಬಂದಿರಬಹುದು. ಈಗ ಇಲ್ಲೊಬ್ಬರು ಅಜ್ಜಿ ತಮ್ಮ ಇಳಿವಯಸ್ಸಿನಲ್ಲೂ ತಮ್ಮ ಭೇಟಿಯಾಗಲು ಬಂದ ಸ್ನೇಹಿತೆಯ ಕಂಡು ಅಚ್ಚರಿಯ ಜೊತೆ ಭಾವುಕರಾಗಿದ್ದಾರೆ.

Tap to resize

Latest Videos

ಈ ಅಜ್ಜಿ ಭಾರಿ ಹುಷಾರು ಮರೆ... 70ಕ್ಕೆ ಡಿವೋರ್ಸ್ 73ಕ್ಕೆ ಹೊಸ ಲವ್‌
 
ತನ್ನ ಗೆಳತಿಯನ್ನು ನೋಡಿ ಕಣ್ಣೀರಿಟ್ಟ ಅಜ್ಜಿ ಅವರನ್ನು ಬಾಚಿ ತಬ್ಬಿಕೊಂಡರು. ಈ ವಿಡಿಯೋವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನು 8 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಹಣ್ಣು ಹಣ್ಣು ಮುದುಕಿಯೊಬ್ಬರು ಅವರ ಕುಟುಂಬದೊಂದಿಗೆ ರೆಸ್ಟೊರೆಂಟ್‌ವೊಂದರಲ್ಲಿ ತಮ್ಮ ಹುಟ್ಟುಹಬ್ಬವನ್ನು (birthday) ಆಚರಿಸುತ್ತಿರುತ್ತಾರೆ. ಈ ವೇಳೆ ಅಲ್ಲಿಗೆ ದಿಢೀರ್‌ ಭೇಟಿ ನೀಡುವ ಮತ್ತೊಬ್ಬ ಗೆಳತಿಯೂ ಆಗಿರುವ ಮತ್ತೊಬ್ಬ ವೃದ್ಧೆ, ಬರ್ತ್‌ಡೇ ಆಚರಿಸುತ್ತಿರುವ ಅಜ್ಜಿಯ ಬಳಿ ಬಂದು  ಪಕ್ಕದ ಚೇರ್‌ ಯಾರಿಗಾದರೂ ಮೀಸಲಿದೆಯೇ ಎಂದು ಕೇಳುತ್ತಾರೆ. ಈ ವೇಳೆ ಅವರನ್ನು ನೋಡುವ ತಿರುಗಿ ನೋಡುವ ಅಜ್ಜಿ ಒಮ್ಮೆಗೆ ಭಾವುಕರಾಗಿ ಅಳಲು ಶುರು ಮಾಡುತ್ತಾರೆ. ಅಲ್ಲದೇ ಇಬ್ಬರು ಪರಸ್ಪರ ತಬ್ಬಿಕೊಳ್ಳುತ್ತಾರೆ. 

 

ಅಜ್ಜಿಯೊಬ್ಬರು ಅವರ ಸ್ನೇಹಿತೆಯಿಂದ (friend) ಸರ್‌ಪ್ರೈಸ್‌ಗೆ ಒಳಗಾದರು. ಇದು ತುಂಬಾ ಸಿಹಿಯಾದ ವಿಚಾರವಲ್ಲವೇ ಎಂದು ಕ್ಯಾಪ್ಷನ್‌ ನೀಡಿ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ(Instagram) ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಎಲ್ಲರೂ ನೋಡಲು ಸಮಾಧಾನವಾಗಿರುತ್ತಾರೆ ಆದರೆ ಒಳಗೆ ಅಳುತ್ತಿರುತ್ತಾರೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಧೀರ್ಘಕಾಲದ ಸ್ನೇಹವನ್ನು ಉಳಿಸಿಕೊಂಡು ಆ ಕಾಲದ ಸ್ನೇಹಿತರಿಬ್ಬರು ಈ ಕಾಲದಲ್ಲಿ ಭೇಟಿಯಾಗಿದ್ದು ನಿಜವಾಗಿಯೂ ಗ್ರೇಟ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಹಣ್ಣು ಹಣ್ಣು ಅಜ್ಜಿ ಮಾತನಾಡೋ ಇಂಗ್ಲಿಷ್‌ಗೆ ನೆಟ್ಟಿಗರು ಫಿದಾ!

ನಿನ್ನೆಯಷ್ಟೇ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಅಜ್ಜಿಯೊಬ್ಬರು ಗೂಗಲ್‌ ನೋಡಿ ಬಾಂಬ್‌ ತಯಾರಿಸಿದ್ದು ಸುದ್ದಿಯಾಗಿತ್ತು. ಉಕ್ರೇನ್‌ನಲ್ಲಿ ನ್ನಲು ಆಹಾರ ಕುಡಿಯಲು ನೀರಿಲ್ಲದೇ ಜನ ಸಂಕಟ ಪಡುತ್ತಿದ್ದು, ಜನ ಜೀವನ ಸಂಪೂರ್ಣ ಹದಗೆಟ್ಟಿದೆ. ಆದಾಗ್ಯೂ ಇದ್ಯಾವುದೂ ಕೂಡ ಉಕ್ರೇನಿಯನ್ನರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲ್ಲ ಎಂಬುದಕ್ಕೆ ಈ ವೃದ್ದೆಯೇ ಸಾಕ್ಷಿ ಆಗಿದ್ದಾರೆ.. ವೃದ್ಧೆಯೊಬ್ಬರು ಯೂಟ್ಯೂಬ್‌ ನೋಡಿ ಸ್ಫೋಟಗೊಳ್ಳಬಲ್ಲಂತಹ ಮೊಲೊಟೊವ್‌ ಕಾಕ್ಟೇಲ್‌ ತಯಾರಿಸಿದ್ದು, ರಷ್ಯಾದವರು ಬರಲಿ ಬುದ್ದಿ ಕಲಿಸುವೆ ಎಂದಿದ್ದಾರೆ. ಇಳಿ ವಯಸ್ಸಿನಲ್ಲೂ ಅಜ್ಜಿಯ ಈ ಧೈರ್ಯ ಹಾಗೂ ಸಾಹಸ ಎಲ್ಲರಿಗೂ ಮಾದರಿಯಾಗಿದ್ದು, ಉಕ್ರೇನ್‌ ಯುವ ಸಮೂಹವನ್ನು ಹೋರಾಟಕ್ಕೆ ಹುರಿದುಂಬಿಸುವಂತೆ ಮಾಡಿದೆ. 

click me!