ತಪ್ಪಾದ್ಮೇಲೆ ತಲೆ ಮೇಲೆ ಕೈಹೊತ್ತು ಕುಳಿತ್ರೆ ಪ್ರಯೋಜನವಿಲ್ಲ. ಸ್ವಲ್ಪ ಬುದ್ಧಿವಂತಿಕೆ, ಎಚ್ಚರಿಕೆ ವಹಿಸಿದ್ರೆ ತಪ್ಪಾಗದಂತೆ ತಡೆಯಬಹುದು. ಇದಕ್ಕೆ ಮದುವೆ ಕೂಡ ಹೊರತಾಗಿಲ್ಲ. ಸಪ್ತಪದಿ ತುಳಿಯುವ ಮೊದಲೇ ಸಂಗಾತಿ ಬಗ್ಗೆ ಒಂದಿಷ್ಟು ವಿಷ್ಯ ತಿಳಿದ್ರೆ ಜೀವನ ಸುಖಕರವಾಗಿರೋದ್ರಲ್ಲಿ ಸಂಶಯವಿಲ್ಲ.
ಮದುವೆ (Marriage) ನಂತ್ರ ಇಬ್ಬರ ಜೀವನ (Life) ಮಾತ್ರವಲ್ಲ ಎರಡು ಕುಟುಂಬಗಳ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಮದುವೆ ನಂತ್ರ ಆಗುವ ಬದಲಾವಣೆ,ಸವಾಲುಗಳಿಗೆ ಪ್ರತಿಯೊಬ್ಬರೂ ಸಿದ್ಧರಿರಬೇಕು. ವೈವಾಹಿಕ ಸಂಬಂಧದಲ್ಲಿ ಒಂದೆಡೆ ಪ್ರೀತಿ ಹೆಚ್ಚಾದರೆ, ಮತ್ತೊಂದೆಡೆ ಸಂಗಾತಿಯ ಮನದಲ್ಲಿ ಪ್ರೀತಿ-ವಾತ್ಸಲ್ಯ, ಆತ್ಮೀಯತೆಯ ಬಗ್ಗೆ ಭಯವೂ ಇರುತ್ತದೆ. ಪ್ರಾರಂಭದಲ್ಲಿ ಪರ್ಫೆಕ್ಟ್ ಅನ್ನಿಸುವ ದಾಂಪತ್ಯ ಹನಿಮೂನ್ ಅವಧಿ ಮುಗಿದ ತಕ್ಷಣ ಹೊರೆಯಾಗಲು ಶುರುವಾಗುತ್ತದೆ. ಹಿಂದಿನ ಕಾಲದಲ್ಲಿ ಪರಸ್ಪರ ಮುಖ ನೋಡದೆ ಮದುವೆಯಾಗ್ತಿದ್ದರು. ಪತಿಯಾಗುವವನ ಹೆಸರು ಕೂಡ ತಿಳಿದಿರುತ್ತಿರಲಿಲ್ಲ. ಆದ್ರೆ ಆಗಿನ ಜೀವನಶೈಲಿ ಭಿನ್ನವಾಗಿತ್ತು. ಈಗ ಪತಿ-ಪತ್ನಿ ಇಬ್ಬರೂ ಶಿಕ್ಷಣ ಪಡೆದಿರುತ್ತಾರೆ. ಅನೇಕರು ಉದ್ಯೋಗದಲ್ಲಿರುತ್ತಾರೆ. ಪ್ರಪಂಚದ ಅನೇಕ ಸಂಗತಿಗಳನ್ನು ಅರಿತಿರುತ್ತಾರೆ. ಅಂಥವರು ಮದುವೆಗೆ ಮುನ್ನ ಕೆಲವೊಂದು ವಿಷ್ಯಗಳನ್ನು ಅವಶ್ಯವಾಗಿ ತಿಳಿದಿರಬೇಕು. ಮೂರ್ನಾಲ್ಕು ಬಾರಿ ಭೇಟಿಯಾದ ನಂತರ ಮದುವೆಯಾಗಲು ನಿರ್ಧರಿಸುವುದು ತಪ್ಪಲ್ಲ. ಆದರೆ ಸಂಗಾತಿಯ ಬಗ್ಗೆ ಸರಿಯಾಗಿ ತಿಳಿದಿರಬೇಕು. ನಿಜ ನಾಲ್ಕೈದು ಭೇಟಿಯಲ್ಲಿ ಎಲ್ಲವನ್ನೂ ತಿಳಿಯಲು ಸಾಧ್ಯವಿಲ್ಲ. ಆದ್ರೆ ಬರೀ ಹೆಸರು, ಅವರ ಇಷ್ಟ ಅಥವಾ ಸಂಪಾದನೆ ಬಗ್ಗೆ ಮಾತ್ರ ಕೇಳಿದ್ರೆ ಸಾಕಾಗುವುದಿಲ್ಲ. ಮದುವೆಯು ಸಂಪೂರ್ಣ ಭಿನ್ನವಾಗಿರುತ್ತದೆ.ಪರಸ್ಪರ ಅವಲಂಬನೆ ಹೆಚ್ಚಿರುತ್ತದೆ. ಹಾಗಾಗಿ ಮದುವೆಯಾಗುವ ಮೊದಲು ಸಂಗಾತಿಗಳು ಪರಸ್ಪರ ಹೆಚ್ಚು ತಿಳಿದಿರಬೇಕು. ಸಾಧ್ಯವಿಲ್ಲವೆಂದಾದ ಸಂದರ್ಭದಲ್ಲಿ ವಿವಾಹದ ನಂತ್ರ ಹೇಗಿರಬೇಕು ಎಂಬುದನ್ನಾದ್ರೂ ತಿಳಿದಿರಬೇಕು.
ತಪ್ಪಾದಾಗ ಕ್ಷಮೆ ಕೇಳಿದ್ರೆ ತಪ್ಪೇನಿಲ್ಲ : ತಪ್ಪಾದಾಗ ಸಾರಿ ಕೇಳುವುದ್ರಲ್ಲಿ ತಪ್ಪೇನಿಲ್ಲ. ಅನೇಕರು ಮುಂದಿರುವವರು ಕ್ಷಮಿಸದೆ ಹೋದ್ರೆ ಎಂಬ ಕಾರಣಕ್ಕೆ ಕ್ಷಮೆ ಯಾಚಿಸುವುದಿಲ್ಲ. ಮತ್ತೆ ಕೆಲವರಿಗೆ ಕ್ಷಮೆ ಕೇಳಲು ಅಹಂ ಅಡ್ಡಿಯಾಗುತ್ತದೆ. ಆದ್ರೆ ದಾಂಪತ್ಯದಲ್ಲಿ ಕ್ಷಮೆ ಕೇಳುವುದು ಸಂಬಂಧ ಉಳಿಯಲು ನೆರವಾಗುತ್ತದೆ ಎಂಬುದನ್ನು ನೆನಪಿಡಿ. ಹಾಗಾಗಿ ಸಂಗಾತಿ ಮುಂದೆ ಕ್ಷಮೆ ಕೇಳುವುದು ತಪ್ಪಲ್ಲ. ಕ್ಷಮೆ ತಾರಕಕ್ಕೇರುವ ಜಗಳವನ್ನು ತಡೆಯುವುದಲ್ಲದೆ ಅವಿಭಕ್ತ ಕುಟುಂಬದಲ್ಲಿ ಸಂತೋಷದ ಜೀವನ ಸುಲಭವಾಗುತ್ತದೆ. ಕೋಪ ಇಡೀ ದಿನವನ್ನು ಹಾಳು ಮಾಡುತ್ತದೆ. ಕ್ಷಮೆ ವಾತಾವರಣವನ್ನು ತಿಳಿಗೊಳಿಸುತ್ತದೆ.
Cheating Partner: ಸಂಗಾತಿಯಿಂದ ಮೋಸ ಹೋದಿರಾ? ಒಂದು ಕ್ಷಣ ನಿಲ್ಲಿ
ಮದುವೆಗೂ ಮುನ್ನ ಕಲ್ಪನೆ : ಮದುವೆಗೂ ಮುನ್ನ ಪ್ರತಿಯೊಬ್ಬರೂ ಕನಸು ಕಾಣ್ತಾರೆ. ಸಂಗಾತಿ ಬಗ್ಗೆ ಒಂದಿಷ್ಟು ಕಲ್ಪನೆ ಹೊಂದಿರುತ್ತಾರೆ. ಮದುವೆ ನಂತ್ರ ಜೀವನ ಹಾಗಿರಬೇಕು,ಹೀಗಿರಬೇಕೆಂದುಕೊಳ್ತಾರೆ. ಆದ್ರೆ ವಿವಾಹವಾದ ವ್ಯಕ್ತಿ ಭಿನ್ನವಾಗಿರ್ತಾನೆ. ಕಲ್ಪನೆಗೆ ತದ್ವಿರುದ್ಧವಾಗಿರ್ತಾರೆ. ಆಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ. ಸಂಬಂಧ ಮುರಿದುಕೊಳ್ಳಲಾಗದೆ,ಅಸಂತೋಷವಾಗಿ,ಎಲ್ಲರೂ ಇದ್ದೂ ಒಂಟಿಯಾಗಿ ಜೀವನ ನಡೆಸಬೇಕಾಗುತ್ತದೆ. ಹಾಗಾಗಿ ನಿಮ್ಮ ಕನಸನ್ನು ಸಂಗಾತಿ ನನಸಾಗಿಸಬಲ್ಲರೇ ಎಂಬ ಅಲ್ಪ ಜ್ಞಾನವನ್ನಾದ್ರೂ ನೀವು ಹೊಂದಿರಬೇಕು.
ವೃತ್ತಿಯ ಬಗ್ಗೆ ಸ್ಪಷ್ಟತೆಯಿರಲಿ : ಮದುವೆಯಾಗುವ ಸಂಗಾತಿ ಬಳಿ,ಮದುವೆ ನಂತ್ರ ವೃತ್ತಿ ಬದುಕು ಮುಂದುವರಿಸಬಹುದೇ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಿ. ಅನೇಕ ಕುಟುಂಬಗಳಲ್ಲಿ ವಿವಾಹದ ನಂತ್ರ ಮಹಿಳೆ ದುಡಿಯಬಾರದು ಎಂಬ ನಿಯಮವಿರುತ್ತದೆ. ಹಾಗೆ ಕೆಲವು ಕಡೆ ಬಂದ ಸಂಬಳವನ್ನು ಪತಿಗೆ ನೀಡಬೇಕೆಂಬ ರೂಢಿಯಿದೆ. ಇದೆಲ್ಲದರ ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಿ. ಮದುವೆ ನಂತ್ರ ಕೆಲಸ ಮಾಡುವುದು ಆರ್ಥಿಕ ಬಲಕ್ಕೆ ಮಾತ್ರವಲ್ಲ ಆತ್ಮವಿಶ್ವಾಸ,ಸಂತೋಷಕ್ಕೂ ಕಾರಣವಾಗುತ್ತದೆ ಎಂಬುದು ನೆನಪಿರಲಿ.
Sex Life : ಸಂಭೋಗದ ವೇಳೆ ಕಾಂಡೋಮ್ ಹರಿಯುತ್ತಾ? ಮಾಡ್ಬೇಡಿ ಈ ತಪ್ಪು
ಮಗುವಿನ ನಿರ್ಧಾರ : ಅನೇಕ ಕುಟುಂಬಗಳಲ್ಲಿ ಮದುವೆಯಾದ ಕೆಲ ತಿಂಗಳಲ್ಲಿಯೇ ಮಗುವಿನ ಗಲಾಟೆ ಶುರುವಾಗುತ್ತದೆ. ವರ್ಷವಾಗ್ತಾ ಬಂತು,ಮಕ್ಕಳ ಬಗ್ಗೆ ಆಲೋಚನೆ ಮಾಡಿ ಎನ್ನುತ್ತಾರೆ. ಕೆಲ ಮಹಿಳೆಯರಿಗೆ ಮದುವೆಯಾದ ವರ್ಷದೊಳಗೆ ಮಗು ಇಷ್ಟವಿರುವುದಿಲ್ಲ. ಒಂದೆರಡು ವರ್ಷ ಆರಾಮವಾಗಿ ಕಳೆದು ನಂತ್ರ ಮಕ್ಕಳ ಪ್ಲಾನ್ ಮಾಡೋಣ ಎಂದುಕೊಂಡಿರುತ್ತಾರೆ. ಆದ್ರೆ ಪತಿಯಿಂದಲೂ ಈ ಒತ್ತಾಯ ಬಂದಾಗ ಅವರಿಗೆ ಹಿಂಸಿಯಾಗುತ್ತದೆ. ಹಾಗಾಗಿ ಇದ್ರ ಬಗ್ಗೆಯೂ ಮದುವೆಗೆ ಮುನ್ನ ತಿಳಿದುಕೊಳ್ಳಿ. ಮದುವೆಗೆ ಮುನ್ನ ಇದ್ರ ಬಗ್ಗೆ ಮಾತನಾಡಲು ನಾಚಿಕೊಳ್ಳಬೇಡಿ.