
ರಾಜ್ ಬಿ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಟ, ನಿರ್ದೇಶಕ, ಕೊರಿಯೋಗ್ರಾಫರ್ ಎಲ್ಲವೂ. ವಿಭಿನ್ನ ಕಥಾಹಂದರ, ನಟನೆಯಿಂದಲೇ ಎಲ್ಲರ ಗಮನ ಸೆಳೆಯುವ ರಾಜ್ ಶೆಟ್ಟಿಯವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮೊದಲಾದ ಭಿನ್ನ ರೀತಿಯ ಸಿನಿಮಾದಿಂದ ಎಲ್ಲರ ಗಮನ ಸೆಳೆದಿದ್ದ ರಾಜ್ ಬಿ ಶೆಟ್ಟಿ ಸದ್ಯ ಟೋಬಿ ಚಿತ್ರದ ಮೂಲಕ ಮುಂದೆ ಬಂದಿದ್ದಾರೆ. ಚಿತ್ರದ ಪೋಸ್ಟರ್, ಟ್ರೈಲರ್ ರಿಲೀಸ್ ಅಂತ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ ಸಂದರ್ಶನ ನೀಡುತ್ತಿದ್ದಾರೆ.
ಇದರಲ್ಲಿ ರಾಜ್ ಬಿ ಶೆಟ್ಟಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹಲವು ಮಾತುಗಳು ವೈರಲ್ ಆಗ್ತಿವೆ. ತಮ್ಮ ವೈಯುಕ್ತಿಕ ಬದುಕಿನಿಂದ (Personal life) ತೊಡಗಿ ಜೀವನದ ಕುರಿತು ಅವರಿಗಿರುವ ಆಲೋಚನೆಗಳನ್ನು ರಾಜ್ ಶೆಟ್ಟಿ ಹೊರ ಹಾಕಿದ್ದು, ಹಲವರು ಮೆಚ್ಚುಗೆ (Compliment) ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರಕತೆ ಬರೆಯುವವರಿಗೆ ರಾಜ್ ಬಿ ಶೆಟ್ಟಿ ಅವರಿಂದ 7 ಪಾಠಗಳು
ರಾಜ್ ಶೆಟ್ಟಿಯವರಿಗೆ ಯಾವ ರೀತಿಯ ರಿಲೇಶನ್ ಶಿಪ್ ಇಷ್ಟವಾಗುತ್ತದೆ?
ವೈವಾಹಿಕ ಜೀವನದ ಬಗ್ಗೆ ರಾಜ್ ಬಿ ಶೆಟ್ಟಿಯವರ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಾರ್ಯಕ್ರಮವೊಂದರಲ್ಲಿ ರಚಿತಾ ರಾಮ್, 'ಲಿವಿಂಗ್ ರಿಲೇಶನ್ ಶಿಪ್ ಓಕೆನಾ ಅಥವಾ ಕಂಪ್ಲೀಟ್ ಕಮಿಟೆಡ್ ಮದುವೆ (Marriage)ಯಾಗುವುದು ಓಕೆನಾ' ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ರಾಜ್ ಶೆಟ್ಟಿಯವರ ಉತ್ತರ ಎಲ್ಲರ ಗಮನ ಸೆಳೆದಿದೆ.
ಸಂಬಂಧಗಳ ವಿಷಯಕ್ಕೆ ಬಂದಾಗ ಕಂಪ್ಲೀಟ್ ಕಮಿಟೆಡ್ ಜೀವನ ಬೆಸ್ಟ್. ಲಿವ್ ಇನ್ ರಿಲೇಶನ್ ಶಿಪ್ ಕೆಲವೊಮ್ಮೆ ಕೆಲವೊಂದು ರೀತಿಯ ಎಫರ್ಟ್‌ಗಳನ್ನು ಹಾಕಲು ಅಡ್ಡಿ ಪಡಿಸುತ್ತದೆ. ಮ್ಯಾರೇಜ್ ಅಂದ್ರೆ ಅದಕ್ಕಿಂತ ಮೊದಲು ಲವ್‌ನ ಒಂದು ಎಕ್ಸ್‌ಪಿರೀಯನ್ಸ್ ಆಗಿರ್ಬೇಕು. ನಾನು ಈ ಮನುಷ್ಯನ ಜೊತೆ ಎಲ್ಲವನ್ನೂ ಕಳೆದುಕೊಳ್ಳೋದಕ್ಕೆ ರೆಡಿಯಿದ್ದೇನೆ ಎಂದು ತಿಳಿದಿರಬೇಕು. ಪಡೆದುಕೊಳ್ಳೋದಕ್ಕೆ ಅಲ್ಲ. ಈ ರೀತಿ ಇಬ್ಬರೂ ಯೋಚಿಸಿದಾಗ ಇಬ್ಬರೂ ಜೊತೆಯಲ್ಲಿರಬಹುದು ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ರುದ್ರ ಭಯಂಕರ ರಾಜ್ ಬಿ ಶೆಟ್ಟಿ: ಟೋಬಿ ಫಸ್ಟ್ ಲುಕ್
ಡಿವೋರ್ಸ್ ಕೆಟ್ಟ ಶಬ್ದವಲ್ಲ, ಖುಷಿಯಾಗಿರಲು ಬಯಸುವುದು ತಪ್ಪಲ್ಲ
ಡಿವೋರ್ಸ್ ಅನ್ನೋದು ನನಗೆ ತುಂಬಾ ಕೆಟ್ಟ ಶಬ್ದ ಅನಿಸುತ್ತದೆ. ಡಿವೋರ್ಸ್ ಪಡೆದುಕೊಳ್ಳುವುದು ತಪ್ಪಲ್ಲ. ಡಿವೋರ್ಸ್ ಎಂದ ತಕ್ಷಣ ಒಬ್ಬಳನ್ನು ಗಂಡ (Husband)ನನ್ನು ಬಿಟ್ಟು ಬಂದವಳು, ಹೆಂಡ್ತಿನಾ ಬಿಟ್ಟು ಬಂದವನು ಎಂದು ನೋಡಬೇಕಾದ ಅಗತ್ಯವಿಲ್ಲ. ಒಬ್ಬ ಮನುಷ್ಯ ಖುಷಿಯಾಗಿರಬೇಕು ಎಂದು ಡಿಸೈಡ್ ಮಾಡುವುದು ಯಾವುದೇ ಕಾರಣಕ್ಕೂ (Reason) ತಪ್ಪಲ್ಲ. ಅದು ಲಿವ್-ಇನ್ ನಲ್ಲಾದರೆ ಅದರಲ್ಲಿ, ಲವ್‌ನಲ್ಲಿ ಆದರೆ ಅದರಲ್ಲಿ, ಮದುವೆಯಲ್ಲಿ ಆದ್ರೆ ಮದುವೆಯಲ್ಲಿ ಅಷ್ಟೆ ಎಂದು ರಾಜ್ ಬಿ ಶೆಟ್ಟಿ ತಿಳಿಸಿದ್ದಾರೆ.
ಗರ್ಲ್‌ಫ್ರೆಂಡ್ ಮಳೆಯಂತೆ, ತಾಯಿ ನದಿಯಂತೆ ಅನ್ನೋ ರಾಜ್ ಶೆಟ್ಟಿ
ರಾಜ್ ಬಿ ಶೆಟ್ಟಿ ಕಾಲೇಜಲ್ಲಿ ಓದುತ್ತಿರುವಾಗಲೇ ಪ್ರೀತಿಯಲ್ಲಿ (Love) ಬಿದ್ದವರು. ಪ್ರೀತಿ ವಿಚಾರದಲ್ಲಿ ಅವರ ವ್ಯಾಖ್ಯಾನವೇ ಬೇರೆ. ಒಂದಲ್ಲ ಎರಡಲ್ಲ ಸುದೀರ್ಘ ಆರು ವರ್ಷ ಒಬ್ಬ ಹುಡುಗಿಯನ್ನ ಮನಸಾರೆ ಪ್ರೀತಿಸಿ ಬಳಿಕ ಆ ಪ್ರೀತಿಯನ್ನು ಕಳೆದುಕೊಂಡಿದ್ದಾರೆ ರಾಜ್ ಶೆಟ್ಟಿ. ಆ ಪ್ರೀತಿಯನ್ನು ಕಳೆದುಕೊಂಡ ಬಳಿಕ ಆದ ಬದಲಾವಣೆಗಳೇ ಇದೀಗ ಈ ಹಂತಕ್ಕೆ ಅವರನ್ನು ತಂದು ನಿಲ್ಲಿಸಿದೆ ಎಂದೂ ಹೇಳಿಕೊಳ್ಳುತ್ತಾರವರು. 'ಡಿಗ್ರಿಯಲ್ಲಿ ಒಬ್ಬಳು ಹುಡುಗಿ ಇದ್ದಳು. ನನ್ನ ಮತ್ತು ಅವಳ ನಡುವೆ ಆರು ವರ್ಷದ ರಿಲೇಷನ್(Relationship) ಇತ್ತು. ಆವತ್ತೆ ನಾನು ಅವಳಿಗೆ ಹೇಳಿದ್ದೆ, ಒಂದು ವೇಳೆ ನೀನು ಬಿಟ್ಟು ಹೋಗುತ್ತಿಯಾ ಎಂದರೆ ನಾನು ಯಾವುದೇ ಕಾರಣಕ್ಕೂ ಕಾರಣ ಕೇಳಲ್ಲ ಎಂದಿದ್ದೆ.
ಆದರೆ, ಯಾಕೋ ಗೊತ್ತಿಲ್ಲ, ಆರು ವರ್ಷದ ಬಳಿಕ ಹಾಗೇ ಆಯ್ತು. ಆಗ ಒಂದು ವಿಷಯ ನನಗೆ ಗೊತ್ತಾಯ್ತು. ಅವಳು ನನ್ನನ್ನು ಬಿಟ್ಟು ಹೋಗದಿದ್ದರೆ, ನಾನು ಇನ್ನೂ ಕೆಟ್ಟ ಮನುಷ್ಯನಾಗಿಯೇ ಉಳಿಯುತ್ತಿದ್ದೆ ಎಂದು. ಹಾಗಂತ ಈಗ ನಾನೇನೂ ತುಂಬ ಒಳ್ಳೆಯವನಲ್ಲ. ಆದರೆ ಬ್ರೇಕಪ್ ಆಗಿ ಮುಂದೆ ಹೋಗ್ತಾ ಹೋಗ್ತಾ ನನಗೇ ನಿಧಾನಕ್ಕೆ ಅರ್ಥ ಆಗೋಕೆ ಶುರುವಾಯ್ತು. ಅವಳಿಗೆ ಪ್ರೀತಿ ಕೊಡೋಕೇ ಬರಲಿಲ್ಲ. ನಂಗೆ ಅಂತ. ಅವಳು ಬ್ರೇಕಪ್ (breakup) ಮಾಡಿದ್ರಿಂದ ನಾನು ಬೆಳೆದೆ. ಆ ಬ್ರೇಕಪ್‌ನಿಂದ ನಾನು ಅವಳನ್ನು ದ್ವೇಷಿಸುವುದಿಲ್ಲ. ಬದಲಿಗೆ ಗೌರವಿಸುತ್ತೇನೆ. ನೀನು ಯೋಗ್ಯ ಅಲ್ಲ ಎಂದು ಅವಳು ತೋರಿಸಿದಳು' ಎಂದು ಹಳೇ ಲವ್ವಿನ ಕಥೆ ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.