ಲವರ್ ಜೊತೆ ಜಗಳವಾಡಿ 150 ಅಡಿ ಎತ್ತರದ ಹೈವೋಲ್ಟೇಜ್‌ ಟವರ್ ಹತ್ತಿದ ಯುವತಿ

By Suvarna News  |  First Published Aug 9, 2023, 10:27 AM IST

ಪ್ರೀತಿಸುವವರ ಮಧ್ಯೆ ಜಗಳವಾಗುವುದು ನಂತರ ಹುಡುಗಿ ಕೋಪಿಸಿಕೊಳ್ಳುವುದು ಎಲ್ಲವೂ ಸಾಮಾನ್ಯ. ಆದರೆ ಪ್ರೇಮಿಗಳು ಜಗಳವಾದ ಸಿಟ್ಟಿಗೆ ವಿದ್ಯುತ್‌ ಟವರ್‌ ಏರಿದ್ದನ್ನು ನೋಡಿದ್ದೀರಾ? ಹೌದು, ಛತ್ತೀಸ್‌ಘಡದಲ್ಲಿ ಇಂಥಹದ್ದೊಂದು ಘಟನೆ ನಡೆದಿದೆ.


ಪ್ರೀತಿಯೆಂದರೆ ಅಲ್ಲಿ ಮುನಿಸು, ಹಠ ಎಲ್ಲವೂ ಇದ್ದಿದ್ದೇ. ಅದರಲ್ಲೂ ಹೆಣ್ಮಕ್ಕಳಂತೂ ಸಣ್ಣಪುಟ್ಟ ವಿಚಾರಕ್ಕೆ ಹುಡುಗರನ್ನು ಗೋಳು ಹೊಯ್ದುಕೊಳ್ಳುತ್ತಾರೆ. ಸುಮ್‌ ಸುಮ್ನೆ ಜಗಳವಾಡಿ ಅವಾಂತರ ಮಾಡಿಕೊಳ್ತಾರೆ. ಪ್ರೀತಿಸುವವರ ಮಧ್ಯೆ ಜಗಳವಾಗುವುದು ನಂತರ ಹುಡುಗಿ ಕೋಪಿಸಿಕೊಳ್ಳುವುದು ಎಲ್ಲಾ ಸಾಮಾನ್ಯ. ಆದರೆ ಜಗಳವಾದ ಸಿಟ್ಟಿಗೆ ವಿದ್ಯುತ್‌ ಟವರ್‌ ಏರಿದ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ತನ್ನ ಪ್ರಿಯಕರನೊಂದಿಗೆ ಜಗಳವಾಡಿದ ಬಳಿಕ ಯುವತಿಯೊಬ್ಬಳು ಬರೋಬ್ಬರಿ 150 ಅಡಿಯ ವಿದ್ಯುತ್‌ ಟವರ್‌ ಏರಿ ಕುಳಿತು ಬಿಟ್ಟಿದ್ದಾಳೆ. ಯುವತಿಯನ್ನು ಕೆಳಗಿಳಿಯುವಂತೆ ಒತ್ತಾಯಿಸುತ್ತ ಯುವಕನೂ ಟವರ್‌ ಏರಿದ್ದಾನೆ. 

ಛತ್ತೀಸ್‌ಗಢದ ಗೌರೆಲಾ-ಪೇಂದ್ರ-ಮಾರ್ವಾಹಿಯಲ್ಲಿ ಘಟನೆ ನಡೆದಿದೆ. ಹುಡುಗ-ಹುಡುಗಿ ಇಬ್ಬರೂ ತೀವ್ರವಾದ ವಾದದಲ್ಲಿ ತೊಡಗಿದ್ದರು. ಇದ್ದಕ್ಕಿದ್ದಂತೆ ಹುಡುಗಿ (Girl) ಸಿಟ್ಟಿನಿಂದ ಟವರ್ ಹತ್ತಿದ್ದಾಳೆ ಎಂದು ತಿಳಿದುಬಂದಿದೆ. ಇದನ್ನು ನೋಡಿ ಆಕೆಯ ಗೆಳೆಯನು ಅವಳನ್ನು ಕೆಳಗಿಳಿಯುವಂತೆ ಮನವೊಲಿಸಲು ಆತುರದಿಂದ ಹಿಂಬಾಲಿಸಿದನು. ತಮ್ಮ ಪ್ರಾಣವನ್ನೇ ಅಪಾಯಕ್ಕೆ ಗುರಿಪಡಿಸಿ ವಿದ್ಯುತ್ ಟವರ್ ಏರಿದ ಜೋಡಿಯ ನಿರ್ಭೀತ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ಕೆಳಗಿಳಿಯುವಂತೆ ಸೂಚಿಸಿದರು. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗಿದೆ.ಸುಮಾರು 30 ನಿಮಿಷಗಳ ನಂತರ, ಸ್ಥಳೀಯ ಪೊಲೀಸರ ಮಧ್ಯಸ್ಥಿಕೆಯೊಂದಿಗೆ, ಇಬ್ಬರನ್ನೂ ಕೆಳಗೆ ಇಳಿಸಲಾಯಿತು ಎಂದು ತಿಳಿದುಬಂದಿದೆ. 

Tap to resize

Latest Videos

ಬೆಂಗಳೂರಲ್ಲಿ ಲವರ್ಸ್‌ಗಳ ಕಾದಾಟ: ಹಿಗ್ಗಾಮುಗ್ಗಾ ಹೊಡೆದಾಡಿಕೊಂಡ ಪ್ರೇಮಿಗಳು..!

ವಾದ-ವಿವಾದದ ನಂತರ ಟವರ್ ಹತ್ತಿದ ಪ್ರೇಮಿಗಳು
ಟವರ್ ಏರಿದಾಕೆಯನ್ನು ಅನಿತಾ ಭೈನಾ ಎಂದು ಗುರುತಿಸಲಾಗಿದ್ದು, ಆಕೆ ಪಕ್ಕದ ಕೊಡ್ಗರ್ ಗ್ರಾಮದ ಮುಖೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ. ಅವರು ಒಂದು ವರ್ಷದಿಂದ ಸಂಬಂಧ (Relationship) ಹೊಂದಿದ್ದರು ಆದರೆ ಇತ್ತೀಚೆಗೆ, ಅನಿತಾ ಮುಖೇಶ್ ಅವರ ಗ್ರಾಮಕ್ಕೆ ಭೇಟಿ ನೀಡಿ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಕಳೆದ ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಜಗಳಕ್ಕೆ ಕಾರಣವಾಯಿತು. ಅಸಮಾಧಾನಗೊಂಡ ಅನಿತಾ ಸಿಟ್ಟುಗೊಂಡು ಟವರ್ ಹತ್ತಿದಳು. ಸಮಸ್ಯೆಯನ್ನು ಪರಿಹರಿಸಲು ಮತ್ತು ಅವಳನ್ನು ಸುರಕ್ಷಿತವಾಗಿ (Safe) ಕರೆತರಲು ಮುಖೇಶ್ ಸಹ ಆಕೆಯನ್ನು ಹಿಂಬಾಲಿಸಿದನು,

ವಿಡಿಯೋ ಕುರಿತು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ. ವೈರಲ್ ಆದ ವಿಡಿಯೋ ಬಳಕೆದಾರರಿಂದ ಕೆಲವು ಹಾಸ್ಯಮಯ ಪ್ರತಿಕ್ರಿಯೆಗಳನ್ನು (Response) ಪಡೆದುಕೊಂಡಿದೆ. ಶೋಲೆ ಚಿತ್ರದ ದೃಶ್ಯಗಳನ್ನು ಇಂದಿಗೂ ಅನುಕರಣೆ ಮಾಡಲಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ತಿಳಿಸಿದ್ದಾರೆ. ಮತ್ತೊಬ್ಬರು ಇದನ್ನು 'ಹೈ ವೋಲ್ಟೇಜ್ ಡ್ರಾಮಾ' ಎಂದು ಉಲ್ಲೇಖಿದ್ದಾರೆ. ಇನ್ನೊಬ್ಬ ವ್ಯಕ್ತಿ ಹಾಸ್ಯಮಯವಾಗಿ ಛತ್ತೀಸ್‌ಗಢ ಸರ್ಕಾರಕ್ಕೆ ವಿದ್ಯುತ್ ಕೊರತೆಯ ಸಮಸ್ಯೆಯಿದೆ. ಹೀಗಾಗಿ ಯಾವುದೇ ಸಮಸ್ಯೆಗೆ ಟವರ್ ಏರುವುದು ಸುರಕ್ಷಿತ ಪರಿಹಾರವಾಗಬಹುದು ಎಂದು ಸೂಚಿಸಿದರು. 

Bengaluru : ಫ್ರೀ ಐಸ್‌ ಕ್ರೀಮ್‌ಗಾಗಿ ಭರ್ಜರಿ ಡ್ಯಾನ್ಸ್‌, ನೀವು ಫಿದಾ ಆಗೋದು ಗ್ಯಾರಂಟಿ

ಎಲ್ಲಾ ಸಮಸ್ಯೆಗೆ ಟವರ್ ಹತ್ತೋದ್ಯಾಕಪ್ಪಾ?
ಜನರು ತಮ್ಮ ಕುಂದುಕೊರತೆಗಳನ್ನು ಅಥವಾ ಬೇಡಿಕೆಗಳನ್ನು ವ್ಯಕ್ತಪಡಿಸಲು ಗೋಪುರಗಳನ್ನು ಹತ್ತುವ ಇಂಥಾ ಘಟನೆಗಳು ಅಪರೂಪವಲ್ಲ. ಈ ಹಿಂದೆಯೂ ಇಂಥಾ ಹಲವಾರು ಘಟನೆಗಳು ವರದಿಯಾಗಿವೆ.  2017ರಲ್ಲಿ ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ (Alcohol ban) ಆಗ್ರಹಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿದ್ದ. ಕಳೆದ ವರ್ಷ, ಛತ್ತೀಸ್‌ಗಢದಲ್ಲಿ ಪತ್ನಿಯೊಬ್ಬಳು ತನ್ನ ಪತಿಯ (Husband) ಕುಡಿತದ ಹಿಂಸೆಯಿಂದಾಗಿ ಮನೆಗೆ ಮರಳಲು ನಿರಾಕರಿಸಿ ವಿದ್ಯುತ್ ಟವರ್ ಏರಿದ್ದಳು.

ಇತ್ತೀಚೆಗೆ, ಆಗಸ್ಟ್‌ನಲ್ಲಿ, ಉತ್ತಮ ರಸ್ತೆ ಮೂಲಸೌಕರ್ಯಕ್ಕಾಗಿ ಒತ್ತಾಯಿಸಿ ವ್ಯಕ್ತಿಯೊಬ್ಬ 50 ಅಡಿ ಎತ್ತರದ ಗೋಪುರದ ಮೇಲೆ ಒಂದು ಗಂಟೆ ಪ್ರತಿಭಟನೆ ನಡೆಸಿದ್ದ ಈ ಘಟನೆಗಳು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಎತ್ತಿ ತೋರಿಸುತ್ತವೆ ಮತ್ತು ಅಂತಹ ತೀವ್ರವಾದ ಕ್ರಮಗಳನ್ನು ತಡೆಗಟ್ಟಲು ಸೂಕ್ತ ಬೆಂಬಲವನ್ನು ನೀಡುತ್ತವೆ.

We have been building transmission towers from ages. This is the first time I have seen someone climb them to commit suicide upset with her lover. Good news, the boyfriend followed her up and convinced her to climb down. All iz well pic.twitter.com/3MRpbZ8RJI

— Harsh Goenka (@hvgoenka)
click me!