ಹೆಂಡತಿ, ಗಂಡನ ಬಗ್ಗೆ ಅನುಮಾನ ಪಡುವುದು ಹೊಸ ವಿಷಯವೇನಲ್ಲ. ಗಂಡನ ಮೊಬೈಲ್ ನೋಡಿ, ತಿಂಗಳ ಖರ್ಚು ನೋಡಿ, ಪರ್ಫ್ಯೂಮ್ ಸ್ಮೆಲ್ ನೋಡಿ ಆಗಾಗ ಡೌಟ್ ಪಡುತ್ತಿರುತ್ತಾರೆ. ಆದ್ರೆ ಇಲ್ಲೊಂದು ದಂಪತಿಯ ಮಧ್ಯೆ ಟ್ವಿಟರ್ ನೂತನ X ಲೋಗೋ ಪ್ರೀಮಿಯಂ ಖರ್ಚು ಜಗಳಕ್ಕೆ ಕಾರಣವಾಗಿದೆ.
ಉದ್ಯಮಿ ಎಲಾನ್ ಮಸ್ಕ್, ಟ್ವಿಟರ್ ಖರೀದಿಸಿದ ಬಳಿಕ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಅಷ್ಟೇ ಟೀಕೆಯನ್ನು ಸಹ ಎದುರಿಸಿದ್ದಾರೆ. ಇತ್ತೀಚೆಗೆ ಮಸ್ಕ್ ಟ್ವಿಟರ್ ಲೋಗೋವನ್ನು ಬದಲಿಸಿದ್ದರು. ನೀಲಿ ಹಕ್ಕಿಯ ಮೂಲಕ ಸಂದೇಶ ತರುತ್ತಿದ್ದ ಟ್ವಿಟರ್ ಏಕಾಏಕಿ X ಲೋಗೋ ನೂತನ ಚಿಹ್ನೆಯಾಗಿ ಬಳಸಿಕೊಂಡಿತ್ತು. ನೀಲಿ ಹಕ್ಕಿಯನ್ನು ಹಾರಿಬಿಟ್ಟ ಮಸ್ಕ್ ಮತ್ತೆ ಟ್ರೋಲ್ ಆಗಿದ್ದರು. ಟ್ರೋಲ್, ಮೀಮ್ಸ್ ಬೆನ್ನಲ್ಲೇ ಎಲಾನ್ ಮಸ್ಕ್ ಹಲವು ಸಂಕಷ್ಟ ಎದುರಿಸಿದ್ದಾರೆ. ಹೊಸ ಲೋಗೋ ಬಿಡುಗಡೆ ಮಾಡಿದ ಬಳಿಕ ಟ್ವಿಟರ್ ಪ್ರಧಾನ ಕಚೇರಿ ಮೇಲ್ಬಾಗದಲ್ಲಿ ದೊಡ್ಡ ಗಾತ್ರದ X ಲೋಗೋ ಅಳವಡಿಸಲಾಗಿತ್ತು. ಆದರೆ ಸ್ಥಳೀಯರ ದೂರು, ಪೊಲೀಸರ ವಾರ್ನಿಂಗ್ ಬಳಿಕ ಕಚೇರಿಯ ಮೇಲಿನ ನೂತನ X ಲೋಗೋವನ್ನು ತೆಗೆದು ಹಾಕಲಾಗಿತ್ತು
ಹಾಗೆಯೇ ಇತ್ತೀಚಿಗೆ ವೈರಲ್ ಆದ ಪೋಸ್ಟ್‌ವೊಂದರಲ್ಲಿ ಪತ್ನಿ (Wife)ಯೊಬ್ಬಳು ಬದಲಾಗಿರುವ ಟ್ವಿಟರ್ ಲೋಗೋದಿಂದಾಗಿ ಗಂಡನ ಮೇಲೆಯೇ ಅನುಮಾನ ಪಟ್ಟಿದ್ದಾಳೆ. ಹೆಂಡತಿಯೊಬ್ಬಳು ತನ್ನ ಪತಿ (Husband) ಮಾಡಿದ 'ಎಕ್ಸ್ ಪ್ರೀಮಿಯಂ' ಖರೀದಿಯನ್ನು ಕಂಡುಹಿಡಿದಳು. ಆ ಬಗ್ಗೆ ಅನುಮಾನಗೊಂಡು ಗಂಡನನ್ನು ವಿಚಾರಿಸಿದಳು. ಈ ಪೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಮಸ್ಕ್‌ಗೆ ಸಂಕಷ್ಟ ತಂದ X; ವಾರ್ನಿಂಗ್ ಬಳಿಕ ಕಚೇರಿಯಲ್ಲಿ ಅಳವಡಿಸಿದ್ದ ಲೋಗೋ ತೆಗೆದ ಕಂಪನಿ!
ಗಂಡನ 'ಎಕ್ಸ್' ಖರ್ಚಿನ ಬಗ್ಗೆ ಪ್ರಶ್ನಿಸಿದ ಪತ್ನಿ
ಅಲೆಕ್ಸ್ ಕೊಹೆನ್ ಎಂಬ ವ್ಯಕ್ತಿ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ಅವರು ಟ್ವಿಟರ್ ಎಕ್ಸ್‌ನ ಮಾಸಿಕ ಚಂದಾದಾರಿಕೆ ತೆಗೆದುಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪತ್ನಿಯಿಂದ ಹಲವು ಪ್ರಶ್ನೆಯನ್ನು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕುರಿತಾದ ಮಾಹಿತಿ (Information)ಯನ್ನು ಹಂಚಿಕೊಳ್ಳಲು ಅವರು, ಆಪಲ್‌ನ iMessage ನಲ್ಲಿನ ಸಂಭಾಷಣೆಯ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡರು. ಇದು ಅವರ ಪತ್ನಿ 'X ಪ್ರೀಮಿಯಂ' ಎಂದು ಲೇಬಲ್ ಮಾಡಲಾದ ಪಾವತಿಯ (Payment) ಕುರಿತು ಪ್ರಶ್ನಿಸುತ್ತಿರುವುದನ್ನು ತೋರಿಸುತ್ತದೆ. ಪೋಸ್ಟ್ ಮತ್ತು ಅದಕ್ಕೆ ಅವರ ಪ್ರತಿಕ್ರಿಯೆಯು ನಿರೀಕ್ಷಿತವಾಗಿ ವೈರಲ್ ಆಗಿದ್ದು, ಜನರಿಂದ ಹಲವಾರು ಪ್ರತಿಕ್ರಿಯೆಗಳನ್ನು (Response) ಪಡೆಯುತ್ತಿದೆ.
'ನನ್ನ ಹೆಂಡತಿ ನನಗೆ ಈ ಸಂದೇಶವನ್ನು ಕಳುಹಿಸಿದ್ದಾಳೆ. ನಾನಿವತ್ತು ಕೋಣೆಯಿಂದ ಹೊರಗೆ ಪ್ರತ್ಯೇಕವಾಗಿ ಮಲಗಬೇಕಾಗಿದೆ' ಎಂದು ಕೋಹೆನ್ ಸ್ಕ್ರೀನ್‌ಶಾಟ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ. ಇನ್ನೊಂದು ಸ್ಕ್ರೀನ್‌ಶಾಟ್‌ನಲ್ಲಿ ಪತ್ನಿ, 'ಕಾರ್ಡ್‌ನಲ್ಲಿ ನಮೂದಿಸಿರುವ 'X ಪ್ರೀಮಿಯಂ' ಎಂದರೇನು?; ಎಂದು ಪತ್ನಿ ಪ್ರಶ್ನಿಸಿದ್ದಾಳೆ. ಇದಕ್ಕೆ ಪತಿ, 'ಇದನ್ನು ನಾನು ಹೇಗೆ ವಿವರಿಸಲಿ' ಎಂದು ಉತ್ತರಿಸಿದ್ದಾನೆ.
ಟ್ವಿಟರ್‌ಗೆ ಹೊಸ ಲೋಗೋ, ನೀಲಿ ಹಕ್ಕಿ ಹಾರಿ ಬಿಟ್ಟು X ಲಾಂಛನ ಬಿಡುಗಡೆ ಮಾಡಿದ ಮಸ್ಕ್!
ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ವೈರಲ್
ಟ್ವೀಟ್ ಅನ್ನು ಆಗಸ್ಟ್ 6ರಂದು ಹಂಚಿಕೊಳ್ಳಲಾಗಿದೆ. ಅಂದಿನಿಂದ ಇದನ್ನು 15.8 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ ಮತ್ತು ಸಂಖ್ಯೆಗಳು ಇನ್ನೂ ಹೆಚ್ಚುತ್ತಿವೆ. ಹೆಚ್ಚುವರಿಯಾಗಿ. ಜನರು ಈ ಟ್ವೀಟ್‌ಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು, 'ನೀವು ಇಡೀ ವರ್ಷಕ್ಕೆ ಮುಂಚಿತವಾಗಿ ಚಂದಾದಾರರಾಗಿ (Membership) ಪಾವತಿಸುವುರಿಂದ ನೀವು ಹೀಗೆ ವರ್ಷಕ್ಕೆ ಯಾವಾಗಲಾದರೊಮ್ಮೆ ರೂಮನಿಂದ ಹೊರಗೆ ಕಳೆಯಬೇಕಾಗಿಲ್ಲ' ಎಂದು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಇದು ಕೇವಲ ವೈರಲ್ ಆಗಿರೋ ಪೋಸ್ಟ್, ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ' ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು '@elonmusk ಇದು ಮಾಸ್ಟರ್ ಪ್ಲಾನ್ ಅಲ್ಲವೇ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಈ ರೀತಿಯಾಗುತ್ತದೆ ಎಂದು ಎಲೋನ್ ಮಸ್ಕ್‌ಗೆ ತಿಳಿದಿತ್ತು. ಅವರೆಲ್ಲೋ ನಗುತ್ತಿದ್ದಾರೆ. ಎಂದು ನನಗೆ ಅನಿಸುತ್ತಿದೆ' ಎಂದು ತಿಳಿಸುತ್ತಿದ್ದಾರೆ. ಬಳಕೆದಾರರಲ್ಲಿ ಇನ್ನೊಬ್ಬರು, 'ಗಂಡ ತಾನು ಮತ್ತಷ್ಟು ತೊಂದರೆಗೆ ಸಿಲುಕಿ ಹಾಕಿಕೊಳ್ಳಲು ಸರಿಯಾದ ಉತ್ತರವನ್ನು ನೀಡಿದ್ದಾನೆ' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ನಲ್ಲಿ ಟ್ವಿಟರ್ ಎಕ್ಸ್ ಪ್ರೀಮಿಯಂ ವಿಚಾರ ಸಖತ್ ವೈರಲ್ ಆಗ್ತಿರೋದಂತೂ ನಿಜ.
My wife just texted me this, I'm sleeping on the couch tonight pic.twitter.com/ORhswSwPaj
— Alex Cohen (@anothercohen)