ನಿಮ್ಮ ಸಂಗಾತಿಗೆ ನಿಮ್ಮೊಂದಿಗೆ ಬದುಕಲು ಇಷ್ಟವಿಲ್ಲದೆ ಇದ್ದಾಗ ಹಲವು ಕೃತ್ಯಗಳ ಮೂಲಕ ನಿಮ್ಮಿಂದ ದೂರವಾಗಲು ಯತ್ನಿಸಬಹುದು. ಅಂತಹ ಸಮಯದಲ್ಲಿ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಿ. ಸಾಲವಾಗುವಷ್ಟು ಶಾಪಿಂಗ್ ಮಾಡುವುದು, ನಿಮ್ಮ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವಂತಹ ಕೆಲಸ ಮಾಡುತ್ತಿದ್ದರೆ ಗಮನ ನೀಡಿ.
ಪರಸ್ಪರ ಒಟ್ಟಿಗೆ ಬಾಳಲು ಸಾಧ್ಯವಾಗದ ಜೋಡಿ (Couple) ವಿಚ್ಛೇದನದ (Divorce) ಮೊರೆ ಹೋಗುವುದು ಸಹಜ. ಇತ್ತೀಚಿನ ದಿನಗಳಲ್ಲಂತೂ ಮದುವೆಯಷ್ಟೇ ವಿಚ್ಛೇದನವೂ ಸಾಮಾನ್ಯವಾಗಿದೆ. ಆದರೆ, ಎಲ್ಲ ವಿಚ್ಛೇದನವೂ ಪರಸ್ಪರ ಸಮ್ಮತಿಯ ಮೇರೆಗೇ ಆಗಬೇಕೆಂದಿಲ್ಲ. ಸಂಗಾತಿಯಲ್ಲಿ ಏನಾದರೊಂದು ಪ್ರಮುಖ ದೋಷವೋ, ಸಮಸ್ಯೆಯೋ, ಚಟವೋ ಇದ್ದರೆ ಆ ಕಾರಣದಿಂದ ಸುಲಭವಾಗಿ ವಿಚ್ಛೇದನ ಪಡೆದುಕೊಳ್ಳಬಹುದು. ಆದರೆ, ಅವರಲ್ಲಿ ಏನೊಂದೂ ಸಮಸ್ಯೆ ಇಲ್ಲದಿದ್ದರೂ ಅವರೊಂದಿಗೆ ಬಾಳುವುದು ಬೇಸರವಾದರೆ ಕಾರಣ ನೀಡುವುದು ಕಷ್ಟವಾಗುತ್ತದೆ. ಆದರೆ, ಅವರೊಂದಿಗೆ ಜೀವಿಸುವುದಂತೂ ಇಷ್ಟವಿರುವುದಿಲ್ಲ. ಅಂತಹ ಸಮಯದಲ್ಲಿ ಸಂಗಾತಿಯ (Partner) ಮೇಲೆ ಒಂದು ರೀತಿಯ ಒತ್ತಡ ಹೇರುವ ಕಾರ್ಯತಂತ್ರ (Tricks) ಶುರುವಾಗಬಹುದು.
ಬಾಯಿಬಿಟ್ಟು ಹೇಳದೇ ಅವರೊಂದಿಗೆ ಬದುಕಲು ಇಷ್ಟವಿಲ್ಲದಿರುವುದನ್ನು ಹಲವು ಕೃತ್ಯಗಳ ಮೂಲಕ ವ್ಯಕ್ತಪಡಿಸುವ ಸಂಗಾತಿಗಳೂ ಇದ್ದಾರೆ. ಕೇವಲ ಭಾವನೆಗಳ ಮೂಲಕವಲ್ಲ. ಅವರ ಸಂಗಾತಿ ತೀವ್ರ ಒತ್ತಡಕ್ಕೆ ಒಳಗಾಗಿ ಪರಸ್ಪರ ದೂರವಾಗುವ ಕುರಿತು ತಾವೇ ಸ್ವತಃ ಮಾತುಕತೆಗೆ ಮುಂದಾಗಬೇಕು, ಆ ರೀತಿಯಲ್ಲಿ ಅವರ ಮೇಲೆ ಒತ್ತಡ ಹೇರುತ್ತಾರೆ. ಅಂತಹ ಹಲವು ಕೃತ್ಯಗಳ ಬಗ್ಗೆ ಅರಿತುಕೊಳ್ಳಿ.
• ನಿಮ್ಮ ಕಂಪ್ಯೂಟರ್ (Computer) ಅನ್ನು ಹ್ಯಾಕ್ (Hack) ಮಾಡಬಹುದು!
ನೀವು ಹಣಕಾಸು ವಿಚಾರಗಳನ್ನು ಮುಚ್ಚಿಡುತ್ತಿರುವಿರಿ ಎನ್ನುವ ಅನುಮಾನ ನಿಮ್ಮ ಸಂಗಾತಿಗೆ ಬರಬಹುದು. ಅಂತಹ ಸಮಯದಲ್ಲಿ ಅವರು ನಿಮ್ಮ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಬಹುದು. ಅಥವಾ ನಿಮ್ಮ ಮೇಲೆ ಗೂಢಚಾರಿಕೆ ಮಾಡಲು ಜನರನ್ನು ನೇಮಕ ಮಾಡಿಕೊಳ್ಳಬಹುದು. ಅವರು ಒಂದೊಮ್ಮೆ ನಿಮ್ಮ ಕಂಪ್ಯೂಟರ್ ಹ್ಯಾಕ್ ಮಾಡಿ ನಿಮ್ಮ ಹಣಕಾಸು ಸಂಗತಿಗಳನ್ನು ಬಯಲು ಮಾಡುತ್ತಾರೆ ಎಂದಿಟ್ಟುಕೊಳ್ಳಿ. ಅಂತಹ ಸಮಯದಲ್ಲಿ ಭಾರೀ ನಿಯಂತ್ರಣದಿಂದ ನಡೆದುಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ದುಡುಕು ಪ್ರವೃತ್ತಿ ತೋರದೆ ಜಾಣ್ಮೆಯಿಂದ ವರ್ತಿಸಬೇಕಾಗುತ್ತದೆ. ಸಂಗಾತಿಯ ವರ್ತನೆ ಬಗ್ಗೆ ನಿಮಗೆ ಸಂಶಯವಿದ್ದರೆ ನೀವು ಆಗಾಗ ನಂಬಿಕಸ್ಥ ತಂತ್ರಜ್ಞರ ಮೂಲಕ ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗಿದೆಯೇ ಎನ್ನುವುದನ್ನು ಅರಿತುಕೊಳ್ಳಬಹುದು.
ಇದನ್ನೂ ಓದಿ: Weird Marriage: ಮದುಮಗನ್ನಲ್ಲ, ಅವನ ತಂಗಿಯನ್ನ ಮದುವೆ ಆಗ್ತಾಳೆ ಮದುಮಗಳು
• ಸಾಲ(Debt)ವಾಗುವಷ್ಟು ಶಾಪಿಂಗ್ (Shopping) ಮಾಡುವುದು
ಇದು ಬಹಳಷ್ಟು ಜನರ ಬಹುಪ್ರಿಯ ವಿಧಾನ. ಹಲವರು ಸಂಗಾತಿಯಿಂದ ದೂರವಾಗಲು ಅತಿಯಾಗಿ ಶಾಪಿಂಗ್ ಮಾಡುವುದನ್ನು ಕಾಣಬಹುದು. ಸಾಮಾನ್ಯವಾಗಿ, ಕುಟುಂಬ ಚೆನ್ನಾಗಿರಲು ಹಾಗೂ ಮುಂದಿನ ದಿನಗಳ ಸುರಕ್ಷತೆಗಾಗಿ ಹಣವನ್ನು ಕೂಡಿಡುವುದು, ಉಳಿತಾಯ ಮಾಡುವುದು ಸಾಮಾನ್ಯ. ಆದರೆ, ಪತಿಯ ಹೆಸರಿನಲ್ಲಿ ಸಾಲ ಮಾಡುವುದು, ಕ್ರೆಡಿಟ್ ಕಾರ್ಡ್ (Credit Card) ಅನ್ನು ಯದ್ವಾತದ್ವಾ ಬಳಸುವುದು, ಜಂಟಿ ಖಾತೆಯ ಮೇಲೆ ಅಪಾರ ಸಾಲ ಮಾಡುವುದು ಇತ್ಯಾದಿ ಕೃತ್ಯಗಳನ್ನು ನಿಮ್ಮ ಸಂಗಾತಿ ಮಾಡುತ್ತಿದ್ದರೆ ಅವರ ಉದ್ದೇಶದ ಬಗ್ಗೆ ಅರಿತುಕೊಳ್ಳಿ. ಅವರು ನಿಮ್ಮಿಂದ ದೂರವಾಗಲು ಯತ್ನಿಸುತ್ತಿದ್ದಿರಬಹುದು. ಇಂತಹ ಪ್ರಕರಣಗಳು ಸಾಕಷ್ಟು ಜರುಗುತ್ತವೆ. ತಮ್ಮ ಪತಿ ಅಥವಾ ಪತ್ನಿಯ ಹೆಸರಿನಲ್ಲಿ ಚಿನ್ನ (Gold) ಖರೀದಿ ಮಾಡಿ ತಮ್ಮ ಲವರ್ (Lover)ಗೆ ನೀಡುವ ಸಂಗಾತಿಗಳೂ ಇದ್ದಾರೆ. ಹಲವಾರು ಪ್ರಕರಣಗಳಲ್ಲಿ ವಿಚ್ಛೇದನಕ್ಕೂ ಕೆಲವೇ ದಿನಗಳ ಮುನ್ನ ಇಂತಹದ್ದು ನಡೆದಿರುತ್ತವೆ.
ಇದನ್ನೂ ಓದಿ: ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !
• ಹಣ (Money) ಅಥವಾ ಉಳಿತಾಯವನ್ನು (Savings) ದೋಚುವುದು
ಜತೆಯಾಗಿ ಬದುಕುವಾಗ ಇನ್ನೆಂಥ ಗುಟ್ಟು ಎನ್ನುವುದು ಹಲವರ ಮನೋಭಾವ. ಹೀಗಾಗಿ, ಹಣಕಾಸು ಮಾಹಿತಿಯನ್ನು ಹಂಚಿಕೊಂಡಿರಬಹುದು ಹಾಗೂ ಜಂಟಿ ಖಾತೆ ಹೊಂದಿರಬಹುದು. ಆದರೆ, ಸಂಗಾತಿ ದುರುದ್ದೇಶದಿಂದ ಕೂಡಿದ್ದರೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಉಳಿತಾಯದ ಹಣವನ್ನು ಅವರು ಬಚ್ಚಿಡಬಹುದು ಅಥವಾ ದೋಚಬಹುದು. ಅಥವಾ ನಿಮ್ಮ ಸಂಗಾತಿ ತಾವು ದುಡಿದ ಹಣವನ್ನು ಕುಟುಂಬದ ಅಗತ್ಯಕ್ಕೂ ನೀಡದೆ, ನಿಮ್ಮ ಗಮನಕ್ಕೂ ತಾರದೆ ಇಟ್ಟುಕೊಂಡಿರಬಹುದು. ಇಂತಹ ಯಾವುದೇ ಕೃತ್ಯಗಳನ್ನು ನಿಮ್ಮ ಸಂಗಾತಿ ಅನುಸರಿಸುತ್ತಿದ್ದರೆ ನಿರ್ಲಕ್ಷಿಸಬೇಡಿ. ಸಂಗಾತಿಯೊಂದಿಗೆ ಮಾತನಾಡಿ, ಹಾಗೆಯೇ ವಕೀಲರೊಂದಿಗೂ ಮಾತನಾಡಿ.