Marriage Life : ದಾಂಪತ್ಯ ಹಾಳ್ಮಾಡುತ್ತೆ ಈ ಕೆಟ್ಟ ಅಭ್ಯಾಸ

By Suvarna News  |  First Published Apr 29, 2022, 2:45 PM IST

ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ನಿಭಾಯಿಸುವುದು ಸುಲಭವಲ್ಲ. ಪ್ರೀತಿ ಜೊತೆ ಬುದ್ಧಿವಂತಿಕೆ ಇಲ್ಲಿ ಮುಖ್ಯವಾಗುತ್ತದೆ. ಹಾಗೆ ಹೊಂದಾಣಿಕೆ ಕೂಡ ಅತ್ಯಗತ್ಯ. ನಾನು – ನನ್ನದು ಎಂಬುದನ್ನು ಬಿಟ್ಟು ನಮ್ಮದು ಎಂಬ ಭಾವನೆಯಲ್ಲಿ ಜೀವನ ನಡೆಸಿದಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ.
 


ತಪ್ಪು ಮಾಡಿದ್ಮೇಲೆ ಶಿಕ್ಷೆ ಅನುಭವಿಸ್ಲೇಬೇಕು. ದಾಂಪತ್ಯದಲ್ಲಿ ಕೂಡ ತಿಳಿದೋ ತಿಳಿಯದೆಯೋ ಮಾಡಿದ ತಪ್ಪಿಗೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ವೈವಾಹಿಕ ಜೀವನವನ್ನು (Marriage Life) ನಾವು ಅಪಾಯ (Danger) ಕ್ಕೆ ತಳ್ಳುತ್ತೇವೆ. ಅನೇಕರು ಇಡೀ ದಿನ ಫೋನ್ (Phone ) ನಲ್ಲಿ ಸಮಯ ಕಳೆಯುತ್ತಾರೆ. ಫೋನ್ ಒಳ ಹೊಕ್ಕರೆ ಹೊರ ಪ್ರಪಂಚ (World) ದ ಅರಿವು ಅವರಿಗೆ ಇರುವುದಿಲ್ಲ. ಇನ್ನು ಕೆಲವರು ಕಚೇರಿ ಕೆಲಸದಲ್ಲಿ ಬ್ಯುಸಿಯಾಗಿರ್ತಾರೆ. ಇದ್ರಿಂದ ಮನೆ ಹಾಗೂ ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಸಂಗಾತಿಯ ಜನ್ಮ ದಿನ, ವಿವಾಹದ ದಿನ ಹೀಗೆ ಅನೇಕ ಮಹತ್ವದ ದಿನಗಳನ್ನು ಮರೆಯುವವರಿದ್ದಾರೆ. ಇದೆಲ್ಲವೂ ಚಿಕ್ಕಪುಟ್ಟ ವಿಷ್ಯವೇ ಆಗಿರಬಹುದು, ಆದ್ರೆ ಮುಂದಿನ ದಿನಗಳಲ್ಲಿ ಇವು ದೊಡ್ಡ ಸಮಸ್ಯೆಯನ್ನುಂಟು ಮಾಡುತ್ತದೆ.  ಮದುವೆಯಾದ್ಮೇಲೆ ನೀವು ಸ್ವತಂತ್ರರಲ್ಲ. ನಿಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಅನಿವಾರ್ಯತೆಯಿರುತ್ತದೆ. ಕೆಲವೊಂದು ಕೆಟ್ಟ ವೈವಾಹಿಕ ಅಭ್ಯಾಸಗಳಿವೆ. ಅವು  ನಿಮ್ಮ ಬಾಳಿಗೆ ಮುಳ್ಳಾಗುತ್ತವೆ. ಹಾಗಾಗಿ ಆ ಅಭ್ಯಾಸಗಳು ಯಾವುವು ಎಂಬುದನ್ನು ಪ್ರತಿಯೊಬ್ಬ ವಿವಾಹಿತ ತಿಳಿದಿರಬೇಕು. ಜೊತೆಗೆ ಅದನ್ನು ಬಿಡಲು ಪ್ರಯತ್ನ ನಡೆಸಬೇಕು. ಇಂದು ನಾವು ಕೆಟ್ಟ ವೈವಾಹಿಕ ಅಭ್ಯಾಸಗಳು ಯಾವುವು ಎಂಬುದನ್ನು ಹೇಳ್ತೇವೆ.

ನಿಧಾನವಾಗಿ ಮಾತನಾಡುವ ಬದಲು ಕಿರುಚಾಟ : ಮುಂದಿರುವ ಸಂಗಾತಿ ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವರು ಮಾತು ಆರಂಭಿಸಿದ ತಕ್ಷಣ ಕೂಗಾಡಲು ಶುರು ಮಾಡ್ತೀರಿ. ಜಗಳದ ಸಮಯದಲ್ಲಿ ಕೆಟ್ಟದಾಗಿ ಕೂಗುವುದು ಒಳ್ಳೆಯದಲ್ಲ. ನಿಧಾನವಾಗಿ ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕು. ಮಾತು ಮಾತಿಗೆ ನೀವು ಕಿರುಚಾಡಿದ್ರೆ ಸಂಗಾತಿಗೆ  ನಿಮ್ಮ ಮುಂದೆ ಸಮಸ್ಯೆ ಹೇಳಲು ಸಾಧ್ಯವಾಗುವುದಿಲ್ಲ. ಹಾಗೆ ಕಿರುಚಾಟದ ವೇಳೆ ಕೆಟ್ಟ ಶಬ್ಧಗಳು ಹೊರಗೆ ಬರಬಹುದು. ಇದ್ರಿಂದ ಸಂಗಾತಿ ಮುಂದೆ ನಿಮ್ಮ ಇಮೇಜ್ ಕೂಡ ಹಾಳಾಗುತ್ತದೆ. ನೀವು ಮಾತನಾಡಿದ್ರೆ ಕೂಗಾಡ್ತೀರಿ ಎಂಬ ಕಾರಣಕ್ಕೆ ಸಂಗಾತಿ ಯಾವುದನ್ನೂ ಹೇಳದೆ ಸುಮ್ಮನಿರಲು ಶುರು ಮಾಡ್ತಾರೆ. ಇದು ಅಂತರವನ್ನು ಹೆಚ್ಚಿಸುತ್ತದೆ.

Tap to resize

Latest Videos

WEIRD MARRIAGE: ಮದುಮಗನ್ನಲ್ಲ, ಅವನ ತಂಗಿಯನ್ನ ಮದುವೆ ಆಗ್ತಾಳೆ ಮದುಮಗಳು

ನಿಮ್ಮ ಸಂಗಾತಿ ನಿಮ್ಮ ಶತ್ರುವಲ್ಲ : ಕೆಲವರು ಸಂಗಾತಿಯನ್ನು ಶತ್ರಗಳಂತೆ ನೋಡ್ತಾರೆ. ಎಲ್ಲರ ಮುಂದೆ ಅಥವಾ ಅವಕಾಶ ಸಿಕ್ಕಾಗ ಅವರ ಗೌರವ ಕಳೆಯುವ ಪ್ರಯತ್ನ ಮಾಡ್ತಾರೆ. ಅವರು ಮಾಡಿದ ತಪ್ಪನ್ನು ಎತ್ತಿ ಹೇಳುತ್ತಾರೆ. ನೆನಪಿರಲಿ, ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಹೆಜ್ಜೆ ಹಾಕಬೇಕು. ಎಂದಿಗೂ ಸಂಗಾತಿ ವಿರುದ್ಧ ಹೋರಾಟ ನಡೆಸಬಾರದು. ಒಬ್ಬರನ್ನೊಬ್ಬರು ನಿರಾಸೆಗೊಳಿಸುವುದು ಮತ್ತು ನಿಮ್ಮ ಸಂಗಾತಿಯ ಪ್ರಗತಿಗೆ ಅಸಮಾಧಾನಗೊಳ್ಳುವುದು ನಿಮ್ಮ ಸಂಬಂಧದ ಅಡಿಪಾಯವನ್ನು ಹಾಳುಮಾಡುತ್ತದೆ. ಇಬ್ಬರ ಮಧ್ಯೆ ಸಮಸ್ಯೆಯಿದ್ದರೆ ಆರಾಮವಾಗಿ ಮಾತನಾಡಿ ಬಗೆಹರಿಸಿಕೊಳ್ಳಬೇಕು.  

ಹಣಕಾಸಿನ ರಹಸ್ಯ : ನಿಮ್ಮ ಸಂಗಾತಿಗೆ ನಿಮ್ಮ ಹಣಕಾಸಿನ ಹೂಡಿಕೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಹೇಳದೆ ಮುಚ್ಚಿಡುವುದು ಕೂಡ ತಪ್ಪು. ಈ ಮರೆಮಾಚುವಿಕೆ ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ಮತ್ತು ಜಗಳಗಳಕ್ಕೆ ಕಾರಣವಾಗುತ್ತದೆ. ಸಂಗಾತಿ ಆದಾಯ ಅಥವಾ ನೀವು ಖರ್ಚು ಮಾಡುವ ವಿಧಾನದ ಬಗ್ಗೆ ಅವರಿಗೆ ಆಕ್ಷೇಪವಿರಬಹುದು. ಹಾಗಂತ ಅವರಿಂದ ಅದನ್ನು ಮುಚ್ಚಿಡಬೇಕಾಗಿಲ್ಲ. ನೀವು ಯಾವುದೇ ಹಣಕಾಸು ಯೋಜನೆಯಲ್ಲಿ ಹಣ ಹೂಡುತ್ತಿದ್ದರೆ ಅದನ್ನು ಸಂಗಾತಿಗೆ ಹೇಳಿ. ಅಗತ್ಯವೆನಿಸಿದ್ರೆ ಅದ್ರ ಬಗ್ಗೆ ಚರ್ಚೆ ನಡೆಸಿ. ಇಬ್ಬರು ಸೇರಿ ಪ್ಲಾನ್ ಮಾಡಿದಾಗ ಇಬ್ಬರೂ ಹಣ ಉಳಿಸಲು ಪ್ರಯತ್ನಿಸಬಹುದು. 

Relationship Story : ಈ ಕೆಲಸಕ್ಕೆ ಬಾಯ್ ಫ್ರೆಂಡ್ ನೀಡ್ತಾನೆ ಹಣ..!

ಮೂರನೇ ವ್ಯಕ್ತಿಯ ಕಿವಿಗೆ ಹಾಕ್ಬೇಡಿ : ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಹೊರಗಿನವರ ಜೊತೆ ಚರ್ಚಿಸಬೇಡಿ. ಅತ್ತೆ ಸಾಮಾನ್ಯವಾಗಿ ಗಂಡ ಮತ್ತು ಹೆಂಡತಿಯ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಪ್ರಾರಂಭಿಸುತ್ತಾರೆ. ಇದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ. ಹಾಗಾಗಿ ಇಬ್ಬರೇ ಕುಳಿತು, ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. 

click me!