ಯುವತಿಯ ಡಾರ್ಕ್‌ ಸಿಕ್ರೇಟ್ ಕೇಳಿ ಸ್ವತಃ ಶಾಕ್ ಆದ ಯೂಟ್ಯೂಬರ್: ಥೂ ಇಂಥಾ ಜನನ್ನೂ ಇರ್ತಾರಾ?

Published : Dec 31, 2025, 11:27 AM IST
woman confesses killing cat

ಸಾರಾಂಶ

ಇಲ್ಲೊಬ್ಬಳು ಅಪರಿಚಿತ ಯುವತಿ ವಾಕ್ಸ್ ಪಾಪ್ ಮಾಡ್ತಿದ್ದ ಇನ್‌ಫ್ಲುಯೆನ್ಸರ್ ಬಳಿ ತಾನು ಜೀವನದಲ್ಲಿ ಮಾಡಿದ ಘೋರ ಅಪರಾಧವೊಂದನ್ನು ಹೇಳಿಕೊಂಡಿದ್ದಾಳೆ. ಆ ವೀಡಿಯೋ ಈಗ ಭಾರಿ ವೈರಲ್ ಆಗುವುದರ ಜೊತೆಗೆ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ. ಹಾಗಿದ್ರೆ ಆಕೆ ಮಾಡಿದ್ದೇನು?

ಅನೇಕರು ತಿಳಿದೋ ತಿಳಿಯದೆಯೋ ಬದುಕಿನಲ್ಲಿ ಏನೇನೋ ತಪ್ಪುಗಳನ್ನು ಮಾಡಿರುತ್ತಾರೆ. ನಂಬಿದವರಿಗೋ ಪ್ರೀತಿಪಾತ್ರರಿಗೋ ಊಹಿಸಲಾಗದ ರೀತಿಯಲ್ಲಿ ದೊಡ್ಡ ದ್ರೋಹವನ್ನೇ ಎಸಗಿರುತ್ತಾರೆ. ಯಾರದೋ ಪ್ರಾಣಕ್ಕೆ ಎರವಾಗಿರುತ್ತಾರೆ. ಅದನ್ನು ಅವರಿಗೆ ಎಂದಿಗೋ ಯಾರೊಂದಿಗೂ ಹೇಳಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದರೆ ಮನದೊಳಗೆ ಥೂ ಹೀಗೆ ಮಾಡ್ಬಿಟ್ಟೆ ನಾನು ಎಂಬ ಕೊರಗು ಕೆಲವೇ ಕೆಲವರನ್ನು ಕಾಡುತ್ತದೆ. ತಾವು ಮಾಡಿದ ಕೆಲ ಅಸಹ್ಯಗಳ ಅತ್ಯಂತ ಕರಾಳ ರಹಸ್ಯ ಹೊರಬಂದರೆ ಮುಜುಗರದ ಜೊತೆ ತಮಗೆ ತೊಂದರೆ ಆಗಬಹುದು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಅವರು ಅದನ್ನು ರಹಸ್ಯವಾಗಿ ಇಡಲು ಬಯಸುತ್ತಾರೆ.

ಅನೇಕರು ಈ ತಪ್ಪಿತಸ್ಥ ಭಾವನೆಯಿಂದ ಹೊರಬರುವುದಕ್ಕೆ ಏನೇನೋ ಮಾಡುತ್ತಾರೆ. ಕೆಲವರು ಕನಿಷ್ಠ ಯಾರಾದರೊಬ್ಬr ಬಳಿಯಾದರು ಈ ರಹಸ್ಯವನ್ನು ಬಹಿರಂಗಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಅಪರಿಚಿತ ಯುವತಿ ವಾಕ್ಸ್ ಪಾಪ್ ಮಾಡ್ತಿದ್ದ ಇನ್‌ಫ್ಲುಯೆನ್ಸರ್ ಬಳಿ ತಾನು ಜೀವನದಲ್ಲಿ ಮಾಡಿದ ಘೋರ ಅಪರಾಧವೊಂದನ್ನು ಹೇಳಿಕೊಂಡಿದ್ದಾಳೆ. ಆ ವೀಡಿಯೋ ಈಗ ಭಾರಿ ವೈರಲ್ ಆಗುವುದರ ಜೊತೆಗೆ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ.. ಆಕೆಯ ಬಾಯಲ್ಲಿ ಆಕೆ ಎಸಗಿದ ಕೃತ್ಯವನ್ನು ಸ್ವತಃ ಕೇಳಿದ ಇನ್‌ಫ್ಲುಯೆನ್ಸರ್‌ ಕೂಡ ಶಾಕ್ ಆಗಿದ್ದಾನೆ. ವೀಡಿಯೋ ನೋಡಿದ ಜನ ಆಕೆಗೆ ತಕ್ಕ ಶಿಕ್ಷೆ ಆಗಲಿ ಎಂದು ಶಪಿಸಿದ್ದಾರೆ ಹಾಗಿದ್ರೆ ಆಕೆ ಮಾಡಿದ್ದೇನು?

liobhaisaab (Lionel Ngotchi YKabengwa) ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ವೀಡಿಯೋ ಅಪ್‌ಲೋಡ್ ಆಗಿದೆ. ವಿಡಿಯೋದಲ್ಲಿ ಉಲ್ಲೇಖಿಸಿದಂತೆ ಅವರು ದೆಹಲಿಯಲ್ಲಿ ಅಪರಿಚಿತ ಮಹಿಳೆಯೊಬ್ಬರಿಗೆ ನಿಮ್ಮ ಬದುಕಿನಲ್ಲಿ ನೀವು ಯಾರಿಗೂ ಇದುವರೆಗೆ ಹೇಳದ ಕರಾಳ ಸತ್ಯವೊಂದನ್ನು ಹೇಳಿ ಎಂದು ಹೇಳಿದ್ದಾರೆ. ಇದಕ್ಕೆ ಯುವತಿ ಉತ್ತರಿಸಿದ ಯುವತಿ, ಬಹಳ ಹಿಂದೆ ಒಮ್ಮೆ ನನ್ನ ಪ್ಲಾಟ್‌ಮೇಟ್ ಒಬ್ಬಳು ಬೆಕ್ಕನ್ನು ಸಾಕುತ್ತಿದ್ದಳು. ಆ ಬೆಕ್ಕು, ಯಾವಾಗಲೂ ನನ್ನ ಮನೆ ಬಾಗಿಲಿನ ಮುಂದೆಯೇ ಒಂದು ಎರಡು(ಮಲ ಮೂತ್ರ) ಎಲ್ಲವನ್ನೂ ಮಾಡುತ್ತಿತ್ತು. ಇದನ್ನೂ ದಿನಾ ನೋಡಿ ನನಗೆ ಒಂದು ದಿನ ರೋಸಿ ಹೋಯ್ತು. ಸಿಟ್ಟಿಗೆದ್ದು ನಾನು ಅದು ಇಲಿ ಪಾಷಾಣ ತಿನ್ನುವಂತೆ ಮಾಡಿದೆ. ಅದರಿಂದ ಬೆಕ್ಕು ಸತ್ತು ಹೋಯ್ತು. ನಂತರ ನಾನು ಅದನ್ನು ನನ್ನ ಕಾಲೇಜು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಿ ದೂರ ಎಸೆದೆ.

ಇದನ್ನೂ ಓದಿ: ಸಾವಿನಂಚಿನಲ್ಲಿದ್ದ ತಾಯಿಗೆ ಕೊನೆಕ್ಷಣದಲ್ಲಿ ಕಂಡಿದ್ದೇನು ಆಕೆ ಹೇಳಿದ್ದೇನು?: ವಿಚಿತ್ರ ಅನುಭವ ಬಿಚ್ಚಿಟ್ಟ ಮಗಳು

ಆದರೆ ಅದಕ್ಕಿಂತಲೂ ಪ್ರಮುಖ ವಿಚಾರ ಏನು ಎಂದರೆ ಇತ್ತ ಆ ಬೆಕ್ಕಿನ ಮಾಲಕಿ ಬೆಕ್ಕು ಕಾಣುವುದಿಲ್ಲ ಎಂದು ಹುಡುಕುವುದಕ್ಕೆ ಶುರು ಮಾಡಿದರು. ಈ ವೇಳೆ ನಾನು ಆಕೆಗೆ ಆ ಬೆಕ್ಕನ್ನು ಹುಡುಕುವುದಕ್ಕೆ ಹಾಗೂ ಆ ಬೆಕ್ಕು ಕಾಣೆಯಾಗಿದೆ ಎಂಬ ಪೋಸ್ಟರ್‌ ಅನ್ನು ಎಲ್ಲಾ ಕಡೆ ಅಂಟಿಸುವುದಕ್ಕೆ ಸಹಾಯ ಮಾಡಿದೆ. ಹಾಗೂ ಬೆಕ್ಕು ಕಾಣದೇ ಹೋಗಿದ್ದಕ್ಕೆ ಬಹಳ ಚಿಂತೆ ಮಾಡಿದಂತೆ ನಾನೂ ನಟನೆ ಮಾಡಿದೆ. ಅವರಿಗೆ ಓಹ್ ಗಾಡ್ ನೀವು ಬೆಕ್ಕನ್ನು ಕಳೆದುಕೊಂಡಿದ್ದೀರಿ ಎಂದೆಲ್ಲಾ ಹೇಳಿ ಸಮಾಧಾನಿಸಲು ಪ್ರಯತ್ನಿಸಿದೆ ಎಂದು ಆಕೆ ಹೇಳಿದ್ದಾಳೆ. ಆಕೆಯ ಮಾತು ಕೇಳಿ, ಡಾರ್ಕ್ ಸಿಕ್ರೇಟ್ ಏನು ಎಂದು ಕೇಳಿದವನೇ ಸ್ವತಃ ಆಘಾತಗೊಂಡಿದ್ದಾನೆ.

ಇದನ್ನೂ ಓದಿ: 3 ಅಡಿ ಜಾಗದಲ್ಲಿ ಎರಡು ಮಹಡಿ ಮನೆ: ಇರುವುದರಲ್ಲೇ ಅರಮನೆ ಕಾಣೋದು ಅಂದ್ರೆ ಇದೇನಾ?

ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಆಕೆಯನ್ನು ಶಪಿಸಿದ್ದಾರೆ. ನಿನಗೂ ಇದೇ ರೀತಿ ಆಗಲಿ ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ನಿನ್ನ ಮುಖ ಬಹಿರಂಗಗೊಂಡಿದ್ದರೆ ನಾನೂ ಕೂಡ ನಿನಗೆ ಹೀಗೆ ಮಾಡುತ್ತಿದ್ದೆ ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನುಷ್ಯರು ಇಷ್ಟೊಂದು ಕ್ರೂರಿಯಾಗಿರಲು ಹೇಗೆ ಸಾಧ್ಯ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ನಗುತ್ತಿದ್ದಾಳೆ ಆಕೆಗೆ ಸ್ವಲ್ಪವೂ ಮಾಡಿದ ಕೃತ್ಯದ ಬಗ್ಗೆ ಬೇಸರವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ತನ್ನ ವೀರ್ಯ ಬಳಸಿ ತಾಯಿಯಾಗಲು ಬಯಸುವರಿಗೆ ಐವಿಎಫ್ ವೆಚ್ಚ, ಎಲ್ಲಾ ಮಕ್ಕಳಿಗೆ ಆಸ್ತಿಯಲ್ಲಿ ಪಾಲು: ಆಫರ್ ನೀಡಿದ ಉದ್ಯಮಿ

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘ಕ್ಯಾಶುವಲ್ ಸೆಕ್ಸಿ*ಸಂ’ ವಿರುದ್ಧ ಗುಡುಗಿದ ಟಾಲಿವುಡ್ ನಟಿಯರು.. ಇದನ್ನು 'ಹಾಸ್ಯ' ಅಂದ್ಕೊಳ್ಳೋಕಾಗಲ್ಲ.. ಬಾಯ್ಮುಚ್ಚಿ!
ಮದುವೆಯಾಗಿ 13 ತಿಂಗಳಲ್ಲೇ ಡಿವೋರ್ಸ್ ಪಡೆದ ಪತ್ನಿ, ಪ್ರತಿ ತಿಂಗಳು 5 ಲಕ್ಷ ನೀಡುವಂತೆ ಪತಿಗೆ ಆದೇಶ