
ಸಾವಿನ ಕ್ಷಣಗಳು ಸಮೀಪಿಸುತ್ತಿದ್ದಂತೆ ಮನುಷ್ಯರಿಗೆ ಏನೇನೋ ಅನುಭವ ಆಗುವುದಕ್ಕೆ ಶುರುವಾಗುತ್ತದೆ. ಕೆಲವರಿಗೆ ಯಾರೋ ಬಂದಂತೆ ಕಾಣಿಸುತ್ತದೆ. ಸಾವಿನ ಸಮೀಪದಲ್ಲಿರುವ ಅನೇಕರು ತಮ್ಮ ಜೊತೆಗಿರುವವರ ಬಳಿ ಯಾರು ಬಂದಾಗಾಯ್ತು ಎಂದು ಹೇಳಿರುವುದನ್ನು ಅನೇಕರು ಬರೆದುಕೊಂಡಿದ್ದಾರೆ. ಸಾವು ನೋಡಿದವರು ಬರೆಯುವುದಕ್ಕೆ ಉಳಿದಿಲ್ಲ. ಆದರೆ ಅವರ ಪ್ರೀತಿಪಾತ್ರರು ಸಾವಿನ ಸಮಯದಲ್ಲಿ ತಮ್ಮವರು ಹೇಳಿದ ಮಾತುಗಳನ್ನು ದಾಖಲಿಸಿಕೊಂಡಿದ್ದಾರೆ. ಅನೇಕರು ಈ ಬಗ್ಗೆ ಸಂಶೋಧನೆಯನ್ನು ಮಾಡಿದ್ದಾರೆ. ಸಾವು ಹಾಗೂ ನಂತರದ ಜೀವನ ಹಾಗೂ ಪುನರ್ಜನ್ಮದ ಬಗ್ಗೆ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಅಷ್ಟಾಗಿ ನಂಬಿಕೆ ಇಲ್ಲ. ಆದರೆ ಹಿಂದೂಗಳು ಈ ಪುನರ್ಜನ್ಮವನ್ನು ಬಲವಾಗಿ ನಂಬುತ್ತಾರೆ. ಸಾವು, ಪುನರ್ಜನ್ಮ ಹಾಗೂ ಮೋಕ್ಷವನ್ನು ಬಹುತೇಕ ಹಿಂದೂಗಳು ನಂಬುತ್ತಾರೆ ಹಾಗೂ ಹಿಂದೂ ಪುರಾಣಗಳಲ್ಲಿ ಅದರಲ್ಲೂ ಗರುಡ ಪುರಾಣದಲ್ಲಿ ಸಾವಿನ ನಂತರದ ಜೀವನದ ಬಗ್ಗೆ ವಿವರವಾಗಿ ವಿಶ್ಲೇಷಿಸಲಾಗಿದೆ. ಸಾವಿನ ನಂತರ ಮನುಷ್ಯನನ್ನು ಕರೆದೊಯ್ಯಲು ಯಮರಾಜ ತನ್ನ ಸೇವಕರನ್ನು ಕಳುಹಿಸುತ್ತಾನೆ ಎಂಬೆಲ್ಲಾ ಮಾತಿದೆ. ಇದೆಲ್ಲಾ ಈಗ್ಯಾಕೆ ಅಂತೀರಾ?
ಇಲ್ಲೊಂದು ಕಡೆ ಮಗಳೊಬ್ಬಳು ಸಾವಿನ ಹಾಸಿಗೆಯಲ್ಲಿ ಮಲಗಿದ್ದ ತಾಯಿಯ ಕೊನೆಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ಆ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ತಾಯಿಯ ಕೊನೆಕ್ಷಣದಲ್ಲಿಅನಿರೀಕ್ಷಿತವಾದ ಘಟನೆ ನಡೆದಿರುವುದು ಆಕೆ ಹಂಚಿಕೊಂಡ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಮಗಳು ಸೆರೆ ಹಿಡಿದ ವೈರಲ್ ವಿಡಿಯೋದಲ್ಲಿ ಏನಿದೆ?
ತಾಯಿ ಸಾವಿನ ಹಾಸಿಗೆಯಲ್ಲಿ ಮನೆಯ ಮಹಡಿಯನ್ನು ನೋಡುತ್ತಾ ಮಲಗಿದ್ದು, ಆಕೆ ತನ್ನ ಕೊನೆಕ್ಷಣದಲ್ಲಿ ಇದ್ದರೂ ತನ್ನ ಜೊತೆಗೆ ಇಷ್ಟು ದಿನ ಇದ್ದ ಯಾರನ್ನು ನೋಡುತ್ತಿರಲಿಲ್ಲ. ಬದಲಾಗಿ ಮನೆಯ ಮಹಡಿಯನ್ನು ನೋಡುತ್ತಾ ಸಣ್ಣದೊಂದು ನಗುವಿನೊಂದಿಗೆ ಮೇಲೆ ನೋಡುತ್ತಿದ್ದಳು. ಅಲ್ಲದೇ ಇದೇ ಸಮಯದಲ್ಲಿ ಆಕೆ ಏಂಜೆಲ್ ಎಂದು ಪಿಸುಗುಟ್ಟಿದ್ದಾಳೆ. ಈ ವೇಳೆ ಮಗು ಎಷ್ಟು ಏಂಜೆಲ್‌ಗಳಿದ್ದಾರೆ ಎಂದು ಕೇಳಿದ್ದಕ್ಕೆ ಆ ತಾಯಿ 4 ಎಂದು ಉತ್ತರಿಸುತ್ತಾಳೆ. ಇದರಿಂದ ಮಗಳು ಗೊಂದಲದ ಜೊತೆ ಭಾವುಕಳಾಗಿದ್ದಾಳೆ. ಏಕೆಂದರೆ ಅಮ್ಮ ಹೇಳಿರುವುದು ಆಕೆಗೆ ಏನು ಕಾಣಿಸುತ್ತಿಲ್ಲ. ಆದರೆ ಆಕೆಯ ತಾಯಿ ಮಾತ್ರ ನಗುತ್ತಲೇ ತಲೆಯಾಡಿಸುತ್ತಾಳೆ. ಆಕೆಯ ಕಣ್ಣುಗಳು ಅಲ್ಲೇ ಇರುವ ಮಗಳಿಗೆ ಕಾಣದೇ ಇರುವುದನ್ನು ಫಾಲೋ ಮಾಡುತ್ತಿವೆ. ಇದೇ ವೇಳೆ ಮಗಳು ಆ ದೇವತೆಗಳು ನಿನ್ನನ್ನು ಸಂತೋಷಪಡಿಸುತ್ತಿದ್ದಾರೆಯೇ ಎಂದು ಮಗಳು ಕೇಳಿದಾಗ, ಅವಳು ಮೃದುವಾಗಿ ಹೌದು ಎಂದು ಉತ್ತರಿಸಿದ್ದಾಳೆ. ಇದೇ ವೇಳೆ ಮಗಳು ಎಷ್ಟು ಏಂಜೆಲ್‌ಗಳು ಅಲ್ಲಿವೆ ಎಂದು ಕೇಳಿದಾಗ ಆಕೆ ನಡುಗುವ ಸ್ವರದೊಂದಿಗೆ ನಾಲ್ಕು ನಾಲ್ಕು ಎಂದು ಉತ್ತರಿಸುತ್ತಾಳೆ.
ಈ ವೀಡಿಯೋ ನೋಡಿದ ಅನೇಕರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. misabelage ಎಂಬುವರು ಕಾಮೆಂಟ್ ಮಾಡಿ, ನಾನು ಒಬ್ಬಳು ನರ್ಸ್, ಮತ್ತು ನನ್ನ ಕೆಲವು ರೋಗಿಗಳ ಜೀವನದ ಕೊನೆಯ ಕ್ಷಣಗಳಲ್ಲಿ, ಅವರು ಕಣ್ಣಲ್ಲಿ ನೀರು ತುಂಬಿಕೊಂಡು ನನ್ನ ಬಳಿ ಹೇಳುತ್ತಿದ್ದರು. ನೋಡಿ, ನನ್ನ ತಾಯಿ ಅಲ್ಲಿದ್ದಾರೆ, ಅಥವಾ ನನ್ನ ತಂದೆ ಇಲ್ಲಿದ್ದಾರೆ ಎಂದು ನಾನು ನೋಡಲಾಗದರ ಬಗ್ಗೆ ಅವರು ಸಂಭಾಷಣೆ ನಡೆಸುತ್ತಿದ್ದರು ಎಂದು ಹೇಳಿದ್ದಾರೆ. ಈ ವಿಚಾರ ನನಗೆ ಅಚ್ಚರಿ ನೀಡಿತು. ನನ್ನ ಚಿಕ್ಕಮ್ಮ ಅವರು ಹೋಗುವ ಮುನ್ನ ಅದೇ ಮಾತನ್ನು ಹೇಳಿದರು. ದೇವತೆಗಳು ತಮ್ಮ ಛಾವಣಿಯ ಮೇಲೆಲ್ಲ ಇದ್ದಾರೆ ಎಂದು ಹೇಳಿ ಮುಗುಳ್ನಕ್ಕರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ನನ್ನ ಅಮ್ಮನ ಕೊನೆಕ್ಷಣದಲ್ಲಿ ನಾನು ಇರಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೌದು ನಾಲ್ವರು ದೇವತೆಗಳು, ಅವಳ ತಾಯಿ ಒಳ್ಳೆಯವಳು ಹಾಗಾಗಿ ಆಕೆ ಸ್ವರ್ಗಕ್ಕೆ ಹೋಗುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 17 ವರ್ಷಗಳ ಕಾನೂನು ಹೋರಾಟದ ಬಳಿಕ ಕೊನೆಗೂ ದಂಪತಿಗೆ ವಿಚ್ಛೇದನ ನೀಡಿದ ಕೋರ್ಟ್
ನನ್ನ ತಾಯಿ, ಮರಣಶಯ್ಯೆಯಲ್ಲಿದ್ದಾಗ, ತನ್ನ ಸ್ವಂತ ತಾಯಿಯೊಂದಿಗೆ ಮಾತನಾಡುತ್ತಿದ್ದರು. ನನ್ನ ತಂಗಿ ಮತ್ತು ನಾನು ತಕ್ಷಣ ನಮ್ಮ ಅಜ್ಜಿಯ ಆತ್ಮವು ಅವಳ ಮುಂದಿನ ಪ್ರಯಾಣಕ್ಕೆ ಜೊತೆಗಿದೆ ಎಂದು ಅರಿತುಕೊಂಡೆವು. ನನ್ನ ತಾಯಿ ಸಾಯುವುದನ್ನು ನೋಡುವುದು ಭಯಾನಕವಾಗಿತ್ತು, ಆದರೆ ಅವಳ ಕುಟುಂಬವು ಇನ್ನೊಂದು ಬದಿಯಲ್ಲಿ ಅವಳನ್ನು ಸ್ವಾಗತಿಸಲು ಅಲ್ಲಿದೆ ಎಂದು ತಿಳಿದುಕೊಂಡು ಸಮಾಧಾನಪಟ್ಟೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 3 ಅಡಿ ಜಾಗದಲ್ಲಿ ಎರಡು ಮಹಡಿ ಮನೆ: ಇರುವುದರಲ್ಲೇ ಅರಮನೆ ಕಾಣೋದು ಅಂದ್ರೆ ಇದೇನಾ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.