ಮದುವೆಯಾಗಿ 13 ತಿಂಗಳಲ್ಲೇ ಡಿವೋರ್ಸ್ ಪಡೆದ ಪತ್ನಿ, ಪ್ರತಿ ತಿಂಗಳು 5 ಲಕ್ಷ ನೀಡುವಂತೆ ಪತಿಗೆ ಆದೇಶ

Published : Dec 30, 2025, 10:44 PM IST
Divorce

ಸಾರಾಂಶ

ಮದುವೆಯಾಗಿ 13 ತಿಂಗಳಿಗೆ ದೂರವಾಗಿದ್ದ ಪತ್ನಿ ಜೀವನಾಂಶಕ್ಕೆ 8 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಜೀವನಾಂಶದ ಬಗ್ಗೆ ಮಹತ್ವದ ತೀರ್ಪು ನೀಡಿದೆ. ಜೀವನಾಂಶದ ಮಹತ್ವವನ್ನು ಒತ್ತಿ ಹೇಳಿದೆ.

ಜೀವನಾಂಶಕ್ಕೆ ಸಂಬಂಧಿಸಿದಂತೆ ದೆಹಲಿ ಫ್ಯಾಮಿಲಿ ಕೋರ್ಟ್ (Delhi Family Court) ಮಹತ್ವದ ತೀರ್ಪು ನೀಡಿದೆ. ಮದುವೆಯಾಗಿ 13 ತಿಂಗಳ ನಂತ್ರ ಬೇರೆಯಾದ ಪತ್ನಿಗೆ, ಪ್ರತಿ ತಿಂಗಳು 5 ಲಕ್ಷ ಜೀವನಾಂಶ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ಜೀವನಾಂಶ ಅಂದ್ರೆ ಏನು ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ. ವಿಚ್ಛೇದನದ ನಂತ್ರ ಆರ್ಥಿಕ ನೆರವು ಕೇವಲ ಜೀವನಾಂಶವಲ್ಲ, ಘನತೆಗೆ ಸಂಬಂಧಿಸಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಜೀವನಾಂಶ ಎಂದರೆ ಪ್ರಾಣಿಗಳಂತೆ ಬದುಕುವುದು ಅಥವಾ ಅಮಾನವೀಯ ಪರಿಸ್ಥಿತಿಗೆ ಇಳಿಸಲ್ಪಡುವುದಲ್ಲ. ನಿರ್ವಹಣೆ ಎಂದರೆ ಅದು ಜೀವನಾಂಶಕ್ಕಿಂತ ಹೆಚ್ಚಿನದಾಗಿದೆ ಎಂದು ಕೋರ್ಟ್ ಹೇಳಿದೆ.

ಜೀವನಾಂಶ ಅಂದ್ರೇನು?

ವರದಿ ಪ್ರಕಾರ, ಪತ್ನಿ ತನ್ನ ಗಂಡನ ಸಾಮಾಜಿಕ ಸ್ಥಾನಮಾನಕ್ಕೆ ಅನುಗುಣವಾಗಿ ಗೌರವಾನ್ವಿತ ಜೀವನವನ್ನು ನಡೆಸಲು ಜೀವನಾಂಶದಿಂದ ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ದುಬೈನಲ್ಲಿ ವಾಸಿಸುವುದರಿಂದ ಈ ಬಾಧ್ಯತೆಯಿಂದ ಮುಕ್ತನಾಗಬೇಕು ಎಂಬ ಪತಿಯ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಸಮರ್ಥ ಪತಿ ಶಾಸನಬದ್ಧ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆರ್ಥಿಕ ಸಂಕಷ್ಟಕ್ಕೆ ತಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೆ? ಅಮ್ಮನ ಗರ್ಭ ಎರಡು ಬಾರಿ ಹೊಕ್ಕು ಬಂದ ಈ

ವಿಚ್ಛೇದನ (Divorce) ದ ನಂತ್ರ ಪತ್ನಿ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪತಿ ಪರ ವಕೀಲರು ನ್ಯಾಯಾಲಯದಲ್ಲಿ ವಿರೋಧಿಸಿದ್ದರು. ಪತ್ನಿ ವಿದ್ಯಾವಂತರು, ಕೆಲಸ ಮಾಡಲು ಅರ್ಹತೆ ಹೊಂದಿದ್ದಾರೆ, ಉತ್ತಮ ಗಳಿಕೆ ಸಾಮರ್ಥ್ಯ ಹೊಂದಿದ್ದಾರೆ ಎಂದು ವಾದ ಮಾಡಿದ್ದರು. ಪತ್ನಿ ತನ್ನ ಶಿಕ್ಷಣ ಮತ್ತು ಗಳಿಕೆಯ ಬಗ್ಗೆ ಮಾಹಿತಿಯನ್ನು ಮರೆಮಾಚಿದ್ದಾರೆ ಎಂದು ವಕೀಲರು ಆರೋಪ ಮಾಡಿದ್ದರು. ಮದುವೆ ಕೇವಲ 13 ತಿಂಗಳುಗಳ ಕಾಲ ನಡೆಯಿತು. ಪತ್ನಿ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಮನೆಯಿಂದ ಹೊರಟುಹೋದರು. ದಂಪತಿಗೆ ಮಕ್ಕಳಿಲ್ಲದ ಕಾರಣ, ತಿಂಗಳಿಗೆ 8 ಲಕ್ಷ ನೀಡಲು ಸಾಧ್ಯವಿಲ್ಲ ಎಂದು ವಕೀಲರು ವಾದಿಸಿದ್ದರು.

ಇದಕ್ಕೆ ಪತ್ನಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದರು. ಕೆಲಸ ಮಾಡುವ ಸಾಮರ್ಥ್ಯ ಮತ್ತು ವಾಸ್ತವವಾಗಿ ಕೆಲಸ ಮಾಡುವುದು ಎರಡು ವಿಭಿನ್ನ ವಿಷಯಗಳು. ಪತ್ನಿ ಮದುವೆಗೆ ಮೊದಲು ಕೆಲಸ ಮಾಡುತ್ತಿದ್ದರು. ಆದ್ರೆ ಈಗ ಮತ್ತೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲ. ಮನೆಯಲ್ಲಿ ಕ್ರೌರ್ಯ ಹೆಚ್ಚಾಗಿದ್ದರಿಂದ ಅವರು ಗಂಡನ ಮನೆ ಬಿಟ್ಟಿದ್ದಾರೆ. ಈಗ ಕುಟುಂಬದ ಮೇಲೆ ಅವಲಂಭಿತರಾಗಿದ್ದಾರೆ. ಪತಿ ಶ್ರೀಮಂತ ವ್ಯಕ್ತಿಯಾಗಿರುವುದರಿಂದ, ಮದುವೆಗೆ ಮೊದಲು ಅವರು ಅನುಭವಿಸಿದ ಅದೇ ಜೀವನ ಮಟ್ಟವನ್ನು ಹೆಂಡತಿಗೆ ನೀಡಬೇಕು ಎಂದು ವಕೀಲರು ವಾದ ಮಾಡಿದ್ದರು.

ವಾಮಾಚಾರ ಮಾಡಿಸಿ ಮುಸ್ಲಿಂ ಯುವಕನ ಮದ್ವೆಯಾದ ಸ್ಟಾರ್​ ನಟಿ: ಜ್ಯೋತಿಷಿ ಶಾಕಿಂಗ್​ ಹೇಳಿಕೆ- ಯಾರಾಕೆ?

ಭಾರತೀಯ ನಾಗರಿಕ ಸೇವಾ ಸಂಹಿತೆಯ (BNSS) ಸೆಕ್ಷನ್ 144 ರ ಅಡಿಯಲ್ಲಿ ಮಧ್ಯಂತರ ಜೀವನಾಂಶದ ಅರ್ಜಿ ವಿಚಾರಣೆ ನಡೆಸಿದ ಫ್ಯಾಮಿಲಿ ಕೋರ್ಟ್ ನ್ಯಾಯಾಧೀಶ ದೇವೇಂದ್ರ ಕುಮಾರ್ ಗರ್ಗ್, ಪತ್ನಿಗೆ 5 ಲಕ್ಷ ನೀಡುವಂತೆ ಸೂಚನೆ ನೀಡಿದ್ದಾರೆ. ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳುವುದು ಜೀವನಾಂಶ ಕಾನೂನಿನ ಉದ್ದೇಶ ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಜೀವನಾಂಶವು ಕೇವಲ ಜೀವನಾಂಶಕ್ಕಾಗಿ ನೀಡುವ ಹಣವಲ್ಲ, ಬದಲಿಗೆ ಗೌರವ, ಸ್ಥಿರತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ಕಾರ್ಯವಿಧಾನ ಎಂದು ಕೋರ್ಟ್ ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೆ? ಅಮ್ಮನ ಗರ್ಭ ಎರಡು ಬಾರಿ ಹೊಕ್ಕು ಬಂದ ಈ ಕಂದಮ್ಮ!
ವಾಮಾಚಾರ ಮಾಡಿಸಿ ಮುಸ್ಲಿಂ ಯುವಕನ ಮದ್ವೆಯಾದ ಸ್ಟಾರ್​ ನಟಿ: ಜ್ಯೋತಿಷಿ ಶಾಕಿಂಗ್​ ಹೇಳಿಕೆ- ಯಾರಾಕೆ?