25 ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ ಮಗಳೇ ಮರುಮದುವೆ ಮಾಡಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ತಾಯಿಯ ಜೀವನದ ಬಗ್ಗೆ ಯೋಚಿಸಿರುವ ಮಗಳ ನಿಸ್ವಾರ್ಥ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ನವದೆಹಲಿ: ಮಗಳೇ (Daughter) ಮುಂದೆ ನಿಂತು, ತಾಯಿಗೆ (Mother) ಮದುವೆ ಮಾಡಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ರಿಯಾ ಚರ್ಕವರ್ತಿ ಎಂಬವರು ಹೀಗೆ ತಾಯಿಗೆ ಮರು ಮದುವೆ ಮಾಡಿದ್ದಾರೆ. ಆಕೆ ಅಂಬೆಗಾಲಿಡಲು ಆರಂಭಿಸಿದ ಸಮಯದಲ್ಲೇ ತಂದೆ ತೀರಿಕೊಂಡಿದ್ದರು. ಆ ನಂತರದ ದಿನಗಳಲ್ಲಿ ತಾಯಿ ಕಷ್ಟಪಟ್ಟು ರಿಯಾ ಚರ್ಕವರ್ತಿಯವರನ್ನು ಸಾಕಿದ್ದರು. ಒಂಟಿಯಾಗಿಯೇ ಇದ್ದು ಶಿಕ್ಷಣವನ್ನು ಕೊಡಿಸಿದ್ದರು. ಹೀಗಾಗಿ ಮಗಳೇ 25ನೇ ವರ್ಷದಿಂದ ಏಕಾಂಗಿಯಾಗಿದ್ದ ತಾಯಿಗೆ ಮರು ಮದುವೆ (Re marriage) ಮಾಡಿಸಿದ್ದು, ಹೃದಯಸ್ಪರ್ಶಿ ಕಥೆ ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗಿದೆ.
ಶಿಲ್ಲಾಂಗ್‌ನ ದೇಬ್ ಅರ್ತಿ, ಮಗಳು ರಿಯಾ ಚಕ್ರವರ್ತಿ ಎರಡು ವರ್ಷದವಳಾಗಿದ್ದಾಗ ಮೆದುಳಿನ ರಕ್ತಸ್ರಾವದಿಂದ ಇದ್ದಕ್ಕಿದ್ದಂತೆ ನಿಧನರಾದರು. ಅವರು ಪ್ರಸಿದ್ಧ ವೈದ್ಯರಾಗಿದ್ದರು. ಆಕೆಯ ತಾಯಿ ಮೌಶುಮಿ ಚಕ್ರವರ್ತಿ ಆ ಸಮಯದಲ್ಲಿ 25 ವರ್ಷ ವಯಸ್ಸಿನವರಾಗಿದ್ದರು. ಗಂಡ ನಿಧನರಾದ ನಂತರ ಅನೇಕ ವರ್ಷಗಳ ಕಾಲ ಆಕೆ ಒಬ್ಬಂಟಿಯಾಗಿ (Alone) ಜೀವನ ಸಾಗಿಸುತ್ತಿದ್ದರು. ಎರಡನೇ ವಿವಾಹವಾಗುವುದರ ಬಗ್ಗೆ ಯೋಚಿಸಿಯೂ ಇರಲಿಲ್ಲ. ಶಿಕ್ಷಕಿಯಾಗಿ (Teacher) ಕೆಲಸ ಮಾಡುತ್ತಿದ್ದ ಮೌಶುಮಿ ಪತಿ ನಿಧನದ ನಂತರ ತಾಯಿಯ ಮನೆಗೆ ತೆರಳಿದ್ದರು.
ಸ್ವೀಟ್ ತಿನ್ನೇ ಎಂದು ಒತ್ತಾಯಿಸಿದ ವರ, ಸಿಟ್ಟಿಗೆದ್ದು ಹೊಡ್ದೇಬಿಟ್ಲು ಭಾವಿ ಹೆಂಡ್ತಿ !
ತಾಯಿ ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟ ಮಗಳು
ರಿಯಾ ಚರ್ಕವರ್ತಿ ತಾಯಿಯ ಮದುವೆ ಬಗ್ಗೆ ಮಾತನಾಡುತ್ತಾ, ತಂದೆ ನಿಧನರಾದಾಗ ನನಗೆ ಕೇವಲ 2 ವರ್ಷ, ತಾಯಿಗೆ 25 ವರ್ಷ. ಈ ವೇಳೆ ಎಲ್ಲರೂ ಬಂದು ತಾಯಿಯಲ್ಲಿ ಎರಡನೇ ಮದುವೆ ಆಗಿ ಎಂದು ಹೇಳುತ್ತಿದ್ದರು. ಆದರೆ ಅಮ್ಮ ಮಾತ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಅದೊಂದು ದಿನ ನನಗೆ ಚಿಕ್ಕಮ್ಮನಿಂದ ಕರೆ ಬಂದಿತ್ತು. ಅವರು ಮಾತನಾಡುತ್ತಾ, ತಂದೆಯ ನಿಧನದ ನಂತರ ತಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಇದೀಗ ನಿನ್ನ ತಾಯಿಯನ್ನು ಒಬ್ಬರು ಇಷ್ಟಪಡುತ್ತಿದ್ದಾರೆ. ವಿವಾಹವಾಗುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅವರ ಜತೆಗೆ ವಿವಾಹ ಮಾಡಿಕೊಟ್ಟರೆ ಇಬ್ಬರೂ ನೆಮ್ಮದಿಯಿಂದ ಇರುತ್ತಾರೆ. ಈ ಬಗ್ಗೆ ಯೋಚಿಸು ಎಂದು ಹೇಳಿದ್ದರಂತೆ.
ಚಿಕ್ಕಮ್ಮ ಫೋನಿನಲ್ಲಿ ಆಡಿದ ಮಾತುಗಳನ್ನು ರಿಯಾ ಚರ್ಕವರ್ತಿ ಗಂಭೀರವಾಗಿ ಪರಿಗಣಿಸಿದ್ದರು. ನಂತರ ತನ್ನ ತಾಯಿಯನ್ನು ಪ್ರೀತಿಸುತ್ತಿರುವವರ ಜತೆಗೆ ವಿವಾಹ ಮಾಡಲು ರಿಯಾ ನಿರ್ಧರಿಸಿದ್ದಾರೆ. ಇದೀಗ ತನ್ನ ತಾಯಿಯ ವಿವಾಹವನ್ನು ನೆರವೇರಿಸಿರುವ ಸಂಭ್ರಮದಲ್ಲಿರುವ ರಿಯಾ ಚರ್ಕವರ್ತಿ, ನನ್ನಮ್ಮ ಸಂಗಾತಿಯನ್ನು ಕಂಡುಕೊಂಡಿದ್ದಾರೆ. ಇನ್ನು ಮುಂದೆ ಆಕೆ ಸಂತೋಷದಿಂದ ಇರುತ್ತಾಳೆ. ಇದು ನನ್ನ ಸಂತೋಷಕ್ಕೂ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಇಂಡೋನೇಷ್ಯಾ ಟೇಚರ್ ಹತ್ರ ಇಂಗ್ಲಿಷ್ ಕಲೀತಾ ಲವ್ವಾಗೋಯ್ತು!
ಪಶ್ಚಿಮ ಬಂಗಾಳದ ಸ್ವಪನ್ ಜೊತೆ ವಿವಾಹ
ತಂದೆಯ ನಿಧನದ ನಂತರ ಕುಟುಂಬದಲ್ಲಿ ಆಸ್ತಿ ವಿವಾದ ಉಂಟಾಗಿತ್ತು. ಹೀಗಾಗಿನನ್ನ ತಾಯಿಯನ್ನು ಮರುಮದುವೆಗೆ ಒಪ್ಪಿಸಲು ತುಂಬಾ ಸಮಯ ತೆಗೆದುಕೊಂಡಿತು. ನಾನು ಅವಳನ್ನು ಮೊದಲು ಯಾರನ್ನಾದರೂ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಕೇಳಿದ್ದೆ. ನಾನು ಆರಂಭದಲ್ಲಿ ಅವಳೊಂದಿಗೆ ಸ್ನೇಹಿತರಂತೆ ಚಾಟ್ ಮಾಡಲು ಕೇಳಿದೆ. ಕಾಲ ಕ್ರಮೇಣ ಅವರು ಉತ್ತಮ ನಂಟನ್ನು ಬೆಳೆಸಿಕೊಂಡರು' ಎಂದು ರಿಯಾ ಹೇಳಿದ್ದಾರೆ. ಮೌಶುಮಿ ಈ ವರ್ಷದ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳದ ಸ್ವಪನ್ ಅವರನ್ನು ವಿವಾಹವಾದರು. ಇಬ್ಬರಿಗೂ 50 ವರ್ಷ.ಇದು ಸ್ವಪನ್ ಅವರ ಮೊದಲ ಮದುವೆಯಾಗಿದೆ.
ಮದುವೆಯ ನಂತರ ತಾಯಿಯ ಜೀವನವೇ ಬದಲಾಗಿದೆ ಎಂದು ರಿಯಾ ಚಕ್ರವರ್ತಿ ಹೇಳಿದ್ದಾರೆ. 'ನನ್ನ ತಾಯಿ ಈಗ ಸಂತೋಷವಾಗಿದ್ದಾರೆ, ಮೊದಲು, ಅವರು ಎಲ್ಲದರಲ್ಲೂ ಸಿಟ್ಟಾಗುತ್ತಿದ್ದರು. ಆದರೆ ಅವರು ಈಗ ತಮ್ಮ ಜೀವನವನ್ನು ಆನಂದಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.