Dating App: ಹೊಸ ವರ್ಷದಲ್ಲಿ ಡೇಟಿಂಗ್ ಸ್ಟೈಲ್ ಹೀಗೆಲ್ಲಾ ಬದಲಾಗಬಹುದು

Suvarna News   | Asianet News
Published : Dec 14, 2021, 09:18 PM IST
Dating App: ಹೊಸ ವರ್ಷದಲ್ಲಿ ಡೇಟಿಂಗ್ ಸ್ಟೈಲ್ ಹೀಗೆಲ್ಲಾ ಬದಲಾಗಬಹುದು

ಸಾರಾಂಶ

ಹೊಸ ವರ್ಷ (New Year) ಬಂದಂತೆ ಹೊಸ ಹೊಸ ಬದಲಾವಣೆ (Changes)ಗಳು ಆಗುತ್ತಲೇ ಇರುತ್ತವೆ. ಹಾಗೆಯೇ ಡೇಟಿಂಗ್ (Dating) ವಿಚಾರದಲ್ಲೂ ಹಲವಾರು ಬದಲಾವಣೆಗಳನ್ನು ನಿರೀಕ್ಷಿಸಬಹುದು. 2022ರಲ್ಲಿ ಡೇಟಿಂಗ್ ಸ್ಟೈಲ್ (Style) ಹೇಗಿರಬಹುದು. ನೀವೂ ಸ್ಪಲ್ಪ ಅಪ್ ಡೇಟ್ ಆಗಿಬಿಡಿ

ಹಿಂದಿನ ಕಾಲದಲ್ಲೆಲ್ಲಾ ಮದುವೆ ಮಂಟಪದಲ್ಲಿಯೇ ಹುಡುಗ ಹಾಗೂ ಹುಡುಗಿ ಮೊದಲ ಬಾರಿ ಮುಖ ನೋಡಿ ಮದುವೆ (Wedding)ಯಾಗುತ್ತಿದ್ದರಂತೆ. ಮದುವೆಯಾದ ನಂತರವಷ್ಟೇ ಹುಡುಗಿ ತನ್ನ ಗಂಡನ ಮುಖ ನೋಡುವ ಪರಿಪಾಠವೂ ಇತ್ತು. ಕಾಲ ಬದಲಾದಂತೆಲ್ಲಾ ತಂತ್ರಜ್ಞಾನದ ಆವಿಷ್ಕಾರ (Invention)ದೊಂದಿಗೆ ಸೋಷಿಯಲ್ ಮೀಡಿಯಾ (Social Media)ಗಳ ಭರಾಟೆ ಆರಂಭವಾಯಿತು. ಮೊಬೈಲ್ ಫೋನ್ ಆರಂಭಗೊಂಡಾಗ ಮೆಸೇಜ್‌ಗಳ ಜಮಾನದಲ್ಲಿ ಹುಡುಗ-ಹುಡುಗಿಯ ನಡುವೆ ಚಾಟಿಂಗ್‌ಗಾಗಿಯೇ ಮೊಬೈಲ್ ಕಂಪೆನಿಗಳು ದಿನವೊಂದಕ್ಕಿಷ್ಟು ಮೆಸೇಜ್‌ಗಳೆಂದು ಆಫರ್‌ಗಳನ್ನೇ ಕೊಟ್ಟವು. ನಂತರ ದಿನಗಳಲ್ಲಿ ಆಂಡ್ರಾಯ್ಡ್ ಮೊಬೈಲ್ ಆರಂಭಗೊಳ್ಳುವುದರ ಜತೆಗೆ ಫೇಸ್ಬುಕ್, ಮೆಸೇಂಜರ್, ವಾಟ್ಸಾಪ್ ಗಳಲ್ಲಿ ಮಾತುಕತೆ ಮತ್ತಷ್ಟು ಸುಲಭವಾಯಿತು.

ಇವಿಷ್ಟೂ ಸಾಲ್ದು ಅಂತ ಹುಡುಗ-ಹುಡುಗಿಯರಿಗಾಗಿಯೇ ಡೇಂಟಿಂಗ್ ಅಪ್ಲಿಕೇಶನ್‌ (Dating Application)ಗಳು ಸಹ ಆರಂಭಗೊಂಡವು. ಇಂದಿನ ಯುವಕರು ಜೀವನ ಸಂಗಾತಿಯನ್ನು ಹುಡುಕಲು ಡೇಟಿಂಗ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಡೇಟಿಂಗ್ ಆ್ಯಪ್‌ನಲ್ಲಿ  ಪರಿಚಯವಾಗುವ ವ್ಯಕ್ತಿಯನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳುತ್ತಾರೆ. ಟಿಂಡರ್, ಬಂಬಲ್ ಕೆಲವೊಂದು ಹೆಸರುವಾಸಿ ಡೇಟಿಂಗ್ ಆ್ಯಪ್‌ಗಳಾಗಿವೆ.

Dating Appನಲ್ಲಿ ಇಂತಹ ಪುರುಷರಿದ್ದರೆ ಅವೈಯ್ಡ್ ಮಾಡಿ
 
ಕಾಲ ಬದಲಾದಂತೆ ಹಲವು ವಿಚಾರಗಳು ಬದಲಾಗುತ್ತವೆ. ಜನರ ಇಷ್ಟ, ಆಯ್ಕೆ, ಅಭಿರುಚಿ ಎಲ್ಲವೂ ಚೇಂಜ್ ಆಗುತ್ತಾ ಹೋಗುತ್ತದೆ. ಹಾಗೆಯೇ ಹೊಸ ವರ್ಷದಲ್ಲೂ ಹಲವು ವಿಚಾರಗಳು ಬದಲಾಗುತ್ತಾ ಹೋಗುತ್ತವೆ. ಹಳೆ ನೀರು ಹೋಗಿ ಹೊಸ ನೀರು ಬಂತು ಎಂಬಂತೆ 2022ರಲ್ಲಿ ಡೇಟಿಂಗ್ ಸ್ಟೈಲ್ ಸಹ ಬದಲಾಗಲಿದೆ ಎನ್ನಲಾಗುತ್ತಿದೆ.

ವೈಯುಕ್ತಿಕವಾಗಿ ಭೇಟಿ ಮಾಡಲು ಸಿದ್ಧ:

ವೀಡಿಯೋ ಚಾಟ್ ಬಿಟ್ಟು ವೈಯುಕ್ತಿಕ ಭೇಟಿ: ಕೋವಿಡ್ ಕಾಲಘಟ್ಟ ಜನಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಸೋಂಕು ವಿಪರೀತವಾಗಿ ಹರಡಿದ್ದ ಸಮಯದಲ್ಲಿ ವೀಡಿಯೋ ಚಾಟ್‌ಗಳ ಮೂಲಕ ಡೇಟಿಂಗ್ ಅನಿವಾರ್ಯವಾಗಿತ್ತು. ಹೀಗಾಗಿ ಕೊರೋನಾ ಸೋಂಕಿನ ಪ್ರಭಾವ ಕಡಿಮೆಯಾಗಿರುವ ಕಾರಣ ಶೇಕಡಾ 70ರಷ್ಟು ಮಂದಿ ವೀಡಿಯೋ ಚಾಟ್ ಬಿಟ್ಟು ವೈಯುಕ್ತಿಕವಾಗಿ ಡೇಟಿಂಗ್ ಮಾಡಲು ಸಜ್ಜಾಗುತ್ತಿದ್ದಾರೆ.

ಎಕ್ಸ್‌ಪ್ಲೋರಿ-ಡೇಟಿಂಗ್:

ಸಾಂಕ್ರಾಮಿಕ ರೋಗವು ಸುಮಾರು ಅರ್ಧದಷ್ಟು ಜನರನ್ನು ನಮ್ಮ ನಿಜವಾದ ಆಯ್ಕೆ ಏನು ಎಂಬುದಾಗಿ ತಮ್ಮನ್ನೇ ಪ್ರಶ್ನಿಸುವಂತೆ ಮಾಡಿದೆ. ಹೀಗಾಗಿ 2022ರಲ್ಲಿ ಡೇಟಿಂಗ್ ಮಾಡುವ ಮಂದಿ ಭೇಟಿಯಾದ ಸಂದರ್ಭದಲ್ಲಿ ವ್ಯವಹರಿಸುವ ರೀತಿ, ಪಡೆದುಕೊಳ್ಳುವ ಮಾಹಿತಿ ಸಂಪೂರ್ಣವಾಗಿ ಬದಲಾಗಿರಬಹುದು ಎಂದು ಹೇಳಲಾಗುತ್ತದೆ.

ಡೇಟಿಂಗ್‌ ಟಿಪ್ಸ್: ಮೊದಲ ಭೇಟಿ ಮಧುರವಾಗಿಸಲು ಹಿಂಗ್‌ ಮಾಡಿ…

ಹವ್ಯಾಸಗಳು:

ಕೋವಿಡ್ (Covid), ಲಾಕ್ ಡೌನ್ ವರ್ಷಗಳಲ್ಲಿ ಹಲವರ ಆಯ್ಕೆ, ಅಭಿರುಚಿಗಳು, ಆದ್ಯತೆಗಳು ಬದಲಾಗಿವೆ. ನಗರದಲ್ಲಿ ಉದ್ಯೋಗದಲ್ಲಿದ್ದ ಅದೆಷ್ಟೋ ಮಂದಿ ಹಳ್ಳಿಯತ್ತ ಮುಖ ಮಾಡಿ ಕೃಷಿಯತ್ತ ಒಲವು ಬೆಳೆಸಿಕೊಂಡಿದ್ದಾರೆ. ಇನ್ನು  ಉದ್ಯೋಗ ಕಳೆದುಕೊಂಡ ಕೆಲವರು ಬಿಸಿನೆಸ್ ಶುರು ಮಾಡಿಕೊಂಡಿದ್ದಾರೆ. ಹೀಗಾಗಿ ಡೇಟಿಂಗ್ ಅಪ್ಲಿಕೇಶನ್‌ನಲ್ಲಿರುವ ಶೇಕಡಾ 52ರಷ್ಟು ಜನರು ಹವ್ಯಾಸಗಳ ಆಧಾರದ ಮೇಲೆ ಸೂಕ್ತ ಸಂಗಾತಿಯನ್ನು ಹುಡುಕುತ್ತಿದ್ದಾರೆ. ಎಲ್ಲಾ ಪರಿಸ್ಥಿತಿಗಳಿಗೂ ಹೊಂದಿಕೊಳ್ಳುವಂತಹಾ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

ಏಕಾಂಗಿಯಾಗಿರುವ ನಿರ್ಧಾರ:

ಕೊರೋನಾ ವರ್ಷಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಾಠ ಕಲಿಸಿದೆ. ಲಕ್ಷಾಂತರ ಜನರ ಸಾವಿಗೆ ಕಾರಣವಾಗಿರುವ ಮಾರಣಾಂತಿಕ ಸೋಂಕು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಾಠ ಕಲಿಸಿದೆ. ಯಾರೂ, ಯಾವುದೂ ಶಾಶ್ವತವಲ್ಲ ಎಂಬುದನ್ನು ಎಲ್ಲರೂ ಅರಿತುಕೊಂಡಿದ್ದಾರೆ. ಹೀಗಾಗಿ ಡೇಟಿಂಗ್ ಆ್ಯಪ್‌ನಲ್ಲಿರುವ ಹಲವರು ಏಕಾಂಗಿಯಾಗಿರುವುದು ತಪ್ಪಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಶೇಕಡಾ ೫೪ರಷ್ಟು ಮಂದಿ ಯಾವಾಗ ಮತ್ತು ಎಂಥವರ ಜತೆ ಡೇಟಿಂಗ್ ಮಾಡಬಹುದು ಎಂಬುದನ್ನು ನಿರ್ಧರಿಸಿಕೊಂಡಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ 73 ಪ್ರತಿಶತ ಭಾರತೀಯರು ಡೇಟಿಂಗ್ ಆಪ್ ಗಳನ್ನು ಬಳಸಲು ಸಿದ್ಧವಾಗಿದ್ದಾರೆ. ಈ ಮೂಲಕ ಯಾವುದೇ ಹಿಂಜರಿಕೆಯಿಲ್ಲದೆ ಸಾರ್ವಜನಿಕವಾಗಿ ಸಂಪರ್ಕ ಸಾಧಿಸಲು ಮುಕ್ತವಾಗಿದ್ದಾರೆ. ಬಂಬಲ್‌ನ ಇಂಡಿಯಾ ಕಮ್ಯುನಿಕೇಷನ್ಸ್ ಡೈರೆಕ್ಟರ್ ಸಮರ್ಪಿತಾ ಸಮದ್ದಾರ್, 2022ರಲ್ಲಿ ಯುವಜನತೆ ಡೇಟಿಂಗ್ ಆ್ಯಪ್‌ನ್ನು ಹೆಚ್ಚೆಚ್ಚು ಬಳಸಲಿದ್ದಾರೆ. 70 ಪ್ರತಿಶತದಷ್ಟು ಒಂಟಿ ಭಾರತೀಯರು ತಮ್ಮ ಡೇಟಿಂಗ್ ಜೀವನವನ್ನು 'ರೀಸೆಟ್' ಮಾಡಲು ಬಯಸುತ್ತಿದ್ದಾರೆ, 2022 ಪ್ರಣಯಕ್ಕೆ ದೊಡ್ಡ ವರ್ಷದಂತೆ ಕಾಣುತ್ತದೆ ಎಂದು ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!